543 ಲೋಕಸಭಾ ಸಂಸದರ ಪೈಕಿ 251 ಜನರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.

ಹೊಸ ದೆಹಲಿ.13.ಫೆ.25:- ರಾಜಕೀಯ ಅಪರಾಧೀಕರಣ ದತ್ತಾಂಶವನ್ನು ಸೋಮವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ. ವರದಿ ಅನ್ವಯ, 543 ಲೋಕಸಭಾ ಸಂಸದರ ಪೈಕಿ 251 ಜನರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. 170 ಸಂಸದರ ಮೇಲೆ 5 ಅಥವಾ ಹೆಚ್ಚು ವರ್ಷಗಳ ಜೈಲುಶಿಕ್ಷೆ ವಿಧಿಸಬಹುದಾದ ಅಪರಾಧದ ಆರೋಪವಿದೆ ಎಂಬ ಸಂಗತಿ ಹೊರಬಿದ್ದಿದೆ.

ಹನ್ಸಾರಿಯಾ ಅವರು ವಿವಿಧ ಹೈಕೋರ್ಟ್ ಗಳಿಂದ ಮಾಹಿತಿ ಪಡೆದು 83 ಪುಟಗಳ ವರದಿಯನ್ನು ಸಿದ್ದಪಡಿಸಿ ನ್ಯಾ.ದೀಪಂಕರ್ ದತ್ತಾ ಮತ್ತು ನ್ಯಾ. ಮನಮೋಹನ್ ಅವರ ಪೀಠಕ್ಕೆ ಸಲ್ಲಿಸಿದ್ದಾರೆ.

ಕೇರಳದ 20 ಸಂಸದರ ಪೈಕಿ 19 (ಶೇ.95), ತೆಲಂಗಾಣದ 17ರಲ್ಲಿ 14 (ಶೇ.82), ಬಿಹಾರದ 40ರಲ್ಲಿ 16 (ಶೇ.76), ಜಾರ್ಖಂಡದ 14ರಲ್ಲಿ 10 (ಶೇ.71), ತಮಿಳುನಾಡಿನ 39ರಲ್ಲಿ 26 (ಶೇ.67) ಸಂಸದರ ಮೇಲೆ ಅಪರಾಧ ಪ್ರಕರಣಗಳಿವೆ. ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪ.ಬಂಗಾಳ, ಬಿಹಾರ, ಆಂಧ್ರ ಪ್ರದೇಶಗಳಲ್ಲಿ ಈ ಸಂಖ್ಯೆ ಶೇ.50 ಇದೆ.

ಹರ್ಯಾಣ (10) ಮತ್ತು ಛತ್ತೀಸಗಢದ (11) ತಲಾ ಒಬ್ಬೊಬ್ಬ ಸಂಸದರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಪಂಜಾಬ್‌ನ 13ರಲ್ಲಿ 2, ಅಸ್ಸಾಂನ 14ರಲ್ಲಿ 3, ದೆಹಲಿಯ 7ರಲ್ಲಿ 3, ರಾಜಸ್ಥಾನದ 25ರಲ್ಲಿ 5. ಗುಜರಾತ್‌ನ 25ರಲ್ಲಿ 5, ಮಧ್ಯ ಪ್ರದೇಶದ 29ರಲ್ಲಿ 9 ಸಂಸದರ ಮೇಲೆ ಅಪರಾಧ ಪ್ರಕರಣಗಳಿರುವುದು ವರದಿಯಿಂದ ತಿಳಿದುಬಂದಿದೆ.

prajaprabhat

Recent Posts

2025- 26 ನೇ ಶೈಕ್ಷಣಿಕ ಸಾಲಿಗೆ ಯಜಿಸಿ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ.!

ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…

4 hours ago

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

8 hours ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

13 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

19 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

19 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

19 hours ago