ಬೀದರ.24ಜನವರಿ.25:- ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು / ಸೌಹಾರ್ದ ಸಹಕಾರಿಗಳು ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಸಲ್ಲಿಸದೇ ಇರುವುದರಿಂದ ಕೂಡಲೇ ಈ ಬಗ್ಗೆ ಮಾಹಿತಿ ಸಲ್ಲಿಸುವಂತೆ ಬೀದರ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾವು ಪ್ರತಿವರ್ಷದಂತೆ ಈ ವರ್ಷವು ದಿನಾಂಕ: 25-09-2025 ರೊಳಗಾಗಿ ಪ್ರತಿಯೊಂದು ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ತಮ್ಮ ಸಂಘದ ವಾರ್ಷಿಕ ಮಹಾಸಭೆಯನ್ನು ಕಡ್ಡಾಯವಾಗಿ ಜರುಗಿಸಬೇಕು.
ಅದರಲ್ಲಿ ಸನ್ 2024-25 ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನುಆಯ್ಕೆ ಮಾಡಿಕೊಳ್ಳಬೇಕು. ತಾವು ಜರುಗಿಸಿದ ವಾರ್ಷಿಕ ಮಹಾಸಭೆಯ ನಡುವಳಿಗಳನ್ನು ಕರ್ನಾಟಕ ಸಹಕಾರ ಸಂಘಗಳ / ಸೌಹಾರ್ದ ಸಹಕಾರಿಗಳ ನಿಯಮಗಳ ನಿಯಮ 29(B))8 / 8(B))8 ರಿತ್ಯ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡ ಬಗ್ಗೆ 07 ದಿನಗಳ ಒಳಗಾಗಿ ವಾರ್ಷಿಕ ಮಹಾಸಭೆಯ ನಡುವಳಿಯೊಂದಿಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರಕಛೇರಿಗೆ ಮಾಹಿತಿಗಾಗಿ ಸಲ್ಲಿಸಬೇಕಾಗಿದ್ದು, ತಹಲ್‌ವರಗೂ ಲೆಕ್ಕಪರಿಶೋಧಕರ ಆಯ್ಕೆ ಮಾಡಿಕೊಂಡ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ.
ಆದ್ದರಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ/ಸೌಹಾರ್ದ ಸಹಕಾರಿ ಕಾಯ್ದೆ ಕಲಂ 63(1)/33(1) ರನ್ವಯಆಯ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗಿತ್ತು. ಆದರೆ ಆಯ್ಕೆ ಮಾಹಿತಿ ಸಲ್ಲಿಸದೇ ಇರುವುದರಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ / ಸೌಹಾರ್ದ ಸಹಕಾರಿಕಾಯ್ದೆ ಕಲಂ 63(2) / 33(2) ಪ್ರಾವಿಸೊದನ್ವಯ ಪ್ರದತ್ತವಾದ ಅಧಿಕಾರದ ಮೆರೆಗೆ ನೀವು ಲೆಕ್ಕ ಪರಿಶೋಧನೆಗೆ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಳ್ಳದೆ ಇರುವುದರಿಂದ ಕರ್ನಾಟಕ ಸಹಕಾರ ಸಂಘಗಳ ನಿಯಮ / ಸೌಹಾರ್ದ ಸಹಕಾರಿ ನಿಯಮ 29(B)8 / 8(B))8 ರನ್ವಯ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಈ ಇಲಾಖೆಗೆ ತಿಳಿಯಪಡಿಸದೇ ಇರುವುದರಿಂದ ತಾವು ವಾರ್ಷಿಕ ಮಹಾ ಸಭೆಯಲ್ಲಿ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡಿರುವುದಿಲ್ಲವೆoದು ಪರಿಭಾವಿಸಿ ಇಲಾಖಾ ವತಿಯಿಂದ ತಮ್ಮ ಸಂಘಗಳ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದೆಂದು ಸ್ಪಷ್ಟಪಡಿಸುತ್ತಾ ಈ ಕುರಿತು ನಿಮ್ಮ ಹೇಳಿಕೆ/ಮಾಹಿತಿ ಏನಾದರೂ ಇದ್ದಲ್ಲಿ
ಮಾನ್ಯ ಉಪ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಉಪ ನಿರ್ದೇಶಕರಕಛೇರಿ, ಬೀದರ ಎಲ್.ಐ.ಜಿ-124 ಕೆ.ಎಚ್.ಬಿ. ಕಾಲೋನಿ, ವಿಶ್ವನಾಥ ಫುಲೇಕರ್‌ರವರ ನಿವಾಸ, ಡಾ|| ನಾಗಮಾರಪಳ್ಳಿ ರವರ ಮನೆ ಹತ್ತಿರ, ಬೀದರ-585401 ರವರಿಗೆ ಮಾಹಿತಿ ಸಲ್ಲಿಸಲು ತಿಳಿಯಪಡಿಸಿದೆ.
ಇಲ್ಲವಾದಲ್ಲಿ ನೀವು ತಿಳಿಸಬೇಕಾಗಿರುವುದು ಏನು ಇಲ್ಲವೆಂದು ಪರಿಗಣಿಸಿ ನಿಮ್ಮ ಸಂಘದ ಲೆಕ್ಕಪರಿಶೋಧನೆ ನಿರ್ವಹಿಸಲು ಇಲಾಖಾ ವತಿಯಿಂದ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದೆಂದು ಸ್ಪಷ್ಟಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…