ಭಾರತ ಅಂತರಾಷ್ಟ್ರೀಯಮಟ್ಟದಲ್ಲಿ ಬುದ್ದನ ಕಾಲದಿಂದಲೂ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ.
ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ರಾಷ್ಟ್ರವೆಂದರೆ ಅದೂ ಭಾರತ ಇದನ್ನೂ ಬುದ್ದನ ಭೂಮಿವೆಂದು ಸಹ ಕರೆಯಲಾಗುತ್ತದೆ.
ನಮ್ಮಲ್ಲಿರುವ ಸಂಪತ್ತನ್ನು ನೋಡಿ ಮನಸೋತು ವಿದೇಶಿಯರು ಆಕ್ರಮಣ ಮಾಡಿ ದೋಚಿಕೊಂಡು ಹೋಗಿದ್ದಾರೆ
ಭಾರತದ ಇತಿಹಾಸವನ್ನು ಕೆದಕಿದಾಗ ಭಾರತದ ಮೇಲೆ ವಿದೇಶಿಯರಾದ ಪೋರ್ಚುಗೀಸರು, ಡಚ್ಚರು, ಬ್ರಿಟಿಷರು, ಪ್ರೆಂಚರ್ ಆಕ್ರಮಣ ಮಾಡಿ ಇಲ್ಲಿರುವ ಸಂಪತ್ತುನ್ನು ದೋಚಿಕೊಂಡು ಹೋದ್ರು ಆದರೆ ಭಾರತ ಮಾತ್ರ ಯಾವ ರಾಷ್ಟ್ರದ ಮೇಲೂ ದಾಳಿಮಾಡಲಿಲ್ಲ ಹಾಗೂ ಯಾವ ರಾಷ್ಟ್ರವನ್ನು ವಶಪಡಿಸಿಕೊಂಡಿಲ್ಲ ಹಾಗೂ ಯಾವರಾಷ್ಟ್ರವನ್ನು ದೋಚಿಲ್ಲ ಅಂದರೆ ನಾವು ಯಾರಿಗೂ ಕೆಡುಕನ್ನು ಬಯಸಿದವರಲ್ಲಾ ಅದಕ್ಕೆ ವಿಶ್ವದಲ್ಲಿಯೇ ಭಾರತವನ್ನು ಶಾಂತಿನಾಡು ಎಂದು ಕರೆಯಲಾಗುತ್ತದೆ.
ಆಗಸ್ಟ್ 15 – 2025ಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳು ಆಗುತ್ತದೆ ಇಷ್ಟು ವರುಷ ಆದ್ರೂ ನಾವು ಆಂತರಿಕವಾಗಿ ಇನ್ನೂ ಸಮಸ್ಯೆಗಳನ್ನು ಹೆದರಿಸುತ್ತಿದ್ದೇವೆ.
ಮೊದಲಿಗೆ ಸ್ವಾತಂತ್ರ್ಯ ಎಂದರೇನು ? ಅಂತ ನೋಡಿದಾಗ
ಸ್ವಾತಂತ್ರ್ಯ ಅಂದರೆ ನಿರ್ಬಂಧವಿಲ್ಲದೆ ಮುಕ್ತವಾಗಿ ಇರುವುದು ಎಂದರ್ಥ. ವ್ಯಕ್ತಿಗಳಿಗೆ ಸ್ವಾತಂತ್ರ್ಯ ವಿದ್ದರೆ ಮಾತ್ರ ವ್ಯಕ್ತಿ ತನ್ನನ್ನು ತಾನೂ ರೂಪಿಸಿಕೊಳ್ಳುತ್ತಾನೆ. ಅದಕ್ಕೆ ನಮ್ಮ ಭಾರತ ಸಂವಿಧಾನ ಮೂಲಭೂತ ಹಕ್ಕು ಗಳಲ್ಲಿ ಸ್ವಾತಂತ್ರ್ಯದ ಹಕ್ಕುನ್ನೂ ನೀಡಲಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಇಂದು 190 ಕ್ಕೂ ಹೆಚ್ಚು ರಾಷ್ಟ್ರಗಳು ಸ್ವಾತಂತ್ರವಾಗಿದ್ದಾವೆ. ಅದರಲ್ಲಿ ನಮ್ಮ ಭಾರತವೂ ಕೂಡ ಒಂದು.1600 ರಲ್ಲಿ ಬ್ರಿಟಿಷ್ರು ಭಾರತವನ್ನು ವಶಪಡಿಸಿಕೊಂಡು
1947 ಆಗಸ್ಟ್ 15 ರಂದು ನಮಗೆ ಸ್ವಾತಂತ್ರ್ಯ ವನ್ನು ನೀಡಿ ಹೋದರು ಸುಮಾರು ವರುಷ ನಮ್ಮನ್ನು ಆಳ್ವಿಕೆ ಮಾಡಿದರು.
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವುದಕ್ಕೆ ಈ ದೇಶದಲ್ಲಿ 1857 ರ ಸಿಪಾಯಿದಂಗೆಯಿಂದ ಪ್ರಾರಂಭಗೊಂಡ ಆಂದೋಲನ 1947 ರವರೆಗೂ ನಡೆಯಿತು.ಈ ಸಂದರ್ಭದಲ್ಲಿ ದೀನದಲಿತರು, ಕಾರ್ಮಿಕರು, ಅಮಾಯಕರು, ನಾಯಕರುಗಳು, ಪ್ರಮುಖರು ಹೋರಾಟ ಮಾಡಿ ಸಾವನ್ನಪ್ಪಿದ್ದಾರೆ ಅವರ ಶ್ರಮದಿಂದ ನಾವು ಇಂದು ನೆಮ್ಮದಿಯಾಗಿದ್ದಿವೆ ಅಂದರೆ ತಪ್ಪಾಗಲಾರದು.
ಇಂದಿಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು79 ವರ್ಷಗಳು ಕಳೆದಿದೆ ಆದ್ರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಧನೆ ಅಷ್ಟೇ ಕಷ್ಟೇ ಅನ್ನಿಸುತ್ತದೆ ಅದರ ಜೊತೆಗೆ ಕೆಲವು ಸಮಸ್ಯೆಗಳು ಜ್ವಲಂತ ವಾಗಿದೆ.
ವಿದೇಶಿಯರು ಬರೋದಕ್ಕೂ ಹಿಂದಿನಿಂದಲೂ ಈ ದೇಶದಲ್ಲಿ ಅಸಮಾನತೆ, ಮೂಢನಂಬಿಕೆ, ಅನಿಷ್ಟ ಪದ್ದತಿಗಳು, ಶೋಷಣೆಗಳು ನಿರಂತರವಾಗಿ ಜಾರಿಯಲ್ಲಿತ್ತು. ಅವಾಗನಿಂದಲೂ ಜನರು ಮುಕ್ತವಾಗಿ ಸಂಚರಿಸಲು ವ್ಯವಹರಿಸಲು ಅವಕಾಶಗಳು ಇರಲ್ಲಿಲ್ಲ. ಮಹಿಳೆಯರು ಬದುಕು ತುಂಬಾ ಕ್ರೂರವಾಗಿತ್ತು.
ನಮಗೆ ಸ್ವಾತಂತ್ರ್ಯ ಬಂದು ಸಂವಿಧಾನವನ್ನು ಅಳವಡಿಸಿಕೊಂಡಿದ್ದರೂ ಈ ಸಮಸ್ಯೆ ಇಂದಿಗೂ ಕೂಡ ಜೀವಂತವಾಗಿದೆ.ಮುಂದೇನೂ ಕೂಡ ಜೀವಂತವಾಗಿರುತ್ತದೆ ಅನ್ನಿಸುತ್ತದೆ.
ಇದೂ ಸಂಪೂರ್ಣವಾಗಿ ನಾಶವಾಗಬೇಕಾದರೆ. ಪ್ರತಿಭಾರತೀಯರು ಉತ್ತಮ ಶಿಕ್ಷಣವನ್ನು ಪಡೆದು ನಮ್ಮಸಂವಿಧಾನದ ಆಶಯಗಳನ್ನು ತಿಳಿದು ತಮ್ಮ ಹಕ್ಕು ಭಾದ್ಯತೆಗಳ ಬಗ್ಗೆ ತಿಳಿದು ಬದುಕಿದಿದರೆ 2047 ರವರೆಗೆ ಈ ದೇಶ ಪ್ರಬುದ್ಧ ಭಾರತವಾಗುತ್ತದೆ.1947 ರಿಂದ 2025 ರವರೆಗೆ ಭಾರತವನ್ನು ಅಭಿವೃದ್ಧಿ ದೃಷ್ಟಿಯಿಂದ ನೋಡಿದರೆ ಅಷ್ಟೇ ನೂ ಅಭಿವೃದ್ಧಿ ಹೊಂದಿಲ್ಲ.
ಉನ್ನತ ವರ್ಗದವರು ಹಾಗೂ ಹಣವಂತರು, ರಾಜಕಾರಣಿಗಳು ಮಾತ್ರ ವಿದೇಶಗಳಲ್ಲಿ ಗುರುತಿಸಿಕೊಂಡಿದ್ದಾರೆ ಇವರು ಮಕ್ಕಳು ಮಾತ್ರ ವಿದೇಶಗಳಲ್ಲಿ ಅಧ್ಯಾಯನ ಮಾಡುತ್ತಿದ್ದಾರೆ ಸಾಮಾನ್ಯ ಬಡವರ ಮಕ್ಕಳು ಯಾರು ತಾನೇ ವಿದೇಶಕ್ಕೆ ಹೋಗಿ ಅಧ್ಯಾಯನ ಮಾಡುತ್ತಿದ್ದಾರೆ.
ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ ಇರೋತನಕ ಶೋಷಿತರಿಗೆ ಯಾವ ಸ್ವಾತಂತ್ರ್ಯ ವೂ ಸಿಗೋದಿಲ್ಲ ಬಿಡಿ. ಹೆಸರಿಗಷ್ಟೇ ನಾವು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಎಂದು ಆಚರಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ.
ಭಾರತದ ಆಂತರಿಕ ಸಮಸ್ಯೆಗಳನ್ನು ಪಟ್ಟಿಮಾಡುವುದಕ್ಕೆ ಹೋದರೆ ತುಂಬಾ ದೊಡ್ಡದಾಗುತ್ತದೆ. ಸ್ವಾತಂತ್ರ್ಯ ಬಂದು ಇಷ್ಟು ವರುಷವಾದ್ರೂ ಕೆಲ ಸಮಸ್ಯೆ ತಾಂಡವಾಡುತ್ತದೆ.ಅಂತಹ ಸಮಸ್ಯೆಗಳೆಂದರೆ. ಸಾಮಾನ್ಯ ಬಡವ ಯಾಕೆ? ಚುನಾವಣೆಯಲ್ಲಿ ಸ್ವರ್ಧಿಸುತ್ತಿಲ್ಲ ಹಾಗೂ ಯಾಕೆ? ರಾಜಕಾರಣಿಯಾಗುತ್ತಿಲ್ಲ.
ಮೆಡಿಕಲ್ ಮಾಫಿಯಾ ಜಾಸ್ತಿಯಾಗಿ ಬಡವರ ಬಲಿಯಾಗುತ್ತಿದ್ದಾರೆ.
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಪೌಷ್ಟಿಕತೆ ಉಂಟಾಗಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ.ಭ್ರೂಣ ಹತ್ಯೆವನ್ನು ಮಾಡುವವರು ಶ್ರೀಮಂತರೇ ಹೊರತು ಬಡವರಲ್ಲ. ಎಷ್ಟೋಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣಹತ್ಯೆ ಮಾಡುತ್ತಿದ್ದಾರೆ ಅಂತ ಆರೋಪಗಳು ಕೇಳಿ ಬರುತ್ತದೆ.
ಬಡವರು ಯಾರಾದರೂ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಚಿವ, ಲೋಕಸಭಾ ಸದಸ್ಯ, ವಿಧಾನಸಭೆ ಈ ಹುದ್ದೆಗಳನ್ನು ಅಲಂಕರಿಸಿದ್ದಾರಾ? ಯಾವಾಗ ಸಾಮಾನ್ಯ ಬಡವ ಈ ಹುದ್ದೆಗಳನ್ನು ಅಲಂಕರಿಸುತ್ತಾನೋ ಅವಾಗ ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಸಿಕ್ಕಿದೆ ಅಂತ ಊಹಿಸಿಕೊಳ್ಳಬಹುದು.
.
ಕೂಲಿಕಾರ್ಮಿಕರ ಮೇಲೆ ಬಂಡವಾಳಗಾರ ದಬ್ಬಾಳಿಕೆ ಇನ್ನೂ ಜೀವಂತವಾಗಿದೆ ಇದಕ್ಕೆ ಉತ್ತರ ಸಿಗಬೇಕು.ಇಲ್ಲಿಯೂ ಕೂಡ ಕಾರ್ಮಿಕರು ಸ್ವತಂತ್ರಕ್ಕೆ ದಕ್ಕೆಯಾಗಿದೆ.
ನಿರುದ್ಯೋಗ ಸಮಸ್ಯೆ ಹೆಚ್ಚಾಗಿ ಯುವಕರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಇದಕ್ಕೆ ಕಾರಣವೇನು?
ಯುವಕರು ಮದ್ಯವ್ಯಸನಿ ಹಾಗೂ ವಿವಿಧ ಚಟಕ್ಕೆ ಬಲಿಯಾಗುತ್ತಿದ್ದಾರೆ ಇದು ನಿಲ್ಲಬೇಕು. ಇದಕ್ಕೆ ಕಾರಣ ಏನೂ?
ನಮ್ಮಲ್ಲಿ ಭಾರತೀಯತೆ ಎಂಬ ಕಲ್ಪನೆನಾಶವಾಗಿ ಧರ್ಮದ ಭಾವನೆ, ಜಾತಿಯ ಭಾವನೆ ಹೆಚ್ಚಾಗಿದೆ ಇದರಿಂದ ಕೋಮುವಾದ ತಾಂಡವಾಡುತ್ತದೆ.ಅದರಿಂದ ನಮ್ಮಲ್ಲಿ ನಾವೆಲ್ಲರೂ ಭಾರತೀಯರು ಎಂಬ ಕಲ್ಪನೆ ಮೂಡುತ್ತಿಲ್ಲ.
ಪೌರಕಾರ್ಮಿಕರುನ್ನು ನೋಡುವ ದೃಷ್ಟಿ ಬದಲಾಗಬೇಕು ಇವರಿಂದ ಮಲಹೊರುವ ಪದ್ದತಿ ನಿರ್ಮೂಲನೆಯಾಗಬೇಕು.
ಪೌರಕಾರ್ಮಿಕರು ಮಾಡುವ ಕೆಲಸವನ್ನು ಪ್ರತಿ ಜಾತಿಯವರು ಮಾಡಬೇಕು.
ರೈತರು ಬೆಳೆದ ಬೆಳೆಗೆ ಸರಕಾರ ಸರಿಯಾದ ಬೆಲೆಯನ್ನು ನಿಗಧಿಮಾಡಬೇಕು.ಕೈಗಾರಿಕೆಗಳು ರಾಷ್ಟ್ರೀಕರಣಗೊಳ್ಳಬೇಕು,
2047_ಕ್ಕೆ ಭಾರತ ವಿಶ್ವದ ದೊಡ್ಡನನಾಗಬೇಕು,
ಭ್ರಷ್ಟಾಚಾರ ಇಂದು ದೇಶವನ್ನು ಆಳುತ್ತದೆ ಇದರಿಂದ ಉನ್ನತ ಹುದ್ದೆಗಳು ಕೇವಲ ಒಂದು ವರ್ಗದವರಿಗೆ ಮಾತ್ರ ಲಭಿಸುತ್ತದೆ.
ಭ್ರಷ್ಟಾಚಾರವಿಲ್ಲದ ಇಲಾಖೆಗಳನ್ನು ಹುಡುಕಿವುದಕ್ಕೆ ಇಂದು ಕಷ್ಟವಾಗುತ್ತದೆ.
ಖಾಸಗೀಕರಣ, ಜಾಗತೀಕರಣ, ಉದಾರೀಕರಣದಿಂದ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಿದರು ಆಂತರಿಕವಾಗಿ ಅನೇಕ ಸಮಸ್ಯೆಗಳನ್ನು ಹೆದರಿಸುತ್ತದೆ ಇದರಿಂದ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ.
ಜಾತಿಪದ್ದತಿ ತನ್ನ ರೂಪವನ್ನು ಬದಲಾಯಿಸಿಕೊಂಡಿದೆ.
ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಶೋಷಿತರು ಪೂಜಾರಿಗಳಾಗಬೇಕು ಕೆಲ ದೇವಾಲಯಕ್ಕೆ ಮಹಿಳೆಯರು ಪ್ರವೇಶವಿರುವುದಿಲ್ಲ ಅಂತಹ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶವಿರಬೇಕು.
ಇಂದಿಗೂ ಕೂಡ ಮಹಿಳೆಯರು ಮತ್ತು ಮಕ್ಕಳಮೇಲೇ ನಿರಂತರ ದೌರ್ಜನ್ಯ ಹಾಗೂ ಅತ್ಯಾಚಾರಗಳು ನಡೆಯುತ್ತದೆ ಇದಕ್ಕೆ ಕಾರಣವನ್ನು ಹುಡುಕಬೇಕು.
ಈ ದೇಶದ ರಾಜಕಾರಣಿಗಳ ಹಿಂದೆ ಹಣವಂತರು ಇದ್ದಾರೆ.
ಚುನಾವಣಾ ಸಮಯದಲ್ಲಿ ಚುನಾವಣಾ ಖರ್ಚಿಗೆ ರಾಜಕಾರಣಿಗಳಿಗೆ ಉದ್ಯಮಿಗಳು ಹಣಹೂಡುತ್ತಾರೆ. ಗೆದ್ದಮೇಲೆ
ಈ ಉದ್ಯಮಿಗಳಿಗೆ ಪ್ರಾಜೆಕ್ಟ್ಗಳನ್ನು ನೀಡುತ್ತಾರೆ ಇದರಿಂದ ಸರಕಾರದ ಹಿಂದೆ ಉದ್ಯಮಿಗಳ ಕೈವಾಡವಿದೆ ಇದು ನಿಲ್ಲಬೇಕು.
ಸರಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ರಾಜಕಾರಣಿ ಮಕ್ಕಳು ಹಾಗೂ ಸಾಹಿತಿಗಳ ಮಕ್ಕಳು ಹಣವಂತರ ಮಕ್ಕಳು, ಸರಕಾರಿ ನೌಕರರ ಮಕ್ಕಳು ಅಧ್ಯಾಯನ ಮಾಡಬೇಕು ಅವಾಗ ಸರಕಾರಿ ಶಾಲೆ ಮತ್ತು ಕಾಲೇಜು ಉಳಿದು ಕೊಳ್ಳುತ್ತದೆ.
ರಾಜಕಾರಣಿಗಳು ಸಾಹಿತಿಗಳು, ಸಿನಿಮಾ ನಟರು, ಹಣವಂತರ ಮಕ್ಕಳು ಯಾಕೆ? ಯೋಧರಾಗುತ್ತಿಲ್ಲ.ಆಗಾದರೆ ರಾಜಕಾರಣಿಗಳಿಗೆ ದೇಶಾಭಿಮಾನವಿಲ್ಲವೇ ಮುಂದಿನ ದಿನಗಳಲ್ಲಿ ಇವರ ಮಕ್ಕಳು ಕಡ್ಡಾಯವಾಗಿ ಯೋಧರಾಗಬೇಕು.
ಭ್ರೂಣಹತ್ಯೆ ಮಾಡಿಸುವವರು ಇಂದು ಬಡವರಲ್ಲ ಶ್ರೀಮಂತರೇ ಜಾಸ್ತಿ ಬೇಕಾದರೆ ತನಿಖೆಗೆ ಒಳಪಡಿಸಿ ತಿಳಿಯುತ್ತದೆ.ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದರೆ 2047_ಕ್ಕೆ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಮಾಡಿದಂತೆಯಾಗುತ್ತದೆ ಹಾಗೂ ಪ್ರಬುಧ್ದಭಾರತವಾಗುತ್ತದೆ.
ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು
ಬೀದರ.14 ಆಗಸ್ಟ್.25:- 'ಹರ ಘರ ತಿರಂಗಾ" ಈ ಕಾರ್ಯಕ್ರಮ ನಗರದ ಕವಿರತ್ನ ಕಾಳಿದಾಸ ಪ್ರಥಮ ಶ್ರೇಣಿ ಮಹಾವಿದ್ಯಾಲಯದಲ್ಲಿ ಆಚರಣೆ ಮಾಡಲಾಯ್ತು.…
ಬೆಂಗಳೂರು.14.ಆಗಸ್ಟ್.25:- ವಿಧಾನಪರಿಷತ್ : ರಾಜ್ಯದಲ್ಲಿ ಖಾಲಿಯಿರುವ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು…
ಔರಾದ 14.ಆಗಸ್ಟ್.25:- ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಆಗಸ್ಟ್…
ಔರಾದ.13.ಆಗಸ್ಟ್.25:- ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಹರ್ ಘರ್ ತಿರಂಗಾ ಅಭಿಯಾನದಡಿ ಔರಾದ ಪಟ್ಟಣದಲ್ಲಿ ಆಗಸ್ಟ್ 14 ರಂದು ಬೈಕ್ ರ‍್ಯಾಲಿ…
ಬಂಧುಗಳೇ, ತಮಗೆಲ್ಲಾ ತಿಳಿದಂತೆ ಡಾ. ಹ.ರಾ.ಮಹೇಶ್ ಅವರು ಕರ್ನಾಟಕ ಕಂಡ ಧೀಮಂತ ಹೋರಾಟಗಾರ, ಸಾಮಾಜಿಕ ಚಿಂತಕ, ನೊಂದರವರ…
ಕೊಪ್ಪಳ.13.ಆಗಸ್ಟ್.25: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ…