ಹತ್ತು ದಿವಸಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

ಬೀದರ.25.ಮೇ.25:- ಜಿಲ್ಲಾಡಳಿತ, ಬೀದರ, ಶಾಲಾ ಶಿಕ್ಷಣ ಇಲಾಖೆ,ಪ್ರಾದೇಶಿಕ ವಿಜ್ಞಾನ ಕೇಂದ್ರ ಬೀದರ ಹಾಗೂ ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರ ಬೀದರ ಆಶ್ರಯದಲ್ಲಿಂದು ಮೇ.15 ರಿಂದ 24 ರವರೆಗೆ ಹಮ್ಮಿಕೊಂಡಿದ್ದ 10 ದಿವಸಗಳ ಕಾಲ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಭಾಗವಹಿಸಿ ಶಿಬಿರದಲ್ಲಿ ಮಕ್ಕಳಿಂದ ಎಲ್ಲಾ ಚಟುವಟಿಕೆಗಳ ಬಗ್ಗೆ ಅವಲೋಕನ ಮಾಡಿದರು.


ಕೆಲವು ಮಕ್ಕಳು ಖುಷಿಯಿಂದ ಆನಂದವಾಗಿ ಕಳೆದೆವು ಎಂದು ತಿಳಿಸಿದರು ಮಕ್ಕಳಿಗೆ ಮೇಡಂ ಅವರು ಬೇಸಿಗೆಯಲ್ಲಿ ಪಠ್ಯ ವಿಷಯ ಹೊರತುಪಡಿಸಿ ಹೊಸದಾಗಿ ವೈಜ್ಞಾನಿಕ ಚಿಂತನೆ, ಹೊಸ ಹೊಸ ತಂತ್ರಜ್ಞಾನಗಳ ಕುರಿತು, ವಿಚಾರ ಹೊಂದಲು, ನಿತ್ಯ ಜೀವನದಲ್ಲಿ ಪ್ರಾಯೋಗಿಕವಾಗಿ ಸಿದ್ಧಾಂತಗಳನ್ನು ಅರಿತುಕೊಳ್ಳಲು ತಿಳಿಸಿದರು.
ಈ ಕಾರ್ಯಕ್ರಮವು ಏಳನೇ ತರಗತಿಯಿಂದ 10ನೇ ತರಗತಿ ವರೆಗಿನ 80 ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿದ್ದರು. ಈ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ನೃತ್ಯ, ಸಂಗೀತ ವಾದ್ಯ, ಹಿಂದುಸ್ತಾನಿ ಸಂಗೀತ, ರಾಕೆಟ್ ಉಡಾವಣೆ, ಖಗೋಳ ಶಾಸ್ತ್ರ ಚಟುವಟಿಕೆ ಮತ್ತು ಕೊಳಲು ವಾದ್ಯ ಹೀಗೆ ಹಲವಾರು ವಿಷಯಗಳನ್ನು ಕಲಿಸಿಕೊಡಲಾಯಿತು. ಇಲ್ಲಿನ ಕಲಿಕೆಯು ಅತ್ಯಂತ ಸರಳ ಮತ್ತು ವಿಶೇಷವಾಗಿರುವುದರ ಜೊತೆಗೆ ಸಂತೋಷಭರಿತವಾಗಿತ್ತು ಮತ್ತು ವಿದ್ಯಾರ್ಥಿಗಳು ಅತ್ಯಂತ ಸರಳ ರೀತಿಯಲ್ಲಿ ಈ ಬೇಸಿಗೆ ಶಿಬಿರದ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು.


ನೋಡಲ್ ಅಧಿಕಾರಿಗಳಾದ ಧನರಾಜ್ ಗುಡಮೆ (ಬಿ.ಆರ್.ಸಿ) ಬೀದರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳು 10 ದಿನದ ಬದಲಾಗಿ ಇನ್ನೂ ಹೆಚ್ಚುದಿವಸಗಳ ಕಾರ್ಯಕ್ರಮ ಏರ್ಪಡಿಸಲು ಕೋರಿದರು. ಜಿಲ್ಲಾಧಿಕಾರಿಗಳು ಶಿಬಿರದ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಸಂತೋಷದಿಂದ ಶುಭ ಹಾರೈಸಿದರು. ರಾಕೆಟ್ ಉಡಾವಣೆಯ ಕುರಿತು SIR ISSAC NEWTON ರ ಮೂರು ನಿಯಮಗಳ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಸಾಯಿನಾಥ ಪ್ರಾದೇಶಿಕ ವಿಜ್ಞಾನ ಕೇಂದ್ರ ಬೀದರ, ಮಹೇಶ ಧುಪೆ, ವಿಶ್ವನಾಥ ಚಿತ್ರಕಲ್ಲಾ ಶಿಕ್ಷಕರು, ಹುಡುಗೆ ಗುಂಡಪ್ಪ ಹಾಗೂ ಅಗಸ್ತ್ಯ ವಿಜ್ಞಾನ ಕೇಂದ್ರದ ಸಿಬ್ಬಂಧಿಯವರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿರಿದ್ದರು.

prajaprabhat

Recent Posts

ದೇಶದ ರಸ್ತೆ ಮತ್ತು ಸಾರಿಗೆ ಮೂಲಸೌಕರ್ಯವು ವಿಶ್ವ ದರ್ಜೆಯ ಗುಣಮಟ್ಟವನ್ನು ತಲುಪುತ್ತಿದೆ ಎಂದು ಕೇಂದ್ರ ಸಚಿವ ಗಡ್ಕರಿ.

ಹೊಸ ದೆಹಲಿ.08.ಆಗಸ್ಟ್.25:- ದೇಶದಲ್ಲಿ ರಸ್ತೆ ಮತ್ತು ಸಾರಿಗೆ ಮೂಲಸೌಕರ್ಯಗಳು ವಿಶ್ವ ದರ್ಜೆಯ ಮಟ್ಟಕ್ಕೆ ಏರುತ್ತಿವೆ, ಇದರಿಂದಾಗಿ ಪ್ರಯಾಣದ ಸಮಯ ಕಡಿಮೆಯಾಗುತ್ತದೆ…

5 minutes ago

ಚುನಾವಣಾ ಆಯೋಗದ ಸಮಗ್ರತೆಯನ್ನು ಪ್ರಶ್ನಿಸಿದ್ದಕ್ಕಾಗಿ ರಾಹುಲ್ ಗಾಂಧಿಯನ್ನು ಬಿಜೆಪಿ ಟೀಕಿಸಿದೆ.

ಹೊಸ ದೆಹಲಿ.08.ಆಗಸ್ಟ್.25:- ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗದ ಸಮಗ್ರತೆಯನ್ನು ಪ್ರಶ್ನಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್…

9 minutes ago

ಅರುಣಾಚಲ ಪ್ರದೇಶಕ್ಕೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದ್ದು, ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಹೊಸ ದೆಹಲಿ.08.ಆಗಸ್ಟ್.25:- ಅರುಣಾಚಲ ಪ್ರದೇಶದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್…

11 minutes ago

ಸರಕು ಸಾಗಣೆಗಾಗಿ ಜಮ್ಮು ವಿಭಾಗದ ಅಡಿಯಲ್ಲಿ ಅನಂತನಾಗ್ ರೈಲು ನಿಲ್ದಾಣವನ್ನು ಮುಕ್ತಗೊಳಿಸಿದ ಉತ್ತರ ರೈಲ್ವೆ

ಹೊಸ ದೆಹಲಿ.08.ಆಗಸ್.25:- ಜಮ್ಮು ಮತ್ತು ಕಾಶ್ಮೀರದಲ್ಲಿ, ಉತ್ತರ ರೈಲ್ವೆ ತನ್ನ ಜಮ್ಮು ವಿಭಾಗದ ಅಡಿಯಲ್ಲಿ ಸರಕುಗಳ ಸಾಗಣೆಗಾಗಿ ಅನಂತನಾಗ್ ರೈಲು…

14 minutes ago

ತೆಲಂಗಾಣದಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ; ಆತ್ಮಕೂರ್‌ನಲ್ಲಿ ದಾಖಲೆಯ ಅತಿ ಹೆಚ್ಚು ಮಳೆ

ಹೊಸ ದೆಹಲಿ.08.ಆಗಸ್ಟ್.25:- ನಿನ್ನೆ ಸಂಜೆ ತೆಲಂಗಾಣದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಹಲವಾರು ಸ್ಥಳಗಳಲ್ಲಿ ನೀರು ನಿಂತು ಸಂಚಾರ ದಟ್ಟಣೆಯಿಂದಾಗಿ…

17 minutes ago

ಉತ್ತರಕಾಶಿಯ ಧರಾಲಿ-ಹರ್ಸಿಲ್‌ನಲ್ಲಿ ರಕ್ಷಣಾ ಕಾರ್ಯಗಳು ತೀವ್ರಗೊಂಡಿವೆ

ಹೊಸ ದೆಹಲಿ.08.ಆಗಸ್ಟ್.25:- ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ವಿಪತ್ತು ಪೀಡಿತ ಧರಾಲಿ-ಹರ್ಸಿಲ್ ಪ್ರದೇಶದಲ್ಲಿ ಸೇನೆ, ವಾಯುಪಡೆ, ಐಟಿಬಿಪಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್…

20 minutes ago