ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ವಿರುದ್ಧ,ಎಫ್‌ಐಆರ್‌ ದಾಖಲ.!

ಹಾಸನ.13.ಜನವರಿ.25:- ಇಂದು ಹಾಸನಗೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಅವರು ಯಾವಾಗಲೂ ಪ್ರಚೋದನಕಾರಿ ಭಾಷಣ ಮಾಡುತ್ತಲೇ ಆಗಾಗ ಸುದ್ದಿಯಲ್ಲಿ ಇರುತ್ತಾರೆ.

ಇದೀಗ ಮತ್ತೆ  ಹಾಸನದಲ್ಲಿ ಅಂತಹದ್ದೇ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಸದ್ದು ಮಾಡಿದ್ದಾರೆ. ಮುತಾಲಿಕ್ ಹೇಳಿಕೆ ಹಿನ್ನೆಲೆ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

ಹಿಂದೂಗಳು ಮುಸ್ಲಿಂರಿಗೆ ಮಾಂಸ ಕೊಡಿ, ಅವರು ಹಲಾಲ್‌ ಆಗಿಲ್ಲ ಅಂತ ತಿನ್ನಲ್ಲ

ಜನವರಿ 9ರಂದು ಸಕಲೇಶಪುದರಲ್ಲಿ ನಡೆದಿದ್ದ ವಿರಾಟ್‌ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪ್ರಮೋದ್‌ ಮುತಾಲಿಕ್‌ ಅವರು, ಹಿಂದೂಗಳು ಮುಸ್ಲಿಂರಿಗೆ ಕುರಿಮಾಂಸ ಎಂದು ಹೇಳಿ ಕೊಡಿ ಅವರು ಹಲಾಲ್‌ ಆಗಿಲ್ಲ ಎಂದು ತಿನ್ನುವುದಿಲ್ಲ, ಆದರೆ ಹಿಂದೂಗಳು ಮುಸ್ಲಿಂ ಹೋಟೆಲ್‌ಗಳಿಗೆ ಹೋಗಿ ಹಲಾಲ್‌ ಮಾಡಿರುವ ಮಾಂಸವನ್ನು ಚಪ್ಪರಿಸಿಕೊಂಡು ತಿಂತಾರೆ. ಅದು ಸಗಣಿ ತಿಂದಂಗೆ, ಇದು ಸರಿನಾ ಎಂದು ಮುತಾಲಿಕ್‌ ಪ್ರಶ್ನೆ ಮಾಡಿದ್ದಾರೆ.

ಮುಸ್ಲಿಂರು ದನದ ಮಾಂಸದಂಗಡಿ ತೆರೆದ್ರೆ, ಅವರ ಮನೆ ಮುಂದೆ ಹಂದಿ ಕಡಿದು ತಿಂತೀವಿ

2003 ರಲ್ಲಿ ಸಕಲೇಶಪುರದ ಹಿಂದೂಗಳ ಏರಿಯಾದಲ್ಲಿ ಮುಸ್ಲಿಂ ಸಮುದಾಯದವರು ಒಂದು ಗೋಮಾಂಸದ ಅಂಗಡಿಯನ್ನು ತೆರೆದಿದ್ದರು. ಆಗ ಹಿಂದೂಗಳು ಸುಮ್ಮನೆ ಇರಲಿಲ್ಲ. ಅದೇ ಅಂಗಡಿಯ ಎದುರು ಒಂದು ಹಂದಿಮಾಂಸದ ಅಂಗಡಿಯನ್ನು ತೆರೆದರು.ಅದೇ ರೀತಿ ಈಗ ಮುಸ್ಲಿಂರು ಏನಾದರು ದನದ ಮಾಂಸದ ಅಂಗಡಿಯನ್ನು ತೆರೆದರೆ, ನಾವು ಅವರ ಮನೆಯ ಮುಂದೆ ಹಂದಿ ಕಡಿದು ತಿಂತೀವಿ ಎಂದು ಕಿಡಿಕಾರಿದ್ದಾರೆ.

ಮುಸ್ಲಿಂರ ಬಳಿ ವ್ಯಾಪಾರ ಮಾಡಿದ್ರೆ ನಮ್ಮ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ

ನಮ್ಮ ಸಹನೆಗೆ ಒಂದು ಮಿತಿ ಬೇಡವಾ ಆಕಳ ರಕ್ತ, ನಮ್ಮ ರಕ್ತ ಒಂದೇ… ಮುಂದಿನ ದಿನಗಳಲ್ಲಿ ನಾವು ಗೋಮಾತೆ ರಕ್ಷಣೆ ಮಾಡುತ್ತೇವೆ. ನಾವುಗಳು ಇವತ್ತಿನ ದಿನ ಪ್ರತಿಜ್ಞೆ ಮಾಡಬೇಕು. ಬೆಳಿಗ್ಗೆ ತರಕಾರಿ ಅಂಗಡಿಗೆ ಹೋದಾಗ ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ತೆಗೆದುಕೊಳ್ಳಬೇಕು. ದೇವಸ್ಥಾನಕ್ಕೆ ಹೋದಾಗ ಹಿಂದೂಗಳ ಹತ್ತಿರ ಹಣ್ಣು ಕಾಯಿ ಖರೀದಿಸಬೇಕು. ಆಗ ಗೋಮಾತೆ ರಕ್ಷಣೆ ಮಾಡಿದಂತೆ ಆಗುತ್ತದೆ. ಆದರೆ ನಾವು ಮುಸ್ಲಿಂರ ಬಳಿ ತೆಗೆದುಕೊಂಡು ನಮ್ಮ ಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುತ್ತಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.

ಮುಸ್ಲಿಂರ ಹೋಟೆಲ್‌ಗೆ ಹೋಗುವಾಗ ಒಂದು ಸಾರಿ ಮೂತ್ರ ವಿಸರ್ಜನೆ ಮಾಡಿರುವುದನ್ನು ನೆನಪಿಸಿಕೊಳ್ಳಿ, ಮೂತ್ರ ವಿಸರ್ಜನೆ ಮಾಡಿರುವವರನ್ನು ಪೊಲೀಸರು, ಸರ್ಕಾರ ಜಿಲ್ಲೆಯಿಂದ ಗಡಿಪಾರು ಮಾಡದಿದ್ದರೆ ನಾವೇ ಆತನ ಬಾಯಿಗೆ ಮೂತ್ರ ವಿಸರ್ಜನೆ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕಾಫಿ ತೋಟದಲ್ಲಿರು ಬಾಂಗ್ಲಾ ಮುಸ್ಲಿಂರನ್ನು ಹೊರ ಹಾಕುತ್ತೇವೆ

ಸಕಲೇಶಪುರ ಕಾಫಿ ಎಸ್ಟೇಟ್‌ಗಳಲ್ಲಿರುವ ಬಾಂಗ್ಲಾ ದೇಶದವರನ್ನು ಹೊರಹಾಕಬೇಕು. ಇಲ್ಲದ್ದಿದ್ದಲಿ ಮುಂದಿನ ದಿನಗಳಲ್ಲಿ ಗಂಡಾಂತರ ತಪ್ಪಿದ್ದಲ್ಲ. ಕಾಫಿ ತೋಟಕ್ಕೆ ಜನರು ಬೇಕಾದಲ್ಲಿ ನಾನು ಉತ್ತರ ಕರ್ನಾಟಕದಿಂದ ಕಳುಹಿಸಿ ಕೊಡುತ್ತೇನೆ, ಇಲ್ಲವಾದಲ್ಲಿ ನಾವೇ ಬಂದು ಬಾಂಗ್ಲಾ ಮುಸ್ಲಿಂರನ್ನು ಹೊರ ಹಾಕುತ್ತೇವೆ ಎಂದು ಹೇಳಿದರು.

ಬರ್ಜಿ, ಕತ್ತಿ, ತಲ್ವಾರ್, ಬಂದೂಕುಗಳನ್ನು ಮನೆಗಳಲ್ಲಿ ಕಾಣುವವಂತೆ ಇಟ್ಕೊಳಿ

ಹಿಂದೂಗಳ ರಕ್ಷಣೆಗಾಗಿ ಬರ್ಜಿ, ಕತ್ತಿ, ತಲ್ವಾರ್, ಬಂದೂಕುಗಳನ್ನು ಮನೆಗಳಲ್ಲಿ ಕಾಣುವ ರೀತಿಯಲ್ಲಿ ಇಟ್ಟುಕೊಳ್ಳಬೇಕು. ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ಆಗುತ್ತಿದೆ. ಅದನ್ನು ಕ್ರೂರವಾಗಿ ನಾವು ಖಂಡಿಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಸಿಡಿದರು.

ಇದೀಗ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಡಿ ಪ್ರಮೋದ್‌ ಮುತಾಲಿಕ್‌ ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿದವರ ವಿರುದ್ಧ ಸಕಲೇಶಪುರ ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಪ್ತ ಮಾಹಿತಿ ಸಿಬ್ಬಂದಿ ಶ್ರೀಧರ್‌ ಎಂ.ಕೆ ಅವರು ಪೊಲೀಸ್‌‍ ಠಾಣೆಗೆ ದೂರು ನೀಡಿದ್ದು ಬಿಎನ್‌ಎಸ್‌‍ 2023, U/S-196 (1), 353 (2), 3 (5) ಅಡಿ ಪ್ರಕರಣ ದಾಖಲಾಗಿದೆ. ಸಮಾಜದ ಶಾಂತಿ ಹಾಳು ಮಾಡುವ ಉದ್ದೇಶ ಹಾಗೂ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಈ ತರಹ ಭಾಷಣ ಸಮಾಜದ ಶಾಂತಿ ಹಾಳು ಮಾಡುವ ಉದ್ದೇಶ ಹಾಗೂ ಒಂದುಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಎಫ್‌ಐಆರ್‌ ಆಗಿದೆ.

prajaprabhat

Recent Posts

ಆ.6 ರಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮ

ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…

5 minutes ago

ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸ್ವೀಕಾರ

ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…

8 minutes ago

ಸಾರಿಗೆ ನೌಕರರ ರಜೆ ರದ್ದು : ಸಾರಿಗೆ ಇಲಾಖೆ ಆದೇಶ

ಬೆಂಗಳೂರು.04.ಆಗಸ್ಟ್.25:- KSRTC ನೌಕರರ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಾಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ…

14 minutes ago

5 ಆಗಸ್ಟ್’ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ.

ಬೆಂಗಳೂರು.04.ಆಗಸ್ಟ್.25:- ರಾಜ್ಯದ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ. ಬೆಂಗಳೂರಿನ ನಿವಾಸಿ ಜೆ ಸುನೀಲ್ ಮತ್ತಿತರರು…

55 minutes ago

ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಪೋಷಕರಿಗೆ ಭತ್ಯೆ : ಸರ್ಕಾರದ ಆದೇಶ

ಬೆಂಗಳೂರು.04.ಆಗಸ್ಟ್.25:- 2025-26ನೇ ಸಾಲಿಗೆ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಭಾರತ ಸರ್ಕಾರದ ವಾರ್ಷಿಕ MGNREGA ಮಾರ್ಗಸೂಚಿಯನ್ವಯ ಜಿಲ್ಲಾ ಮತ್ತು ತಾಲ್ಲೂಕು…

1 hour ago

ದುಗನೂರು, ಬಿಚ್ಚಾಲಿ, ಗಿಲ್ಲೇಸೂಗೂರ ಗ್ರಾಮಗಳಲ್ಲಿ ಶಾಸಕರಾದ<br>ಬಸನಗೌಡ ದದ್ದಲ್ ಅವರಿಂದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…

6 hours ago