ಹನೂರು ಸಂಪೂರ್ಣ ಧೂಳು. ಕ್ಯಾಬಿನೆಟ್ ಸಭೆಯಿಂದ ರಸ್ತೆಗಳಿಗೆ ಗುದ್ದಲಿ ಪೂಜೆ.



ಚಾಮರಾಜನಗರ.12.ಫೆ.25:- ಸಿದ್ದರಾಮಯ್ಯನವರ ಕ್ಯಾಬಿನೆಟ್ ಸಭೆ ಹನೂರು ತಾಲ್ಲೂಕಿನ ಧಾರ್ಮಿಕ ಕ್ಷೇತ್ರವಾಗಿರುವ ಮಹದೇಶ್ವರ ಬೆಟ್ಟದಲ್ಲಿ ನಡೆಸುತ್ತಿರುವುದು ಸಂತಸವಾಗಿದೆ.‌
ಕ್ಯಾಬಿನೆಟ್ ಸಭೆಯಿಂದ ಚಾಮರಾಜನಗರ ಜಿಲ್ಲೆ ಅಭಿವೃದ್ಧಿಯೊಂದ ಬಹುದೆಂದು ಊಹಿಸಿಕೊಳ್ಳಲಾಗಿದೆ.

ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಚಾಮರಾಜನಗರ ಜಿಲ್ಲೆಯ ಹನೂರು ನೂತನ ತಾಲ್ಲೂಕು ಕೇಂದ್ರವಾಗಿ 30-11-2017 ರಲ್ಲಿ ಘೋಷಣೆ ಮಾಡಿದರು.ಪ್ರಾರಂಭದಲ್ಲಿ ಕೊಳ್ಳೇಗಾಲ ತಾಲ್ಲೂಕಿಗೆ ಹನೂರು ಒಳಪಟ್ಟಿತು. ನಂತರ ಹನೂರು ಪ್ರತ್ಯೇಕ ತಾಲ್ಲೂಕು ಕೇಂದ್ರವಾಗಿ ಹೊರಹೊಮ್ಮಿದೆ.

ಆದರೆ ಹೆಸರಿಗಷ್ಟೆ ಘೋಷಣೆಯಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಏನೇನೂ ಇರಬೇಕು ಅದು ಇಲ್ಲ ಬಿಡಿ. ಪಟ್ಟಣದೊಳಗೆ ಎತ್ತ ನೋಡಿದರು ಧೂಳು,  ಗಲೀಜು ಮತ್ತು ಅಶಿಸ್ತು ನಿಂದ ಕೂಡಿದೆ. ಪಟ್ಟಣ ಪಂಚಾಯತಿಯು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಸುಮಾರು ವರ್ಷಗಳಿಂದಲೂ ಹನೂರು ವಿಧಾನಸಭಾ ಕ್ಷೇತ್ರವಾಗಿದೆ ಆದರೆ ಯಾವುದೇ ರಂಗದಲ್ಲಿಯೂ ಅಭಿವೃದ್ಧಿಯಾಗಿಲ್ಲ.

ದಿವಂಗತ ಮಾಜಿ ಸಚಿವರಾದ ರಾಜುಗೌಡರು, ದಿವಂಗತ ನಾಗಪ್ಪ ರವರ ಕಾಲದಲ್ಲಿ ಸ್ವಲ್ಪ ಅಭಿವೃದ್ಧಿ ಹೊಂದಿರಬಹುದು. ಆದರೆ ಇವರ ನಂತರ ಬಂದಂತಹ ಎಂ ಎಲ್ ಎ ಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಹನೂರು ಪಟ್ಟಣದೊಳಗೆ ಹಾಗೂ ಕ್ಷೇತ್ರದೊಳಗೆ  ಆಗಿಲ್ಲವೆಂದು ಹೇಳಬಹುದು.

ಪಾಪ ಇವಾಗ ಜೆಡಿಎಸ್ ನಿಂದ ಮಂಜುನಾಥ್ ಎಂಬುವವರು ಎಂ ಎಲ್ ಎ ಆಗಿದ್ದಾರೆ ಇವರು ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂದು ಅಂದುಕೊಂಡಿದ್ದಾರೆ ಆದರೆ ಇವರಿಗೆ ಸರಕಾರದಿಂದ ಅನುದಾನ ಕೊರತೆಯಾಗಿರ ಬಹುದು!  ಜೊತೆಗೆ ಇವರು ಆಡಳಿತ ಪಕ್ಷ ಕಾಂಗ್ರೇಸ್ ನವರಲ್ಲ . 

ಇವರು ಕೇಳಿದಷ್ಟು ಅನುದಾನವನ್ನು ಕೊಡುತ್ತಾರೋ ಅಥವಾ ಕೊಡೊದಿಲ್ವೋ ಗೊತ್ತಿಲ್ಲ?


ಹನೂರಿಂದ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಗಳಂತೂ ಗುಂಡಿಮಯವಾಗಿದೆ. ಮಳೆ ಬಂತು ಅಂದರೆ ಈ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸಿದರೆ  ಖಂಡಿತವಾಗಿ ಅಪಘಾತಗಳಾಗುತ್ತವೆ. ಮಳೆ ಬರದಿದ್ರು ಕೂಡ ರಸ್ತೆ ಧೂಳಿಂದ ಕೂಡಿರುತ್ತದೆ.

ಪಟ್ಟಣದಿಂದ ಬಂಡಳ್ಳಿ  ಗ್ರಾಮಕ್ಕೆ ತೆರಳುವ ರಸ್ತೆಯು ತೀರ ಹದಗೆಟ್ಟಿದೆ. ಸಿ ಎಂ ಸಿದ್ದರಾಮಯ್ಯನವರು ಕ್ಯಾಬಿನೆಟ್ ಸಭೆಗೆ ಮಹದೇಶ್ವರ ಬೆಟ್ಟಕ್ಕೆ ಬರುವಾಗ ದಯವಿಟ್ಟು ಹನೂರಿನಿಂದ ಬಂಡಳ್ಳಿಯವರಿಗೆ ತಾವು ಕಾರಿನಲ್ಲಿ ಹೋಗಿದ್ ಬನ್ನಿ ನಿಮಗೆ ವಾಸ್ತವ ತಿಳಿಯುತ್ತದೆ.

ಕ್ಯಾಬಿನೆಟ್ ಸಭೆಯಿಂದ ಈ ರಸ್ತೆಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಕ್ಯಾಬಿನೆಟ್ ಸಭೆ ನಡೆಯಿದ್ದರೆ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿರಲಿಲ್ಲವೇನೋ? !!!
ಬಂಡಳ್ಳಿ ರಸ್ತೆಯು ಡಾಂಬರ್ ಕಂಡು ಸುಮಾರು 30 ವರ್ಷಕ್ಕೂ ಹೆಚ್ಚಿರ ಬಹುದು.

ಈ ಮಾರ್ಗದಲ್ಲಿಯೇ ತಾಲ್ಲೂಕು ಪಂಚಾಯತ್ ಕಛೇರಿ, ಕ್ರಿಸ್ತರಾಜ ಸ್ಕೂಲ್, ಜಿವಿ ಗೌಡ ಸರಕಾರಿ  ಪದವಿ ಪೂರ್ವ ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಿವೆ.

ಪ್ರತಿದಿನ  ವಿದ್ಯಾರ್ಥಿಗಳು, ಪೋಷಕರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಾರೆ ಆದರೆ ಮೂಗಿಗೆ ಕರ್ಚಿಪು ಇಟ್ಟುಕೊಂಡು ಹೋಗುತ್ತಾರೆ. ಈ ರಸ್ತೆಯಲ್ಲಿ ಒಂದುವಾರ ತಿರುಗಾಡಿದರೆ ಸಾಕು ಶ್ವಾಸಕೋಶದ ಕಾಯಿಲೆ ಖಂಡಿತವಾಗಿ ಬರುತ್ತದೆ.
ಈ ರಸ್ತೆಯು ತೀರ ಹದಗೆಟ್ಟು ಸಂಚಾರಕ್ಕೆ ಯೋಗ್ಯವಾಗಿಲ್ಲ.

ಈ ಭಾಗದ  ರಾಜಕಾರಣಿಗಳೇ ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ  ನೀವು ಇದ್ದಿರಾ ಅಥವಾ ಇಲ್ಲವೋ ಎಂಬುದು ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.??

ನೀವು ರಸ್ತೆ ಮಾಡೋ ತನಕ ಪ್ರತಿ ದಿನ ಟ್ಯಾಂಕರ್ ನಲ್ಲಿಯಾದರೂ ರಸ್ತೆಗೆ ನೀರು ಹಾಕಿಸಿದರೆ ಸ್ವಲ್ಪ ಧೂಳು ಕಡಿಮೆಯಾಗಬಹುದು ಎಂಬುವುದು ವಿದ್ಯಾರ್ಥಿಗಳ ಕೂಗಾಗಿದೆ.
ನೀರು ಹಾಕಿಸುವ ಜವಾಬ್ದಾರಿ ಪಟ್ಟಣ ಪಂಚಾಯತಿಯವರು ಮಾಡ್ತರೋ ಅಥವಾ ಲೋಕೋಪಯೋಗಿ ಇಲಾಖೆಯವರು ಮಾಡ್ತರೋ ಗೊತ್ತಿಲ್ಲ.

ಪಟ್ಟಣದೊಳಗೆ ಈ ರಸ್ತೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುವುದರಿಂದ ಪ್ರತಿ ದಿನ ಟ್ಯಾಂಕರ್ ನಿಂದ ನೀರು ಹಾಕಿಸಿ ಎಂದು ಪೋಷಕರ ಆಕ್ರೋಶವಾಗಿದೆ..

ಪತ್ರಕರ್ತ, ಜೆ.ಪ್ರಸನ್ನಕುಮಾರ್ ಕೆಸ್ತೂರು

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

1 hour ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

6 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

7 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

7 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

7 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

8 hours ago