ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಹುದ್ದೆ ಖಾಲಿ.!

30ಡಿ24. ಬೆಂಗಳೂರು.ಕರ್ನಾಟಕ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಈ ಎಲ್ಲಾ ಕಾಲೇಜುಗಳಲ್ಲಿ ಖಾಯಂ ಉಪನ್ಯಸ್ಕರು ಇಲ್ಲಾ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಾಲಿಟೆಕ್ನಿಕ್ ಕಾಲೇಜು ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಲಲಿ ಖಾಯಂ ಉಪನ್ಯಾಸ್ಕರೆ ಇಲ್ಲ ಎಲ್ಲಾ ವಿಭಾಗದಲ್ಲಿ ಉಪನ್ಯಾಸಕ ಕೊರತೆ.

ಕರ್ನಾಟಕ ರಾಜ್ಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅರ್ಧದಷ್ಟು ಉಪನ್ಯಾಸಕರ ಹುದ್ದೆಗಳು ಖಾಲಿಯಿದೆ. ಜತೆಗೆ ಬೋಧಕೇತರ ಸಿಬ್ಬಂದಿ ಹುದ್ದೆಗಳೂ ಖಾಲಿ ಇವೆ ಎಂದು ವರದಿಯಾಗಿದೆ. ಉಪನ್ಯಾಸಕರ ಕೊರತೆ ಬೋಧನಾ ಗುಣಮಟ್ಟದ ಮೇಲೆ ಪರಿಣಾಮ ಬೀರುವುದರ ಜತೆಗೆ, ಕಾಲೇಜುಗಳು ಕೇಂದ್ರದ ಅಮೂಲ್ಯವಾದ ಅನುದಾನದಿಂದ ವಂಚಿತವಾಗುವಂತೆ ಮಾಡುತ್ತದೆ ಎನ್ನಲಾಗಿದೆ.

ಕರ್ನಾಟಕ ರಾಜ್ಯದಲ್ಲಿ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು ಮಂಜೂರಾದ ಉಪನ್ಯಾಸಕರ ಹುದ್ದೆಗಳು 646 ಆಗಿದ್ದು, ಅದರಲ್ಲಿ 307 ಖಾಲಿ ಇವೆ ಎಂಬುದಾಗಿ ತಾಂತ್ರಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ ವಾರ್ಷಿಕ ವರದಿಯಲ್ಲಿ ತಿಳಿಸಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಈ ಹುದ್ದೆಗಳಿಗೆ 2010ರಲ್ಲಿ ಕೊನೆಯ ಬಾರಿ ನೇಮಕಾತಿ ನಡೆದಿತ್ತು.

ಉಪನ್ಯಾಸಕರ ಕೊರತೆ ಇರುವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಲು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಆದರೆ, ಇದರಿಂದ ಕಾಲೇಜುಗಳಿಗೆ ಎರಡು ರೀತಿಯಲ್ಲಿ ಸಮಸ್ಯೆಯಾಗುತ್ತಿದೆ. ನಿಯಮಿತ ಉಪನ್ಯಾಸಕರು ಇಲ್ಲದಿರುವುದು ಕಾಲೇಜುಗಳು ಕೇಂದ್ರದ ಏಜೆನ್ಸಿಗಳಿಂದ ಅನುದಾನ ಪಡೆಯುವುದಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಇನ್ನೊಂದು ಸಮಸ್ಯೆ ಎಂದರೆ, ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್ (NBA) ಪ್ರಮಾಣಪತ್ರವನ್ನು ಪಡೆಯುವುದು ಕಷ್ಟಕರವಾಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮೂರು ಸರ್ಕಾರಿ ಕಾಲೇಜುಗಳ ಪ್ರವೇಶಾತಿಯಲ್ಲಿ ಶೇ 25 ರಷ್ಟು ಕಡಿಮೆ ಮಾಡಲು ಇತ್ತೀಚೆಗೆ ಸೂಚಿಸಿತ್ತು. ಇದಕ್ಕೆ ಉಪನ್ಯಾಸಕರ ಕೊರತೆಯೇ ಕಾರಣ ಎನ್ನಲಾಗಿದೆ. ಈ ಕಾಲೇಜುಗಳು ಕೇಂದ್ರ ಯೋಜನೆಗಳಿಂದ ಯಾವುದೇ ಅನುದಾನ ಪಡೆಯುವುದನ್ನೂ ನಿರ್ಬಂಧಿಸಲಾಗಿದೆ.

prajaprabhat

View Comments

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

5 hours ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

10 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

11 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

11 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

11 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

11 hours ago