ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅಲೆಮಾರಿ ಜನರಿಗೆ ತಲುಪಿಸಿ -ಪಲ್ಲವಿ ಜಿ.

ಬೀದರ.20.ಏಪ್ರಿಲ್.25: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅಲೆಮಾರಿ ಜನರಿಗೆ ತಲುಪಿಸಬೇಕೆಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಮಗಡದ ಅಲೆಮಾರಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ. ಅವರು ತಿಳಿಸಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಹಾಗೂ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.


ಬೀದರ ಜಿಲ್ಲೆಯಲ್ಲಿ ಮೂರು ದಿವಸ ಪ್ರವಾಸಕೈಗೊಂಡ ಅವರು ಹುಮನಾಬಾದ, ಬಸವಕಲ್ಯಾಣ, ಭಾಲ್ಕಿ, ಔರಾದ ಮತ್ತು ಬೀದರನ ಅಲೆಮಾರಿ ಸಮುದಾಯದವರು ವಾಸಿಸುವ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಮಾತನಾಡಿ ಸಮಸ್ಯೆಗಳನ್ನು ತಿಳಿದುಕೊಳ್ಳಲಾಯಿತು.

ನಿಗಮ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಪೂರಕವಾಗಿದೆ. ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಮಾಡಿ ಅಲೆಮಾರಿಗಳ ಸ್ಥಿತಿಗತಿ, ಸಮಸ್ಯೆಗಳಲ್ಲಿ ಪರಿಶೀಲಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಹಿತಿ ನೀಡಲಾಗುತ್ತಿದೆ. ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಪಾಲಕರು ಆದ್ಯತೆ ನೀಡಬೇಕು. ಅಲೆಮಾರಿಗಳು ಮನೆ, ಸ್ವಯಂ ಉದ್ಯೋಗ, ಒಟ್ಟಾರೆಯಾಗಿ ಜೀವನದಲ್ಲಿ ಭದ್ರತೆ ದೊರೆತು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪ್ರತಿ ಹಂತದಲ್ಲಿ ಸರ್ಕಾರ ಸವಲತ್ತುಗಳನ್ನು ಒದಗಿಸುತ್ತಿದೆ ಎಂದರು.


ಅಲೆಮಾರಿ ಜನರಿಗೆ ಸ್ವಂತ ನಿವೇಶನಗಳಿಲ್ಲ, ವಸತಿಗಳಿಲ್ಲ, ಪರಿತರ ಚೀಟಿ, ಆಧಾರ ಕಾರ್ಡ, ಜಾತಿ ಪ್ರಮಾಣ ಪತ್ರ ಇರುವುದಿಲ್ಲ ಹಾಗೂ ಅವರು ವಾಸಿಸುವ ಸ್ಥಳಗಳು ಸ್ವಚ್ಛವಾಗಿಲ್ಲ ಮತ್ತು ಶಿಕ್ಷಣದಿಂದ ಬಹಳ ವಂಚಿತರ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ನೀಡಲು ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೆನೆ. ಸರ್ಕಾರ ಅಲೆಮಾರಿ ಜನರ ಅಭಿವೃದ್ಧಿಗಾಗಿ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದೆ ಅದು ಅವರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.


ಈ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ನಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರ ಕಾರ್ಯದರ್ಶಿ ಆನಂದ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧು ರಘು ಹಚ್.ಎಸ್, ಬೀದರನ ತಹಸೀಲ್ದಾರರಾದ ಟಿ.ಮೆಹತ್, ಡಿ.ವಾಯ್.ಎಸ್.ಪಿ. ಶಿವನಗೊಡ ಪಾಟೀಲ್, ಎಲ್ಲಾ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಅಲೆಮಾರಿ ಅನುಷ್ಠಾನ ಸಮಿತಿ ಸದಸ್ಯರುಗಳು, ಅಲೆಮಾರಿ ಸಮುದಾಯದ ಮುಖಂಡರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

prajaprabhat

Recent Posts

ಜನಸಂಖ್ಯಾ ಸ್ಪೋಟದಿಂದ ದೇಶಕ್ಕೆ ಆಘಾತಕಾರಿ ಸಮಸ್ಯೆ: ಡಾ.ದಂಡಪ್ಪ ಬಿರಾದಾರ ಕಳವಳ

ರಾಯಚೂರು.03.ಆಗಸ್ಟ್.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಉಡಮಗಲ್ ಖಾನಾಪುರ…

3 hours ago

ಜಿಲ್ಲೆಯ ಬೆಳೆಗಳ ಬೆಳವಣಿಗೆ ಮತ್ತು ರಸಗೊಬ್ಬರದ ದಾಸ್ತಾನು ವಿವರವನ್ನು

ರಾಯಚೂರು.03.ಆಗಸ್ಟ್.25:- ಯೂರಿಯಾ ಗೊಬ್ಬರ ವಿತರಿಸಿದ ವಿವರ (ಮೆಟ್ರೀಕ್ ಟನ್ ಗಳಲ್ಲಿ) ಅನ್ನಪೂರ್ಣೇಶ್ವರಿ ಅಗ್ರೋ ಟ್ರೇಡಿಂಗ್ ಕ್ಯಾಂಪ್ ಬ್ಯಾಗ್ವಾಟ್ -9, ಬಂದೇನವಾಜ್…

3 hours ago

ಸಾರ್ವಜನಿಕರ ಪ್ರಾಯಾಣಕ್ಕೆ ತೊಂದರೆಯಾಗದಿರಲಿ- ಜಿಲ್ಲಾಧಿಕಾರಿ ಸುರೇಶ ಇಟ್ನಾಳ

ಕೊಪ್ಪಳ.03.ಆಗಸ್ಟ್.25: ಆಗಸ್ಟ್ 5 ರಿಂದ ಕೆ.ಎಸ್.ಆರ್.ಟಿ ನೌಕರರು ಮುಷ್ಕರವನ್ನು ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕರ ಪ್ರಾಯಾಣಕ್ಕೆ ಯವುದೇ…

3 hours ago

ಜವಾಹರ ನವೋದಯ ವಿದ್ಯಾಲಯದಲ್ಲಿ ಪಿಯುಸಿಗೆ ಪ್ರವೇಶ ಆರಂಭ

ರಾಯಚೂರು.03.ಆಗಸ್ಟ್.25: ಪ್ರಸ್ತುತ ಶೈಕ್ಷಣಿಕ ವರ್ಷ 2025-26 ನೇ ಸಾಲಿಗೆ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಷಯದ ತರಗತಿಗೆ ಪ್ರವೇಶ ಪ್ರಕ್ರಿಯೆ…

3 hours ago

ಒಪೆಕ್ ಆಸ್ಪತ್ರೆಯಲ್ಲಿನ ಹೊರಗುತ್ತಿಗೆ ನೇಮಕಾತಿ ಪ್ರಕ್ರಿಯೆ ನ್ಯಾಯಾಲಯ ಆದೇಶದಂತೆ ಮುಂದೂಡಿಕೆ

ರಾಯಚೂರು.03.ಆಗಸ್ಟ್.25: ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಧೀನದ ರಾಜೀವ್ ಗಾಂಧಿ ಸೂಪರ್‌ಸ್ಪೆಷಾಲಿಟಿ (ಓಪೆಕ್) ಆಸ್ಪತ್ರೆಯಲ್ಲಿ ಬೋಧಕೇತರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ…

3 hours ago

ಆಗಸ್ಟ್ 7ರಂದು ಗೌರಿ ಗಣೇಶ ಹಬ್ಬದ ಪೂರ್ವಭಾವಿ ಸಭೆ

ರಾಯಚೂರು.03.ಆಗಸ್ಟ.25: ಆಗಸ್ಟ್ 27ರಂದು ಆಚರಿಸುವ ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಪೂರ್ವಭಾವಿ ಸಭೆಯು ಆಗಸ್ಟ್ 7ರ…

3 hours ago