2024-25ನೇ ಸಾಲಿನ ಪಿಎಚ್‌.ಡಿ.ಪ್ರವೇಶ’ಕೆ UGC ಹೊಸಾ ನಿಯಮಾನುಸಾರ ಅರ್ಜಿ ಅಹ್ವಾನ.

ವಿಜಯನಗರ.26.ಮೇ.25:- ಹಂಪಿ ಕನ್ನಡ ವಿಶ್ವವಿದ್ಯಾಲಯ: ಪಿಎಚ್‌ಡಿ ಪ್ರವೇಶಕ್ಕೆ ಕೊನೆಗೂ ನಿಯಮ ಹಂಪಿ ಕನ್ನಡ ವಿಶ್ವವಿದ್ಯಾಲಯದ 2024-25ನೇ ಸಾಲಿನ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚಿಸಿದ ಹೊಸ ಮಾರ್ಗಸೂಚಿಯ ಅನುಸಾರ ಸಿದ್ಧಗೊಂಡ ನಿಯಮದಂತೆ ಪರೀಕ್ಷೆ ಹಾಗೂ ಪ್ರವೇಶಾತಿ ಮಾಡುತ್ತಿದ್ದೇವೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ 2013ರಲ್ಲಿ ಸಿದ್ಧಗೊಂಡ ಪಿಎಚ್‌.ಡಿ.ನಿಯಮವೇ ಕೊನೆಯ ನಿಯಮವಾಗಿತ್ತು. 2016ರಲ್ಲಿ ಯುಜಿಸಿ ಹೊಸ ನಿಯಮಾವಳಿ ರೂಪಿಸಿತ್ತು. ಆಗ ಅದರಂತೆ ಇಲ್ಲಿಯೂ ನಿಯಮಾವಳಿ ರೂಪಿಸುವುದು ಸಾಧ್ಯವಾಗಿರಲಿಲ್ಲ. ಯುಜಿಸಿ 2022ರಲ್ಲಿ ಮತ್ತೊಂದು ನಿಯಮ ರೂಪಿಸಿತ್ತು. ಬಹುತೇಕ ಅದೇ ನಿಯಮಗಳನ್ನು ಇಟ್ಟುಕೊಂಡು ಕನ್ನಡ ವಿಶ್ವವಿದ್ಯಾಲಯದಲ್ಲಿ ಇದೀಗ ಕರಡು ನಿಯಮಾವಳಿ ರೂಪಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

‘ನಿಯಮ ರೂಪಿಸುವಾಗ ಸ್ವಲ್ಪ ವಿಳಂಬವಾಗಿದೆ. ಅದಕ್ಕಾಗಿಯೇ 2024-25ನೇ ಸಾಲಿನ ಪಿಎಚ್‌.ಡಿ.ಪ್ರವೇಶ ಪರೀಕ್ಷೆ ಮತ್ತು ಇತರ ಪ್ರವೇಶ ಪ್ರಕ್ರಿಯೆ ಸಹ ವಿಳಂಬವಾಗಿದೆ. ಯುಜಿಸಿಯ ನಿಯಮಗಳನ್ನೇ ಪ್ರಧಾನವಾಗಿ ಇಟ್ಟುಕೊಂಡು ಅದರಂತೆಯೇ ನಮ್ಮ ನಿಯಮಾವಳಿಗಳನ್ಣೂ ರೂಪಿಸಿದ್ದೇವೆ. ಜೂನ್‌ ಅಥವಾ ಜುಲೈ ತಿಂಗಳಲ್ಲಿ 2025-26ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿರುತ್ತದೆ. ಲಿಖಿತ ಪರೀಕ್ಷೆ, ಮೌಖಿಕ ಪರೀಕ್ಷೆಗಳ ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಶೇ 50ಕ್ಕಿಂತ ಅಧಿಕ ಅಂಕ ಗಳಿಸಿದವರು ಮಾತ್ರ ಸಂದರ್ಶನಕ್ಕೆ ಅರ್ಹರಾಗುತ್ತಾರೆ. ಆಲ್ಲೂ ಅಷ್ಟೇ, ಮೀಸಲಾತಿ ಹಾಗೂ ಇತರ ಷರತ್ತುಗಳಿಗೆ ಒಳಪಟ್ಟು ಅಧಿಕ ಅಂಕ ಗಳಿಸಿದವರಷ್ಟೇ ಆಯ್ಕೆಯಾಗುತ್ತಾರೆ’ ಎಂದರು.

ಪ್ರೊ.ಡಿ.ವಿ.ಪರಮಶಿವಮೂರ್ತಿ, ಕುಲಪತಿಯುಜಿಸಿ ನಿಯುಮದಂತೆಯೇ ನಡೆದುಕೊಳ್ಳಲಾಗುತ್ತಿದೆ. ಈ ಬಾರಿ 240 ಪಿಎಚ್‌ಡಿ ಸೀಟು ಲಭ್ಯವಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲೂ ಅಷ್ಟೇ ಪ್ರಮಾಣದಲ್ಲಿ ಸೀಟು ಲಭ್ಯವಾಗಲಿದೆ.
‘ಯುಯುಸಿಎಂಎಸ್‌ ಸಾಫ್ಟ್‌ವೇರ್‌ನಲ್ಲಿ ಹಾಲ್‌ ಟಿಕೆಟ್‌ ಅಳವಡಿಸುವ ಪ್ರಕ್ರಿಯೆ ಕೆಲವು ತಾಂತ್ರಿಕ ಕಾರಣಗಳಿಂದ ನಡೆದಿಲ್ಲ. ಹೀಗಾಗಿ ಈ ಬಾರಿ ಹಾಲ್‌ಟೆಕೆಟ್‌ ಅನ್ನು ಪರೀಕ್ಷೆ ಸಮಯಕ್ಕಿಂತ ಹತ್ತು ನಿಮಿಷ ಮೊದಲು ನೀಡಲಾಗುತ್ತದೆ. ಸಮೀಪದಲ್ಲಿ ಇದ್ದವರು ಮೊದಲು ಬಂದೂ ತೆಗೆದುಕೊಂಡು ಹೋಗಬಹುದು. ಫೋಟೊ ಇರುವ ಗುರುತಿನ ಚೀಟಿ ತರುವುದು ಕಡ್ಡಾಯ. ಇದೀಗ ವಿಶ್ವವಿದ್ಯಾಲಯಕ್ಕೆ ಪರಿಪೂರ್ಣವಾಗಿ, ಪಾರದರ್ಶಕವಾಗಿ ಪಿಎಚ್‌.ಡಿ.ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಾಧ್ಯವಾಗಲಿದೆ’ ಎಂದು ಹೇಳಿದರು.

ಅಂತಿಮ ಅಧಿಸೂಚನೆ ಹೊರಡಿಸಿ: ‍‍‍‍ಪಿಎಚ್‌.ಡಿ ನಿಯಮಗಳ ಅಂತಿಮ ಅಧಿಸೂಚನೆ ಶೀಘ್ರ ಹೊರಡಿಸಿ ಕಾಯಂಗೊಳಿಸಬೇಕು, ಲಿಖಿತ ಪರೀಕ್ಷೆಯ ಕೀ ಉತ್ತರಗಳನ್ನು ಸಹ ಪ್ರಕಟಿಸಬೇಕು, ಯಾವ ವಿದ್ಯಾರ್ಥಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಹಲವು ಆಕಾಂಕ್ಷಿಗಳು ಒತ್ತಾಯಿಸಿದ್ದು, ಕುಲಪತಿ ಅವರು ಇದೆಲ್ಲವನ್ನು ಪರಿಶೀಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಿಯಮ ರೂಪಿಸಿದ ಸಮಿತಿ

ಲಲಿತಕಲಾ ವಿಭಾಗದ ಡೀನ್ ಪ್ರೊ.ಶಿವಾನಂದ ಎಸ್‌.ವಿರಕ್ತಮಠ ಅವರ ಅಧ್ಯಕ್ಷತೆಯಲ್ಲಿ ಪಿಎಚ್.ಡಿ. ಪದವಿ ನಿಯಮಾವಳಿ ರೂಪಣಾ ಸಮಿತಿ ರಚಿಸಲಾಗಿತ್ತು. ಪ್ರೊ.ಎಸ್‌.ವೈ.ಸೋಮಶೇಖರ್ ಸದಸ್ಯ ಸಂಚಾಲಕರಾಗಿದ್ದರು. ಉಳಿದಂತೆ ಪ್ರೊ.ಕೆ.ಮೋಹನಕೃಷ್ಣ ರೈ ಪ್ರೊ.ಪಿ.ಮಹಾದೇವಯ್ಯ ಪ್ರೊ.ಅಶೋಕ್‌ ಕುಮಾರ್ ರಂಜೇರೆ ಪ್ರೊ.ಎ.ಶ್ರೀಧರ ಪ್ರೊ.ವೆಂಕಟಗಿರಿ ದಳವಾಯಿ ಪ್ರೊ.ಅಮರೇಶ್ ಯತಗಲ್‌ ಪ್ರೊ.ಇ.ಯರ್ರಿಸ್ವಾಮಿ ಪ್ರಭಾ ಡಿ. ಅವರು ಸದಸ್ಯರಾಗಿದ್ದರು.

ಹೊಸ ನಿಯಮದಲ್ಲೇನಿದೆ?

ಎನ್‌ಇಪಿ ಅನ್ವಯ ನಾಲ್ಕು ವರ್ಷ ಪದವಿ ಪೂರೈಸಿದವರು ಸಹ ಪಿಎಚ್‌.ಡಿ. ಅರ್ಹತಾ ಪರೀಕ್ಷೆ ಬರೆಯಬಹುದು ಎಂಬುದು ಈ ಬಾರಿಯ ಪ್ರಮುಖ ನಿಯಮಗಳಲ್ಲಿ ಒಂದು. ನಿವೃತ್ತಿಯಾಗಲು ಇನ್ನು ಮೂರು ವರ್ಷ ಬಾಕಿ ಇರುವ ಪ್ರಾಧ್ಯಾಪಕರಿಗೆ ಗೈಡ್‌ಶಿಪ್‌ ಕೊಡುವಂತಿಲ್ಲ ಎಂಬುದು ಇನ್ನೊಂದು ಪ್ರಮುಖ ನಿಯಮ. ಪ್ರವೇಶ ಪರೀಕ್ಷೆಯಲ್ಲಿ ನೀಡುವ ಲಿಖಿತ ಪರೀಕ್ಷೆಯಲ್ಲಿ ಶೇ 50 ರಷ್ಟು ಅಂಕ ಸಂಶೋಧನಾ ವೈಜ್ಞಾನಿಕತೆಗೆ ಹಾಗೂ ಶೇ 50ರಷ್ಟು ಅಂಕ ಆಯಾ ವಿಷಯದ ಮೇಲೆ ಇರುತ್ತದೆ.

prajaprabhat

Recent Posts

ವಿದ್ಯುತ್ ಕಂಬ ಬಿದ್ದು ಲೈನ್‌ಮ್ಯಾನ್ ಮೃತ ಪ್ರಕರಣ: ಆರೋಪಿಗೆ ಶಿಕ್ಷೆ

ಕೊಪ್ಪಳ.07.ಆಗಸ್ಟ್.25: ಜೆ.ಸಿ.ಬಿ ಕ್ರೆನ್ ಸರಪಳಿ ಜಾರಿ ತೆಲೆ ಮೇಲೆ ಬಿದ್ದಿರುವುದರಿಂದ ಲೈನ್‌ಮ್ಯಾನ್ ಮೃತ ಪಟ್ಟಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.…

2 minutes ago

ಗೃಹಲಕ್ಷ್ಮೀ 3ನೇ ಕಂತಿನ ಹಣ ಬಿಡುಗಡೆ- ರೆಡ್ಡಿ ಶ್ರೀ ನಿವಾಸ

ಕೊಪ್ಪಳ.07.ಆಗಸ್ಟ್.25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ…

7 minutes ago

ಕಮ್ಯುನಿಟಿ ಮೊಬಿಲೈಜರ್ ಹುದ್ದೆಗೆ ಅರ್ಜಿ ಆಹ್ವಾನ

ರಾಯಚೂರು.07.ಆಗಸ್ಟ್.25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳಲ್ಲಿ 2 ವರ್ಷಗಳ ಅವಧಿಗೆ ಸ್ವಚ್ಛ ಭಾರತ್ ಮಿಷನ್ 2.0ನ ಐಇಸಿ…

11 minutes ago

ಡಿ.ದೇವರಾಜು ಅರಸು ಜಯಂತಿ: ಅರ್ಥಪೂರ್ಣ ಆಚರಣೆಗೆ ಸೂಚನೆ

ರಾಯಚೂರು.07.ಆಗಸ್ಟ್.25: ಜಿಲ್ಲೆಯಲ್ಲಿ ಆಗಸ್ಟ್ 20 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು…

17 minutes ago

ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಕೆಪಿಎಂಇ, ಪಿಸಿಪಿಎನ್‌ಡಿಟಿ ಕಾಯ್ದೆಗಳ ಮಾರ್ಗಸೂಚಿ ಪಾಲನೆಯಾಗಲಿ

ರಾಯಚೂರು.07.ಆಗಸ್ಟ್ .25: ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕೆಪಿಎಂಇ ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಪಿಎಂಇ ಕಾಯ್ದೆ…

21 minutes ago

ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ<br>ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿoದ ಆರಂಭ.

ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ ಶಿಸ್ತಿನ ಸಿಪಾಯಿಗಳ ಶಾಲೆಯಂತಾದ ರಾಯಚೂರಿನ ಕೃಷಿ ವಿಜ್ಞಾನಿಗಳ…

32 minutes ago