ರಾಜ್ಯದ ಸರ್ಕಾರಿ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸ್ತಿರುವರಿಗೆ HRMS-2.O  ಮಹತ್ವದ ಆದೇಶ.!

ಬೆಂಗಳೂರು.18.ಏಪ್ರಿಲ್.25:- ರಾಜ್ಯ ಸರ್ಕಾರಿ ನೌಕರರಿಗೆ ವಿಷೇಶ ಮಾಹಿತಿ, ಹೆಚ್.ಆರ್.ಎಂ.ಎನ್-2.0 ತಂತ್ರಾಂಶವು ಅಭಿವೃದ್ಧಿಯ ಹಂತದಲ್ಲಿದ್ದು ಇಲಾಖೆಗೆ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಮಾಹಿತಿಯನ್ನು ನವೀಕರಿಸಿ ಈ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವ ಬಗ್ಗೆ ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ.

ಮೆಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ,

ಹೆಚ್.ಆರ್.ಎಂ.ಎಸ್. – 2.0 ಯೋಜನೆಯು ಅಭಿವೃದ್ಧಿ ಹಂತದಲ್ಲಿದ್ದು ಈಗಾಗಲೇ ವೇತನ ಮಾಡ್ಯುಲ್ (Pay Roll Module) ಅನ್ನು 21 ಇಲಾಖೆಗಳಿಗೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ಹೆಚ್.ಆರ್.ಎಂ.ಎಸ್. -2.0 ವೇತನ ಮಾಡ್ಯುಲ್ (Pay Roll Modula) ಮೂಲಕವೇ ಪ್ರಾಯೋಗಿಕವಾಗಿ ಆಯ್ಕೆ ಮಾಡಲಾದ ಈ 21 ಇಲಾಖೆಗಳ ಸರ್ಕಾರಿ ನೌಕರರಿಗೆ ವೇತನವನ್ನು ವಿಸ್ತರಿಸಲಾಗುತ್ತಿದೆ. ಮುಂದುವರೆದು, ಹೆಚ್ .ಆರ್.ಎಂ.ಎಸ್.-2.0ನ ಯೋಜನೆಯ ತಂತ್ರಾಂಶದಲ್ಲಿ 36 ಮಾಡ್ಯುಲ್‌ಗಳು ಅಭಿವೃದ್ಧಿಯ ಹಂತದಲ್ಲಿದ್ದು ಹಾಗೂ ಈ ಯೋಜನೆಯನ್ನು ಯಶಸ್ವಿಗೊಳಿಸಲು ಈ 36 ಮಾಡ್ಯುಲ್‌ಗಳು ಒಂದಕ್ಕೊಂದು ಸಮಕ್ಷಮ ಹೊಂದಾಣಿಕೆಯಿಂದ ನಡೆಸಲೇ ಬೇಕಾಗಿರುವುದರಿಂದ ಈ ಕೆಳಗಿನಂತೆ ಕೋರಿರುವ ಮಾಹಿತಿಯನ್ನು ಒದಗಿಸುವುದು.

1. ನೌಕರರ ಕೆ.ಜಿ.ಐ.ಡಿ – ಆಧಾರ್ ಜೋಡಣೆ (KGID – ADHAAR Seeding):

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) (ಸರ್ಕಾರಿ ನೌಕರರ ಕುಟುಂಬ ಅವಲಂಬಿತ ಸದಸ್ಯರನ್ನು ಒಳಗೊಂಡಂತೆ), ಕರ್ನಾಟಕ ಹಾಜರಾತಿ ನಿರ್ವಹಣೆ ವ್ಯವಸ್ಥೆ (KAMS)ನ ತಂತ್ರಾಂಶಗಳು ಅಭಿವೃದ್ಧಿಯ ಹಂತದಲ್ಲಿದ್ದು, ಸರ್ಕಾರಿ ನೌಕರರಿಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಹಾಗೂ ಮುಂಬರುವ ವಿವಿಧ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿ ಉಪಯೋಗಿಸಿಕೊಳ್ಳಲು ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಕೆ.ಜಿ.ಐ.ಡಿ ಮತ್ತು ಆಧಾರ್ ಜೋಡಣೆ (KGID-Adhaar Seeding) https://hms.karnataka.gov.in ៧ ០៨ DDO ថ 3 LOGIN A SERVICE REGISTER >> FAMILY DEPENDENT ENTRY FORM-KASS OPTION CLICK ಮಾಡಿ ಸರ್ಕಾರಿ ನೌಕರರ ಕೆ.ಜಿ.ಐ.ಡಿಯೊಂದಿಗೆ ಆಧಾರ್ ಜೋಡಣೆ (KGID – Adhaar Seeding) ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು] ಇದುವರೆಗೆ ಜೋಡಣೆ ಆಗದೆ ಇರುವ ಸಿಬ್ಬಂದಿಗಳ ಆಧಾರ್ ಜೋಡಣೆ ಬಹಳ ಅವಶ್ಯಕವಾಗಿರುವುದರಿಂದ ಅದ್ಯತೆ ಮೇರೆಗೆ ಪೂರ್ಣಗೊಳಿಸುವುದು.

ಈ ಬಗ್ಗೆ ಈವರೆಗೂ ಇಲಾಖಾವಾರು “ಕೆ.ಜಿ.ಐ.ಡಿಯೊಂದಿಗೆ ಆಧಾರ್ ಜೋಡಣೆಯ ದತ್ತಾಂಶದ ಪ್ರಗತಿಯ ವರದಿಯನ್ನು ಲಗತ್ತಿಸಲಾಗಿದೆ.

2. ಹೆಚ್.ಆರ್.ಎಂ.ಎಸ್.-2.0 ತಂತ್ರಾಂಶದ ORGANOGRAM ನಲ್ಲಿ ನವೀಕರಿಸಬೇಕಾದ ಮಾಹಿತಿ.

[ https://hrms2org.karnataka.gov.in/HRMS2DASHBOARD/login]

a ವೃಂದ ಮತ್ತು ನೇಮಕಾತಿ: ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ / ಆರ್ಥಿಕ ಇಲಾಖೆಯಿಂದ ಸಮ್ಮತಿ ಪಡೆದಿರುವ ನವೀಕೃತ ಮಾಹಿತಿಯನ್ನು ನವೀಕರಿಸುವುದು.

b) ಇಲಾಖೆಯ ಕಛೇರಿಗಳ ಮಾಹಿತಿ:

ಇಲಾಖೆಯ ರಾಜ್ಯಾದ್ಯಂತ/ ದೇಶಾದ್ಯಂತ ಇರುವ ಕಛೇರಿಗಳಲ್ಲಿ ರಾಜ್ಯ ಮಟ್ಟದ, ತಾಲ್ಲೂಕು, ವಲಯ, ವೃತ್ತ, ವಿಭಾಗ ಹಾಗೂ ಇತರೆ ಹಂತಗಳಿರುವ ಇಲಾಖಾ-ಕಛೇರಿಗಳ ನಿಖರವಾದ ವಿಳಾಸವನ್ನು ಕ್ರಮಾನುಗತವಾಗಿ ಹೆಚ್ ಆರ್.ಎಂ.ಎಸ್. -2.0 ತಂತ್ರಾಂಶದ ORGANOGRAM ನಲ್ಲಿ ನವೀಕರಿಸುವುದು.

3. ಭತ್ಯೆಗಳು:

ಹೆಚ್.ಆರ್.ಎಂ.ಎಸ್.-2.0 ತಂತ್ರಾಂಶದಲ್ಲಿ ವಿವಿಧ ಭತ್ಯೆಗಳನ್ನು ಸರ್ಕಾರಿ ನೌಕರರಿಗೆ ಸ್ವಯಂಚಾಲಿತವಾಗಿ ನೀಡುವ ಸಲುವಾಗಿ ಪ್ರತ್ಯೇಕ ಮಾಡ್ಯುಲ್ ರಚಿಸಲಾಗಿದ್ದು, ಇಲಾಖೆಯ ಹಂತದಲ್ಲಿ ವಿವಿಧ ವೃಂದ / ಪದನಾಮ/ ಸರ್ಕಾರಿ ನೌಕರರಿಗೆ ಪ್ರತ್ಯೇಕವಾಗಿ ಆರ್ಥಿಕ ಇಲಾಖೆಯು ಹೊರಡಿಸಿರುವ ಆದೇಶಗಳನ್ವಯ [ಉಲ್ಲೇಖ: ರಾಜ್ಯ ವೇತನ ಆಯೋಗದ ಅನುಷ್ಠಾನದ ಇತ್ತೀಚಿನ ಆದೇಶಗಳು: https://www.finance.karnataka.gov.in] ನೀಡಲಾಗುತ್ತಿರುವ /ನೀಡಬಹುದಾದ ವಿವಿಧ ಭತ್ಯೆಗಳನ್ನು ಈ ಆದೇಶಗಳಲ್ಲಿರುವ ಎಲ್ಲಾ ಷರತ್ತುಗಳ ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಪರಿಷ್ಕರಿಸದಿದ್ದಲ್ಲಿ ಪ್ರಸ್ತುತ ನೀಡುತ್ತಿರುವ ವಿವಿಧ ಭತ್ಯೆಗಳು ಕಡಿತಗೊಳ್ಳಬಹುದು. ಅದ್ದರಿಂದ, ನಿಖರವಾದ ಭತ್ಯೆಗಳ ಮಾಹಿತಿಯನ್ನು ಆಯಾ ಭತ್ಯೆಗಳಿಗೆ ಸಂಬಂಧಿತ ದರಗಳನ್ನು ಮಾತ್ರ ಹೆಚ್.ಆರ್.ಎಂ.ಎಸ್ -1 ರಲ್ಲಿ ನವೀಕರಿಸುವುದು/ನಮೂದಿಸುವುದು. ಹಾಗೂ ಯಾವುದೇ ಭತ್ಯೆ ಇದರ ನಾಮ ಹಾಗೂ ಮೊತ್ತದಲ್ಲಿ ಬದಲಾವಣೆಯನ್ನು ಸೇರಿಸುವ ដ ៨, P.M HRMS 2.0 (pmhrms2@karnataka.gov.in) 1 ಕೋರಿಕೆಯನ್ನು HRMS ನಲ್ಲಿ (Attach) ಸೇರಿಸಲು ಇ-ಮೇಲ್ ಮೂಲಕ ತಿಳಿಸುವುದು, ថ្ម ៨៧, ថ

4. ಸರ್ಕಾರಿ ನೌಕರರ ಇನ್ನಿತರ ಪ್ರಮುಖ ವಿವರಗಳು:

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರ ವಿವರಗಳಾದ, ವರ್ಗಾವಣೆಗೊಂಡ (Transfer-in & Transfer-Out) / ವರ್ಗಾವಣೆಯಾಗಬಹುದಾದ / ನಿಯೋಜಿಸಲಾದ/ ಬಡ್ತಿ ನೀಡಲಾದ / ಬಡ್ತಿ ನೀಡಲಾಗುವ /ನಿವೃತ್ತಿಹೊಂದಿರುವ / ಸ್ವಯಂ ನಿವೃತ್ತಿ ಹೊಂದಿರುವ ನಿವೃತ್ತಿ ಹೊಂದುತ್ತಿರುವ / ಅಮಾನತ್ತುಗೊಳಿಸಲಾದ/ವಜಾಗೊಳಿಸಲಾದ ನೌಕರರ ಜಿ.ಪಿ.ಎಫ್ / ಕೆ.ಜಿ.ಐ.ಡಿ ಪಾಲಿಸಿ ಸಂಖ್ಯೆ ಹಾಗೂ ಆ ಪಾಲಿಸಿಯ ಮಾಸಿಕ ಪ್ರೀಮಿಯಮ್, ಜಿ.ಪಿ.ಎಫ್ ನ ಮುಂಗಡ ಪಾವತಿಸುವ ಕಂತುಗಳು / ಕೆ.ಜಿ.ಐ.ಡಿ ಪಾಲಿಸಿ ಸಂಖ್ಯೆ ಹಾಗೂ ಆ ಪಾಲಿಸಿಯ ಸಾಲದ ಕಂತುಗಳನ್ನು ಹಾಗೂ ಜಿ.ಪಿ.ಎಫ್‌ನ ಮುಂಗಡ / ಕೆ.ಜಿ.ಐ.ಡಿ ಸಾಲದ ಪ್ರಾರಂಭ / ಮುಕ್ತಾಯದ ದಿನಾಂಕಗಳನ್ನು ಕಡ್ಡಾಯವಾಗಿ ಹೆಚ್.ಆರ್.ಎಂ.ಎಸ್ -1ರಲ್ಲಿ ಸರಿಯಾಗಿ ನಮೂದಿಸಿರಬೇಕು. ಇಲ್ಲದಿದ್ದಲ್ಲಿ ಹೆಚ್.ಆರ್.ಎಂ.ಎಸ್ – 2.0 ತಂತ್ರಾಂಶದಲ್ಲಿ ವೇತನ ಮಾಡ್ಯುಲ್ (Pay Roll Module) ನಿಂದ ನಿಮ್ಮ ಇಲಾಖೆಯ ಡಿ.ಡಿ.ಓಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ವೇತನವನ್ನು ಸೆಳೆಯಲು ಸಾಧ್ಯವಾಗುವುದಿಲ್ಲ.

https://hrms2org.karnataka.gov.in/HRMS2DASHBOARD/login

prajaprabhat

Recent Posts

ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

ಬೆಂಗಳೂರು.19.ಏಪ್ರಿಲ್.25:- ಇಂದು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಪುತ್ರ, ಶಿವಮೊಗ್ಗ ಬಿಜೆಪಿ ಸಂಸದ ಬಿವೈ…

12 minutes ago

2030 ರ ವೇಳೆಗೆ ಭಾರತದ ರಕ್ಷಣಾ ರಫ್ತು 50,000 ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಹೊಸ ದೆಹಲಿ.19.ಏಪ್ರಿಲ್.25:- ೨೦೩೦ ರ ವೇಳೆಗೆ ಭಾರತದ ರಕ್ಷಣಾ ರಫ್ತು ೫೦,೦೦೦ ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ರಕ್ಷಣಾ ಸಚಿವ…

3 hours ago

ಪ್ರಿಯಾಂಕ್ ಖರ್ಗೆ ವಿರುದ್ಧ ಮತ್ತೆ ಗುಡುಗಿದ ಮಣಿಕಂಠ ರಾಠೋಡ್

ಕಲಬುರಗಿ .19.ಏಪ್ರಿಲ್.25:- ಕಲಬುರಗಿಯಲ್ಲಿ ಬಿಜೆಪಿ/ ಕಾಂಗ್ರೆಸ್ ಜಟಾಪಟಿ ಮುಂದು ವರೆದಿದ್ದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮತ್ತೊಮ್ಮೆ ಪ್ರಿಯಾಂಕ್ ಖರ್ಗೆ…

5 hours ago

ಜೆಇಇ ಮುಖ್ಯ ಸೆಷನ್ II ಫಲಿತಾಂಶ ಪ್ರಕಟ

ಹೊಸ ದೆಹಲಿ.19.ಏಪ್ರಿಲ್.25:- ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ಬೆಳಿಗ್ಗೆ 2025 ರ ಜಂಟಿ ಪ್ರವೇಶ ಪರೀಕ್ಷೆ (JEE) ಮುಖ್ಯ…

5 hours ago

  World Liver Day  ವಿಶ್ವ ಯಕೃತ್ತು ದಿನ

ಹೊಸ ದೆಹಲಿ.19.ಏಪ್ರಿಲ್.25:- ಇಂದು ಆರೋಗ್ಯ ಯಕೃತ್ತಿನ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜನರು ಎಣ್ಣೆಯುಕ್ತ ಮತ್ತು ಜಿಡ್ಡಿನ ಆಹಾರವನ್ನು…

5 hours ago

Phone Pay, Google Pay, 2000 ಕ್ಕಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ ಜಿಎಸ್‌ಟಿ : ಸ್ಪಷ್ಟನೆ ನೀಡಿದ ಹಣಕಾಸು ಸಚಿವಾಲಯ.!

ಹೊಸ ದೆಹಲಿ.19.ಏಪ್ರಿಲ್.25:- ಭಾರತ ಸರ್ಕಾರದ್ ಹಣಕಾಸು ಸಚಿವಾಲಯ ವತಿಯಿಂದ ರೂ.2,000 ಕ್ಕಿಂತ ಹೆಚ್ಚಿನ UPI ಪಾವತಿಗಳ ಮೇಲೆ ಕೇಂದ್ರವು 18%…

7 hours ago