ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರ ಹುದ್ದೆ ಭರ್ತಿಗೆ ಲಿಖಿತ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಬೆಂಗಳೂರು.26.ಮೇ.25:- 2024-25ನೇ ಸಾಲಿನ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ವಿಷಯದನ್ವಯ, 2024-25ನೇ ಸಾಲಿನ ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ (Specified Post) ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡಲು ಬಗ್ಗೆ ಉಲ್ಲೇಖ-1 ರಲ್ಲಿ ಮಾರ್ಗಸೂಚಿ ಸಹಿತ ವೇಳಾಪಟ್ಟಿಯನ್ನು ಅಧಿಸೂಚಿಸಲಾಗಿತ್ತು. ಆದರೆ ಆಡಳಿತಾತ್ಮಕ ಹಿತದೃಷ್ಟಿಯಿಂದ ನಿರ್ದಿಷ್ಟಪಡಿಸಿದ (Specified Post) ಹುದ್ದೆಗಳಿಗೆ ನಿಗದಿಯಾಗಿದ್ದ ಲಿಖಿತ ಪರೀಕ್ಷೆಯನ್ನು ಮುಂಡೂಡಲು ಉಲ್ಲೇಖಿತ-2 ರಲ್ಲಿ ನಿರ್ದೇಶಕರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು ಇವರು ಮನವಿ ಸಲ್ಲಿಸಿರುತ್ತಾರೆ, ಸದರಿ ಮನವಿಯನ್ನು ಪರಿಶೀಲಿಸಿ ಆಡಳಿತಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ಈಗಾಗಲೇ ಹೊರಡಿಸಲಾಗಿದ್ದ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಪರಿಷ್ಕರಿಸಿದೆ. ಉಳಿದಂತೆ ಈ ಹಿಂದೆ ಇದ್ದ ಮಾರ್ಗಸೂಚಿ ಅಂಶಗಳು ಮತ್ತು ಸೂಚನೆಗಳು ಯಥಾವತ್ತಾಗಿ ಮುಂದುವರೆಯುತ್ತದೆ ಯಾವುದೇ ಬದಲಾವಣೆಗಳು ಇರುವುದಿಲ್ಲ.

-: ವೇಳಾಪಟ್ಟಿ :-

ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು/ ತತ್ಸಮಾನ ವೃಂದದ ಹುದ್ದೆಗಳಿಗೆ

ಅಧಿಕೃತ ಜ್ಞಾಪನ ಹೊರಡಿಸುವುದು. 1 [ಶಾಲಾಶಿಕ್ಷಣ ಇಲಾಖೆಯ ಅಧಿಕೃತ ಇಲಾಖಾ ವೆಬ್‌ಸೈಟ್‌ನಲ್ಲಿ] ಈಗಾಗಲೇ ದಿನಾಂಕ: 12/05/2025 ರಂದು ಅಧಿಸೂಚನೆ ಹೊರಡಿಸಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ 2 ಸಲ್ಲಿಸುವುದು [ವಿದ್ಯಾರ್ಹತೆ ಹಾಗೂ ವೈಟೇಜ್‌ಗೆ ಸಂಬಂದಿಸಿದ ಲಗತ್ತುಗಳನ್ನು ಸಹ ಅಭ್ಯರ್ಥಿಗಳೇ ಆನ್‌ಲೈನ್‌ನಲ್ಲಿಯೇ ಅಪ್ ಲೋಡ್ ಮಾಡುವುದು].

ಅಭ್ಯರ್ಥಿಗಳು 12/05/2025 ರಿಂದ 29/05/2025 ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ 3 ಸೇವಾನುಭವ ಮತ್ತು ಹೆಚ್ಚಿನ ವಿದ್ಯಾರ್ಹತೆಗೆ ನಿಗಧಿಪಡಿಸಿರುವ ಅಂಕಗಳನ್ನು ಮತ್ತು ಅರ್ಹತೆಯನ್ನು ಪರಿಶೀಲಿಸಿ ಅನುಮೋದನೆ ನೀಡುವುದು.

prajaprabhat

Recent Posts

ವಿದ್ಯುತ್ ಕಂಬ ಬಿದ್ದು ಲೈನ್‌ಮ್ಯಾನ್ ಮೃತ ಪ್ರಕರಣ: ಆರೋಪಿಗೆ ಶಿಕ್ಷೆ

ಕೊಪ್ಪಳ.07.ಆಗಸ್ಟ್.25: ಜೆ.ಸಿ.ಬಿ ಕ್ರೆನ್ ಸರಪಳಿ ಜಾರಿ ತೆಲೆ ಮೇಲೆ ಬಿದ್ದಿರುವುದರಿಂದ ಲೈನ್‌ಮ್ಯಾನ್ ಮೃತ ಪಟ್ಟಿರುವ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಪ್ರಕಟವಾಗಿದೆ.…

5 hours ago

ಗೃಹಲಕ್ಷ್ಮೀ 3ನೇ ಕಂತಿನ ಹಣ ಬಿಡುಗಡೆ- ರೆಡ್ಡಿ ಶ್ರೀ ನಿವಾಸ

ಕೊಪ್ಪಳ.07.ಆಗಸ್ಟ್.25: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ…

6 hours ago

ಕಮ್ಯುನಿಟಿ ಮೊಬಿಲೈಜರ್ ಹುದ್ದೆಗೆ ಅರ್ಜಿ ಆಹ್ವಾನ

ರಾಯಚೂರು.07.ಆಗಸ್ಟ್.25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳಲ್ಲಿ 2 ವರ್ಷಗಳ ಅವಧಿಗೆ ಸ್ವಚ್ಛ ಭಾರತ್ ಮಿಷನ್ 2.0ನ ಐಇಸಿ…

6 hours ago

ಡಿ.ದೇವರಾಜು ಅರಸು ಜಯಂತಿ: ಅರ್ಥಪೂರ್ಣ ಆಚರಣೆಗೆ ಸೂಚನೆ

ರಾಯಚೂರು.07.ಆಗಸ್ಟ್.25: ಜಿಲ್ಲೆಯಲ್ಲಿ ಆಗಸ್ಟ್ 20 ರಂದು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು…

6 hours ago

ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಕೆಪಿಎಂಇ, ಪಿಸಿಪಿಎನ್‌ಡಿಟಿ ಕಾಯ್ದೆಗಳ ಮಾರ್ಗಸೂಚಿ ಪಾಲನೆಯಾಗಲಿ

ರಾಯಚೂರು.07.ಆಗಸ್ಟ್ .25: ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಕೆಪಿಎಂಇ ಕಾಯ್ದೆಯಡಿ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಬೇಕು. ಕೆಪಿಎಂಇ ಕಾಯ್ದೆ…

6 hours ago

ಪವರ್ ಸ್ಟಾರ್ ರಾಯಚೂರಿನಲ್ಲಿ ಸೇನಾ<br>ನೇಮಕಾತಿಯ ಅಗ್ನಿಪರೀಕ್ಷೆ: ಇಂದಿನಿoದ ಆರಂಭ.

ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರ ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ ಶಿಸ್ತಿನ ಸಿಪಾಯಿಗಳ ಶಾಲೆಯಂತಾದ ರಾಯಚೂರಿನ ಕೃಷಿ ವಿಜ್ಞಾನಿಗಳ…

6 hours ago