ಸರ್ಕಾರಿ ಪದವಿ ಕಾಲೇಜಗೆ ಬಸ್ ಸೌಲಭ್ಯವಿಲ್ಲಾ, ವಿಧ್ಯಾರ್ಥಿಗಳ ಸಂಖ್ಯೆ ಅರ್ಧಕ್ಕೆ ಇಳಿದಿದೆ.

ಬೀದರ.04.ಜೂನ್.25:- ಬಸವಕಲ್ಯಾಣ ನಗರದಿಂದ 6 ಕಿ.ಮೀ ನಷ್ಟು ದೂರವಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೋಗಿ ಬರಲು ವಾಹನ ಸೌಕರ್ಯವಿಲ್ಲದ ಕಾರಣ ಅರ್ಧದಷ್ಟು ದಾರಿಯನ್ನು ನಡೆದುಕೊಂಡು ಕ್ರಮಿಸಬೇಕಾಗಿದ್ದು.ನಗರ ಹಾಗೂ ಗ್ರಾಮೀಣ ಭಾಗಗಳಿಂದ ಬರುವರರಿಗೆ ಮಿನಿ ವಿಧಾನಸೌಧದವರೆಗೆ ಮಾತ್ರ ಬಸ್ ಸೌಕರ್ಯವಿದೆ

ಈ ಕಾರಣ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ.

ನಗರ ಹಾಗೂ ಗ್ರಾಮೀಣ ಭಾಗಗಳಿಂದ ಬರುವರರಿಗೆ ಮಿನಿ ವಿಧಾನಸೌಧದವರೆಗೆ ಮಾತ್ರ ಬಸ್ ಸೌಕರ್ಯವಿದೆ. ಅಲ್ಲಿಂದ ಅನುಭವ ಮಂಟಪದ ಪಕ್ಕದ ಮಾರ್ಗದಿಂದ ತ್ರಿಪುರಾಂತ ಕೆರೆಯೊಳಗಿನ ಮುಳ್ಳುಕಂಟೆಗಳಿರುವ ದಾರಿಯಿಂದ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ. ಬೆಳಿಗ್ಗೆ ಮತ್ತು ಸಂಜೆ ಕೆಲಸಲ ಮಾತ್ರ ಬಸ್ ಸಂಚರಿಸುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ಒಳಗೊಂಡು ಅನೇಕರು ಬಿಸಿಲು, ಮಳೆ, ಗಾಳಿ, ಚಳಿಯಲ್ಲಿ ನಡೆದುಕೊಂಡೇ ಹೋಗಿ ಬರುತ್ತಾರೆ.

ನಗರದ ಮಧ್ಯದಲ್ಲಿನ ತ್ರಿಪುರಾಂತದ ಸರ್ಕಾರಿ ಕಲ್ಯಾಣ ಮಂಟಪದಲ್ಲಿ ತರಗತಿಗಳು ನಡೆಯುತ್ತಿದ್ದಾಗ 700ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದರು. ಆದರೆ, ಹೋಗಿ ಬರುವುದಕ್ಕೆ ಅನಾನುಕೂಲ ಇರುವುದರಿಂದ ಈಗ ಈ ಸಂಖ್ಯೆ ಅರ್ಧಕ್ಕೆ ಇಳಿದಿದೆ. ಈ ಕಾರಣ ತರಗತಿಗಳನ್ನು ಮೊದಲಿನಂತೆ ನಗರದಲ್ಲಿಯೇ ತೆಗೆದುಕೊಳ್ಳುವುದಕ್ಕೆ ಸಂಬಂಧಿತರಿಗೆ ಒತ್ತಾಯಿಸಲು ಕಾರ್ಯಕರ್ತರು ಮತ್ತು ಪೋಷಕರನ್ನು ಒಳಗೊಂಡ ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಸಂಘ ಸಂಸ್ಥೆಯವರು ಇಲ್ಲಿನ ಕಾಲೇಜು ಸ್ಥಳಾಂತರಕ್ಕಾಗಿ ಆಗ್ರಹಿಸಿ ಅನೇಕ ಸಲ ಧರಣಿ, ರಸ್ತೆ ತಡೆ ನಡೆಸಿದ್ದಾರೆ. ಎರಡು ಗಂಟೆಗೊಮ್ಮೆ ಬಸ್ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದೂ ಮನವಿಪತ್ರ ಸಲ್ಲಿಸಿದ್ದಾರೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಎನ್ನುವುದು ಪೋಷಕರ ಆಕ್ರೋಶ. ‘ಸ್ವಂತ ವಾಹನ ಇದ್ದವರು ಓಡಾಡಬಹುದು.

ಆದರೆ, ಬಡ ಕುಟುಂಬದವರಿಗೆ ತೊಂದರೆಯಾಗುತ್ತಿದೆ. ಕಾಲೇಜಿನ ಪ್ರವೇಶಾತಿಯೂ ಕಡಿಮೆಯಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಹಿನ್ನಡೆಯಾಗುತ್ತಿದೆ’ ಎಂದು ವಿದ್ಯಾರ್ಥಿಗಳಾದ ರಾಜಪ್ಪ, ನೂರ್ ಮಹಮ್ಮದ್ ತಿಳಿಸಿದರು.

`ಸ್ವಂತ ವಾಹನ ಇಲ್ಲ, ಬಸ್ಸು ಬರಲ್ಲ. ಆಟೊಗೆ ಹೋಗಬೇಕೆಂದರೆ ನೂರಾರು ರೂಪಾಯಿ ಬಾಡಿಗೆ ಕೊಡಲಾಗುವುದಿಲ್ಲ. ಕೆರೆ ಅಂಗಳದಲ್ಲಿ ಕಚ್ಚಾ ರಸ್ತೆಯಿದೆ. ಆದರೆ, ಕೆಸರಿರುತ್ತದೆ, ಕಲ್ಲು, ಮುಳ್ಳುಕಂಟೆಗಳು ಸಹ ಇವೆ. ಭೀತಿಯ ನಡುವೆಯೂ ಇದೇ ದಾರಿ ಅನಿವಾರ್ಯವಾಗಿದೆ’ ಎಂದು ವಿದ್ಯಾರ್ಥಿಗಳಾದ ಶಿವಕುಮಾರ ಮತ್ತು ಶಾರದಾ ಅಳಲು ತೋಡಿಕೊಂಡರು.

ಗುರುನಾಥ ಗಡ್ಡೆ, ತಾಲ್ಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷಬಡ ಕುಟುಂಬದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ. ಸ್ವಂತ ವಾಹನದಲ್ಲಿ ಓಡಾಡುವುದು ಕಷ್ಟ. ಆದ್ದರಿಂದ ಕಾಲೇಜಿಗೆ ಹೋಗಿ ಬರಲು ಬಸ್ ವ್ಯವಸ್ಥೆ ಕಲ್ಪಿಸಬೇಕು ತಹಶೀನಅಲಿ ಜಮಾದಾರ, ನಗರಸಭೆ ಮಾಜಿ ಸದಸ್ಯಬಸ್ ವ್ಯವಸ್ಥೆ ಆಗುತ್ತಿಲ್ಲ. ನಗರದಲ್ಲಿಯೇ ಕಾಲೇಜು ಆರಂಭಿಸಬೇಕು. ವಿದ್ಯಾರ್ಥಿಗಳಿಗೆ ಅನಾನುಕೂಲವಾದರೆ ಹೋರಾಟ ಮಾಡಲಾಗುಗುವುದು

prajaprabhat

Recent Posts

ವಿಶ್ವ ವಿಕಲಚೇತನರ ದಿನಾಚರಣೆ: ಪ್ರಶಸ್ತಿಗೆ ಅರ್ಜಿ ಆಹ್ವಾನ<br>

ರಾಯಚೂರು.05.ಆಗಸ್ಟ್.25: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಪ್ರತಿ ವರ್ಷದಂತೆ ಈ ವರ್ಷವೂ 2025ರ ಡಿಸೆಂಬರ್ 3ರಂದು ನಡೆಯುವ…

14 minutes ago

ಯರಮರಸ್ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿಗೆ ಕೌನ್ಸೆಲಿಂಗ್.

ರಾಯಚೂರು.05.ಆಗಸ್ಟ.25: ಇಲ್ಲಿನ ಯರಮರಸ್ ಸರ್ಕಾರಿ ಆದರ್ಶ ವಿದ್ಯಾಲಯ 2025-26ನೇ ಸಾಲಿನ 6ನೇ ತರಗತಿ ದಾಖಲಾತಿ ಕೌನ್ಸೆಲಿಂಗ್ ಪ್ರಕ್ರಿಯು ಆಗಸ್ಟ್ 11ರಿಂದ…

19 minutes ago

ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…

9 hours ago

ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…

9 hours ago

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

10 hours ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

10 hours ago