ಬೆಂಗಳೂರು, 14.ಫೆ.25:- ರಾಜ್ಯದಲ್ಲಿ ಕಳೆದ ಬಿಜೆಪಿ ಅವಧಿಯಲ್ಲಿ 10 ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿತ್ತು. ಇದೀಗ ಈ 10 ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.ಡಿಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಈ ಕುರಿತು ತೀರ್ಮಾನ ಕೈಗೊಂಡಿದೆ ಎಂದು ತಿಳಿದುಬಂದಿದೆ.
ವಿಶ್ವವಿದ್ಯಾಲಯ ಆರ್ಥಿಕ ಸ್ಥಿತಿಗತಿಯ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿತ್ತು. ಬೀದರ್ ವಿಶ್ವವಿದ್ಯಾಲಯವನ್ನು ಹೊರತುಪಡಿಸಿ ಉಳಿದ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಇದೀಗ ಸಂಪುಟ ಉಪಸಮಿತಿ ತೀರ್ಮಾನ ಕೈಗೊಂಡಿದೆ.
👉ಹಾಸನ ವಿಶ್ವವಿದ್ಯಾಲಯ
👉ಚಾಮರಾಜನಗರ, ವಿಶ್ವವಿದ್ಯಾಲಯ
👉ಹಾವೇರಿ, ವಿಶ್ವವಿದ್ಯಾಲಯ
👉ಕೊಡಗು, ವಿಶ್ವವಿದ್ಯಾಲಯ
👉ಕೊಪ್ಪಳ ವಿಶ್ವವಿದ್ಯಾಲಯ
👉ಬಾಗಲಕೋಟೆ ವಿಶ್ವವಿದ್ಯಾಲಯ
👉ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ
👉ಮಂಡ್ಯ ವಿಶ್ವವಿದ್ಯಾಲಯ
👉ನೃಪತುಂಗ ವಿಶ್ವವಿದ್ಯಾಲಯ
ಬೀಗ ಹಾಕುವ ಕುರಿತು ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.
150 ಸಂಯೋಜಿತ ಕಾಲೇಜುಗಳನ್ನು ಬೀದರ್ ವಿಶ್ವವಿದ್ಯಾಲಯ ಹೊಂದಿದೆ. ಅಲ್ಲದೆ ಬೀದರ್ ವಿಶ್ವವಿದ್ಯಾಲಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಹೊರತುಪಡಿಸಿ ಬಹುತೇಕ ವಿಶ್ವವಿದ್ಯಾಲಯಗಳಿಗೆ ಬೀಗ ಜಡಿಯುವ ಸಾಧ್ಯತೆ ಇದೆ.
ಕುಲಪತಿಗೆ ವಾಹನ ಕರುಣಿಸಲು ಹಣಕಾಸಿನ ಕೊರತೆ ಇದೆ.ಹೊಸ ವಿಶ್ವವಿದ್ಯಾಲಯ ನಡೆಸಲು ದೊಡ್ಡ ಮೊತ್ತದ ಹಣ ಸರ್ಕಾರ ನೀಡಬೇಕಿದೆ.
ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು ಕಾರ್ಯಾಚರಣೆಗೆ 342 ಕೋಟಿ ಅಗತ್ಯವಿದೆ.
ವಿಶ್ವವಿದ್ಯಾಲಯಗಳ ಸ್ಥಾಪನೆಗೆ 100 ರಿಂದ 200 ಎಕರೆ ಜಾಗ ಅಗತ್ಯವಿದೆ. ಬಹುತೇಕ ವಿಶ್ವವಿದ್ಯಾಲಯಗಳಿಗೆ ಅಷ್ಟು ಪ್ರಮಾಣದ ಜಮೀನು ಲಭ್ಯವಿಲ್ಲ ಹಾಗಾಗಿ ಬೀದರ್ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದ 9 ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈ ಹೊಸ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿ ಕೊರತೆ.
ಕೊಪ್ಪಳ.13.ಆಗಸ್ಟ್ 25 : ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿನ ಎನ್.ಜಿ.ಓ ಕಾಲೋನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರೀಡಿಂಗ್ ಸೆಂಟರ್, ಮುಖ್ಯಗ್ರಂಥಾಲಯಾಧಿಕಾರಿ ಕಛೇರಿಯಲ್ಲಿ ಮಂಗಳವಾರ…
ಕೊಪ್ಪಳ.13.ಆಗಸ್ಟ್.25: ವಿದೇಶಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ `ಸ್ಟಡಿ ಅಬ್ರಾಡ್' ಕಾರ್ಯಕ್ರಮಕ್ಕೆ ಭಾಗವಹಿಸಲಿಚ್ಛೀಸುವ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು…
ಬೆಂಗಳೂರು.13.ಆಗಸ್ಟ್.25:- ರಾಜ್ಯಾದ್ಯಂತ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ವೇಳೆ 'DJ' ನಿಷೇಧ ಮುಂಜಾಗ್ರತಾ ಕ್ರಮವಾಗಿ…
ಕೊಪ್ಪಳ.13.ಆಗಸ್ಟ್.25: ರಾಘವೇಂದ್ರ ಸ್ವಾಮಿಗಳ ೩೫೪ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂಗಳವಾರ ಉತ್ತರಾಧನೆ ಜರುಗಿತು. ಆರಾಧನೆಯ ಕೊನೆಯ ದಿನವಾಗಿದ್ದರಿಂದ ಮಧ್ಯಾಹ್ನ ನಡೆದ…
ಬೆಂಗಳೂರು.13.ಆಗಸ್ಟ.25:- ರಾಜ್ಯ ಸರ್ಕಾರ ಹೊಸ 310 ಪ್ರಾಂಶುಪಾಲರ ಹುದ್ದೆಗಳಿಗೆ ಶೀಘ್ರವೇ ಅರ್ಹರಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ ಪ್ರಥಮ ದರ್ಜೆ ಕಾಲೇಜುಗಳಿಗೆ…
2025-26ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವ ವಿದ್ಯಾಲಯವು (ಯುವಿಸಿಇ)/…