ಸ.ಪ.ಪ.ಕಾಲೇಜು ಬಾಲಕರ ಪ್ರೌಢ ಶಾಲಾ ವಿಭಾಗ ಬಸವಕಲ್ಯಾಣದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು.

ಬಸವಕಲ್ಯಾಣ.05.ಜೂನ್.25:- ಅರಣ್ಯ ಇಲಾಖೆ ಬಸವಕಲ್ಯಾಣ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಲಕರ ಪ್ರೌಢ ಶಾಲಾ ವಿಭಾಗ ಬಸವಕಲ್ಯಾಣದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು.

ಈ ಕಾರ್ಯಕ್ರಮ ತಹಸಿಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಡಾ. ದತ್ತಾತ್ರೇ ಗಾದಾ ಅವರು ಸಸಿ ನೆಡುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ  ಕಾಡು ಬೆಳಸಿ ನಾಡು ಉಳಿಸಿ, ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳಾದ ಪ್ರೇಮ ಶೇಖರ ಅವರು ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಬೇಕು ಇವತ್ತು ವಾಯು,ಭೂಮಿ,ಜಲ ಕುಲಷಿತವಾಗುತ್ತಿವೆ.ಪ್ರತಿಯೊಂದು ವಿದ್ಯಾರ್ಥಿ ತಮ್ಮ ಜನ್ಮದಿನದಂದು ಒಂದು ಗಿಡ ನೆಡಬೇಕು ಎಂದರು.

ಅತಿಥಿಗಳಾದ ಹಾಗೂ ಉಪ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಸಾವಳ್ಕರ ಮೇಡಂ ನಮ್ಮ ಬದುಕಿಗೆ ಪರಿಸರ ಅತಿ ಅವಶ್ಯಕವಾಗಿದೆ. ಇವತ್ತು ನಾವು ಶುದ್ಧವಾದ ಗಾಳಿ ತೆಗೆದುಕೊಳ್ಳ ಬೇಕಾದರೆ ಅತೀ ಹೆಚ್ಚು ಗಿಡಗಳನ್ನು ನೆಡಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರಾಜಕುಮಾರ ಜಾಧವ , ನ್ಯಾಯವಾದಿಗಳಾದ ಶ್ರೀಮತಿ ಜಗದೇವಿ ಎಪಿಪಿ, ಬಾಲಾಜಿ ಅಡೆಪ್ಪಾ, ಸಿ.ಕೆ ಹಾರಕೂಡೆ , ಶ್ರೀ ಪ್ರಶಾಂತ ಉಪ ವಲಯ ಅರಣ್ಯಾಧಿಕಾರಿ, ಶ್ರೀ ಗುಂಡೆರಾವ ಉಪ ವಲಯ ಅರಣ್ಯಾಧಿಕಾರಿ  ಅರಣ್ಯ ವಲಯ, ಶ್ರೀ ಅನೀಲ ಕುಮಾರ ಉಪ ವಲಯ ಪ್ರಾದೇಶಿಕ ಅರಣ್ಯಾಧಿಕಾರಿ, ರಾಜಕುಮಾರ್ ಡಿಆರ್ ಎಫ್ ಒ, ದಯಾನಂದ ಡಿಆರ್ ಎಫ್ ಒ, ಶಿವಕುಮಾರ ಗಸ್ತು ಅರಣ್ಯ ಪಾಲಕರು ಉಪಸ್ಥಿತರಿದ್ದರು.

ಶ್ರೀ ರಾಜೇಂದ್ರ ಟಿಳೆ, ಪ್ರವೀಣ ಬಸಲಿಂಗ,ರಾಮ ಪಾಟೀಲ್, ಪ್ರವೀಣ ಸೂರ್ಯವಂಶಿ, ಸಂಜು ಸೂರ್ಯ ವಂಶಿ,ಎಂ.ಡಿ.ಶರೀಫ,ರಫೀಯೊದ್ದಿನ,ಎಂಡಿ ಲತೀಫ್,ಹಮೀದಾ ಪಠಾಣ,ನಾಜೀಯಾ , ಮಂಗಲಾ,ಮಹಾದೇವ ಅಲ್ದೇಪ್ಪ ,ಸುನೀತಾ ಕುಪ್ಪೆ ಹಾಜರಿದ್ದರು.

ಸಂಜೀವಕುಮಾರ ನಡುಕರ ಸ್ವಾಗತಿಸಿದರು, ಶಿವಕುಮಾರ ಜಡಗೆ ನಿರೂಪಿಸಿದರು ಸುನೀತಾ ಚಿಂಚೋಳಿ ವಂದಿಸಿದರು.

prajaprabhat

Recent Posts

2025- 26 ನೇ ಶೈಕ್ಷಣಿಕ ಸಾಲಿಗೆ ಯಜಿಸಿ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ.!

ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…

6 hours ago

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

11 hours ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

16 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

22 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

22 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

22 hours ago