ಸರ್ಕಾರಿ ಪ್ರಥಮ ದರ್ಜೆ ಕಾಲೇಜು: 9 ವರ್ಷ ಕಳೆದರೂ ವಿಧ್ಯಾರ್ಥಿಗಳಿಗೆ ಭಾಗ್ಯ ಇಲ್ಲಾ.!

ಗಂಗಾವತಿ.19.ಫೆ.25:- ಗಂಗವತಿ ತಾಲ್ಲೂಕಿನ Govt First Grade College” “ಶ್ರೀಕೊಲ್ಲಿ “ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ” ಹಿಂಬದಿ ನಿರ್ಮಿಸಿರುವ ಕಾಲೇಜಿನ ವಸತಿ ನಿಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡು ಒಂಬತ್ತು (9) ವರ್ಷಗಳಾಗಿವೆ ಅದರೆ ಇದಕ್ಕೆ ಯಾರು ದಿಕೆಲ್ಲ ಈ ರೀತಿ ಕಾಣಿ ಬರುತಿದೆ.

ಇದಕ್ಕೆ ಕಾರಣ ಪ್ರಾಚಾರ್ಯರ,ಮತ್ತು  ಕ್ಷೇತ್ರದ ಶಾಸಕರ ನಿರ್ಲಕ್ಷ್ಯದಿಂದ ಉದ್ಘಾಟನೆಯಾಗದೆ ಹಾಳು ಬಿದ್ದಿದೆ.

ಎಸ್.ಕೆ.ಎನ್.ಜಿ ಗಂಗಾವತಿ ತಾಲ್ಲೂಕಿನ ಪ್ರತಿಷ್ಠಿತ ಸರ್ಕಾರಿ ಕಾಲೇಜಾಗಿದ್ದು ಇಲ್ಲಿ ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಇದ್ದಾರೆ. ಸದ್ಯ 2,800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪೂರೈಸುತ್ತಿದ್ದು ವಸತಿ ನಿಲಯದ ಆರಂಭಕ್ಕಾಗಿ ಕಾಯುತ್ತಿದ್ದಾರೆ.

₹1.99 ಕೋಟಿ ವೆಚ್ಚ: ಎಸ್.ಕೆ.ಎನ್.ಜಿ ಕಾಲೇಜಿನ ಹಿಂಬದಿ ವಸತಿ ನಿಲಯ ನಿರ್ಮಾಣದ ಜವಾಬ್ದಾರಿಯನ್ನು ಉನ್ನತ ಶಿಕ್ಷಣ ಇಲಾಖೆಯು ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್) ನೀಡಿತ್ತು.

ಯೋಜನೆ ಪ್ರಕಾರ 2015-16ರಲ್ಲಿ ಕಾಮಗಾರಿ ಆರಂಭವಾಗಿ ಮೊದಲ ಹಂತದಲ್ಲಿ ₹98 ಲಕ್ಷದ ವೆಚ್ಚದಲ್ಲಿ ಕೆಳಮಹಡಿ, 2ನೇ ಹಂತದಲ್ಲಿ ₹99 ಲಕ್ಷದ ವೆಚ್ಚದಲ್ಲಿ ಮೇಲ್ಮಹಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ.

ದೂಳು ಹಿಡಿದ ಸ್ಥಿತಿಯಲ್ಲಿ ವಸತಿ ನಿಲಯ: ವಸತಿ ನಿಲಯ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಕಾಲೇಜಿಗೆ ಹಸ್ತಾಂತರವಾಗದ ಕಾರಣ ನಿಲಯದ ಸುತ್ತ ಕಸ, ಮುಂಭಾಗದಲ್ಲಿ ಗಿಡಗಳು ಬೆಳೆದು ಅಸ್ವಚ್ಚತೆಯಿಂದ ಕೂಡಿದೆ. ಸುಸಜ್ಜಿತ ಕೊಠಡಿ, ಕಿಚನ್, ಡೈನಿಂಗ್ ಹಾಲ್ ಹೊಂದಿರುವ ನಿಲಯ ದೂಳು ಹಿಡಿದ ಸ್ಥಿತಿಯಲ್ಲಿದೆ. ಗೊಡೆಯ ಬಣ್ಣವೆಲ್ಲ ಬದಲಾಗಿ ಕಟ್ಟಡ ಕಳೆಗುಂದಿದೆ.

ಹಸ್ತಾಂತರಕ್ಕೆ ನಿರ್ಲಕ್ಷ್ಯ: 2015-16ರಲ್ಲಿ ವಸತಿ ನಿಲಯ ನಿರ್ಮಾಣ ಕಾಮಗಾರಿ ಆರಂಭವಾಗಿ 2020-21ರ ಆಸುಪಾಸಿನಲ್ಲಿ ಪೂರ್ಣಗೊಂಡಿದೆ. ಕಟ್ಟಡ ಕಾಮಗಾರಿ ಆರಂಭದಿಂದ 2025ರವರೆಗೆ 4 ಜನ ಪ್ರಾಚಾರ್ಯರು ಬದಲಾಗಿದ್ದು ವಸತಿ ನಿಲಯ ಕಟ್ಟಡ ಹಸ್ತಾಂತರಕ್ಕೆ ಯಾರೂ ಇಚ್ಛಾಶಕ್ತಿ ತೋರಿಲ್ಲ. ಹಸ್ತಾಂತರಿಸುವ ಬಗ್ಗೆ ಅರ್ಜಿಗಳನ್ನು ಮಾತ್ರ ಬರೆಯಲಾಗುತ್ತಿದೆ.

ಕಾಲೇಜು ಅಭಿವೃದ್ಧಿಗಿಲ್ಲ ಸಿ.ಡಿ.ಸಿ

‘ಎಸ್.ಕೆ.ಎನ್.ಜಿ ಕಾಲೇಜಿನ ಅಭಿವೃದ್ಧಿಗೆ ಶಾಸಕ ಜಿ.ಜನಾರ್ದನರೆಡ್ಡಿ ಅಧ್ಯಕ್ಷತೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ರಚನೆ ಆಗಬೇಕಿತ್ತು. ಇವರ ಅವಧಿಯಲ್ಲಿ ಇಬ್ಬರು ಪ್ರಾಚಾರ್ಯರು ಬದಲಾಗಿ ಮೂರನೆಯವರು ಬಂದಿದ್ದಾರೆ. ಈ ವರೆಗೆ ಶಾಸಕರಿಗೆ ಸಿ.ಡಿ.ಸಿ ರಚಿಸಲು ಆಗುತ್ತಿಲ್ಲ. ಇದರಿಂದ ಕಾಲೇಜು ಅಭಿವೃದ್ದಿಗೆ ಹಿನ್ನಡೆಯಾಗುತ್ತಿದೆ’ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

ಆನಂದ, ಎಇಇ ಕೆಆರ್‌ಐಡಿಎಲ್ ಗಂಗಾವತಿವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ ಫೈಲ್‌ನೊಂದಿದೆ ಕಾಲೇಜಿಗೆ ಭೇಟಿ ನೀಡಿ ಹಸ್ತಾಂತರ ವಿಳಂಬದ ಕುರಿತ ಪರಿಶೀಲಿಸಿ ಸರಿಪಡಿಸಿ ಹಸ್ತಾಂತರ ಮಾಡಿಸುವ ಕೆಲಸ ಮಾಡುತ್ತೇನೆ.ಡಾ.ಶೃತಿ, ತಾಲ್ಲೂಕು ಅಧಿಕಾರಿ ಸಮಾಜ ಕಲ್ಯಾಣ ಇಲಾಖೆ ಗಂಗಾವತಿವಸತಿ ನಿಲಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅದು ಕಾಲೇಜಿನ ವಸತಿ ನಿಲಯ.

ಸಮಾಜ ಕಲ್ಯಾಣ ಇಲಾಖೆಗೆ ನೀಡುವ ಬಗ್ಗೆ ಕಾಲೇಜಿಗೆ ಈ ಹಿಂದೆ ಪತ್ರ ಬರೆಯಲಾಗಿತ್ತು.

ನೀಡಲು ಬರುವುದಿಲ್ಲ ಎಂದು ಹಿಂಬರಹವಾಗಿ ಪತ್ರ ಬಂದಿದೆ.ಮುಮ್ತಾಜ್ ಬೇಗಂ, ಪ್ರಾಚಾರ್ಚೆ ಎಸ್.ಕೆ.ಎನ್.ಜಿ ಕಾಲೇಜು ಗಂಗಾವತಿನಾನು ಪ್ರಾಚಾರ್ಯೆಯಾಗಿ ಬಂದ ನಂತರ ವಸತಿ ನಿಲಯ ಹಸ್ತಾಂತರಿಸುವ ಕುರಿತು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದೇನೆ.

ಈ ಹಿಂದಿನ ಪ್ರಾಚಾರ್ಯರು ವಸತಿ ನಿಲಯ ಹಸ್ತಾಂತರಕ್ಕೆ ಏನೆಲ್ಲ ಮಾಡಿದ್ದಾರೋ ನನಗೆ ಮಾಹಿತಿ ಇಲ್ಲ.

ಗಂಗಾವತಿ ತಾಲ್ಲೂಕಿನ ಎಸ್.ಕೆ.ಎನ್.ಜಿ ಕಾಲೇಜಿನ ಹಿಂಬದಿ ನಿರ್ಮಿಸಿದ ಕಾಲೇಜಿನ ವಸತಿ ನಿಲಯ ಕಟ್ಟಡ ಉದ್ಘಾಟನಾ ಭಾಗ್ಯ ಕಾಣದೆ ಹಾಳು ಬಿದ್ದಿರುವುದು

ರಾಜ್ಯದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ ಆದ್ 9ವರ್ಷ ಕಳೆದರೂ ಕಾಲೇಜಿಗೆ ಉದ್ಘಾಟನಾ ಭಾಗ್ಯ ಇಲ್ಲಾ

prajaprabhat

Recent Posts

ರಾಯಚೂರು | ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ

ರಾಯಚೂರು.13.ಆಗಸ್ಟ.25:- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿರವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು…

6 minutes ago

ರಾಯಚೂರ ಜಿಲ್ಲೆಗೆ ರಸಗೊಬ್ಬರ ಬರುತ್ತಿದೆ: ಪ್ರಕಾಶ ಚವ್ಹಾಣ್

ರಾಯಚೂರು.13.ಆಗಸ್ಟ್.25: 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ ರಸಗೊಬ್ಬರ ಜಿಲ್ಲೆಗೆ ಬರುತ್ತಿದ್ದು, ರಸಗೊಬ್ಬರದ ಕೊರತೆ ಬಗ್ಗೆ…

14 minutes ago

ಅರೋಲಿಯಲ್ಲಿ ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನ

ರಾಯಚೂರು.13.ಆಗಸ್ಟ್.25: ಸಮಾಜದ ಪ್ರತಿಯೊಬ್ಬರು ಮಾದಕ ವಸ್ತುಗಳ ದುಷ್ಪರಿಣಾಮ ಅರಿತು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅರೋಲಿ…

18 minutes ago

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ

ಅಂಗನವಾಡಿಗಳಲ್ಲಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿ: ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ ಸೂಚನೆ ರಾಯಚೂರು.13.ಆಗಸ್ಟ್.25: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕಾಲ-ಕಾಲಕ್ಕೆ…

22 minutes ago

ಹಿಂದುಳಿದ ವರ್ಗಗಳ ಮಾಧ್ಯಮ ಮಾನ್ಯತೆ ಹೊಂದಿದ ಪತ್ರಕರ್ತರಿಗೆ ಮೀಡಿಯಾ ಕಿಟ್‌ಗೆ ಅರ್ಜಿ ಆಹ್ವಾನ

ಕೊಪ್ಪಳ.13.ಆಗಸ್ಟ್.25 ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ…

30 minutes ago

ಆ. 19 ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಕೊಪ್ಪಳ.13.ಆಗಸ್ಟ್.25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 19 ರಂದು ಬೆಳಿಗ್ಗೆ 10…

35 minutes ago