ಕೊಪ್ಪಳ.18.ಜುಲೈ.25: ಹತ್ತಿ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳಾದ ಮಿರಿಡ್ ತಿಗಣೆ, ಥ್ರೀಪ್ಸ್, ಹಿಟ್ಟು ತಿಗಣೆ, ಹಸಿರು ಜಿಗಿಹುಳು, ಬಿಳಿನೊಣ, ಗುಲಾಬಿ ಕಾಯಿಕೊರಕದ ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ಕೃಷಿ ಇಲಾಖೆಯಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ಹತೋಟಿ ಕ್ರಮಗಳು: ಹತ್ತಿ ಬೆಳೆಯಲ್ಲಿ ಕಂಡುಬರುವ ಪ್ರಮುಖ ಕೀಟಗಳ ಹತೋಟಿಗಾಗಿ ರೈತರು ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದು. ಹತ್ತಿ ಬೆಳೆಯ ಅವಧಿ ಮುಗಿದ ನಂತರ ಗಿಡಗಳನ್ನು ಟ್ಯಾಕ್ಟರ್ ಚಾಲಿತ ಕೇಡರ್ನಿಂದ ಕಿತ್ತು ಪುಡಿ ಮಾಡಿ ಸೇರಿಸುವುದು. ಬಾದೆಗೊಳಗಾದ ಕಾಯಿಗಳನ್ನು ಹತ್ತಿ ಗಿಡದಿಂದ ಕಿತ್ತು ನಾಶಪಡಿಸಬೇಕು.
ಆಶ್ರಯ ಕಳೆಗಳಾದ ಅಬುಟಿಲಾನ್, ಪಾರ್ಥೆನಿಯಮ್, ವಿಭೂತಿ ಗಿಡ ಮತ್ತು ಇತರ ಕಳೆಗಳನ್ನು ಕಿತ್ತು ನಾಶಮಾಡುವುದು. ಹತ್ತಿ ಬೆಳೆಯ ಸುತ್ತಲು ನಾಲ್ಕು ಸಾಲು ಸಜ್ಜೆ ಬೆಳೆಯುವುದರಿಂದ ಸ್ವಲ್ಪ ಮಟ್ಟಿಗಾದರು ಡ್ರಿಪ್ಸ್ ನುಸಿ ಮತ್ತು ಹಿಟ್ಟು ತಿಗಣೆ ಕೀಟಗಳ ಬಾಧೆಯನ್ನು ನಿಯಂತ್ರಿಸಬಹುದು.
ಆಯಾ ಪ್ರದೇಶಕ್ಕೆ ಶಿಫಾರಸ್ಸು ಮಾಡಿದ ಬಿಟಿ ಹತ್ತಿಯ ಶಕ್ತಿಮಾನ್ ತಳಿಗಳನ್ನು ಅದರಲ್ಲೂ ಮೂರನೆ ಸಂತತಿಯ (31 generation Bt. Cotton) ತಳಿಗಳನ್ನು ಉಪಯೋಗಿಸಬೇಕು.
ಬಿತ್ತನೆಗೆ ಮೊದಲು ಪ್ರತಿ ಕೆ.ಜಿ. ಬಿಟಿ ಹತ್ತಿ ಬೀಜಕ್ಕೆ 15 ಮಿ.ಲೀ ಇಮಿಡಾಕ್ಲೋಪ್ರಿಡ್ 60 ಎಫ್.ಎಸ್. ದಿಂದ ಬೀಜೋಪಚಾರ ಮಾಡಿದ ಕಾರಣ ಮೊದಲ ಹಂತದಲ್ಲಿ ಬರುವ ರಸ ಹೀರುವ ಕೀಟಗಳನ್ನು (ಒಂದು ತಿಂಗಳವರೆಗೆ) ನಿಯಂತ್ರಿಸಬಹುದು. ಅರ್ಕಷಕ ಬೆಳೆಯಾಗಿ ಬೆಂಡೆ. ಹಳದಿ ಚೆಂಡು ಹೂವು ಮತ್ತು ತೊಗರಿ ಬೆಳೆಯನ್ನು ಬೆಳೆಯುವುದು. ರಸ ಹೀರುವ ಕೀಟಗಳನ್ನು ನಿಯಂತ್ರಿಸಲು ಪ್ರತಿ ಎಕರೆಗೆ 10 ರಂತೆ ಹಳದಿ ಬಣ್ಣದ ಅಂಟಿನ ಬಲೆಗಳನ್ನು ಬೆಳೆಯ ಒಂದು ಅಡಿ ಎತ್ತರಕ್ಕೆ ನೆಡಬೇಕು.
ಕಾಯಿಕೊರಕ ಕೀಟದ ಸಮೀಕ್ಷೆಗಾಗಿ ಪ್ರತಿ ಹೆಕ್ಟೇರಿಗೆ 5 ರಂತೆ ಲಿಂಗಾಷರ್ಕ ಬಲೆಗಳನ್ನು ಉಪಯೋಗಿಸಬೇಕು. ಗುಲಾಬಿ ಕಾಯಿಕೊರಕದ ತತ್ತಿಗಳನ್ನು ನಾಶಪಡಿಸಲು ಟ್ರೈಕೋಗ್ರಾಮ ಬ್ಯಾಕ್ಟೇರಿಯಾ ಎಂಬ ಪರತಂತ್ರ ಜೀವಿಯನ್ನು ಎಕರೆಗೆ 60000 ರಂತೆ ಬೆಳೆಯು 70 ರಿಂದ 75 ಹಾಗೂ 80 ರಿಂದ 85 ದಿವಸವಿದ್ದಾಗ ಬಿಡಬೇಕು. ಕ್ರಿಮಿಟ್-ಪಿ.ಬಿ.ಡಬ್ಲೂ (CREMIT-PBW) ಎಂಬ ವಿನೂತನ ಅಂಟುರೂಪದ ಪದಾರ್ಥಗಳನ್ನು 35 ರಿಂದ 40 ದಿವಸದ ಬೆಳೆಯಿದ್ದಾಗ ಎಕರೆಗೆ 125 ಗ್ರಾಂ ನಂತೆ 400 ಗಿಡಗಳ ಕುಡಿಯ ಮೇಲೆ ಹಚ್ಚಬೇಕು. ಇದೇ ರೀತಿಯಾಗಿ 125 ಗ್ರಾಂ. ಸ್ಟ್ರಾಟ್ ಅನ್ನು ಬೆಳೆಯು 65 ರಿಂದ 70, 95 ರಿಂದ 100 ಮತ್ತು 125 ರಿಂದ 130 ದಿವಸವಿದ್ದಾಗ ಹಚ್ಚುವುದರಿಂದ ಗಂಡು ಮತ್ತು ಹೆಣ್ಣು ಪತಂಗಗಳು ಸಂಯೋಗ ಹೊಂದದಂತೆ ಮಾಡಿ ಮುಂದಿನ ಸಂತತಿಯನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು.
ಪಿ.ಬಿ. ರೋಪೆನ್ನು (PB-ROPEL) ಒಂದು ಎಕರೆಗೆ 150 ರಂತೆ ಅಥವಾ 1 ರೋಪಲ್ ಪ್ರತಿ 50 ಚದರ ಮಿಗೆ ಹತ್ತಿ ಬೆಳೆಯ ಕಾಂಡದ ಮಧ್ಯ ಭಾಗಕ್ಕೆ 40 ರಿಂದ 50 ದಿನಗಳೊಳಗಾಗಿ ಕಟ್ಟಬೇಕು. ಕೀಟನಾಶಕಗಳ ಸಿಂಪರಣೆ ಬೆಳೆಯ ಮೊದಲನೇ ಹಂತದಲೀ ಬರುವ ರಸ ಹೀರುವ ಕೀಟಗಳ ಹತೋಟಿಗಾಗಿ 0.8 ಮಿ.ಲೀ. ಆಫಿಡೋಪೈರೊಪೆನ್ 10 ಇ.ಸಿ. ಅಥವಾ 0.30 ಗ್ರಾಂ ಡೈನೋಟಿಪ್ಯೂರ್ನ್ 20 ಎಸ್.ಜಿ. ಅಥವಾ 0.5 ಮಿ. ಲೀ. ಸೈನೊಚಿರಮ್ 11.7 ಎಸ್.ಸಿ ಅಥವಾ 0.4 ಗ್ರಾಂ ಪೋನಿಕ್ ಆಮೈಡ್ 50 ಡಬ್ಲ್ಯೂ.ಜಿ ಒಂದು ಲೀ. ನೀರಿನ ಬೆರೆಸಿ ಸಿಂಪಡಿಸುವುದರಿಂದ ಹತೋಟಿ ಮಾಡಬಹುದು. ಮೈಟ್ ನುಸಿ ಹಾವಳಿ ಕಂಡು ಬಂದಲ್ಲಿ ಪ್ರತಿ ಲೀಟರ್ ಸಿಂಪರಣಾ ದ್ರಾವಣಕ್ಕೆ 1 ಗ್ರಾಂ. ಡೈಫ್ರೆಂಥೀಯುರಾನ್ 50 ಡಬ್ಲೂ.ಜಿ ಅಥವಾ 1 ಮೀ.ಲೀ. ಸೈರೊಮೆಸಿಫೆನ್ 24 ಎಸ್.ಸಿ ಬೆರೆಸಿ ಸಿಂಪಡಿಸಬೇಕು.
ಗುಲಾಬಿ ಕಾಯಿಕೊರಕದ ಭಾಧೆ ಕಂಡು ಬಂದಲ್ಲಿ ಶೇ.5ರ ಬೆಳೆಯ ಜೀವಿನ ಕಷಾಯಿ ಅಥವಾ ಬೇವಿನ ಮೂಲದ ಕೀಟನಾಶಕ 3 ಮಿ.ಲೀ ಅಥವಾ 1 ಮಿ.ಲ್ಲಿ ಲ್ಯಾಮ್ಯಾಸಹಿರೋಡ್ರಿನ್ 5 ಇ.ಸಿ. ಅಥವಾ 2 ಮಿ.ಲೀ. ಪ್ರೋಫೆನೋಫಾಸ್ 50 ಇ.ಸಿ. ಅಥವಾ 0.5 ಮಿ.ಲಿ.ಸ್ಪೈನೋಟೆರಮ್ 11 ಎಸ್.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಕೀಟನಾಶಕವನ್ನು ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲೆಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥವಾ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸುವಂತೆ ಕೊಪ್ಪಳ ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…
ಮಂಗಳೂರು.04.ಆಗಸ್ಟ್ .25:- ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಜುಲೈ 25 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ, ಅತಿಥಿ…
ಕೋಟಕ್ ಕನ್ಯಾ ಸ್ಕಾಲರ್‌ಷಿಪ್, ಕೋಟಕ್ ಮಹೀಂದ್ರಾ ಗ್ರೂಪ್‌ನಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಯುವತಿಯರಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ವಿದ್ಯಾರ್ಥಿವೇತನವಾಗಿದೆ. ಈ…
ಹೊಸ ದೆಹಲಿ.04.ಆಗಸ್ಟ್.25:- ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಸೇರಿದಂತೆ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ಮಳೆ ನಿರಂತರವಾಗಿ ಮುಂದುವರಿದಿದೆ. ನಿರಂತರ…
ಕೊಪ್ಪಳ.04.ಆಗಸ್ಟ್ . 25ಕರ್ನಾಟಕ ತಮಿಳನಾಡು,ಆಂಧ್ರ, ಕೇರಳ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿರುವ ರೆಡ್ಡಿ ಸಮಾಜವರನ್ನು ಒಗ್ಗೂಡಿಸಿ ಬಾಗಲಕೋಟೆಯಲ್ಲಿ ಶೀಘ್ರದಲ್ಲಿಯೇ ಭಾರತೀಯ…
ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…