ಸರ್ಕಾರ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆಯುರ್ವೇದ ಕ್ಯಾನ್ಸರ್ಚಿಕಿತ್ಸಾ ಕೇಂದ್ರ ಆರಂಭಿಸಲಿ-ಡಾ. ಡಿ.ಪಿ.ರಮೇಶ

ಬೀದರ.03.ಮಾರ್ಚ.25:- ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆಯುರ್ವೇದ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿ ಪಾರಂಪರಿಕ ವೈದ್ಯರಿಗೆ ತರಬೇತಿ ನೀಡಬೇಕೆಂದು ಬೆಂಗಳೂರಿನ ಖ್ಯಾತ ಪಂಚಗವ್ಯ ತಜ್ಞರಾದ ಡಾ. ಡಿ.ಪಿ.ರಮೇಶ ತಿಳಿಸಿದರು.


ಅವರು ಇಂದು ಜಿಲ್ಲಾಡಳಿತ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಬೆಂಗಳೂರು, ಪಾರಂಪರಿಕ ವೈದ್ಯ ಪರಿಷತ್ತು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಲಿಂಗಸುಗೂರು ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆಯುತ್ತಿರುವ 15ನೇ ಪಾರಂಪರಿಕ ವೈದ್ಯ ಸಮ್ಮೇಳನದ ನಾಲ್ಕನೇ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕ್ಯಾನ್ಸರ್ ಚಿಕಿತ್ಸೆ ಎಂದರೆ ಕೇವಲ ಕಿಮೋತೆರಪಿ, ರೆಡಿಯೋತೆರಪಿ ಅಲ್ಲ. ಅವುಗಳಿಗೂ ಮೀರಿದ ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ ಭಾರತೀಯ ಆಯುರ್ವೇದದಲ್ಲಿದೆ. ಪಂಚಗವ್ಯ ಚಿಕಿತ್ಸೆ ಅತ್ಯಂತ ಕಡಿಮೆ ಹಣದಲ್ಲಿ ಪಡೆಯಬಹುದು. ಇದಕ್ಕೆ ಸರ್ಕಾರ ಅವಕಾಶ ನೀಡಬೇಕಾಗಿದೆ. ಕ್ಯಾನ್ಸರ್ ಬರದಂತೆ ತಡೆಯಬೇಕಾದರೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು.

ಪ್ಲಾಸ್ಟಿಕ್ ಬಾಟಲಿಗಳ ನೀರು, ಸಿಂಟ್ಯಾಕ್ಸ್ ಒಳಗಿಂದ ಬರುವ ನೀರು, ಮಿನರಲ್ ವಾಟರ್, ಚಹಾ ಕಪ್ ಇವು ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣವಾಗಿವೆ. ಚಿಕ್ಕ ಮಕ್ಕಳು ಕುರಕುರೆ ತಿನ್ನುವುದರಿಂದ ಮಕ್ಕಳ ದೇಹದ ಮೇಲೆ ಅತಿಯಾದ ದುಷ್ಪರಿಣಾಮ ಬೀರುತ್ತಿದೆ. ಇದಕ್ಕೆ ಆಯುರ್ವೇದ ಸೂಕ್ತ ಚಿಕಿತ್ಸೆಯಾಗಿದೆ ಎಂದರು.


ಗದಗ ಜಿಲ್ಲೆಯ ವೈದ್ಯ ಹನುಮಂತ ಮಳಲಿ ಮಾತನಾಡಿ, ಭಾರತೀಯ ಆಯುರ್ವೇದದ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಪ್ರಾಕೃತಿಕ ವೈದ್ಯ ಪದ್ಧತಿಯನ್ನು ಸಾಂಸ್ಕೃತಿಕ ಪದ್ಧತಿಯೆಡೆಗೆ ಕೊಂಡೊಯ್ಯುವುದೇ ಭಾರತದ ಆಯುರ್ವೇದ ವೈದ್ಯ ಪದ್ಧತಿ. ಭಾರತದಲ್ಲಿ ಒಟ್ಟು 6 ಲಕ್ಷ ಪಾರಂಪರಿಕ ವೈದ್ಯರಿದ್ದಾರೆ. ಕರ್ನಾಟಕದಲ್ಲಿ 31 ಸಾವಿರ ವೈದ್ಯರಿದ್ದಾರೆ.

ಇವರಿಗೆಲ್ಲಾ ಸರ್ಕಾರ ಮಾನ್ಯತೆ ನೀಡಿದರೆ ಜನರ ರೋಗ ವಾಸಿಯಾಗಿ ಆರೋಗ್ಯಯುತ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಆಯುರ್ವೇದ ಮೇಲೆ ದಾಳಿ ಇಡೀ ಭಾರತದ ಮೇಲಿನ ದಾಳಿಯಾಗಿದೆ. ಅದು ತಡೆಗಟ್ಟಲು ಸರ್ಕಾರ ಕ್ರಮ ವಹಿಸಬೇಕು. ಹಿರಿಯ ವೈದ್ಯರು ತಮ್ಮ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು. ಯಾವುದೇ ಕಾರಣಕ್ಕೂ ಮುಚ್ಚಿಡಬಾರದು ಎಂದರು.


ಪ್ರಾಸ್ತಾವಿಕವಾಗಿ ಗೋಸೇವಕರಾದ ಚನ್ನಬಸವಂತರೆಡ್ಡಿ ಮಾತನಾಡಿದರು. ಇದೇ ವೇಳೆ ಪಾರಂಪರಿಕ ವೈದ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳ ನಡುವೆ ಕ್ಯಾನ್ಸರ್ ರೋಗ ಗುಣಮುಖ ಕುರಿತು ಸಂವಾದ ಜರುಗಿತು. ರಂಗಮAದಿರ ಆವರಣದಲ್ಲಿ ಬೆಂಗಳೂರಿನ ಪಂಚಗವ್ಯ ವೈದ್ಯರು ಉಚಿತ ಆರೋಗ್ಯ ತಪಾಸಣೆ ನಡೆಸಿದರು.


ಈ ಸಂದರ್ಭದಲ್ಲಿ ವೈದ್ಯ ಹಾದಿಮನಿ ದಾವಣಗೇರೆ, ಹರೀಶ್ ಸಾಮುಗ ಉಡುಪಿ, ಗೋಪಾಲಕೃಷ್ಣ ಬೆಂಗಳೂರು ಗ್ರಾಮಾಂತರ, ವಿಶ್ವನಾಥ ಕಾಂಬಳೆ ಬೆಳಗಾವಿ, ಮಲ್ಲಿಕಾರ್ಜುನಯ್ಯ ಕೋಲಾರ, ವೈದ್ಯೆ ಸವಿತಾ ಧಾರವಾಡ, ಬಸವರಾಜ ಗೋರನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೈದ್ಯ ಲಿಂಗಪ್ಪ ಮಡಿವಾಳ ನಿರೂಪಿಸಿದರು. ಮಹಾರುದ್ರ ಡಾಕುಳಗೆ ಸ್ವಾಗತಿಸಿದರು. ಶಿವಶರಣಪ್ಪ ಗಣೇಶಪುರ ವಂದಿಸಿದರು.

prajaprabhat

Recent Posts

ಪತ್ರಕರ್ತರಿಗೆ ಮೀಡಿಯಾ ಕಿಟ್‍’ಗೆ ಅರ್ಜಿ ಆಹ್ವಾನ.

ಬೆಂಗಳೂರು.13.ಆಗಸ್ಟ್.25:-2025-26ನೇ ಸಾಲಿಗೆ ಮಾಧ್ಯಮ ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ "ಮೀಡಿಯಾ ಕಿಟ್"  ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ ಪತ್ರಕರ್ತರನ್ನು…

22 minutes ago

ಅರಣ್ಯ ವೀಕ್ಷಕ ಹುದ್ದೆಗಳು ಭರ್ತಿ: ಸಚಿವ ಈಶ್ವರ್ ಖಂಡ್ರೆ ಘೋಷಣೆ.!

ಬೆಂಗಳೂರು.13.ಆಗಸ್ಟ್.25:- ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳು ಶೀಘ್ರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ…

3 hours ago

ಮಹಾನಾಯಕ ಅಂಬೇಡ್ಕರ್ ಸೇನೆ ಅಧ್ಯಕ್ಷ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ.13.ಆಗಸ್ಟ್.25:- ಇಂದು ನಗರದಲ್ಲಿ ಮಹಾನಾಯಕ ಅಂಬೇಡ್ಕರ್ ಸೇನೆ ಅಧ್ಯಕ್ಷ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು ದಲಿತ ನಾಯಕ ಹಾಗೂ ಮಾಜಿ ಶಾಸಕ…

3 hours ago

ಭಾರತೀಯ ಗ್ರಂಥಾಲಯ ಪಿತಾಮಹರನ್ನು ಸ್ಮರಿಸಿದ ಗ್ರಂಥಪಾಲಕರು

ಕೊಪ್ಪಳ.13.ಆಗಸ್ಟ್ 25 : ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿನ ಎನ್.ಜಿ.ಓ ಕಾಲೋನಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರೀಡಿಂಗ್ ಸೆಂಟರ್, ಮುಖ್ಯಗ್ರಂಥಾಲಯಾಧಿಕಾರಿ ಕಛೇರಿಯಲ್ಲಿ ಮಂಗಳವಾರ…

5 hours ago

ವಿದೇಶಿ ಶಿಕ್ಷಣಕ್ಕೆ ಸ್ಟಡಿ ಅಬ್ರಾಡ್ ಕಾರ್ಯಕ್ರಮ: ಭಾಗವಹಿಸಲು ನೋಂದಾಯಿಸಿ.(STUDY ABROAD)

ಕೊಪ್ಪಳ.13.ಆಗಸ್ಟ್.25: ವಿದೇಶಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ `ಸ್ಟಡಿ ಅಬ್ರಾಡ್' ಕಾರ್ಯಕ್ರಮಕ್ಕೆ ಭಾಗವಹಿಸಲಿಚ್ಛೀಸುವ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು…

5 hours ago

ಗಣೇಶ, ಈದ್ ಮಿಲಾದ್ ಹಬ್ಬದ ವೇಳೆ ‘DJ’ ನಿಷೇಧ: ಸರ್ಕಾರ ಆದೇಶ

ಬೆಂಗಳೂರು.13.ಆಗಸ್ಟ್.25:- ರಾಜ್ಯಾದ್ಯಂತ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ವೇಳೆ 'DJ' ನಿಷೇಧ  ಮುಂಜಾಗ್ರತಾ ಕ್ರಮವಾಗಿ…

6 hours ago