ಬೀದರ.15.ಜುಲೈ.25:- ಸ್ತ್ರೀಯರ ಸಬಲೀಕರಣಕ್ಕೆ ಶಕ್ತಿ ಯೋಜನೆ ಸಹಾಯಕವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ ಅವರು ತಿಳಿಸಿದರು.
ಅವರು ಸೋಮವಾರ ಬೀದರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಯೋಜನೆಯಲ್ಲಿ ರಾಜ್ಯದಲ್ಲಿ 500 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿರುವ ಸಲುವಾಗಿ ಪೂಜೆ ಸಲ್ಲಿಸಿ, ಸಿಹಿ ಹಂಚಿ ಮಾತನಾಡಿದರು.
ಮಹಿಳೆಯರು ಉಚಿತವಾಗಿ ಪ್ರವಾಸಿ ತಾಣಗಳಿಗೆ, ಧಾರ್ಮಿಕ ಸ್ಥಳಗಳಿಗೆ ಮತ್ತು ವ್ಯಾಪಾರ ವಹಿವಾಟುಗಳಿಗಾಗಿ ಪ್ರಯಾಣ ಮಾಡುವುದಾಗಿ ಹಾಗೂ ಪ್ರಯಾಣದಿಂದ ಉಳಿದ ಹಣವನ್ನು ದೈನಂದಿನ ಜೀವನಕ್ಕೆ ಬಳಸಬಹುದಾಗಿದೆ ಮತ್ತು ಪುರುಷರಿಗೆ ಎಲ್ಲದಕ್ಕೂ ಅವಲಂಬಿತವಾಗಿರುವುದನ್ನು ತಪ್ಪಿಸಬಹುದು ಎಂದರು.
ಕರ್ನಾಟಕ ರಾಜ್ಯದಲ್ಲಿ ಜುಲೈ.9 ಕ್ಕೆ ನಾಲ್ಕು ಸಾರಿಗೆ ಸಂಸ್ಥೆ ಸೇರಿ 500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಹಾಗೂ 12,669 ಕೋಟಿ ರೂಪಾಯಿ ಸಂದಾಯವಾಗಿದೆ. ಜುಲೈ.10ಕ್ಕೆ ಕಲ್ಯಾಣ ಕರ್ನಾಟಕ ಮತ್ತು ವಿಜಯಪುರ ಸೇರಿ 72 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿದ್ದು, 2532 ಕೋಟಿ ಸಂದಾಯವಾಗಿದೆ. ಬೀದರ ಜಿಲ್ಲೆಯಲ್ಲಿ 8.65 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಸಿದ್ದು 249 ಕೋಟಿ ರೂಪಾಯಿ ಸಂದಾಯವಾಗಿದೆ ಮತ್ತು ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 1.14 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡಲು ಅನುಕೂಲವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಪ್ರಯಾಣ ಮಾಡಿರುವ ಮಹಿಳೆಯರ ಮುಖದಲ್ಲಿ ಸಂತಸ ಕಾಣಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪೂಜಾ ಜಾರ್ಜ್, ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾAತ ಪುಲೇಕರ, ವಿಭಾಗೀಯ ಸಂಚಾರಿ ಅಧಿಕಾರಿ ಇಂದ್ರಸೇನ ಎಂ. ಬಿರಾದಾರ, ಬೀದರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಡಿ.ರಿಯಾಜ್, ಉಪಾಧ್ಯಕ್ಷ ರಾಜಕುಮಾರ ಮಡಿಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…
ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…
ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…
ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…
ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…