ಹೊನ್ನೂರು ಗ್ರಾಪಂ ಅಧ್ಯಕ್ಷರಾಗಿ ಎಂ ಗುರುಪ್ರಸಾದ್, ಉಪಾಧ್ಯಕ್ಷರಾಗಿ ನೇತ್ರಾವತಿ ಆಯ್ಕೆ.

ಚಾಮರಾಜನಗರ .02.ಏಪ್ರಿಲ್.25:-ಯಳಂದೂರು: ಹೊನ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಹೆಚ್. ಎಂ. ಗುರುಪ್ರಸಾದ್, ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆ
ಯಳಂದೂರು ತಾಲೂಕಿನ   ಹೊನ್ನೂರು ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಆರ್. ಪುಟ್ಟಬಸವಯ್ಯಹಾಗೂ ಉಪಾಧ್ಯಕ್ಷರಾಗಿದ ಭಾಗ್ಯಮ್ಮ ರವರು  ವೈಯಕ್ತಿಕ ಕಾರಣಗಳಿಂದ ರಾಜೀನಾಮೆ  ನೀಡಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ   ಗ್ರಾಮ ಪಂಚಾಯತಿ ಕಚೇರಿಯಲ್ಲಿ  ಶುಕ್ರವಾರ ನಡೆದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ  ಅಧ್ಯಕ್ಷರ ಸ್ಥಾನಕ್ಕೆ   ಹೆಚ್. ಎಂ. ಗುರುಪ್ರಸಾದ್ ಒಬ್ಬರೇ ಹಾಗೂ ಉಪಾಧ್ಯಕ್ಷರಸ್ಥಾನಕ್ಕೆ ನೇತ್ರಾವತಿ ನಾಮಪತ್ರ ಸಲ್ಲಿಸಿದ್ದು  ಈ ಸಂದರ್ಭದಲ್ಲಿ   ಕ್ಷೇತ್ರ ಶಿಕ್ಷಣಾಧಿಕಾರಿ  ಮಾರಯ್ಯ   ರವರು ಚುನಾವಣೆ ಅಧಿಕಾರಿಯಾಗಿ ಭಾಗವಹಿಸಿ  ಚುನಾವಣೆ ಪ್ರಕ್ರಿಯೆಗಳನ್ನು ಮುಗಿಸಿ ನಂತರ ಹೆಚ್. ಎಂ. ಗುರುಪ್ರಸಾದ್
ರವರು  ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿಹಾಗೂ ಉಪಾಧ್ಯಕ್ಷರಾಗಿ ನೇತ್ರಾವತಿ  ಅವಿರೋಧವಾಗಿ ಆಯ್ಕೆಯಾದರೆಂದು ಘೋಷಣೆ ಮಾಡಿದರು.


ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ   ಹೆಚ್. ಎಂ. ಗುರುಪ್ರಸಾದ್ ಅವರು ಮಾತನಾಡಿ  ನನಗೆ ದೊರಕಿರುವ  ಅಲ್ಪ ಪ್ರಮಾಣದ  ಅವಧಿಯಲ್ಲಿ    ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ  ಮಾಜಿ ಅಧ್ಯಕ್ಷ ಹ ಆರ್   ಪುಟ್ಟ ಬಸವಯ್ಯ, ಭಾಗ್ಯಮ್ಮ, ಇಂದಿರಾ, ಕೆ ಚಿನ್ನಸ್ವಾಮಿ,ಶಂಕರ್ ರೂಪೇಶ್, ಶಿವಪ್ರಕಾಶ್, ನಾಗರತ್ನಮ್ಮ, ಅನಿತ ನಿರಂಜನ್, ರಾಜೇಶ್, ಜಯಮ್ಮ, ಜಿ ನಾಗರಾಜು, ರಾಧ ಮಹದೇವಸ್ವಾಮಿ, ರಾಧ, ಕುಮಾರ್, ಮುಖಂಡರಾದ ರೇವಣ್ಣ, ತಾಪಂ ಸದಸ್ಯ ನಿರಂಜನ್, ರಾಜಶೇಖರ್, ಹೊನ್ನೂರು ಪ್ರಕಾಶ್, ಸುರೇಶ್,
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಿರಂಜನ್ ಕುಮಾರ್ , ಕಾರ್ಯದರ್ಶಿ ಲಕ್ಷ್ಮಿ  ಹಾಗೂ ಸಾರ್ವಜನಿಕರು  ಹೆಚ್ಚಿನ ಸಂಖ್ಯೆಯಲ್ಲಿಹಾಜರಿದ್ದರು.

prajaprabhat

Recent Posts

‘ಹರ ಘರ ತಿರಂಗಾ”ಕಾರ್ಯಕ್ರಮ

ಬೀದರ.14 ಆಗಸ್ಟ್.25:- 'ಹರ ಘರ ತಿರಂಗಾ" ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.…

56 minutes ago

ಸ್ವಾತಂತ್ರ್ಯ ಭಾರತದೊಳಗೆ ಇರುವ ಸಮಸ್ಯೆಗಳು.

                          ಭಾರತ ಅಂತರಾಷ್ಟ್ರೀಯಮಟ್ಟದಲ್ಲಿ ಬುದ್ದನ ಕಾಲದಿಂದಲೂ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ರಾಷ್ಟ್ರವೆಂದರೆ ಅದೂ ಭಾರತ ಇದನ್ನೂ ಬುದ್ದನ…

3 hours ago

ರಾಜ್ಯದಲ್ಲಿ ಖಾಲಿ ಪ್ರಾಧ್ಯಾಪಕರ ಹುದ್ದೆಗಳು  ಶೀಘ್ರ ಭರ್ತಿ ಮಾಡಲಾಗುವುದು.

ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್‌ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…

10 hours ago

ಶ್ರೀಕೃಷ್ಣ ಜನ್ಮಾಷ್ಠಮಿ‌: ಔರಾದ್ ನಲ್ಲಿ 16ರಂದು “ದಹಿ ಹಂಡಿ” ಉತ್ಸವ*

ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ‌ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…

13 hours ago

ಹರ್ ಘರ್ ತಿರಂಗಾ ಅಭಿಯಾನ: 14ರಂದು ಔರಾದನಲ್ಲಿ ಬೈಕ್ ರ‍್ಯಾಲಿ*

ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…

13 hours ago

ಹ.ರಾ.ಮಹೇಶ್ ಅವರ ಅಭಿನಂದನಾ ಗ್ರಂಥಕ್ಕೆ ಹಾರೈಕೆ ನುಡಿಗಳ ಲೇಖನಗಳ ಆಹ್ವಾನ

   ಬಂಧುಗಳೇ,                  ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…

13 hours ago