ಸರ್ಕಾರಿ ಪದವಿ ಕಾಲೇಜುಗಳ 2024-25 ಶೈಕ್ಷಣಿಕ ವರ್ಷಕ್ಕೆ ಶುಲ್ಕ ಹೆಚ್ಚಳ.

ಬೆಂಗಳೂರು.20.ಮೇ.25:- ರಾಜ್ಯ ಉನ್ನತ ಶಿಕ್ಷಣ ದಿನದಿಂದ ದಿನಕ್ಕೆ ಬಿಎ, ಬಿಕಾಂ, ಬಿಬಿಎ, ಬಿಬಿಎಂ, ಬಿಎಸ್‌ಸಿ, ಎಲ್‌ಎಲ್‌ಬಿ, ಈ ಎಲ್ಲ ಪದವಿ ಮತ್ತು ಕಾನೂನು ಕೋರ್ಸ್‌ಗಳ ವರ್ಷಾವಾರದ ಶುಲ್ಕದಲ್ಲಿ ಶೇಕಡಾ ಹೆಚ್ಚು ಮಾಡಿದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಸ್ತುತ ವರ್ಷದಿಂದ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಳದ ಬಿಸಿ ತಟ್ಟಿದೆ. ಸರ್ಕಾರದ ಹೊಸ ಆದೇಶದ ಪ್ರಕಾರ, ರಾಜ್ಯದ ಎಲ್ಲಾ ಸರ್ಕಾರಿ ಪದವಿ ಮತ್ತು ಕಾನೂನು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ವಸೂಲಾಗುವ ವಾರ್ಷಿಕ ಶುಲ್ಕದಲ್ಲಿ ಶೇಕಡಾ 5ರಷ್ಟು ಹೆಚ್ಚಳ ಮಾಡಲಾಗಿದೆ.

ಈ ನಿಟ್ಟಿನಲ್ಲಿ, ಪ್ರಾಂಶುಪಾಲರು ತಮ್ಮ ಮಟ್ಟದಲ್ಲಿ ಈ ಹೆಚ್ಚಳವನ್ನು ಅನುಷ್ಠಾನಗೊಳಿಸಬೇಕು ಎಂಬ ಸೂಚನೆಯು ಸುತ್ತೋಲೆಯ ಮೂಲಕ ನೀಡಲಾಗಿದೆ.

ಶುಲ್ಕ ಹೆಚ್ಚಿಸಿದ್ಯಾಕೆ..?

ಇನ್ನು ಈಗ ಹೇಳಲಾಗಿರುವ ಹೆಚ್ಚಿನ ಶುಲ್ಕವನ್ನು ವಿದ್ಯಾರ್ಥಿಗಳು ಸರ್ಕಾರಕ್ಕೆ ಸಲ್ಲಿಸುವ ಅಗತ್ಯವಿಲ್ಲ ಎನ್ನಲಾಗಿದೆ. ಇದರ ಬದಲು ಈ ಹಣವನ್ನು ಕಾಲೇಜು ಖಾತೆಯಲ್ಲಿ ಇರಿಸಿ, ಅಲ್ಲಿಂದಲೇ ಕಾಲೇಜಿನ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಲು ಅನುಮತಿ ನೀಡಲಾಗಿದೆ. ಈ ರೀತಿಯ ವ್ಯವಹಾರವು ಸ್ಥಳೀಯ ಮಟ್ಟದಲ್ಲಿ ಬದಲಾಗುತ್ತಿರುವ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗಿದೆ.

ಯಾವ ಕೋರ್ಸ್‌ಗಳಿಗೆ ಇದು ಅನ್ವಯ?

ಬಿಎ, ಬಿಕಾಂ, ಬಿಬಿಎ, ಬಿಬಿಎಂ, ಬಿಎಸ್‌ಸಿ, ಎಲ್‌ಎಲ್‌ಬಿ, ಈ ಎಲ್ಲ ಪದವಿ ಮತ್ತು ಕಾನೂನು ಕೋರ್ಸ್‌ಗಳ ವರ್ಷಾವಾರದ ಶುಲ್ಕದಲ್ಲಿ ಶೇಕಡಾ 5ರಷ್ಟು ಹೆಚ್ಚಳವಾಗಲಿದೆ. ಉದಾಹರಣೆಗೆ, ಒಂದು ಕೋರ್ಸ್‌ನ ವಾರ್ಷಿಕ ಶುಲ್ಕ ₹10,000 ಆಗಿದ್ದರೆ, ಈಗ ಅದು ₹10,500 ಆಗಲಿದೆ.

ವಿದ್ಯಾಭ್ಯಾಸದ ಈ ಹೆಚ್ಚಳದ ಕುರಿತು ಕೆಲವು ವಿದ್ಯಾರ್ಥಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೂ, ಇಲಾಖೆಯ ಅಧಿಕಾರಿಗಳು ಇದರ ಸಮರ್ಥನೆ ನೀಡಿದ್ದಾರೆ. “ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಈಗಾಗಲೇ ಖಾಸಗಿ ಕಾಲೇಜುಗಳ ಹೋಲಿಕೆಯಲ್ಲಿ ಬಹಳ ಕಡಿಮೆ ಇದೆ. ಹೀಗಾಗಿ ಶೇ. 5ರಷ್ಟು ಹೆಚ್ಚಳವು ತುಂಬಾ ಹೆಚ್ಚಿನ ಭಾರವಲ್ಲ. ಬಹುತೇಕ ಕೇಸ್‌ಗಳಲ್ಲಿ ಇದು ₹500ಕ್ಕಿಂತ ಹೆಚ್ಚು ಇರುವುದಿಲ್ಲ,” ಎಂದು ಅವರು ಹೇಳಿದ್ದಾರೆ.

ಕೋವಿಡ್ ಬಳಿಕ ಮೊದಲ ಬಾರಿಗೆ ಶುಲ್ಕ ಹೆಚ್ಚಳ:

ಈ ಹೆಚ್ಚಳವು ನಾಲ್ಕು ವರ್ಷಗಳ ಬಳಿಕ ನಡೆಯುತ್ತಿದೆ. ಕೊನೆಯ ಬಾರಿಗೆ ಶುಲ್ಕ ಹೆಚ್ಚಳವಾಗಿದ್ದದ್ದು 2020ರ ಮೊದಲು, ಅಂದರೆ ಕೋವಿಡ್ ಸಾಂಕ್ರಾಮಿಕದ ಮೊದಲಿನ ಅವಧಿಯಲ್ಲಿತ್ತು. ನಂತರದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಅಗತ್ಯವಿದೆ ಎಂಬ ಆಧಾರದ ಮೇಲೆ ಯಾವುದೇ ಹೆಚ್ಚಳ ಮಾಡಲಾಗಿರಲಿಲ್ಲ.

ಅನುದಾನಿತ ವರ್ಗಕ್ಕೆ ರಿಯಾಯಿತಿ ಮುಂದುವರಿಕೆ:

ಇದು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಶುಲ್ಕ ಮರುಪಾವತಿ ವ್ಯವಸ್ಥೆ ಮುಂದುವರಿದಿದೆ. ಹೀಗಾಗಿ ಈ ವರ್ಗದ ವಿದ್ಯಾರ್ಥಿಗಳಿಗೆ ಈ ಹೆಚ್ಚಳದಿಂದ ನೇರ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಪರೀಕ್ಷೆಗೂ ಪ್ರತ್ಯೇಕ ಶುಲ್ಕ:

ಈ ವರ್ಷದಿಂದಾಗಿ ಪ್ರತಿ ವಿದ್ಯಾರ್ಥಿಯಿಂದ ₹32ರಷ್ಟು ಆರೋಗ್ಯ ತಪಾಸಣೆಗೆ ಶುಲ್ಕ ವಸೂಲಿ ಮಾಡಲಾಗುತ್ತದೆ. ಸರ್ಕಾರಿ ಆದೇಶದ ಪ್ರಕಾರ, ಕಾಲೇಜುಗಳು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಅದರ ವರದಿಯನ್ನು ಇಲಾಖೆಗೆ ಸಲ್ಲಿಸಬೇಕಾಗಿದೆ. ಆರೋಗ್ಯದ ವಿಚಾರದಲ್ಲಿ ಈ ಕ್ರಮ ಸ್ವಾಗತಾರ್ಹವಾದದು.

ವಿದ್ಯಾರ್ಥಿ ಸಂಘಟನೆಗಳ ಆಕ್ರೋಶ:

ಅಧಿಕಾರಿಗಳು ಈ ಹೆಚ್ಚಳವನ್ನು ಸಾಧಾರಣವೆಂದು ಹೇಳುತ್ತಿದ್ದರೂ, ವಿದ್ಯಾರ್ಥಿ ಸಂಘಟನೆಗಳು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಶನ್ (AIDSO) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದಂತೆ, ಈ ಹೆಚ್ಚು ಮಾಡುವ ನಿರ್ಧಾರವು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಜಟಿಲತೆ ಉಂಟುಮಾಡುತ್ತದೆ.

ವಿಶ್ವವಿದ್ಯಾಲಯಗಳಿಗೇ ಮೂಲಸೌಕರ್ಯವಿಲ್ಲ. ಬೋಧಕರ ಕೊರತೆ ಇದೆ. ನಿವೃತ್ತ ಸಿಬ್ಬಂದಿಗೆ ಪಿಂಚಣಿ ಪಾವತಿಸಲು ಹಣವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ವಿದ್ಯಾಭ್ಯಾಸ ಕ್ಷೇತ್ರದ ಬದಲಿಗೆ ವಿದ್ಯಾರ್ಥಿಗಳ ಮೇಲೇ ಹೊರೆ ಹಾಕುತ್ತಿದೆ.

ಸರ್ಕಾರಿ ಪದವಿ ಮತ್ತು ಕಾನೂನು ಕಾಲೇಜುಗಳಲ್ಲಿ ಶೇಕಡಾ 5ರಷ್ಟು ಶುಲ್ಕ ಹೆಚ್ಚಳವು ಮೊದಲ್ನೋಟಕ್ಕೆ ಕಡಿಮೆ ಅನಿಸಬಹುದಾದರೂ, ಇದರಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಮೇಲೆ ನಿರೀಕ್ಷಿತದಕ್ಕಿಂತ ಹೆಚ್ಚಿನ ಹೊರೆ ಬರುವುದು ಖಚಿತ.

ಇದಕ್ಕೆ ಸರಿಯಾದ ದಾರಿ ಏನೆಂದರೆ – ಹೆಚ್ಚಿದ ಹಣವನ್ನು ನಿಷ್ಠೆಯಿಂದ ಬಳಸಿ, ಕಾಲೇಜು ಮೂಲಸೌಕರ್ಯವನ್ನು ಬಲಪಡಿಸುವುದು. ಇಲ್ಲದಿದ್ದರೆ, ಉನ್ನತ ಶಿಕ್ಷಣವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಗುರಿಯು ದೂರವಾಗಬಹುದು.

prajaprabhat

Recent Posts

ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…

4 hours ago

ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…

5 hours ago

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

5 hours ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

5 hours ago

ರಾಯಚೂರು | ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…

6 hours ago

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

7 hours ago