ಹಳೆ ವಾಹನ ನೋಂದಣಿ ನವೀಕರಣ ತುಟ್ಟಿ ?

ಹೊಸ ದೆಹಲಿ.12.ಫೆ.25:- ಇಂದು ಹಲವು ವರ್ಷ ಹಳೆ ವಾಹನಗಳು ಸರ್ಕಾರ ಹೊಸ ನಿಯಮಾವಳಿಗೆ ಚಿಂತನೆ ನಡೆಸುತ್ತಿದೆ.ಇಪ್ಪತ್ತು ವರ್ಷಗಳಿಗಿಂತ ಹಳೆಯ ವಾಹನಗಳ ಗುಜರಿ ನೀತಿಗೆ ಸಂಬಂಧಿಸಿ ಹೊಸ ಕರಡು ಅಧಿಸೂಚನೆಯನ್ನು ಕೇಂದ್ರ ಸರಕಾರ ಹೊರಡಿಸಿದ್ದು, ಅದು ಜಾರಿಯಾದರೆ ಈ ವಾಹನಗಳ ನೋಂದಣಿ ನವೀಕರಣಕ್ಕೆ ಹೆಚ್ಚಿನ ಹಣ ನೀಡಬೇಕಾಗುತ್ತದೆ.

ಬಿಎಸ್‌-2 ನಿಯಮಗಳ ಜಾರಿಗಿಂತ ಮುಂಚೆ ಉತ್ಪಾದನೆಯಾದ ವಾಹನಗಳ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಕರಡು ಅಧಿಸೂಚನೆಯ ಪ್ರಕಾರ 20 ವರ್ಷ ಹಳೆಯ ದ್ವಿಚಕ್ರವಾಹನ ನೋಂದಣಿ ನವೀಕರಣಕ್ಕೆ 2,000 ರೂ. ಹಾಗೂ ಕಾರುಗಳಿಗೆ 10,000 ರೂ. ಆಗಲಿದೆ. ಅದೇ ರೀತಿ 15 ವರ್ಷಗಳಷ್ಟು ಹಳೆಯದಾದ ವಾಣಿಜ್ಯ ಬಳಕೆಯ ಮಧ್ಯಮ ಮತ್ತು ಭಾರೀ ವಾಹನಗಳ ನೋಂದಣಿ ನವೀಕರಣಕ್ಕೆ ಕ್ರಮವಾಗಿ 18,000 ರೂ.,

ಪಾವತಿಸಬೇಕಾಗುತ್ತದೆ. 20 ವರ್ಷಗಳಷ್ಟು ಹಳೆಯದಾದ ಈ ವಾಹನಗಳ ಮರು ನೋಂದಣಿಗೆ ಕ್ರಮವಾಗಿ 24,000 ರೂ. ಮತ್ತು 36,000 ರೂ. ಪಾವತಿಸಬೇಕಾಗುತ್ತದೆ.

ಸದ್ಯ ಈ ಶುಲ್ಕ ಹೆಚ್ಚಳವನ್ನು ಸಾರ್ವಜನಿಕರ ಅವಗಾಹನೆಗೆ ಬಿಡಲಾಗಿದ್ದು, ಈ ಪ್ರಕ್ರಿಯೆ ಮುಗಿದ ಬಳಿಕ ಸರಕಾರವು ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ದಿಲ್ಲಿ-ಎನ್‌ಸಿಆರ್‌ ಹೊರತುಪಡಿಸಿ ಈ ಪರಿಷ್ಕೃತ ಬದಲಾವಣೆಗಳು ಇಡೀ ದೇಶಕ್ಕೆ ಅನ್ವಯಿಸಲಿವೆ. ದಿಲ್ಲಿಯಲ್ಲಿ ಈಗಾಗಲೇ 10 ವರ್ಷಗಳಷ್ಟು ಹಳೆಯ ಡೀಸೆಲ್‌ ಮತ್ತು 15 ವರ್ಷಗಳಷ್ಟು ಹಳೆಯ ಪೆಟ್ರೋಲ್‌ ವಾಹನಗಳನ್ನು ಗುಜರಿಗೆ ಹಾಕುವುದನ್ನು ಹೈಕೋರ್ಟ್‌ ಕಡ್ಡಾಯ ಮಾಡಿದೆ. 2021ರ ಅಕ್ಟೋಬರ್‌ನಲ್ಲೇ ಕೇಂದ್ರ ಸರಕಾರವು ದ್ವಿಚಕ್ರ, ತ್ರಿಚಕ್ರ ವಾಹನಗಳು ಮತ್ತು ಕಾರುಗಳ ನೋಂದಣಿ ಮತ್ತು ನವೀಕರಣದ ಮೊತ್ತವನ್ನು ಹೆಚ್ಚಿಸಿತ್ತು.

ಈ ವ್ಯಾಪ್ತಿಯಿಂದ ಪ್ರಯಾಣಿಕರ ಮಧ್ಯಮ ಮತ್ತು ಭಾರೀ ವಾಹನಗಳನ್ನು ಹೊರಗಿಡಲಾಗಿತ್ತು.

ಈಗ ಎಷ್ಟಿದೆ ಶುಲ್ಕ?
2021ರ ಅಕ್ಟೋಬರ್‌ನಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿದ ಅಧಿಸೂಚನೆಯ ಪ್ರಕಾರ 2022ರ ಎಪ್ರಿಲ್‌ ಅನಂತರ 15 ವರ್ಷಗಳ ಹಳೆಯ ದ್ವಿಚಕ್ರವಾಹನಗಳ ನೋಂದಣಿ ನವೀಕರಣಕ್ಕೆ 1,000 ರೂ., ತ್ರಿಚಕ್ರ ವಾಹನಗಳಿಗೆ 2,500 ರೂ.,

ಎಲ್ಲ ಮಾದರಿಯ ಕಾರುಗಳಿಗೆ 5,000 ರೂ. ಶುಲ್ಕ ನಿಗದಿ ಪಡಿಸಲಾಗಿತ್ತು. ಅದೇ ರೀತಿ ಮಧ್ಯಮ ಮತ್ತು ಭಾರೀ ವಾಹನಗಳ ನೋಂದಣಿ ನವೀಕರಣಕ್ಕೆ 12,500 ರೂ. ನಿಗದಿ ಮಾಡಲಾಗಿತ್ತು.

ಶುಲ್ಕ ಎಷ್ಟಾಗಲಿದೆ?
– 20 ವರ್ಷ ಹಳೆಯ ದ್ವಿಚಕ್ರವಾಹನಕ್ಕೆ 2000 ರೂ., ಕಾರಿಗೆ 10,000ರೂ.
– ಮಧ್ಯಮ ಗಾತ್ರದ ಪ್ರಯಾಣಿಕ/ಸರಕು ವಾಹನಕ್ಕೆ 25,000 ರೂ.

ಪರಿಷ್ಕೃತ ಶುಲ್ಕ ಎಷ್ಟಾಗಲಿದೆ? (20 ವರ್ಷದ ಹಳೆಯ ವಾಹನಕ್ಕೆ)
ದ್ವಿಚಕ್ರ ವಾಹನ- 2,000 ರೂ.
ತ್ರಿಚಕ್ರ ವಾಹನ- 5,000 ರೂ.
ಕಾರು/ಜೀಪು- 10,000 ರೂ.
ಮಧ್ಯಮ ಗಾತ್ರದ ಪ್ರಯಾಣಿಕ/ಸರಕು ವಾಹನ- 25,000 ರೂ.
ಭಾರೀ ಗಾತ್ರದ ಪ್ರಯಾಣಿಕ/ಸರಕು ವಾಹನ- 36,000 ರೂ.

ಪರಿಷ್ಕೃತ ಶುಲ್ಕ ಎಷ್ಟಾಗಲಿದೆ? (15 ವರ್ಷದ ಹಳೆಯ ವಾಹನಕ್ಕೆ)
ಮಧ್ಯಮ ಗಾತ್ರದ ಪ್ರಯಾಣಿಕ/ ಸರಕು ವಾಹನ- 12,000 ರೂ.
ಭಾರೀ ಗಾತ್ರದ ಪ್ರಯಾಣಿಕ/ ಸರಕು ವಾಹನ- 18,000 ರೂ.

prajaprabhat

Recent Posts

ಜಾತಿಗಣತಿ ವರದಿ ವೈಜ್ಞಾನಿಕ ದತ್ತಾಂಶವನ್ನು ಹೊಂದಿದೆ: ಸಚಿವ ಪರಮೇಶ್ವರ.

ಬೆಂಗಳೂರು,19.ಏಪ್ರಿಲ್.25:- ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ವಿಚಾರ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ…

5 minutes ago

ಪಾಕಿಸ್ತಾನದಲ್ಲಿ ಇಂದು 5.9 ತೀವ್ರತೆಯ ಭೂಕಂಪ

ಪಾಕಿಸ್ತಾನದಲ್ಲಿ ಇಂದು 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ರಾಷ್ಟ್ರೀಯ…

15 minutes ago

ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರೇ ಬೀಳಿಸುತ್ತಾರೆ: ಶ್ರೀರಾಮುಲು!

ಕಲಬುರಗಿ.19.ಏಪ್ರಿಲ್.25:- ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರಾದ್ ಶ್ರೀರಾಮುಲು ಅವರು ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ…

3 hours ago

ಚುನಾವಣಾ ಪ್ರಚಾರದಲ್ಲಿ AI ಬಳಕೆಯ ಬಗ್ಗೆ ಚುನಾವಣಾ ಆಯೋಗ ಎಚ್ಚರ : ಶೀಘ್ರವೇ ಮಾರ್ಗಸೂಚಿ ಪ್ರಕಟ.!

ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರ ಚುನಾವಣಾ ಆಯೋಗ  ಚುನ್ನವನೇ ಪ್ರಚಾರಕ್ಕಾಗಿ ಜಾಹೀರಾತುಗಳು ಸೇರಿದಂತೆ ಇತರ ಚುನಾವಣಾ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಕೃತಕ…

3 hours ago

ಕೆನಡಾದಲ್ಲಿ ಗುಂಡಿನ ಚಕಮಕಿ : 21 ವರ್ಷದ ಭಾರತೀಯ ವಿದ್ಯಾರ್ಥಿನಿ ಸಾವು.!

ಕೆನಡಾದಲ್ಲಿ.19.ಏಪ್ರಿಲ್.25:- ಭಾರತೀಯ ವಿದ್ಯಾರ್ಥಿ ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ…

3 hours ago

ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

ಬೆಂಗಳೂರು.19.ಏಪ್ರಿಲ್.25:- ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಬಿಜೆಪಿ ಸಂಸದ ಬಿವೈ…

4 hours ago