Group D Post: 53.749 ಜವಾನ ಹುದ್ದೆಗೆ ಒಟ್ಟು 24.76 ಲಕ್ಷ  ಅಭ್ಯರ್ಥಿಗಳಿಂದಲೂ ಅರ್ಜಿ!

>> ಪಿಎಚ್ಡಿ, ಎಂಬಿಎ ಹಾಗೂ ಕಾನೂನು ಪದವೀಧರರಲ್ಲದೆ, ನಾಗರಿಕ ಸೇವಾ ಯುಪಿಎಸ್ಸಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳೂ ಜವಾನ್ ಹುದ್ದೆಗೆ ಅರ್ಜಿ ಮಾಡಿದಾರೆ.

ಜೈಪುರ.24.ಏಪ್ರಿಲ್.25:- 53,749 ಜವಾನ ಹುದ್ದೆಗಳ ನೇಮಕಾತಿಗೆ, ಒಟ್ಟು 24.76 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಜವಾನರ ಹುದ್ದೆಗೆ ಉನ್ನತ ಶಿಕ್ಷಣ ಪದವರ್ ಅಭ್ಯರ್ಥಿಗಳು ಸೇರಿದಂತೆ ಅರ್ಜಿ ಹಾಕಿದ್ದಾರೆ. ಎಂದು indiatoday.in ವರದಿ ಮಾಡಿದೆ.

ಈ ನೇಮಕಾತಿ ಸುತ್ತಿನ ಮೂಲಕ, RSMSSB ವಿವಿಧ ಗ್ರೂಪ್ D ಹುದ್ದೆಗಳಿಗೆ ಒಟ್ಟು 53,749 ಹುದ್ದೆಗಳನ್ನು ಭರ್ತಿ ಮಾಡಲಿದೆ. ಅವುಗಳಲ್ಲಿ 5,550 ಹುದ್ದೆಗಳು ನಿಗದಿತ ಪ್ರದೇಶಗಳಿಗೆ ಮತ್ತು 48,199 ಹುದ್ದೆಗಳು ನಿಗದಿತ ಪ್ರದೇಶಗಳಿಗೆ ಮೀಸಲಾಗಿವೆ.

ರಾಜಸ್ಥಾನ RSMSSB ಗ್ರೂಪ್ D ನೋಂದಣಿ 2025 50,000 ಕ್ಕೂ ಹೆಚ್ಚು ಹುದ್ದೆಗಳಿಗೆ ಪ್ರಾರಂಭವಾಗಿದೆ
ರಾಜಸ್ಥಾನ RSMSSB ಗ್ರೂಪ್ D ನೋಂದಣಿ 2025 ಅರ್ಜಿ ನಮೂನೆ ಆನ್‌ಲೈನ್, ಪಠ್ಯಕ್ರಮ, ಪರೀಕ್ಷಾ ದಿನಾಂಕ: ಈ ನೇಮಕಾತಿ ಸುತ್ತಿನ ಮೂಲಕ, RSMSSB ವಿವಿಧ ಗ್ರೂಪ್ D ಹುದ್ದೆಗಳಿಗೆ ಒಟ್ಟು 53,749 ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಅವುಗಳಲ್ಲಿ, 5,550 ನಿಗದಿತ ಪ್ರದೇಶಗಳಿಗೆ ಮತ್ತು 48,199 ನಿಗದಿತ ಪ್ರದೇಶಗಳಿಗೆ ಮೀಸಲಾಗಿವೆ.

ಇದರರ್ಥ, ಪ್ರತಿ ಒಂದು ಜವಾನ ಹುದ್ದೆಗೆ 46 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಅಭ್ಯರ್ಥಿಗಳ ಪೈಕಿ ಹಲವು ಅಭ್ಯರ್ಥಿಗಳು ಭಾರಿ ಪ್ರತಿಭಾವಂತರಾಗಿದ್ದು, ಇದೇ ವೇಳೆ ಅವರು ಆಡಳಿತಾತ್ಮಕ ಸೇವಾ ಪರೀಕ್ಷೆಗಳಿಗೂ ಸಿದ್ಧತೆ ನಡೆಸುತ್ತಿದ್ದಾರೆ.

ನಾವು ಈ ಹುದ್ದೆಗೆ ಯಾಕೆ ಅರ್ಜಿ ಸಲ್ಲಿಸಿದ್ದೇವೆ ಎಂಬ ಕುರಿತು ಜೈಪುರದ ಗೋಪಾಲ್ ಪುರ್ ಪ್ರದೇಶದಲ್ಲಿನ ತರಬೇತಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ಅಭ್ಯರ್ಥಿಗಳು ಕಾರಣವನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಂಎ, ಬಿಎಡ್ ಹಾಗೂ ಐಟಿ ಕೋರ್ಸ್ ಗಳನ್ನು ಪೂರೈಸಿರುವ ಕಮಲ್ ಕಿಶೋರ್ ಎಂಬ ಅಭ್ಯರ್ಥಿಯೊಬ್ಬರು, “ನಾನು 2018ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿದ್ದರೂ, ನಾನದರಲ್ಲಿ ಯಶಸ್ವಿಯಾಗಿಲ್ಲ. ಒಂದು ವೇಳೆ ಏನೂ ಸಾಧ್ಯ್ವಾಗದಿದ್ದರೆ, ನಿರುದ್ಯೋಗಿಯಾಗಿರುವುದಕ್ಕಿಂತ, ಜವಾನ ಹುದ್ದೆಯಲ್ಲಿ ಕೆಲಸ ಮಾಡುವುದೇ ಲೇಸಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ತನುಜಾ ಯಾದವ್ ಹಾಗೂ ಎಂಎ ಹಾಗೂ ಬಿಎಡ್ ಪದವಿಗಳನ್ನು ಪೂರೈಸಿರುವ ಸುಮಿತ್ರಾ ಚೌಧರಿ ಎಂಬುವವರೂ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಇಬ್ಬರೂ ರಾಜಸ್ಥಾನ ಆಡಳಿತಾತ್ಮಕ ಸೇವೆಗಳ ಪರೀಕ್ಷೆಗಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದರೂ, ಸೇವಾ ಭದ್ರತೆ ಹೊಂದಿರುವ ಸರಕಾರಿ ನೌಕರಿಯ ಅವಕಾಶದಿಂದ ವಂಚಿತರಾಗಲು ಬಯಸುತ್ತಿಲ್ಲ. ಅದು ಒಂದು ವೇಳೆ ಸರಕಾರಿ ಕಚೇರಿಯಲ್ಲಿ ನೀರು ಪೂರೈಸುವ ಕೆಲಸವಾಗಿದ್ದರೂ ಅವರಿಗೆ ಉದ್ಯೋಗ ಮುಖ್ಯ.

ಭಾರಿ ಪ್ರಮಾಣದ ಅರ್ಜಿಗಳ ಸಂಖ್ಯೆಯು ಅರ್ಜಿ ಸಲ್ಲಿಕೆ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ಅಂತರ್ಜಾಲ ತಾಣವು ಪದೇ ಪದೇ ಸ್ಥಗಿತಗೊಂಡಿದ್ದರಿಂದ, ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಹೀಗಾಗಿ, ಕಳೆದ ಐದು ಗಂಟೆಗಳ ಅವಧಿಯಲ್ಲಿ ಒಟ್ಟು 1.11 ಲಕ್ಷ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದ್ದು, ಇದರಿಂದಾಗಿ, ಪ್ರತಿ ಆರು ಸೆಕೆಂಡ್ ಗೆ ಅಂದಾಜು ಒಂದು ಅರ್ಜಿ ಮಾತ್ರ ಸಲ್ಲಿಕೆಯಾದಂತಾಗಿದೆ.

ದಾಖಲೆಗಳನ್ನು ಹೊಂಚಿಕೊಳ್ಳುವಲ್ಲಿ ವಿಳಂಬವಾಗಿದ್ದರಿಂದ, ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಖಾಸಗಿ ಉದ್ಯೋಗಿಯಾಗಿರುವ ಕಿರಣ್ ರಂತಹ ಅರ್ಜಿದಾರರು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅರ್ಜಿಯ ಗವಾಕ್ಷಿಯನ್ನು ಮತ್ತೆ ತೆರೆಯಬೇಕು ಎಂದು ಆಕೆ ಹಾಗೂ ಇನ್ನಿತರ ಉದ್ಯೋಗಾಕಾಂಕ್ಷಿಗಳು ರಾಜಸ್ಥಾನ ಆಡಳಿತಾತ್ಮಕ ಸೇವೆಗಳ ಆಯೋಗಕ್ಕೆ ಮನವಿ ಮಾಡಿದ್ದಾರೆ.

ರಾಜಸ್ಥಾನದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗಿದೆಯೆಂದರೆ, ಇದಕ್ಕೂ ಮುನ್ನ, 2,399 ಅರಣ್ಯ ರಕ್ಷಕರ ಹುದ್ದೆಗಳಿಗಾಗಿ ಹೊರಡಿಸಲಾಗಿದ್ದ ನೇಮಕಾತಿ ಅಧಿಸೂಚನೆಗೆ ಪ್ರತಿಯಾಗಿ, ಒಟ್ಟು 20 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.

prajaprabhat

Recent Posts

ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…

8 hours ago

ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…

9 hours ago

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

9 hours ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

10 hours ago

ರಾಯಚೂರು | ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…

10 hours ago

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

11 hours ago