ಬೀದರ.03.ಮಾರ್ಚ.25:-ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗಡಿಭಾಗಗಳಲ್ಲಿ 9 ಚೆಕ್‌ಪೋಸ್ಟ್ ಹಾಗೂ ಮಾರ್ಚ.3 ರಿಂದ ತೆಲಂಗಾಣ ಗಡಿಯಲ್ಲಿ 4 ಚೆಕ್‌ಪೋಸ್ಟ್ಗಳನ್ನು ತೆರೆಯಲಾಗಿದ್ದು ಅಧಿಕಾರಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡುತ್ತಾ, ಬೀದರ ಜಿಲ್ಲೆಯಲ್ಲಿ ಈವರೆಗೂ ಯಾವುದೇ ಹಕ್ಕಿಜ್ವರ ಪ್ರಕರಣಗಳು ಕಂಡುಬಂದಿಲ್ಲ. ಕೋಳಿ ಫಾರ್ಮ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಎಲ್ಲಾದರೂ ಹಠಾತ್ ಆಗಿ ಕೋಳಿಗಳು ಸಾವನ್ನಪಿದ್ದರೆ ಗಮನಕ್ಕೆ ತರುವಂತೆ ತಿಳಿಸಲಾಗಿದೆ. ಮಹಾರಾಷ್ಟ್ರದಿಂದ ಕೋಳಿ ಮೊಟ್ಟೆ ಸಾಗಾಟವಾಗದಂತೆ ಚೆಕ್‌ಪೋಸ್ಟ್ಗಳಲ್ಲಿ ಚೆಕ್ ಮಾಡಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಅದಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬೀದರ ಜಿಲ್ಲೆಯಲ್ಲಿ ಮಾಂಸಾಹಾರ ಪ್ರಿಯರು ಮಾಂಸ ಹಾಗೂ ಮೊಟ್ಟೆಗಳನ್ನು ಹೆಚ್ಚು ಬೇಯಿಸಿ ತಿನ್ನುವಂತೆ ತಿಳಿಸಿದರು. ಸಧ್ಯ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಆದರೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಆಯುಷ್ಯಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ನಿಯಮವಿದ್ದರೂ ಕೆಲ ಆಸ್ಪತ್ರೆಗಳು ರೋಗಗಳಿಂದ ಹಣ ಪಡೆಯುತ್ತಿರುವ ಪ್ರಕರಣಗಳ ಬಗ್ಗೆ ಜಿಲ್ಲಾ ಆರೋಗ್ಯ ಕುಟುಂಬ ಅಧಿಕಾರಿಗಳಾದ ಡಾ.ಜ್ಞಾನೇಶ್ವರ ನಿರಗುಡೆ ಜಿಲ್ಲಾದಿಕಾರಿಗಳ ಗಮನಕ್ಕೆ ತಂದರು. ಹಣ ಪಡೆದ ಆಸ್ಪತ್ರೆಗಳನ್ನು ಹಣವನ್ನು ಮರಳಿ ರೋಗಿಗಳಿಗೆ ಸಂದಾಯ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆರೋಗ್ಯ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುಂಬೈ.19.ಏಪ್ರಿಲ್.25:- ರಾಷ್ಟ್ರೀಯ ಶಿಕ್ಷಣ ನೀತಿ, NEP 2020 ರ ಪ್ರಕಾರ, ಮಹಾರಾಷ್ಟ್ರ ಸರ್ಕಾರವು ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ…
ಬೆಂಗಳೂರು,19.ಏಪ್ರಿಲ್.25:- ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ವಿಚಾರ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ…
ಪಾಕಿಸ್ತಾನದಲ್ಲಿ ಇಂದು 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ರಾಷ್ಟ್ರೀಯ…
ಕಲಬುರಗಿ.19.ಏಪ್ರಿಲ್.25:- ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರಾದ್ ಶ್ರೀರಾಮುಲು ಅವರು ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ…
ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರ ಚುನಾವಣಾ ಆಯೋಗ ಚುನ್ನವನೇ ಪ್ರಚಾರಕ್ಕಾಗಿ ಜಾಹೀರಾತುಗಳು ಸೇರಿದಂತೆ ಇತರ ಚುನಾವಣಾ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಕೃತಕ…
ಕೆನಡಾದಲ್ಲಿ.19.ಏಪ್ರಿಲ್.25:- ಭಾರತೀಯ ವಿದ್ಯಾರ್ಥಿ ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ…