ಬೀದರ.12.ಫೆ.25:- ಇಂದುವಚನಾಮೃತ ಕನ್ನಡ ಸಂಘದಿಂದ ಭಾನುವಾರ ಸಂಜೆ ಶಿವಯೋಗಿ ಸಿದ್ದರಾಮೇಶ್ವರರಿಗೆ ಮಾನವ ಕುಲದ ಉದ್ಧಾರದ ಬಗ್ಗೆ ಅಪಾರ ಕಾಳಜಿ ಇತ್ತು.
ಹೀಗಾಗಿಯೇ ಅನೇಕ ಕೆರೆಗಳನ್ನು ಕಟ್ಟಿಸಿ ಸಮಾಜಮುಖಿ ಕೆಲಸ ಮಾಡಿದ್ದರು’ ಎಂದು ಸಾಹಿತಿ ರಾಮಲಿಂಗ ಬಿರಾದಾರ ಹೇಳಿದರು.
ವಚನಾಮೃತ ಕನ್ನಡ ಸಂಘದಿಂದ ಭಾನುವಾರ ಸಂಜೆ ನಗರದಲ್ಲಿ ಏರ್ಪಡಿಸಿದ್ದ ಸಿದ್ದರಾಮೇಶ್ವರರ ಕುರಿತ ಉಪನ್ಯಾಸ, ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.ಮನುಷ್ಯರಷ್ಟೇ ಅಲ್ಲ, ಪಶು, ಪಕ್ಷಿಗಳ ಬಗ್ಗೆಯೂ ಕಳಕಳಿ ಹೊಂದಿದ್ದರು ಎಂದರು.
ಕವಯತ್ರಿ ಸಾವಿತ್ರಿ ಮರೂರಕರ್ ಮಾತನಾಡಿ, 12ನೇ ಶತಮಾನದ ಶರಣರು ಬಸವಣ್ಣನವರ ಮಾರ್ಗದರ್ಶನದಲ್ಲಿ ಎಲ್ಲ ವರ್ಗದವರ ಕಲ್ಯಾಣಕ್ಕೆ ಶ್ರಮಿಸಿದ್ದರು. ವಚನ ಸಾಹಿತ್ಯ ರಚಿಸಿದ್ದರು ಎಂದು ಹೇಳಿದರು.
ಲೇಖಕಿಯರಾದ ರೇಣುಕಾ ಎನ್.ಬಿ., ಮಹಾನಂದಾ ಮಡಕಿ, ವೀರಶೆಟ್ಟಿ ಬಾವಗೆ, ಸೂರ್ಯಕಲಾ ಹೊಡಮನಿ, ಶ್ರೀದೇವಿ ಸೋಮಶೆಟ್ಟಿ, ಮಲ್ಲೇಶ್ವರಿ ಗಂದಿಗುಡೆ, ರಾಜೇಶ್ವರಿ ಹೂಗಾರ, ವಿದ್ಯಾವತಿ ಬಲ್ಲೂರ, ಸುನೀತಾ ದಾಡಗೆ, ಶ್ರೀದೇವಿ ಪಾಟೀಲ, ನಂದಿನಿ ಮಠಪತಿಯವರು ಸಿದ್ದರಾಮೇಶ್ವರರ ಕುರಿತ ಕವಿತೆಗಳನ್ನು ಓದಿದರು.
ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ ಮ್ಯೂಸಿಕ್ ಅಕಾಡೆಮಿಯವರು ನಾಡಗೀತೆ ಹಾಡಿದರು. ಜಯದೇವಿ ಯದಲಾಪೂರೆ ನಿರೂಪಿಸಿದರು. ಅಲಕಾವತಿ ಹೊಸದೊಡ್ಡೆ ಸ್ವಾಗತಿಸಿದರು. ಗಂಗಶೆಟ್ಟಿ ಖಾನಪೂರ ವಂದಿಸಿದರು.
ಬೆಂಗಳೂರು,19.ಏಪ್ರಿಲ್.25:- ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿರುವ ವಿಚಾರ ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ…
ಪಾಕಿಸ್ತಾನದಲ್ಲಿ ಇಂದು 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಜೀವಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ರಾಷ್ಟ್ರೀಯ…
ಕಲಬುರಗಿ.19.ಏಪ್ರಿಲ್.25:- ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರಾದ್ ಶ್ರೀರಾಮುಲು ಅವರು ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ…
ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರ ಚುನಾವಣಾ ಆಯೋಗ ಚುನ್ನವನೇ ಪ್ರಚಾರಕ್ಕಾಗಿ ಜಾಹೀರಾತುಗಳು ಸೇರಿದಂತೆ ಇತರ ಚುನಾವಣಾ ಸಾಮಗ್ರಿಗಳನ್ನು ಸಿದ್ಧಪಡಿಸುವಲ್ಲಿ ಕೃತಕ…
ಕೆನಡಾದಲ್ಲಿ.19.ಏಪ್ರಿಲ್.25:- ಭಾರತೀಯ ವಿದ್ಯಾರ್ಥಿ ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ…
ಬೆಂಗಳೂರು.19.ಏಪ್ರಿಲ್.25:- ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಬಿಜೆಪಿ ಸಂಸದ ಬಿವೈ…