ಕೊಪ್ಪಳ.04.ಜುಲೈ.25: 2025-26 ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಅಲ್ಪಸಂಖ್ಯಾತ ಸಮುದಾಯ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಮತ್ತು ಪಾರ್ಸಿ) ಅಭ್ಯರ್ಥಿಗಳಿಗೆ ಯುಪಿಎಸ್‌ಸಿ/ಕೆಎಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ ತರಬೇತಿ ಮತ್ತು ಕೆಪಿಎಸ್‌ಸಿ ಗ್ರೂಪ್-ಸಿ ಆರ್‌ಆರ್‌ಬಿ ಮತ್ತು ಎಸ್‌ಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿಯನ್ನು ಪಡೆಯಲು ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿಷ್ಠಿತ ಸಂಸ್ಥೆಗಳ ಮೂಲಕ ತರಬೇತಿ ನೀಡಲಾಗುತ್ತದೆ. ತರಬೇತಿಗೆ ಅರ್ಹ ಅಭ್ಯರ್ಥಿಗಳು ಸೇವಾಸಿಂಧು ವೆಬ್‌ಪೋರ್ಟಲ್ https://sevasindhu.karnataka.gov.in ನಲ್ಲಿ ಆಗಸ್ಟ್ 02 ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿರಬೇಕು.
ಅಭ್ಯರ್ಥಿಯ ವಯೋಮಿತಿ ಯುಪಿಎಸ್‌ಸಿ/ಕೆಎಎಸ್ ಗೆಜೆಟೆಡ್ ಪ್ರೊಬೇಷನ್ ವಸತಿಯುತ ತರಬೇತಿ ಮತ್ತು ಕೆಪಿಎಸ್‌ಸಿ ಗ್ರೂಪ್-ಸಿ ತರಬೇತಿಗೆ ಕನಿಷ್ಠ 21 ಹಾಗೂ ಗರಿಷ್ಠ 35 ವರ್ಷಗಳು ಮತ್ತು ಆರ್‌ಆರ್‌ಬಿ ಮತ್ತು ಎಸ್‌ಎಸ್‌ಸಿ ತರಬೇತಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 30 ಮೀರಿರಬಾರದು (ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದೊಳಗೆ). ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯಲ್ಲಿರುವ ಅಭ್ಯರ್ಥಿಗಳು ಅರ್ಹರಿರುವುದಿಲ್ಲ. ಹಿಂದಿನ ಸಾಲಿನಲ್ಲಿ ಐಎಎಸ್/ಕೆಎಎಸ್ ತರಬೇತಿ ಪಡೆದ ಅಭ್ಯರ್ಥಿಗಳು ಅರ್ಹರಿರುವುದಿಲ್ಲ.
ಅಲ್ಪಸಂಖ್ಯಾತರ ನಿರ್ದೇಶನಾಲಯದ ವೆಬ್‌ಸೈಟ್ https://dom.karnataka.gov.in ಹಾಗೂ ಸಹಾಯವಾಣಿ : 8277799990 ಗೆ ಕರೆಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿ ಹಾಗೂ ತಾಲ್ಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಕೊಪ್ಪಳ: 8088894549, ಗಂಗಾವತಿ: 9986244408, ಕುಷ್ಟಗಿ: 8880482486, ಯಲಬುರ್ಗಾ: 8095191406 ಗೆ ಸಂಪರ್ಕಿಸಬಹುದು ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದಲ್ಲಿ, ಯುಜಿಸಿ ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ವಿಷಯದಲ್ಲಿ ಕನಿಷ್ಠ 55% (ಮೀಸಲಾತಿ ವಿಭಾಗಗಳಿಗೆ 50%) ಸ್ನಾತಕೋತ್ತರ ಪದವಿಯನ್ನು ಹೊಂದಿರುವ…
*ಕಲಬುರಗಿ ವಿಭಾಗೀಯ ಮಟ್ಟದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ:**ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ-ಸಚಿವೆ ಲಕ್ಷ್ಮೀ ಹೆಬ್ಬಾಳಕರ್* ಬೀದರ.04.ಜುಲೈ.25:-…
ಬೆಂಗಳೂರು.04.ಜುಲೈ.25:- ರಾಜ್ಯದ ಶಾಲಾ ಶಿಕ್ಷಕರನ್ನು ಬೂತ್ ಮಟ್ಟದ ಅಧಿಕಾರಿಗಳನ್ನಾಗಿ ನಿಯೋಜನೆ ಮಾಡುವ ಕುರಿತು ಚುನಾವಣಾಧಿಕಾರಿಗಳು ಮಹತ್ವದ ಆದೇಶ ಹೊರಡಿಸಿದ್ದಾರೆ. ಮೇಲ್ಕಂಡ…
ಬೀದರ.02.ಜುಲೈ.25:- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ ಬಾಂಧವರಿಗಾಗಿ/ಪಶುಪಾಲಕರಿಗಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರನಲ್ಲಿ ವೈಜ್ಞಾನಿಕ ಪಶುಪಾಲನೆಯಿಂದ ಆರ್ಥಿಕ ಅಭಿವೃದ್ದಿ…
ಕೊಪ್ಪಳ.03.ಜುಲೈ.25: 2025-26ನೇ ಸಾಲಿನ ಮೆಟ್ರಿಕ್ ಪೂರ್ವ (1 ರಿಂದ 8ನೇ ತರಗತಿ) ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ,…
ಕೊಪ್ಪಳ.04.ಜುಲೈ.25: ಕೊಪ್ಪಳದ ಹುಲಿಗಿ ಹತ್ತಿರದ ಹಳೇ ನಿಂಗಾಪುರ ಗ್ರಾಮದ ಪಾಂಡುರAಗ ದೇವಸ್ಥಾನದ ಹತ್ತಿರದ ತುಂಗಭದ್ರಾ ಎಡದಂಡೆ ಕೆನಾಲ್‌ನಲ್ಲಿ ಸುಮಾರು 30…