ಚಳ್ಳಕೆರೆ.27.ಫೆ.26:- ಚಳ್ಳಕೆರೆ ತಾಲೂಕಿನ ಹೆಚ್ ಪಿ ಪಿಸಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗದ ಸಮಾಜಶಾಸ್ತ್ರ ದಲ್ಲಿ ಟಿ. ಭಾನುಪ್ರಿಯ ಎಂಬುವರು 2 ನೇ ರ್ಯಾಂಕ್ ಪಡೆದು ನಮ್ ಮಹಾವಿದ್ಯಾಲಯಕೆ ಕೀರ್ತಿ ತಂದುಕೊಟ್ಟಿದ್ದಾರೆ.
ಚಳ್ಳಕೆರೆ ನಗರದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಜಿ ಎಸ್ ಮಂಜುನಾಥ್ ಅವರು,ನಮ್ಮ ಕಾಲೇಜಿನ ವಿದ್ಯಾರ್ಥಿನಿ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕರ ಉತ್ತಮ ಮಾರ್ಗದರ್ಶನ ಪಡೆದು “ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ” 2ನೇ ರ್ಯಾಂಕ್ ಪಡೆದುಕೊಂಡಿರುವುದು ಸಂತಸ ತಂದಿದೆ.
ಕಾಲೇಜಿಗೆ ಮೊದಲ ರ್ಯಾಂಕ್ ಬರಬೇಕಿತ್ತು, ಆದರೆ, ಒಂದೇ ಒಂದು ಅಂಕ ಕಡಿಮೆಯಾದ್ದರಿಂದ ಎರಡನೇ ರ್ಯಾಂಕ್ ಪಡೆದುಕೊಂಡಿದ್ದಾರೆ ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಭಾನುಪ್ರಿಯರವರು ಶೈಕ್ಷಣಿಕ ಅವಧಿಯಲ್ಲಿ ಉತ್ತಮವಾಗಿ ವ್ಯಾಸಂಗ ನಡೆಸಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಅವರ ಇಚ್ಛೆಯಂತೆ ಪಿ ಎಚ್ ಡಿ ಪದವಿ ಪಡೆದು ಉಪನ್ಯಾಸಕರಾಗಬೇಕುಎಂಬ ಆಸೆ ಈಡೇರಲಿ.
ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತಮ ಸ್ಥಾನಕ್ಕೇರಲಿ ಎ೦ದು ಆಶಿಸುತ್ತೇನೆ ಎಂದರು. ಕಾಲೇಜಿನಲ್ಲಿ ಅತ್ಯಂತ ಹಿಂದುಳಿದ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತಮ ವಾತಾವರಣವಿದೆ ಈ ಹಿಂದೆಯೂ ಕಾಲೇಜಿಗೆ ಉತ್ತಮ ರ್ಯಾಂಕ್‌ಗಳು ಬಂದಿದ್ದು, ಮುಂದಿನ ದಿನಗಳಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಪಟ್ಟಂತೆ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ.
ಹಂಪಿ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಹಂಪಿ ವಿಶ್ವವಿದ್ಯಾನಿಲಯದ ಕುಲಪತಿಗಳು ಉತ್ಸಾಹ ತೋರಿದು, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ ಕೇಂದ್ರ ಸ್ಥಾಪನೆಗೆ ಕಾರ್ಯ ಆರಂಭಗೊಂಡಿದ್ದು, ಮುಂದಿನ ಭವಿಷ್ಯದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಉತ್ತಮವಾದ ಶಿಕ್ಷಣ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ದೇವಪ್ಪ,ಮಾತನಾಡಿ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಾಣಿಜ್ಯ ಹಾಗೂ ಕಲಾ ವಿಭಾಗಗಳನ್ನುಹೊಂದಿದ್ದು ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನಾರ್ಜನೆ ದೃಷ್ಟಿಯಿಂದ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ನೀಡುತ್ತಿದ್ದು, ಅತ್ಯುತ್ತಮವಾದ ಗ್ರಂಥಾಲಯ ಹಾಗೂ ಕೊಠಡಿಗಳ ವ್ಯವಸ್ಥೆ ಇದ್ದು, ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ಎಂದರು.
ವಿದ್ಯಾರ್ಥಿನಿ ಭಾನುಪ್ರಿಯ ಮಾತನಾಡಿ ನನಗೆ ದ್ವಿತೀಯ ರ್ಯಾಂಕ್ ಬಂದಿರುವುದು ಸಂತಸವಾಗಿದೆ. ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಜೆಎಸ್ ಮಂಜುನಾಥ್ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ದೇವಪ್ಪ, ಸೇರಿದಂತೆ ಉಪನ್ಯಾಸಕ ವರ್ಗದ ಪ್ರೋತ್ಸಾಹ ಮತ್ತು ಕುಟುಂಬ ವರ್ಗದ ಬೆಂಬಲದಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಕಾಲೇಜಿನಲ್ಲಿನ ಅತ್ಯುತ್ತಮ ಬೋಧನೆ ಗ್ರಂಥಾಲಯದಲ್ಲಿ ದೊರೆತ ಉತ್ತಮ ಪುಸ್ತಕಗಳ ನೆರವಿನಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು.
ಸಾಧನೆ ಮಾಡಲು ಗುರಿ ಮತ್ತು ಸತತ ಪರಿಶ್ರಮವಿದ್ದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಪಿ ಹೆಚ್ ಡಿ ಪದವಿ ಪಡೆದು ಉಪನ್ಯಾಸಕಿ ಆಗುವುದು ಹಾಗೂ ಯುಪಿಎಸ್ ಸಿ ಹಾಗೂ ಕೆಪಿಎಸ್ ಸಿ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ನಾಗರೀಕ ಸೇವೆ ಸಲ್ಲಿಸುವುದು ನನ್ನ ಕನಸಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಕಾಲೇಜು ವತಿಯಿಂದ ರ್ಯಾಂಕ್ ಪಡೆದ ಟಿ. ಭಾನುಪ್ರಿಯ ಅವರನ್ನು ಸನ್ಮಾನಿಸಲಾಯಿತು. ಸಂದರ್ಭದಲ್ಲಿ,ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಚಿತ್ತಯ್ಯ, ಗ್ರಂಥಾಲಯ ವಿಭಾಗದ ಮುಖ್ಯಸ್ಥ ಪಾಪಣ್ಣ ಸೇರಿದಂತೆ ಕಾಲೇಜಿನ ಉಪನ್ಯಾಸಕ ವರ್ಗ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಭಾನುಪ್ರಿಯಾ ಎಂ. ಎ ಸಮಾಜಶಾಸ್ತ್ರ ವಿಭಾಗ್ದಲ್ಲಿ 2ನೇ ರ್ಯಾಂಕ್ ಪಡೆದು ನಮ್ ಮಹಾವಿದ್ಯಾಲಯದ್ ಕೀರ್ತಿ ತಂದುಕೊಟ್ಟಿದ್ದಾರೆ.
ಹೊಸ ದೆಹಲಿ.12.ಆಗಸ್ಟ್.25:- ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆ ಮತ್ತು ರಾಜ್ಯಸಭೆ ಹಲವು…
ಬೆಂಗಳೂರು.12.ಆಗಸ್ಟ್.25: ರಾಜ್ಯಾದ್ಯಂತ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ "ಅರಣ್ಯ ವೀಕ್ಷಕ" ಹುದ್ದೆಗಳ ಶೀಘ್ರ ನೇಮಕ ಮಾಡಲಾಗುವುದೆಂದು ಅರಣ್ಯ ಸಚಿವ ಈಶ್ವರ್…
2025-26ನೇ ಸಾಲಿಗೆ ಧರ್ಮಪುರ ದೇವರಕೊಟ್ಟ ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗ ವಸತಿ ಪದವಿಪೂರ್ವ ಕಾಲೇಜು ಮಂಜೂರಾಗಿದ್ದು, ಖಾಲಿ ಇರುವ ಹುದ್ದೆಗಳು…
ರಾಯಚೂರು.12.ಆಗಸ್ಟ್.25:- ಅಥಿತಿ ಉಪನ್ಯಾಸಕರ ಆಯ್ಕೆಗೆ ಅನಧಿಕೃತ ಪ್ರಮಾಣಪತ್ರ ಹೊಂದಿರುವ ಅಭ್ಯಾರ್ಥಿಗಳ ತಡಿಯುವ ಕುರಿತು. ಮಾನ್ಯರೇ, ಈ ಮೇಲ್ಕಾಣಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ…
ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಿಶೇಷ ಚೇತನ ಬದುಕು ಸ್ಥಿತಿ ? ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿರುವ…
ರಾಜ್ಯದ ಯುವಕರಿಂದ ಶುಭ ಸುಧಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್…