ಹಂದ್ರಾಳ ಗ್ರಾಮದಲ್ಲಿ ಹೆಸರು ಬೆಳೆಯ ಕ್ಷೇತೋತ್ಸವ

ಕೊಪ್ಪಳ.09.ಆಗಸ್ಟ್.25: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳದಿಂದ ಕೊಪ್ಪಳ ತಾಲೂಕಿನ ಎರಡು ಗುಚ್ಚ ಗ್ರಾಮಗಳಾದ ಹಂದ್ರಾಳ ಮತ್ತು ಹನವಾಳ ಗ್ರಾಮಗಳನ್ನು ಆಯ್ಕೆ ಮಾಡಿ ನಂತರ ಅಲ್ಲಿನ 5 ಫಲಾನುಭವಿ ರೈತರನ್ನು ಗುರುತಿಸಿ ಹೆಸರು ಬೆಳೆಯ ತಳಿಯಾದ ಬಿ.ಜಿ.ಎಸ್.– 9 ನ್ನು ಮುಂಚೂಣಿ ಪ್ರಾತ್ಯಕ್ಷಿಕೆ ಆಯೋಜಿಲಸಾಯಿತು. ಹೆಸರು ಬೆಳೆ ಈಗ ಕಟಾವಿಗೆ ಸಿದ್ದವಾಗಿದ್ದು, ಇತ್ತೀಚಿಗೆ ಹಂದ್ರಾಳ ಗ್ರಾಮದ ಪರಸಪ್ಪ ನಿಂಗಪ್ಪ ಶಾಪೂರ ಅವರ ಹೊಲದಲ್ಲಿ ಕ್ಷೇತ್ರೋತ್ಸವನ್ನು ಆಯೋಜಿಸಲಾಗಿತ್ತು.


ಈ ಕ್ಷೇತ್ರೋತ್ಸವದಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ ಅವರು ಮಾತನಾಡಿ, ಬಿ.ಜಿ.ಎಸ್. -9 ಹೆಸರು ಬೆಳೆಯ ಒಂದು ಉತ್ತಮ ತಳಿಯಾಗಿದ್ದು, ಹೆಚ್ಚಿನ ಇಳುವರಿಯನ್ನು ಕೊಡುವುದಲ್ಲದೇ ಕೆಲವು ಪ್ರಮುಖ ರೋಗಗಳಿಗೆ ನಿರೋಧಕ ಶಕ್ತಿಯನ್ನು ಹೊಂದಿದೆ. ಅಲ್ಪಾವಧಿ ತಳಿಯಾದ ಈ ತಳಿಯನ್ನು 65 ದಿನಗಳಲ್ಲಿ ಕಟಾವಿಗೆ ಬರುವದರಿಂದ ಜೂನ್ ತಿಂಗಳ ಅಂತ್ಯದವರೆಗೂ ಬಿತ್ತನೆ ಮಾಡಬಹುದಾಗಿದೆ. ಪ್ರತಿ ಎಕರೆಗೆ 2 ಟನ್ ನಷ್ಟು ಕೊಟ್ಟಿಗೆ ಗೊಬ್ಬರ ಬೆರೆಸಬೇಕು ಮತ್ತು ಶಿಫಾರಿತ ಪ್ರಮಾಣದ ರಸಾಯನಿಕ ಗೊಬ್ಬರಗಳನ್ನು ಕೊಡಬೇಕು.

ಪ್ರತಿ ಎಕರೆಗೆ 5 ಕಿ.ಗ್ರಾಂ. ಬೀಜವನ್ನು 200 ಗ್ರಾಂ. ರೈಜೋಬಿಯಂ ಜೈವಿಕ ಗೊಬ್ಬರ ಮತ್ತು 500 ಗ್ರಾಂ. ರಂಜಕ ಕರಗಿಸುವ ಗೊಬ್ಬರದೊಂದಿಗೆ ಬೀಜೋಪಚಾರ ಮಾಡುವುದರಿಂದ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬಹುದು. ಹೊಲವನ್ನು ಕಸದಿಂದ ಮುಕ್ತವಾಗಿಟ್ಟು ಕೀಟ ರೋಗಗಳ ನಿಯಂತ್ರಣವನ್ನು ತಜ್ಞರ ಸಲಹೆಯಂತೆ ಮಾಡಬೇಕು. ನಂಜಾಣು ರೋಗಕ್ಕೆ ತುತ್ತಾದ ಗಿಡಗಳನ್ನು ನಾಶಪಡಿಸಬೇಕು. ಹೂವಾಡುವ ಹಾಗೂ ಕಾಯಿ ಕಟ್ಟುವ ಸಮಯದಲ್ಲಿ ದ್ರವರೂಪದ ಗೊಬ್ಬರಗಳನ್ನಾಗಲಿ ಅಥವಾ ನೀರಿನಲ್ಲಿ ಕರಗುವ 19:19:19 ಗೊಬ್ಬರವನ್ನು ಸಿಂಪರಣೆ ಮಾಡುವದರಿಂದ ಉತ್ತಮ ಇಳುವರಿ ಪಡೆಯಬಹುದು.

ಸೂಕ್ತ ಸಮಯದಲ್ಲಿ ಬಿತ್ತನೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ಕಾಯಿಗಳನ್ನು ಮಾಗಿದ ತಕ್ಷಣವೇ ಕೊಯ್ಲು ಮಾಡುವುದರಿಂದ ಗಟ್ಟಿ ಕಾಳುಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದು. ಉತ್ತಮ ನಿರ್ವಹಣೆಯಿಂದ ಮಳೆಯಾಶ್ರಿತ ಪ್ರದೇಶದಲ್ಲಿ 3 ಕ್ವಿಂಟಾಲ್ ಮತ್ತು ನೀರಾವರಿ ಪ್ರದೇಶದಲ್ಲಿ 5 ಕ್ವಿಂಟಾಲನಷ್ಟು ಇಳುವರಿ ಪಡೆಯಬಹುದು ಎಂದು ತಿಳಿಸಿದರು.

ಕೊಪ್ಪಳ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದಿಂದ ಕೃಷಿಗೆ ಸಂಬಂಧಿಸಿದ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಅಲ್ಲದೇ ಕೃಷಿಯೇತರ ವಿಷಯಗಳಾದ ಟೈಲರಿಂಗ ಇತ್ಯಾದಿ ವಿಷಯಗಳ ಬಗ್ಗೆ ಹತ್ತು ದಿನಗಳ ಕಾಲ ಉಚಿತ ವಸತಿ ಮತ್ತು ಊಟದೊಂದಿಗೆ ತರಬೇತಿ ನೀಡಲಾಗುತ್ತಿದ್ದು, ಹೆಚ್ಚಿನ ಯುವಕ ಯುವತಿಯರು ಈ ತರಬೇತಿಯ ಸದ್ಬಳಕೆ ಮಾಡಿಕೊಂಡು ಸರ್ಕಾರದಿಂದ ಸಬ್ಸಿಡಿ ಪಡೆದು ಕುರಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಇತ್ಯಾದಿ ಚಟುವಟಿಕೆಗಳನ್ನು ಮಾಡುವುದರಿಂದ ಸ್ವಾವಲಂಬನೆ ಜೀವನ ನಡೆಸಬಹುದೆಂದು ಮಾಹಿತಿ ನೀಡಿದರು.

ಈ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ಅರಣ್ಯ ಕೃಷಿ ತಜ್ಞ ವಾಮನಮೂರ್ತಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಹಿರಿಯ ಕ್ಷೇತ್ರ ಸಹಾಯಕ ಪ್ರಕಾಶ ಬಣಕಾರ ಸೇರಿದಂತೆ 30 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳಾದ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ ಮೊ.ನಂ. 9480247745 ಮತ್ತು ಸಹಾಯಕ ಪ್ರಾಧ್ಯಾಪಕ ವಾಮನಮೂರ್ತಿ ಮೊ.ನಂ. 8217696837, ಇವರನ್ನು ಸಂಪರ್ಕಿಸಬಹುದು.

prajaprabhat

Recent Posts

ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಇಲ್ಲದೆ ಸಾವಿರಾರು ವಿಧ್ಯಾರ್ಥಿ ಮತ್ತು ಪಾಲಕರಿಗೆ ತುಂಬಾ ಟೆನ್ಷನ್.!

2025-26ನೇ ಸಾಲಿಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ ಸಂಬಂಧಿಸಿತ ವಿದ್ಯಾರ್ಥಿಗಳು ಸೆಮಿಸ್ಟರ್  ಪರೀಕ್ಷೆಗಳು ತಕ್ಷಣವೇ ಬರುತ್ತಿದೆ…

5 hours ago

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,589 ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಆಫ್ ಇಂಡಿಯಾ ಸಾವಿರಾರು ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಮಾಡಲಾಗಿದೆ, ಅರ್ಜಿ ಪ್ರಕ್ರಿಯೆ ಆಗಸ್ಟ್ 6 ರಿಂದ ಅಂದರೆ…

6 hours ago

ಇಫ್ಕೋ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕೀರಣ, ರೈತ-ವಿಜ್ಞಾನಿ ಚರ್ಚಾಗೋಷ್ಠಿ

ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು…

8 hours ago

ಆಗಸ್ಟ್ 11ರಂದು ಕೊಪ್ಪಳದಲ್ಲಿ ಯೂರಿಯ ರಸಗೊಬ್ಬರದ ವಿತರಣೆ

ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ…

8 hours ago

ಅತಿಥಿ ಉಪನ್ಯಾಸಕರ ನೇಮಕ ಅರ್ಜಿ ಆಹ್ವಾನ

ತುಮಕೂರು.09.ಆಗಸ್ಟ್.25:- ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯ ವಿಜ್ಞಾನ ಮತ್ತು ಕಲಾ ಕಾಲೇಜಿನ ಸ್ನಾತಕ ಪದವಿ ತರಗತಿಗಳಿಗೆ ವಿಷಯವಾರು…

11 hours ago

ಆಧುನಿಕ ಕುರಿ ಮೇಕೆ ಸಾಕಾಣಿಕೆ ತರಬೇತಿ: ಹೆಸರು ನೋಂದಣಿಗೆ ಸೂಚನೆ

ಬೀದರ.09.ಆಗಸ್ಟ್.25:- ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ಬೀದರ ಕೇಂದ್ರ ಗ್ರಂಥಾಲಯ ಹಿಂಭಾಗ ಜನವಾಡಾ ರಸ್ತೆ, ಬೀದರಿನಲ್ಲಿ ಆಗಸ್ಟ್.12 ರಿಂದ…

15 hours ago