ಸರ್ಕಾರಿ ನೌಕರರೇ ಬ್ಯಾಂಕಿನಿಂದ ವೇತನ ಪ್ಯಾಕೇಜ್ ಜಾರಿಗೆ. ಸರ್ಕಾರ ಆದೇಶ.

ನೀವ ವೇತನ ಬ್ಯಾಂಕ್ ಅಕೌಂಟ್ ಮುಖಾಂತರ ಪಡೆಯುತ್ತಿರುವ ಹಾಗೂ ಪಡೆಯಲು ಇಚ್ಚಿಸುವ ಸರ್ಕಾರಿ / ಆರೇ ಸರ್ಕಾರಿ / ನೌಕರರಿಗೆ ಬ್ಯಾಂಕಿನಿಂದ ರೂಪಿಸಲಾಗಿರುವ ವೇತನ ಪ್ಯಾಕೇಜ್ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಈ ಮೇಲ್ಕಂಡ ವಿಷಯ ಹಾಗೂ ಉಲ್ಲೇಖಗಳನ್ವಯ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸರ್ಕಾರಿ ನೌಕರರ ಸಮಗ್ರ ವೇತನ ಪ್ಯಾಕೇಜ್‌ನ್ನು ಉಲ್ಲೇಖ (1)ರ ಆದೇಶದ ಷರತ್ತಿಗೊಳಪಟ್ಟು ಉಲ್ಲೇಖ (2) ಮತ್ತು (3) ರ ಸರ್ಕಾರಿ ನೌಕರರ ಒಕ್ಕೂಟಗಳ ಮನವಿಗನುಸಾರವಾಗಿ ಉಲ್ಲೇಖ (4) ರನ್ವಯ ಬ್ಯಾಂಕಿನ ಮಾನ್ಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮಾನ್ಯ ಉಪಾಧ್ಯಕ್ಷರು ಹಾಗೂ ಸ್ಥಳೀಯ ನಿರ್ದೇಶಕರು ಹಾಗೂ ಬ್ಯಾಂಕಿನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದ ಸರ್ಕಾರಿ ನೌಕರರ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಿದಂತೆ ಉಲ್ಲೇಖ (5) ರನ್ವಯ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಸದರಿ ಸಮಗ್ರ ವೇತನ ಪ್ಯಾಕೇಜ್‌ನ್ನು ಜಾರಿಗೊಳಿಸಲು ತೀರ್ಮಾನ ಕೈಗೊಳ್ಳಲಾಗಿರುತ್ತದೆ.

ಸರ್ಕಾರಿ ನೌಕರರ ಸಮಗ್ರ ವೇತನ ಪ್ಯಾಕೇಜ್‌ನಲ್ಲಿನ ಅಂಶಗಳನ್ನು ಈ ಪತ್ರದ ಜೊತೆಗೆ ಲಗತ್ತಿಸಲಾಗಿದೆ.

ನೌಕರರ ವೈಯಕ್ತಿಕ ಅಪಘಾತ ವಿಮೆ ಪ್ರೀಮಿಯಂ ಹಣವನ್ನು ಕೇಂದ್ರ ಕಛೇರಿಯಿಂದ ಪಾವತಿಸಿ ವಿಮಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಬೇಕಾಗಿರುತ್ತದೆ. ಸಮಗ್ರ ವೇತನ ಪ್ಯಾಕೇಜ್‌ಗೆ ಸೇರ್ಪಡೆಗೊಳ್ಳಲು ಈಗಾಗಲೇ ಬ್ಯಾಂಕಿನ ದ್ವಾರ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರು ಬ್ಯಾಂಕಿಗೆ ಅರ್ಜಿ ಸಲ್ಲಿಸಿದ ನಂತರ ಸದರಿ ನೌಕರರನ್ನು ಸಮಗ್ರ ವೇತನ ಪ್ಯಾಕೇಜ್‌ನ ವ್ಯಾಪ್ತಿಗೆ ತರಲು ಶಾಖಾ ವ್ಯವಸ್ಥಾಪಕರು ಕ್ರಮವಿಡತಕ್ಕದ್ದು. ಆದ್ದರಿಂದ ಈಗಾಗಲೇ ಬ್ಯಾಂಕಿನ ದ್ವಾರ ವೇತನ ಪಡೆಯುವ ನೌಕರರು ಸಲ್ಲಿಸುವ ಅರ್ಜಿಯನ್ನು ನಮೂನೆ – 1 ರಲ್ಲಿ ಬ್ಯಾಂಕಿಗೆ ಸಲ್ಲಿಸಬೇಕಾಗಿರುತ್ತದೆ. ಅದೇ ರೀತಿ ಹೊಸದಾಗಿ ವೇತನ ಪ್ಯಾಕೇಜ್‌ನಲ್ಲಿ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಸೇರ್ಪಡೆಗೊಳ್ಳಲು ಬಯಸುವ ಸರ್ಕಾರಿ ನೌಕರರು ಅರ್ಜಿ ನಮೂನೆ 2 ರಲ್ಲಿ ಬ್ಯಾಂಕಿಗೆ ಕೋರಿಕೆ ಪತ್ರ ಸಲ್ಲಿಸಬೇಕಾಗಿರುತ್ತದೆ.

ಶಾಖೆಯ ಹಂತದಲ್ಲಿ ಅರ್ಜಿ ಸ್ವೀಕರಿಸಿದ ತಕ್ಷಣ ಸದರಿ ಉಳಿತಾಯ ಖಾತೆಯನ್ನು “ಸಮಗ್ರ ವೇತನ ಪ್ಯಾಕೇಜ್” ಆಗಿ ಪರಿವರ್ತಿಸಲು Account Modification ಮಾಡಿ ಹೊಸ ಪಾಸ್ ಪುಸ್ತಕವನ್ನು ನೀಡಲು ಶಾಖಾ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.

Account Modification ಗೆ ಸಂಬಂಧಿಸಿದಂತೆ ಗಣಕಯಂತ್ರ ವಿಭಾಗವು (1.T. ವಿಭಾಗ) ನೀಡಿದ ಸುತ್ತೋಲೆಯಂತೆ ಕ್ರಮವಿಡತಕ್ಕದ್ದು.

ಈಗಾಗಲೇ ಬ್ಯಾಂಕಿನ ಶಾಖೆಗಳ ದ್ವಾರ ವೇತನ ಪಡೆಯುತ್ತಿರುವ ಸರ್ಕಾರಿ ನೌಕರರಿಂದ ಅರ್ಜಿಗಳನ್ನು ಕೂಡಲೇ ಸ್ವೀಕರಿಸಿ ದಿನಾಂಕ 15.06.2025 ರೊಳಗಾಗಿ ಈ ಕಾರ್ಯವನ್ನು ಅಂತಿಮಗೊಳಿಸಲಾದ ಶಾಖೆಯ ಸರ್ಕಾರಿ ನೌಕರರ ವಿವರಗಳನ್ನು ಬ್ಯಾಂಕಿನ ಕೇಂದ್ರ ಕಛೇರಿಗೆ ಮತ್ತು ಸ್ಥಳೀಯ ಸಂಬಂಧಿಸಿದ ಇಲಾಖೆಗಳ

Govt. Package-Salary Package Order

(Drawing & Disbursing Officer) 0 2 2: HRMS 3 Reciplent ID avg ಸಮಗ್ರ ವೇತನ ಪ್ಯಾಕೇಜ್ ಬ್ಯಾಂಕಿನ ವಿವರಗಳನ್ನು ನಮೂದಿಸಲು ಕೋರಲು ಸೂಚಿಸಲಾಗಿದೆ.

ಒಂದು ವೇಳೆ ನೌಕರರು ಬ್ಯಾಂಕಿಗೆ ಬಂದು ಅರ್ಜಿ ಸಲ್ಲಿಸಲು ಅನಾನುಕೂಲವಾದಲ್ಲಿ ಅಂತಹ ನೌಕರರ Wattsapp ಅಥವಾ E-Mail ಮುಖಾಂತರ ಬ್ಯಾಂಕಿಗೆ ಸಲ್ಲಿಸಲು ಅವಕಾಶ ಒದಗಿಸಲಾಗಿದೆ. ಒಂದು ವೇಳೆ ಸರ್ಕಾರಿ ನೌಕರರು ಶಾಖಾ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ ತಮ್ಮ ಉಳಿತಾಯ ಖಾತೆಯನ್ನು “ಸಮಗ್ರ ವೇತನ ಖಾತೆಯನ್ನಾಗಿ” ಪರಿವರ್ತಿಸಲು ಕೋರಿದಲ್ಲಿ ಅಂತಹ ಕೋರಿಕೆಯನ್ನು ಕೂಡ ಮಾನ್ಯ ಮಾಡಬಹುದಾಗಿದೆ. ಹಾಗೂ ನಮ್ಮ ಬ್ಯಾಂಕಿನ ಶಾಖೆಗಳಿಂದ ಈಗಾಗಲೇ ವೇಶನಾಧರಿತ ಸಾಲ ತೆಗೆದುಕೊಂಡ ನೌಕರರನ್ನು Salary Package ಖಾತೆಗಳಾಗಿ ಕೂಡಲೇ ಬದಲಾವಣೆ ಮಾಡಿಕೊಂಡ ನಂತರ ತಪ್ಪದೇ ಶಾಖಾ ವ್ಯವಸ್ಥಾಪಕರು ಸದರಿಯವರಿಂದ ಅರ್ಜಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಸಾಲ ಮತ್ತು ಮೇಲ್ವಿಚಾರಣೆ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರನ್ನು ಹಾಗೂ ಗಣಕಯಂತ್ರ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸಿ ಸದರಿ ಕಾರ್ಯವನ್ನು ಯಾವುದೇ ಗೊಂದಲವಿಲ್ಲದಂತೆ ನಿರ್ವಹಿಸಲು ಆದೇಶಿಸಲಾಗಿದೆ.



ಮುಂದುವರೆದು ಎಲ್ಲಾ ಶಾಖಾ ವ್ಯವಸ್ಥಾಪಕರು ಸಮಗ್ರ ವೇತನ ಪ್ಯಾಕೇಜ್ ಪ್ರತಿಯನ್ನು ಎಲ್ಲಾ ಶಿಕ್ಷಕರುಗಳ ಒಕ್ಕೂಟಗಳಿಗೆ, ಸರ್ಕಾರಿ ಇಲಾಖೆಗಳಿಗೆ ತಲುಪಿಸಿ ಸ್ವೀಕೃತಿ ಪಡೆಯತಕ್ಕದ್ದು, ಅಲ್ಲದೆ ಎಲ್ಲಾ ಸರ್ಕಾರಿ ನೌಕರರ ಉಳಿತಾಯ ಖಾತೆಯಿಂದ ವೇತನ ಪ್ಯಾಕೇಜ್‌ಗೆ ವರ್ಗಾವಣೆ ಕಾರ್ಯ ಮುಕ್ತಾಯವಾದನಂತರ ಅಂತಿಮ ನೌಕರರ ಪಟ್ಟಿಯನ್ನು ಕೇಂದ್ರ ಕಛೇರಿಗೆ ತಪ್ಪದೇ ಸಲ್ಲಿಸತಕ್ಕದ್ದು. ಆದರ ಆಧಾರದ ಮೇಲೆ ಅಂತಹ ನೌಕರರ ವಿಮೆಯ ವ್ಯಾಪ್ತಿಗೆ ಒಳಪಡಿಸಲು ಅನುಕೂಲವಾಗುತ್ತದೆ.

prajaprabhat

Recent Posts

ಅಮರೇಶ್ವರಮಹಾದ್ವಾರಕ್ಕೆಸಂಸದರಿಂದ #1ಕೋಟಿರೂಪಾಯಿಘೋಷಣೆ

ಔರಾದ.04.ಆಗಸ್ಟ್.25:- ಔರಾದ ಪಟ್ಟಣದ ಉಧ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯಿಂದ ಕೂಡಿದೆ. ಹಿಂದೆ ಮಹಾನ್ ಸಂತರೊಬ್ಬರ ಭಕ್ತಿಗೆ ಮೆಚ್ಚಿ…

4 hours ago

ನಕಲಿ ಪಿಎಚ್ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ.

ಇಂದು ಜಂಟಿ ನಿರ್ದೇಶಕರು. ಕಲಬುರಗಿ ರವರ ಮುಖಾಂತರ ನಕಲಿ ಪಿಎಚ್.ಡಿ ಪ್ರಮಾಣ ಪತ್ರ ತಂದಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು…

5 hours ago

ಆಗಸ್ಟ್ 5ರಂದು ನೇರ ಸಂದರ್ಶನ

ರಾಯಚೂರು.04.ಆಗಸ್ಟ್.25: ಇಲ್ಲಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಇಲಾಖೆ ಕಚೇರಿಯಲ್ಲಿ ಆಗಸ್ಟ್ 5ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ…

5 hours ago

ಆಗಸ್ಟ್ 6ರಂದು ಹಟ್ಟಿ ಚಿನ್ನದ ಕಂಪನಿ ನಿಯಮಿತ ಸಿಬ್ಬಂದಿ, ಕಾರ್ಮಿಕರ ವಸತಿ

ಸಮುಚ್ಚಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿoದ ಶಂಕುಸ್ಥಾಪನೆ. ರಾಯಚೂರು.04.ಆಗಸ್ಟ್.25: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ…

6 hours ago

ರಾಯಚೂರು | ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ರಾಯಚೂರು.04.ಆಗಸ್ಟ್.25: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಸ್ಟ್ 6ರಂದು ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅoದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಹೆಚ್‌ಎಎಲ್…

6 hours ago

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

7 hours ago