ಹಿಂದಿ ವಿಷಯ ಶಿಕ್ಷಕರಿಗೆ ಅನ್ಯಾಯವಾಗಲು ಬಿಡುವದಿಲ್ಲ: ಶಶೀಲ್ ಜಿ ನಮೋಶಿ.!

ಕಲಬುರಗಿ:24.ಜನೆವರಿ.25:- ಕಲಬುರಗಿ ಉಪನಿರ್ದೇಶಕರ ಕಾರ್ಯಾಲಯ ಕಲ್ಬುರ್ಗಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ಹಾಗೂ ಎನ್.ಪಿ.ಎಸ್. ಪದವಿ ಪೂರ್ವ ಕಾಲೇಜು ಕಲಬುರ್ಗಿ ಇವರ ಸಂಯುಕ್ತಾಶ್ರಯದಲ್ಲಿ 2024-25 ನೇ ಸಾಲಿನ 10 ನೇ ಫಲಿತಾಂಶ ಸುಧಾರಣೆಗಾಗಿ ಹಿಂದಿ ಭಾಷಾ ಅಧ್ಯಾಯಗಳಿಗೆ ಒಂದು ದಿನದ ಜಿಲ್ಲಾಮಟ್ಟದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಶ್ರೀ ಶಶೀಲ್ ಜಿ. ನಮೋಶಿ ಅವರು ಉದ್ಘಾಟಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೋಹನ್ ಹಂಚಾಟೆ ಸಹನಿರ್ದೇಶಕರು ಕರ್ನಾಟಕ ಪ್ರೌಢಶಾಲಾ ಪರೀಕ್ಷಾ ಮಂಡಳಿ ಕಲ್ಬುರ್ಗಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಂಕ್ರಮ್ಮ ಢವಳಗಿ ಸಹಾಯಕ ಶಿಕ್ಷಣಾಧಿಕಾರಿಗಳು ಉಪ ನಿರ್ದೇಶಕರ ಕಾರ್ಯಾಲಯ ಕಲ್ಬುರ್ಗಿ ಉಪಸ್ಥಿತರಿದ್ದರು.

ಅತಿಥಿಗಳಾಗಿ ಶ್ರೀವಿಜಯಕುಮಾರ್ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಲ್ಬುರ್ಗಿ ದಕ್ಷಿಣ, ಈ ನಾಗೇಂದ್ರಪ್ಪ ಅವರಾದಿ ಹಿಂದಿ ವಿಷಯ ಪರಿವೀಕ್ಷಕರು ಅಪರ ಆಯುಕ್ತರು ಕಾರ್ಯಾಲಯ ಕಲ್ಬುರ್ಗಿ, ಮಹೇಶ್ ಹೂಗಾರ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲಬುರ್ಗಿ ಪ್ರಧಾನ ಕಾರ್ಯದರ್ಶಿಗಳು ಜಮೀಲ್ ಇಮ್ರಾನ್, ಚನ್ನಬಸಪ್ಪ ಬಿರಾದರ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲ್ಬುರ್ಗಿ ವೇದಿಕೆ ಮೇಲೆ ಆಸೀನರಾಗಿದ್ದರು.

ಶ್ರೀ ಶಶೀಲ್ ಜಿ ನಮೋಶಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ NSQF ಯೋಜನೆಯ ಬಗ್ಗೆ ಕುಲಂಕುಷವಾಗಿ ಮಾತನಾಡಿ ಹಿಂದಿ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಲು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದರು. ಶ್ರೀ ಮೋಹನ್ ಹಂಚಾಟೆ ನಮ್ಮ ಅಧ್ಯಕ್ಷೀಯ ನುಡಿಗಳನ್ನು ಹೇಳುತ್ತ ಹಿಂದಿ ವಿಷಯದಲ್ಲಿ ಜಿಲ್ಲೆಯ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಹಾಗೂ ಉತ್ತಮ ಫಲಿತಾಂಶ ಸಾಧಿಸಲು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.

ಕಲ್ಬುರ್ಗಿ ಪಟ್ಟಣದ ಎನ್. ವಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ದಯಾನಂದ್ ಶಾಸ್ತ್ರಿ ಅವರು ರಾಷ್ಟ್ರದ ಕಥೆಯಲ್ಲಿ ಹಿಂದಿ ಭಾಷೆಯ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಗಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಇರ್ಷಾದ್ ಅಹ್ಮದ್ ಅವರು ಫಲಿತಾಂಶ ಸುಧಾರಣೆಗಾಗಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಹಿಂದಿ ಭಾಷೆಯಲ್ಲಿ ಸುಲಭವಾಗಿ ಉತ್ತೀರ್ಣಗೊಳಿಸುವ ತಂತ್ರಗಳನ್ನು ಹೇಳಿಕೊಟ್ಟರು.


ಕದ್ರಿ ಕಾರ್ಯಾಗಾರದಲ್ಲಿ ಹಿಂದಿ ಭಾಷೆಯ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ನವಿತಾ ನಿರೂಪಿಸಿದರು. ರಾಜಕುಮಾರ್ ಪ್ರಾರ್ಥಿಸಿದರೂ ರವಿ ಜಾಧವ ಸ್ವಾಗತಿಸಿದರು. ಅಶೋಕ್ ಮೇದಾ, ಅಬ್ದುಲ್ ರಸೂಲ್, ಸಾಯಬಣ್ಣ ಲಂಗೋಟಿ, ರವಿ ಚವ್ಹಾಣ, ನಿತ್ಯಾನಂದ, ಜೆ ಎಚ್ ಪಟೇಲ್, ಮೌನೇಶ್, ಗುಲಾಮ್ ನಬಿ, ನಿಜಲಿಂಗಪ್ಪ ಮಾನವಿ, ರಾಮು ಚವ್ಹಾಣ, ವಿನೋದ, ಸಂಜೀವ್ ಮಾಲೆ, ಸಂಜೀವ್ ಸೊನ ಕಾಂಬಳೆ, ಅಹಮದ್ ಕಿಣ್ಣಿ, ಮಲ್ಲಿಕಾರ್ಜುನ, ಹರೀಶ್ ಕುಮಾರ, ಬಾಷಾ ಪಟೇಲ್ ಚನ್ನಮ್ಮ ಪಾಟೀಲ್, ಸುರೇಖಾ, ಮಂಜುಳಾ ಠಾಕೂರ್, ವಿಜಯಲಕ್ಷ್ಮಿ , ಮೆಹಬೂಬ್ ವಾಲಿಕಾರ್, ರಾಜು ಸುಂಬಡ, ಭೀಮಸಿಂಗ ರಾಠೋಡ, ಶಿವಾನಂದ ಮತ್ತು ಜಿಲ್ಲೆಯ ಎಲ್ಲಾ ತಾಲೂಕಿನ ಹಿಂದಿ ಶಿಕ್ಷಕ ಶಿಕ್ಷಕಿಯರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಕರ್ಣಾಟಕ ರಾಜ್ಯದಲ್ಲಿ ಸದ್ಯ ಹಿಂದಿ ವಿಷಯಕ್ಕೆ ಪ್ರತೊಬ್  ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 3rd ಭಾಷಾ ವಿಷಯ ಅಭ್ಯಾಸ ಅನಿವಾರ್ಯ ಮಾಡಲೇಬೇಕು ಭಾಷಾ ದ್ಯಾನ್ ಇರಲೇಬೇಕು

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

3 hours ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

8 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

9 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

9 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

9 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

9 hours ago