೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕುರಿತು ನಗರದಲ್ಲಿ ಜಾಥಾ

೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕುರಿತು ನಗರದಲ್ಲಿ ಜಾಥಾ


ಬೀದರ,ಫೆ,೭:- ಇಂದು ದಿನಾಂಕ ೦೭-೦೨-೨೦೨೫ ರಂದು ಬೆಳಗ್ಗೆ ೧೦.೦೦ ಗಂಟೆಗೆ. ಜಿಲ್ಲಾ ಕಾನೂನ ಸೇವೆ ಪ್ರಾದಿಕಾರ ಹಾಗು ಜಿಲ್ಲಾಡಳಿತ ಬೀದರ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೀದರ ಮೋಟಾರ್ ವಾಹಾನ ತರಬೇತಿ ಶಾಲೆಯ ಸಂಘದ ವತಿಯಿಂದ ೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕುರಿತು ಬೀದರ ನಗರದಲ್ಲಿ ಜಾಥಾ ಕಾರ್ಯಕ್ರಮವನ್ನು  ಸಾಯಿ ಪಬ್ಲಿಕ ಸ್ಕೂಲ್ ಮೈದಾನದಿಂದ ಚಾಲನೆಯನ್ನು  ಜಿಲ್ಲಾ ಕಾನೂನ ಸೇವೆ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗು ಹಿರಿಯ ಸಿವಿಲ್ ನ್ಯಾಯದೀಶರಾದ ಗೌರವಾನಿತ ಪ್ರಕಾಶ ಬನ್ಸೋಡೆ ಹಾಗು ಬೀದರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಜಿ.ಕೆ. ಬಿರಾದರ ಹಾಗು ಸಂಚಾರಿ ಪೋಲಿಸ ಠಾಣೆಯ. ಪಿ.ಐ. ಬಾಪುಗೌಡ ಪಾಟೀಲ ಅವರು ಕಾರ್ಯಕ್ರಮಕ್ಕೆ ಚಾಲನೆ ನಿಡಿದರು.


ರಸ್ತೆ ಸುರಕ್ಷತಾ ಕುರಿತು ಸ್ಲೊಗನಗಳೊಂದಿಗೆ ಕುಡಿದು ವಾಹಾನ ಚಾಲನೆ ಮಾಡಬಾರದು. ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ ಜೀವಾ ಉಳಿಸಿ, ಕಾರ ಚಾಲಕರು ಸೀಟ ಬೆಲ್ಟ ಕಡ್ಡ್ಡಾಯವಾಗಿ ಧರಿಸಬೇಕು. ಮಧ್ಯಪಾನ ಮಾಡಿ ವಾಹಾನ ಚಾಲನೆ ಮಾಡಬಾರದು.

ವಾಹಾನ ಚಾಲನೆ ಮಾಡುವಾಗ ಮೊಬೈಲ ಫೋನ ಉಪಯೊಗಿಸಬಾರದು. ವಾಹಾನಗಳ ನಡುವೆ ಸುರಕ್ಷಿತ ಅಂತರವಿರಲಿ. ರಸ್ತೆಯ ಮೇಲೆ ಬರುವ ಎಲ್ಲಾ ಸಂಚಾರಿ ಚಿಹ್ನೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆಮಾಡಬೇಕು.

ವಾಹಗಳನ್ನು ಯಾವಗಲೂ ಸೂಸ್ಥಿಯಲ್ಲಿಡಿ. ಅಂಕುಡೊAಕು ತಿರುವಿನಲ್ಲಿ ಓವರೆ ಟೇಕ ಮಾಡಬಾರದು. ಪಾದಚಾರಿಗಳು ದಾಟೂವ ಸ್ಥಳ ಹಾಗೂ ಶಾಲಾ ವಲಯಗಳಲ್ಲಿ ವೇಗವನ್ನು ಕಡಿಮೆ ಮಾಡಿ ರಸ್ತೆ ವಾಹಾನ ಚಲಾಯಿಸಬೆಕು ಹೀಗೆ ಅನೇಕ ಸ್ಲೊಗನಗಳನ್ನು ಹೇಳುತ್ತಾ, ನಗರದ ಅಂಬೇಡ್ಕರ ವೃತ್ ಹಾಗು ಬಸವೇಸ್ವರ ವೃತ್, ಭಗತಸಿಂಗ ವೃತ್ ಜಿಲ್ಲಾದಿಕಾರಿಗಳ ಕಚೇರಿಯ ಮುಂಭಾಗದಿoದ ಸಾಯಿ ಸ್ಕೂಲ ಮೈದಾನಕ್ಕೆ ತೆರಳಿ ಮುಕ್ತಾಯಗೋಂಡಿತು.


ಈ ಜಾಥಾ ಕಾರ್ಯಕ್ರಮದಲ್ಲಿ ಮಾತಾ ಮಾಣಿಕೇಶ್ವರಿ ಪಿ.ಯು. ಕಾಲೇಜ ಹಾಗು ಗುರು ನಾನಕ ಪಿ.ಯು. ಕಾಲೇಜಿನ ವಿಧ್ಯಾರ್ಥಿಗಳು ಭಾಗವಹಿಸಿದ್ದರು.


ಈ ಕಾರ್ಯಕ್ರಮದಲ್ಲಿ ಹಿರಿಯ ಮೋಟಾರ ವಾಹಾನ ನೀರಿಕ್ಷಕರಾದ ಎನ್.ಎಸ್. ಪ್ರವೀನ ಹಾಗು ಹಿರಿಯ ಮೋಟಾರ ವಾಹಾನ ನೀರಿಕ್ಷಕರಾದ ಕೆ. ಜೆವರಯ್ಯಾ, ಮೋಟಾರ ವಾಹಾನ ನೀರಿಕ್ಷಕರಾದ ಇರಮ್ಮಾ ಸಿ. ನೂತನ ನಗರ ಪೋಲಿಸ ಠಾಣೆಯ ಪಿ.ಎಎಸ್.ಐ. ಪ್ರಭಾಕಾರ ಪಾಟೀಲ, ರಾಜ್ಯ ಮೋಟಾರ್ ವಾಹಾನ ತರಬೇತಿ ಶಾಲೆಯ ಸಂಘಟನಾ ಕಾರ್ಯದರ್ಶಿ ಶಿವರಾಜ ಜಮಾದರ ಖಾಜಾಪುರ, ಬೀದರ ಮೋಟಾರ್ ವಾಹಾನ ತರಬೇತಿ ಶಾಲೆಯ ಸಂಘದ ಅಧ್ಯಕ್ಷ ಪ್ರಕಾಶ ಗುಮ್ಮೆ, ಕಾರ್ಯದರ್ಶಿ ರಾಜಕುಮಾರ ಬಿರಾದರ, ಸಹ ಕಾರ್ಯದರ್ಶಿ ಸಾಗರ ಉಂಡೆ, ಉಪಾಧ್ಯಕ್ಷ ಶೆರಖಾನ, ಸೈಯದ ಮಕಸೂದ ಅಲಿ, ಎಶಪ್ಪಾ ಚಿಟ್ಟಾ, ಶಿವಾನಂದ, ಪಂಡಿತ ವಿರಣ್ಣಾ, ಸಂಜುಕುಮರ ಮುಲಗೆ, ಸುದಾಕರ ಬೀರಾದರ. ಉಮೇಶ ಘುಳೆ, ಅಹ್ಮದ ಖಾನ, ಶೋಯೆಬ ಸಿದ್ದಿಕಿ, ಸುರೇಶ ಗಾಯಕವಾಡ. ಉಮೇಶ ಉಂಡೆ ಹಾಗು ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ವಾಹಾನ ತರಬೇತಿ ಶಾಲೆಯ ಪ್ರಾಚಾರ್ಯರು ಹಾಗು ಚಾಲಕರು ಹಾಜರಿದ್ದರು.

prajaprabhat

Recent Posts

ರಾಜ್ಯ ಸರ್ಕಾರದಿಂದ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ರಾಜ್ಯದ ವಿವಿಧ ನಿಗಮಗಳಲ್ಲಿ ರಾಜ್ಯ ಸರ್ಕಾರ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ…

1 hour ago

ಶ್ರೀ ನುಲಿಯ ಚಂದಯ್ಯ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ಕೊಪ್ಪಳ.10.ಆಗಸ್ಟ್.25:- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

1 hour ago

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ದೊಡ್ಡ ಬದಲಾವಣೆಯನ್ನ ಮಾಡಲು ನಿರ್ಧರಿಸಿದೆ.

ಹೊಸ ದೆಹಲಿ.10.ಆಗಸ್ಟ್.25:- ನೀವು 9 ರಿಂದ 12 ನೇ ತರಗತಿಯ ಶಿಕ್ಷಕರಾಗುವ ಕನಸು ಕಾಣುತ್ತಿದ್ದರೆ, ಆಕಾಂಕ್ಷಿಗಳು ನೀವು ಸ್ವಲ್ಪ ಹೆಚ್ಚು…

2 hours ago

ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಇಲ್ಲದೆ ಸಾವಿರಾರು ವಿಧ್ಯಾರ್ಥಿ ಮತ್ತು ಪಾಲಕರಿಗೆ ತುಂಬಾ ಟೆನ್ಷನ್.!

2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್  ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…

11 hours ago

ಹಂದ್ರಾಳ ಗ್ರಾಮದಲ್ಲಿ ಹೆಸರು ಬೆಳೆಯ ಕ್ಷೇತೋತ್ಸವ

ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ…

11 hours ago

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,589 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…

11 hours ago