ಸರ್ಕಾರಿ ಶಾಲೆ`ಬಿಸಿಯೂಟ ಅಡುಗೆಯವರು, ಸಹಾಯಕಿಯರಿಗೆ ಗೌರವಧನ’ 1 ಸಾವಿರ ರೂ. ಹೆಚ್ಚಳ ಸರ್ಕಾರ ಆದೇಶ.!

ಬೆಂಗಳೂರು.19.ಜೂನ್.25:-2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-109ರ ಘೋಷಣೆಯಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರಿಗೆ ಮತ್ತು ಸಹಾಯಕ ಅಡುಗೆಯವರಿಗೆ ನೀಡಲಾಗುತ್ತಿರುವ ಮಾಸಿಕ ಗೌರವ ಸಂಭಾವನೆಯನ್ನು ರೂ.1000/- ಗಳಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-109 ರಲ್ಲಿನ ಘೋಷಣೆಯಂತೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆಯವರಿಗೆ ಮತ್ತು ಸಹಾಯಕ ಅಡುಗೆಯವರಿಗೆ ನೀಡಲಾಗುತ್ತಿರುವ ಮಾಸಿಕ ಗೌರವ ಸಂಭಾವನೆಯನ್ನು ರೂ.1000/- ಗಳಷ್ಟು ಹೆಚ್ಚಿಸುವ ಕುರಿತು ಉಲ್ಲೇಖದ ಸರ್ಕಾರದ ಆದೇಶ ಸಂಖ್ಯೆ:ಇಪಿ.57.ಎಂಎಂಎಸ್.2025. ಬೆಂಗಳೂರು. ದಿನಾಂಕ:26.05.2025ರಲ್ಲಿ ಕೆಳಕಂಡಂತೆ ಆದೇಶಿರುತ್ತಾರೆ (ಉಲ್ಲೇಖ-2ರ ಸರ್ಕಾರದ ಆದೇಶವನ್ನು ಅಡಕವಿರಿಸಿದೆ).

ಅಡುಗೆ ಸಿಬ್ಬಂದಿ ವಿವರ

ಮಾಸಿಕ ಸಂಭಾವನೆ | (0) 60%)

ಮಾಸಿಕ ಸಂಭಾವನೆ ( 40%)

ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಹೆಚ್ಚುವರಿ ៩ (TOP UP) ಸಂಭಾವನೆಯ ಮೊತ್ತ

ಅಡುಗೆ ಸಿಬ್ಬಂದಿಗಳಿಗೆ ಪಾವತಿಸಬೇಕಾಗಿರುವ ಒಟ್ಟಾರೆ ಮಾಸಿಕ ಸಂಭಾವನೆಯ ಮೊತ್ತ

ಮುಖ್ಯ ಅಡುಗೆಯವರು

600/-

400/-

3700/-

4700/-

ಸಹಾಯಕ ಅಡುಗೆಯವರು

600/-

400/-

3600/-

4600/-

ರಾಜ್ಯದ ಎಲ್ಲಾ 31 ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲ್ಲೂಕು ‘ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರದ ಆದೇಶದಲ್ಲಿ ಸೂಚಿಸಲಾಗಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಶೈಕ್ಷಣಿಕ ಜಿಲ್ಲೆಗಳು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಸದರಿ ಆದೇಶವನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದೆ.

ಈ ಆದೇಶದಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರಿಗೆ ಹೆಚ್ಚಿಸಲಾಗಿರುವ ರೂ.1000/-ಗಳ ಮಾಸಿಕ ಸಂಭಾವನೆ ಮೊತ್ತವನ್ನು ಪಾವತಿಸಲು ಅಗತ್ಯವಿರುವ ಅನುದಾನವನ್ನು ರಾಜ್ಯ ಯೋಜನೆ ಕ್ಷೀರಭಾಗ್ಯ ಲೆಕ್ಕ ಶೀರ್ಷಿಕೆ:2202-00-101-0-18 (2202-01-196-1-02) ಯ ಉಪ ಶೀರ್ಷಿಕೆ: 324 ರಡಿ ನಿಗದಿಯಾಗಿರುವ ಅನುದಾನದಿಂದ ಪಾವತಿಸುವಂತೆ ಸೂಚಿಸಿದೆ.

ಗೌರವ ಸಂಭಾವನೆಯನ್ನು ನೇರ ನಗದು ವರ್ಗಾವಣೆ ವೇದಿಕೆ (Direct Benefit Transfer) ಮೂಲಕವೇ ಪಾವತಿಸಲು ಕ್ರಮ ವಹಿಸಲು ತಿಳಿಸಿದೆ.

prajaprabhat

Recent Posts

ಪ್ರಯಾಣದ ಸಂಧರ್ಭದಲ್ಲಿ ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು ಸಾಂದರ್ಭಿಕ ಚಿತ್ರ.

ಬೆಂಗಳೂರು.10.ಆಗಸ್ಟ್.25:- ನಮ್ಮ ಮೆಟ್ರೋ  ರೈಲು ಉದ್ಘಾಟನಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಮಾಡಿದ್ದಾರೆ " ಹಳದಿ ಮಾರ್ಗಕ್ಕೆ ಇಂದು ಚಾಲನೆ…

3 hours ago

ಹಳದಿ ಮೆಟ್ರೋ ನಾಳೆಯಿಂದ ಸಂಚಾರ ಪ್ರಾರಂಭ.

ಬೆಂಗಳೂರು.10.ಆಗಸ್ಟ್.25:- ಇಂದು ಪ್ರಧಾನಿ ನರೇಂದ್ರ ಮೋದಿಆರ್‌.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗಕ್ಕೆ  ಹಸಿರು ನಿಶಾನೆ ತೋರಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮದ ನಂತರ…

3 hours ago

ಗೃಹಲಕ್ಷ್ಮೀ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಒಟ್ಟಿಗೆ 2 ಕಂತಿನ 4,000 ರೂ. ಖಾತೆಗೆ ಜಮೆ.!

ಬೆಂಗಳೂರು.10.ಆಗಸ್ಟ್.25:- ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡಗುಡೆಯಾಗಿದ್ದು, ಇದೀಗ ಜುಲೈ…

3 hours ago

ರಾಜ್ಯ ಸರ್ಕಾರದಿಂದ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ರಾಜ್ಯದ ವಿವಿಧ ನಿಗಮಗಳಲ್ಲಿ ರಾಜ್ಯ ಸರ್ಕಾರ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ…

9 hours ago

ಶ್ರೀ ನುಲಿಯ ಚಂದಯ್ಯ ಜಯಂತಿ: ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

ಕೊಪ್ಪಳ.10.ಆಗಸ್ಟ್.25:- ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ…

9 hours ago

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ದೊಡ್ಡ ಬದಲಾವಣೆಯನ್ನ ಮಾಡಲು ನಿರ್ಧರಿಸಿದೆ.

ಹೊಸ ದೆಹಲಿ.10.ಆಗಸ್ಟ್.25:- ನೀವು 9 ರಿಂದ 12 ನೇ ತರಗತಿಯ ಶಿಕ್ಷಕರಾಗುವ ಕನಸು ಕಾಣುತ್ತಿದ್ದರೆ, ಆಕಾಂಕ್ಷಿಗಳು ನೀವು ಸ್ವಲ್ಪ ಹೆಚ್ಚು…

10 hours ago