ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಯಭಾರವಿಲ್ಲದಿರುವ ಕಾಲೇಜುಗಳಿಂದ ಕಾರ್ಯಭಾರವಿರುವ ಕಾಲೇಜುಗಳಿಗೆ ಹುದ್ದೆ ಸಹಿತ ಸ್ಥಳಾಂತರ. ಸರ್ಕಾರ ಆದೇಶ

ಬೆಂಗಳೂರು.05.ಜೂನ್.25:- ಉನ್ನತ ಶಿಕ್ಷಣ ಇಲಾಖೆ. ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಅಗತ್ಯ ಕಾರ್ಯಭಾರವಿಲ್ಲದ ಬೋಧಕರನ್ನು ಕಾರ್ಯಭಾರವಿರುವ ಕಾಲೇಜುಗಳಿಗೆ ಹುದ್ದೆ ಸಹಿತ ಸ್ಥಳಾಂತರಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಕಾಲೇಜು ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಕಾರ್ಯಭಾರವಿಲ್ಲದಿರುವ ಬೋಧಕರ ಹುದ್ದೆಗಳನ್ನು ಕಾರ್ಯಭಾರಕ್ಕನುಗುಣವಾಗಿ ಅಗತ್ಯವಿರುವ ಕಾಲೇಜುಗಳಿಗೆ ಸ್ಥಳಾಂತರಿಸಲು ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆಯನ್ನು ನಿಯಂತ್ರಿಸುವ ಸಲುವಾಗಿ ರೂಪಿಸಿರುವ ವರ್ಗಾವಣೆ ನಿಯಮಗಳ ನಿಯಮ-3 ರಲ್ಲಿ ಕಡ್ಡಾಯಗೊಳಿಸಲಾಗಿದೆ.

ಸದರಿ ವರ್ಗಾವಣೆ ನಿಯಮಗಳು-2021ರ ನಿಯಮ 3ರ ಉದ್ಘತಭಾಗವು ಈ ಕೆಳಕಂಡಂತಿದೆ.

Shifting of Posts. (1) If sufficient workload is not available for teaching staff in any Government First Grade College in any subject, such number of posts as determined as surplus may be shifted to any other College within the same zone where the workload is sufficient for shifting of post by the competent authority:

Provided that, if a Government First Grade College with sufficient workload in that subject is not available in the same zone, such number of posts in that subject shall be shifted to any Government First Grade College having sufficient workload in any other, as far as possible in neighbouring or nearby zone by the Competent Authority.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ EMIS ತಂತ್ರಾಂಶದಲ್ಲಿ ದಾಖಲಿತ 2024-25ನೇ ಶೈಕ್ಷಣಿಕ ಸಾಲಿನ ಬೋಧನ ಕಾರ್ಯಭಾರವನ್ನು ಪರಿಶೀಲಿಸಿ, ಕಾರ್ಯಭಾರವಿಲ್ಲದ ಬೋಧಕರ ಪಟ್ಟಿಯನ್ನು ಈ ಸುತ್ತೋಲೆಗೆ ಅನುಬಂಧಿಸಲಾಗಿದೆ.

ಅನುಬಂಧದಲ್ಲಿನ ಪಟ್ಟಿಗೆ ಸಂಬಂಧಿಸಿದಂತೆ ಕಾರ್ಯಭಾರ ಮತ್ತು ಬೋಧಕರ ಸೇವಾ ವಿವರಗಳಲ್ಲಿ ವ್ಯತ್ಯಾಸಗಳಿದ್ದಲ್ಲಿ ಅಗತ್ಯ ಮಾಹಿತಿಗಳೊಂದಿಗೆ ದಿನಾಂಕ: 05.06.2025 ರ ಒಳಗಾಗಿ deetransfer2025@gmail.com ವಿಳಾಸಕ್ಕೆ ಇ-ಮೇಲ್ ಮೂಲಕ ಸಲ್ಲಿಸುವಂತೆ ಸೂಚಿಸಿದೆ. ಭೌತಿಕವಾಗಿ ಸಲ್ಲಿಸುವ ಹಾಗೂ ಕೊನೆಯ ದಿನಾಂಕದ ನಂತರ ಸಲ್ಲಿಸುವ ಮತ್ತು ಅಪೂರ್ಣ ಮಾಹಿತಿಯನ್ನು ಪರಿಗಣಿಸಲಾಗುವುದಿಲ್ಲ.

ಕಾರ್ಯಭಾರವಿಲ್ಲದ ಬೋಧಕರುಗಳು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ (ಲೀನ್) ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನು ಪರಿಗಣಿಸಿ ಸದರಿ ಕಾಲೇಜಿನಲ್ಲಿನ ಸೇವಾ ಹಿರಿತನದ ಆಧಾರದಲ್ಲಿ ವಿಷಯವಾರು ಆದ್ಯತಾ ಪಟ್ಟಿಯನ್ನು ತಯಾರಿಸಿ ಕಾರ್ಯಭಾರವಿರುವ ಕಾಲೇಜಿಗೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ.

ವರ್ಗಾವಣೆ ನಿಯಮ 03 ರಲ್ಲಿ ತಿಳಿಸಿರುವಂತೆ ಹುದ್ದೆ ಸ್ಥಳಾಂತರವನ್ನು ಕಾರ್ಯಭಾರವಿರುವ ಅದೇ ವಲಯದ ಕಾಲೇಜಿಗೆ ಮಾಡಲಾಗುವುದು. ಅದೇ ವಲಯದ ಕಾಲೇಜುಗಳಲ್ಲಿ ಕಾರ್ಯಭಾರವಿಲ್ಲದಿದ್ದ ಪಕ್ಷದಲ್ಲಿ ಮಾತ್ರ ಅನ್ಯ ವಲಯದ ಕಾರ್ಯಭಾರವಿರುವ ಕಾಲೇಜಿಗೆ ಸ್ಥಳಾಂತರಿಸಲು ಅವಕಾಶಗಳನ್ನು ಕಲ್ಪಿಸಲಾಗಿರುತ್ತದೆ.

ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದ ಹಾಗೂ ಉಳಿಕೆ ರಾಜ್ಯವೃಂದಕ್ಕೆ ಒಳಪಡುವ ಬೋಧಕರನ್ನು ಆಯಾ ಪ್ರದೇಶದ ಕಾಲೇಜುಗಳಿಗೆ ಸ್ಥಳಾಂತರಿಸಲಾಗುವುದು.

prajaprabhat

Recent Posts

ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವ ಜೂನ್ 10ರಂದು ನಡೆಯಲಿದೆ.

ಬಾಗಲಕೋಟೆ.07.ಜೂನ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬಾಗಲಕೋಟ  ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಇದೇ ತಿಂಗಳು ಜೂನ್ 10 ರಂದು ಬೆಳಿಗ್ಗೆ…

2 hours ago

ಫ್ರೆಂಚ್ ಓಪನ್ ಟೆನಿಸ್: ಮಹಿಳಾ ಸಿಂಗಲ್ಸ್ ಪ್ರಶಸ್ತಿ ಪಂದ್ಯದಲ್ಲಿ ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ವಿಶ್ವದ ನಂ. 2 ಆಟಗಾರ್ತಿ ಕೊಕೊ ಗೌಫ್ ಅವರನ್ನು ಎದುರಿಸಲಿದ್ದಾರೆ.

ಫ್ರೆಂಚ್ ಓಪನ್ ಟೆನಿಸ್‌ನಲ್ಲಿ, ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ಇಂದು ಸಂಜೆ ನಡೆಯಲಿರುವ ಬಹುನಿರೀಕ್ಷಿತ ಮಹಿಳಾ ಸಿಂಗಲ್ಸ್…

3 hours ago

ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಬ್ರಿಕ್ಸ್ ರಾಷ್ಟ್ರಗಳು, ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ನೀತಿಯನ್ನು ಬೆಂಬಲಿಸಿವೆ.

"ಭಾರತವು ಯಾವಾಗಲೂ ಕಾನೂನಿನ ನಿಯಮ, ಜಾಗತಿಕ ಸಹಕಾರ ಮತ್ತು ವಿಶ್ವ ವೇದಿಕೆಯಲ್ಲಿ ಸಂವಾದದ ಅಗತ್ಯವನ್ನು ಬೆಂಬಲಿಸಿದೆ" ಎಂದು ಲೋಕಸಭಾ ಸ್ಪೀಕರ್…

3 hours ago

ಭಾರತದ ಮೇಲಿನ ಯಾವುದೇ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು, ಭಯೋತ್ಪಾದಕರು ಮತ್ತು ಅಪರಾಧಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ: ಪ್ರಧಾನಿ ಮೋದಿ

ಭಾರತದ ಮೇಲಿನ ಯಾವುದೇ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು ಮತ್ತು ಭಯೋತ್ಪಾದಕರು ಮತ್ತು ಅವರ ಅಪರಾಧಿಗಳ ನಡುವೆ ಯಾವುದೇ ವ್ಯತ್ಯಾಸವನ್ನು…

4 hours ago

ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಹಿಂದಿನ ಅಧಿಕಾರಿಗಳನ್ನು ಅಮಿತ್ ಶಾ ಭೇಟಿಯಾಗಿ ಐತಿಹಾಸಿಕ ಯಶಸ್ಸನ್ನು ಶ್ಲಾಘಿಸಿದರು.

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿಗಳನ್ನು ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ…

4 hours ago

ತೈವಾನ್ ಓಪನ್‌ನ ಮೊದಲ ದಿನದಂದು ಭಾರತಕ್ಕೆ 6 ಚಿನ್ನದ ಪದಕಗಳು

ಹೊಸ ದೆಹಲಿ.07.ಜೂನ್.25:-ಚೈನೀಸ್ ತೈಪೆಯಲ್ಲಿ ನಡೆದ ತೈವಾನ್ ಅಥ್ಲೆಟಿಕ್ಸ್ ಓಪನ್ 2025 ರ ಆರಂಭಿಕ ದಿನದಂದು ಭಾರತ ಆರು ಚಿನ್ನದ ಪದಕಗಳನ್ನು…

4 hours ago