ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿನ ಮುಖ್ಯ ಶಿಕ್ಷಕರು ಹಾಗೂ ಉಪ ಪ್ರಾಂಶುಪಾಲರ ವೃಂದದ ಗ್ರೂಪ್-ಬಿ ಖಾಲಿ ಹುದ್ದೆಗಳಿಗೆ ದಿನಾಂಕ:01.01.2023ರಲ್ಲಿದ್ದಂತೆ ಪ್ರಕಟಿಸಲಾದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಜೇಷ್ಟತಾ ಪಟ್ಟಿಯನ್ನಾದರಿಸಿ ಸ್ಥಾನಪನ್ನ ಬಡ್ತಿ ನೀಡಲು ಉದ್ದೇಶಿಸಲಾಗಿದೆ.
ಪ್ರಕಟಿಸಿರುವ ಜೇಷ್ಟತಾ ಪಟ್ಟಿಯನ್ನು ಅನುಸರಿಸಿ ಬೆಂಗಳೂರು /ಮೈಸೂರು ವಿಭಾಗದಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕರು/ಉಪ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.ಈ ಪತ್ರದೊಂದಿಗೆ ಸರ್ಕಾರಿ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕರು/ಉಪ ಪ್ರಾಂಶುಪಾಲರ ಹುದ್ದೆಗಳಿಗೆ ನೀಡಬಹುದಾದ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದ
1. ಇದರೊಂದಿಗೆ ಲಗತ್ತಿಸಿರುವ ಚೆಕ್ ಲಿಸ್ಟ್‌ನೊಂದಿಗೆ ಹೆಚ್.ಆರ್.ಎಂ.ಎಸ್ ನಲ್ಲಿ ವೇತನ ಸೆಳೆಯುವ ಕೆ.ಜಿ.ಐ.ಡಿ ಸಂಖ್ಯೆಯನ್ನೇ ಕಡ್ಡಾಯವಾಗಿ ಕಾಲಂ-3ರಲ್ಲಿ ನಮೂದಿಸಬೇಕು. [ಒಂದು ವೇಳೆ ಹೆಚ್.ಆರ್.ಎಂ.ಎಸ್ ನಲ್ಲಿ ವೇತನ ಸೆಳೆಯುವ ಕೆ.ಜಿ.ಐ.ಡಿ ಸಂಖ್ಯೆ ಹಾಗೂ ಶಿಕ್ಷಕರ ಸೇವಾ ತಂತ್ರಾಂಶದಲ್ಲಿ [ಟಿ.ಡಿ.ಎಸ್) ನಮೂದಿಸಿರುವ ಕೆ.ಜಿ.ಐ.ಡಿ ಸಂಖ್ಯೆ ವ್ಯತ್ಯಾಸವಾಗಿದ್ದಲ್ಲಿ ಅಂತಹ ಪ್ರಕರಣಗಳಿಗೆ ಸಂಬಂಧ ಪಟ್ಟ ಉಪನಿರ್ದೇಶಕರೇ ನೇರ ಹೊಣೆಗಾರರಾಗಿರುತ್ತಾರೆ.
2. ಈ ಪಟ್ಟಿಯಲ್ಲಿನ ಶಿಕ್ಷಕರು ಪ್ರಸ್ತುತ ನೇಮಕಾತಿಯಾದ ವಿಭಾಗದಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆಯೇ ಅಥವಾ ಅಂತರ ವಿಭಾಗದ ವರ್ಗಾವಣೆಯಾಗಿದ್ದಾರೆಯೇ ಎಂಬುದನ್ನು ಕಡ್ಡಾಯವಾಗಿ ಸೇವಾ ವಹಿಯಲ್ಲಿ ಪರಿಶೀಲಿಸಿಕೊಂಡು ಪ್ರಸ್ತಾವನೆ ಸಲ್ಲಿಸುವುದು
3. ಈ ಪಟ್ಟಿಯಲ್ಲಿನ ಶಿಕ್ಷಕರ ಮಾಹಿತಿಯು ಶಿಕ್ಷಕರ ಸೇವಾ ತಂತ್ರಾಂಶದಲ್ಲಿ (ಇಇಡಿಎಸ್)ನಲ್ಲಿ ಕಡ್ಡಾಯವಾಗಿ ನಮೂದಾಗಿರುವ ಬಗ್ಗೆ ಪರಿಶೀಲಿಸಿಕೊಂಡು ಮಾಹಿತಿ ಸಲ್ಲಿಸುವುದು
4. ಬಡ್ತಿ ಸಂಬಂಧ ಪ್ರಕಟಿಸಲಾಗಿರುವ ಪಟ್ಟಿಯಲ್ಲಿನ ಎಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರುಗಳ ಬಗ್ಗೆ ಶಿಸ್ತಿನ ಕ್ರಮ/ ಇಲಾಖಾ ವಿಚಾರಣೆ/ ವಿಚಾರಣೆ/ನ್ಯಾಯಾಲಯದ ಪ್ರಕರಣಗಳ ಬಾಕಿ ಇರುವ/ಇಲ್ಲದಿರುವ ಕುರಿತು ಉಪನಿರ್ದೇಶಕರು ದೃಢೀಕರಣವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
5. ಪ್ರಕಟಿಸಲಾಗಿರುವ ಪಟ್ಟಿಯಲ್ಲಿ ಪ್ರಕಟಿಸಲಾಗಿರುವ ಶಿಕ್ಷಕರಿಗಿಂತ ಜೇಷ್ಟತೆಗಿಂತ ಹಿರಿಯರಾಗಿದ್ದಲ್ಲಿ ಹಾಗೂ ಅಂತವರ ಹೆಸರು ಈ ಪಟ್ಟಿಯಲ್ಲಿ ಬಿಟ್ಟಿದ್ದಲ್ಲಿ ಹಾಗೂ ಪ್ರಸ್ತುತ ನಿರ್ದೇಶಕರು ಪ್ರಕಟಿಸಿರುವ ಜೇಷ್ಟತಾ ಪಟ್ಟಿಯಲ್ಲಿ ಇದ್ದಲ್ಲಿ ಅಂತಹ ಸಹ ಶಿಕ್ಷಕರ ವಿವರಗಳನ್ನು ಸಹ ಡೋಸಿಯರ್‌ನಲ್ಲಿ ಸಲ್ಲಿಸಲು ತಿಳಿಸಿದೆ.
6. ಪ್ರಸ್ತುತ ಪಟ್ಟಿಯಲ್ಲಿ ಒಂದು ವರ್ಷಕ್ಕಿಂತ ಹಿಂದೆ ಬಡ್ತಿ ಮುಂದೂಡಿದ ಶಿಕ್ಷಕರ ವಿವರ ಬಿಟ್ಟು ಹೊಗಿದ್ದಲ್ಲಿ ಅಂಥಹವರ ಡೋನಿಯರ್ ಅನ್ನು ಸೂಕ್ತ ಷರಾ ನಮೂದಿಸಿ ಪ್ರಸ್ತಾವನೆ ಸಲ್ಲಿಸುವುದು
7. ಚೆಕ್ ಲಿಸ್ಟನಲ್ಲಿ ಕಡ್ಡಾಯವಾಗಿ ಕೆ.ಜಿ.ಐ.ಡಿ ಸಂಖ್ಯೆಯನ್ನು ನಮೂದಿಸಿ ಸಲ್ಲಿಸುವುದು ಹಾಗೂ ಡೋಸಿಯರ್‌ನೊಂದಿಗೆ ಸಲ್ಲಿಸಲಾಗುವ ಪಟ್ಟಿಯಲ್ಲೂ ಸಹ ಕೆಳಗಿನ ನಮೂನೆಯಲ್ಲಿಯೇ ಸಲ್ಲಿಸಲು ತಿಳಿಸಿದೆ.
ಮೇಲ್ಕಂಡ ವಿವರಗಳನ್ನು ಇದರೊಂದಿಗೆ ಲಗತ್ತಿಸಿರುವ ಚೆಕ್ ಲಿಸ್ಟ್‌ನಲ್ಲಿ ಮಾಹಿತಿಯನ್ನು ನಮೂದಿಸಿದ ಪ್ರಸ್ತಾವನೆಯನ್ನು ಸಂಬಂದಿಸಿದ ಶಿಕ್ಷಕರುಗಳಿಂದ ಪಡೆದು ಜಿಲ್ಲಾವಾರು ಕ್ರೋಢೀಕರಿಸಿ, ಪ್ರತಿ ಶಿಕ್ಷಕರ ಬಡ್ತಿ ಪ್ರಸ್ತಾವನೆಯನ್ನು ಪ್ರತ್ಯೇಕ ಡೋಸಿಯರ್‌ಗಳಲ್ಲಿ ಸಿದ್ಧಪಡಿಸಿ ಉಪನಿರ್ದೇಶಕರು (ಆಡಳಿತ)ರವರ ದೃಢೀಕರಣದೊಂದಿಗೆ ಈ ಕಛೇರಿಗೆ ದಿನಾಂಕ: 10.03.2025 ರೊಳಗಾಗಿ ಕಡ್ಡಾಯವಾಗಿ ಸಂಬಂದಿಸಿದ ವಿಷಯ ನಿರ್ವಾಹಕರು ಮುದ್ದಾಂ ಸಲ್ಲಿಸತಕ್ಕದ್ದು.
ಕೊಪ್ಪಳ.05.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ ಅತಿಥಿ ಅತಿಥಿ ಉಪನ್ಯಾಸಕರಿಗೆ ಅರ್ಹತೆ ಕಂಟಕ. ಈಗಾಗಲೇ ಕಳೆದ…
ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…