ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿದರೆ
ಮಾತ್ರ ಕುಷ್ಠರೋಗ ಮುಕ್ತ ಜಿಲ್ಲೆ ಮಾಡಲು ಸಾಧ್ಯ-ಡಾ.ಧ್ಯಾನೇಶ್ವರ ನಿರಗುಡಿ.!
ಬೀದರ.30.ಜನವರಿ.25:-ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ, ಇದು ಯಾವುದೇ ಶಾಪ-ಪಾಪದಿಂದ ಬರುವುದಿಲ್ಲ, ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿದಾಗ ಮಾತ್ರ ಬೀದರ ಜಿಲ್ಲೆಯು ಕುಷ್ಠರೋಗ ಮುಕ್ತ ಜಿಲ್ಲೆ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಧ್ಯಾನೇಶ್ವರ ನಿರಗುಡಿ ಹೇಳಿದರು.
ಅವರು ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ‘ಹುತಾತ್ಮದಿನ’ ನಿಮಿತ್ಯ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ-2025ರ “ಒಟ್ಟಾಗಿ, ನಾವು ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸೋಣ, ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ”ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ಅರಿವು ಅಭಿಯಾನದ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಕುಷ್ಠರೋಗವು ಒಂದು ಸಾಂಕ್ರಮಿಕ ರೋಗವಾಗಿದ್ದು ಇದು ಮುಖ್ಯವಾಗಿ ಚರ್ಮ ಹಾಗೂ ನರಕ್ಕೆ ಸಂಭಂಧಪಟ್ಟಿದ್ದು ದೇಹದ ಯಾವುದೇ ಭಾಗದಲ್ಲಿ ಸ್ವರ್ಶಜ್ಞಾನವಿಲ್ಲದ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳಿದ್ದಲ್ಲಿ ಅದು ಕುಷ್ಠರೋಗದ ಲಕ್ಷಣಗಳಾಗಿರಬಹುದು ಯಾವುದೆ ತರಹದ ಮಚ್ಚೆಗಳು ಇದಲ್ಲಿ ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಕ್ಷಿಸಿಕೋಳಬೇಕು, ರೋಗ ಕಂಡು ಬಂದಲ್ಲಿ ಬಹುಔಷದಿ ಚಿಕಿತ್ಸೆಯಿಂದ ಗುಣ ಪಡಿಸಬಹುದು ಇದಕ್ಕೆ ಯಾವದೇ ರೀತಿಯ ಹೆದರುವಂತಹ ಅಗತ್ಯವಿಲ್ಲಾ ಎಂದು ಹೇಳಿದರು.
ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ರಾಜಶೇಖರ ಪಾಟೀಲ್ ಮಾತನಾಡಿ, ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ‘ಹುತಾತ್ಮದಿನ’ ಈ ದಿನ ರಾಷ್ಠ್ರೀಯ ಕುಷ್ಠರೋಗ ದಿನವೆಂದು ಆಚರಿಸುತ್ತಿರುವುದು, ಜಿಲ್ಲೆಯಲ್ಲಿ ಕುಷ್ಟರೊಗದ ಚಿಕಿತ್ಸೆ ಪಡೆಯುತ್ತಿರುವರ ಸಂಖ್ಯೆ 92 ಯಾಗಿದ್ದು ಈ ವರ್ಷ 85 ಹೊಸ ಪ್ರಕರಣಗಳು ಪತ್ತೆ ಹಚ್ಚಿ ಚಿಕಿತ್ಸೆ ನಿಡಲಾಗುತ್ತಿದೆ. ಸ್ಪರ್ಶ್ ಕುಷ್ಠರೋಗ ಜಾಗೃತಿ ಪಾಕ್ಷಿಕ ಅಭಿಯಾನವನ್ನು ಜನವರಿ.30 ರಿಂದ ಫೆಬ್ರವರಿ.13 ರವರೆಗೆ ಜಿಲ್ಲೆಯಾದ್ಯಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬನ್ನಿರಿ ನಾವೆಲ್ಲರೂ ಸೇರಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾದ ಕುಷ್ಠಮುಕ್ತ ಭಾರತವನ್ನು ಮಾಡಲು ಪ್ರತಿಜ್ಞಾ ಮಾಡೋಣ ಎಂದು ಕರೆಕೊಟ್ಟರು.
ವೀರಶೆಟ್ಟಿ ಚನ್ನಶೆಟ್ಟಿ ಅವರು ಮಾತನಾಡಿ, ಜಿಲ್ಲೆಯ ಸಾರ್ವಜನಿಕರಾದ ನಾವು ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾದ ಇಂದು ನನ್ನ ಕುಟುಂಬ ನೆರೆ-ಹೊರೆ ಹಾಗೂ ಸಮುದಾಯದಲ್ಲಿ ಯಾರೇ ಕುಷ್ಠರೋಗಿಗಳು ಕಂಡು ಬಂದರೆ ಅವರಿಗೆ ಆರೋಗ್ಯ ಇಲಾಖೆಯಲ್ಲಿ ದೊರೆಯುವ ಉಚಿತ ಚಿಕೆತ್ಸೆಯನ್ನು ಕೊಡಿಸುತ್ತೆನೆ.
ಕುಷ್ಠರೋಗಿಗಳನ್ನು ಪ್ರೀತಿ ವಿಶ್ವಸದಿಂದ ನೋಡಿಕೋಂಡು ಅವರ ಆತ್ಮಗೌರವಕ್ಕೆ ಧಕ್ಕೆ ಬರದಂತೆ ನಡೆದುಕೋಳ್ಳುತ್ತೇನೆ. ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಲು ಬದ್ದನಾಗಿರುತ್ತೇನೆ ಹಾಗೂ ಕುಷ್ಠರೋಗಿಗಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡುತ್ತೇನೆ.
ಕುಷ್ಠರೋಗ ಸಂಪೂರ್ಣ ಗುಣಪಡಿಸಬಹುದಾದ ರೋಗ ಎಂಬ ಮಾಹಿತಿಯನ್ನು ಸಮಾಜದಲ್ಲಿ ನೀಡುತ್ತೇನೆ. ಮಹಾತ್ಮ ಗಾಂಧೀಜಿಯವರ ಕನಸಾದ ಕುಷ್ಠರೋಗ ಮುಕ್ತ ಭಾರತವನ್ನು ಕಟ್ಟಲು ಕಾಯಾ,ವಾಚಾ ಮಾನಸ ಶ್ರಮಿಸುತ್ತೇನೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ.
ಈ ಸಂದರ್ಭದಲ್ಲಿ ಅರೋಗ್ಯ ಕಾರ್ಯಕ್ರಮ ಅನೂಷ್ಠಾನ ಅಧಿಕಾರಿಗಳಾದ ಡಾ.ಮಾಹಾದೇವ ಮಳಗೆ, ಡಾ.ಶಂಕ್ರಪ್ಪ ಬೊಮ್ಮಾ, ಡಾ.ದಿಲೀಪ ಡೋಂಗರೆ, ಡಾ.ಅನೀಲ ಚಿಂತಾಮಣಿ, ತಾಲೂಕಾ ಅರೋಗ್ಯ ಅಧಿಕಾರಿ ಡಾ.ಸಂಗಾರೆಡ್ಡಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸಂಗಪ್ಪಾ ಕಾಂಬಳೆ, ಕ್ಷೆತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಓಂಕಾರ ಮಲ್ಲಿಗೆ, ಅನಿತಾ, ಮೋಹನದಾಸ, ಸಿಬ್ಬಂದಿಗಳಾದ ಡಾ.ರೆಣ್ಣುಕಾ, ಗೋರಖನಾಥ, ಅಬ್ದುಲ ಹೈ, ಇಮಾನುವೇಲ್,ಶಾಮರಾವ, ಮಹಮ್ಮದ ಅಫಜಲೋದ್ದನ್ ಅಳಂದಕರ್,ರಮೇಶ, ಸಾಗರ, ರಾಘವೇಂದ,್ರ ಜಾವಿದ ಕಲ್ಯಾಣಕರ, ಅಶೋಕ ಬ್ರಮಾರಂಭಾದೇವಿ, ಜ್ಯೋತಿ, ಮಲ್ಲಿಕಾರ್ಜುನ ಗುಡ್ಡೆ, ಪ್ರಮೋದ ರಾಥೋಡ, ಪರುಶುರಾಮ್, ಸಿಮಪ್ಪಾ, ರೆಣ್ಣುಕಾ ತಾಂದಳೆ , ಶರಣ್ಣಬಸಪ್ಪಾ, ಜಿಲಾನಿ, ರಾಕೇಶ, ಸುರೆಶ,ರೇವಣಪ್ಪಾ ರವರು ಸೆರಿದಂತೆ ಸಿಬ್ಬಂದಿಗಳು ಹಾಗೂ ನರಸಿಂಗ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…
ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…
ಬೆಂಗಳೂರು.04.ಆಗಸ್ಟ್.25:- KSRTC ನೌಕರರ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಾಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ…
ಬೆಂಗಳೂರು.04.ಆಗಸ್ಟ್.25:- ರಾಜ್ಯದ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ. ಬೆಂಗಳೂರಿನ ನಿವಾಸಿ ಜೆ ಸುನೀಲ್ ಮತ್ತಿತರರು…
ಬೆಂಗಳೂರು.04.ಆಗಸ್ಟ್.25:- 2025-26ನೇ ಸಾಲಿಗೆ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಭಾರತ ಸರ್ಕಾರದ ವಾರ್ಷಿಕ MGNREGA ಮಾರ್ಗಸೂಚಿಯನ್ವಯ ಜಿಲ್ಲಾ ಮತ್ತು ತಾಲ್ಲೂಕು…
ರಾಯಚೂರು.04.ಆಗಸ್ಟ.25: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರ ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು…