ಸರ್ಕಾರಕ್ಕೆ ಒಳ ಮೀಸಲಾತಿ  ಮಧ್ಯಂತರ ವರದಿ ಸಲ್ಲಿಕೆ.!

ಬೆಂಗಳೂರು.27.ಮಾರ್ಚ್.26: ರಾಜ್ಯದಲ್ಲಿ ನಡೆತಿರುವ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಬೇಡಿಕೆ ಈಡೇರುವ ಸಮಯ ಕೊನೆಗೂ ಸನ್ನಿಹಿತವಾಗಿದೆ. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತಂತೆ ವರದಿ ಸಂಗ್ರಹಿಸಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮತಿ, ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಚಿವರುಗಳಾದ ಕೆ.ಹೆಚ್.ಮುನಿಯಪ್ಪ, ಹೆಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ಬಸಂತಪ್ಪ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಧಾನಸೌಧದ ಸಿಎಂ ಕಚೇರಿಯಲ್ಲಿ ವರದಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾ. ನಾಗಮೋಹನ್‌ ದಾಸ್‌ ವರದಿ ಸಲ್ಲಿಸಿದರು. ಇದು ಮಧ್ಯಂತರ ವರದಯಾಗಿದ್ದು ಪೂರ್ಣ ಪ್ರಮಾಣದ ವರದಿಯಷ್ಟೇ ಬಾಕಿ ಉಳಿದಿದೆ. ಮಧ್ಯಂತರ ವರದಿ ಆಧರಿಸಿ ಇಂದಿನ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸ ಸರ್ಕಾರ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

ಒಳ ಮೀಸಲಾತಿ ಬಗ್ಗೆ ಬದ್ಧತೆ ಇದೆ

ದಲಿತ ಸಮುದಾಯಕ್ಕೆ ಒಳಮೀಸಲಾತಿ ಜಾರಿ ವಿಚಾರದಲ್ಲಿ ಸರ್ಕಾರಕ್ಕೆ ಬದ್ಧತೆ ಇದೆ. ಮೀಸಲಾತಿಯನ್ನ ಸರ್ಕಾರ ಜಾರಿ ಮಾಡುತ್ತೆ ಅಂತ ಸಚಿವ ಆರ್.ಬಿ ತಿಮ್ಮಾಪುರ ಹೇಳಿದ್ದಾರೆ. ಈ ವಿಚಾರದಲ್ಲಿ ಒಳಪಂಗಡಗಳಲ್ಲಿ ಯಾವುದೇ ಬೇಸರ ಇಲ್ಲ. ನಮ್ಮ ಸಂಪೂರ್ಣ ಸಹಮತ ಇದೆ.

ವರದಿಯನ್ನು ವೈಜ್ಞಾನಿಕವಾಗಿ ಪರಿಶೀಲನೆ ಮಾಡಲಾಗುವುದು. ಎಷ್ಟೋ ವರ್ಷಗಳಿಂದ ಸಮಾಜಕ್ಕೆ, ಸಮುದಾಯಕ್ಕೆ ಅನ್ಯಾಯ ಆಗ್ತಿದೆ ಎಂದಿದ್ದಾರೆ.

ಉದ್ಯೋಗಕಾಂಕ್ಷಿಗಳಿಗೆ ಅನ್ಯಾಯ ಆಗಬಾರದು. ಅವರಿಗೆ ಶಾಶ್ವತವಾದ ಪರಿಹಾರ ಕೊಡಬೇಕು.‌ ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ.‌ ವರದಿ ಬಗ್ಗೆ ಸರ್ಕಾರ ಏನೂ ಉತ್ತರ ಕೊಟ್ಟಿಲ್ಲ. ನೇಮಕಾತಿ ಬಗ್ಗೆ ನಾವು ಏನೂ ಸಲಹೆ ಕೊಟ್ಟಿಲ್ಲ ಎಂದರು.

ವರದಿ ನೀಡಿರುವ ಹಂತದಲ್ಲಿ ಬೇರೆ ಯಾವ ವಿಚಾರವನ್ನು ಹೇಳಲು ಸಾಧ್ಯವಿಲ್ಲ. ಸರ್ಕಾರದ ತೀರ್ಮಾನ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಮಧ್ಯಂತರ ವರದಿ ನೀಡಿರುವುದು ಒಳ ಮೀಸಲಾತಿ ಜಾರಿಯ ವಿಳಂಬ ಧೋರಣೆಗೆ ಅನುಕೂಲ ಎಂಬ ವಾದವನ್ನು ನಿರಾಕರಣೆ ಮಾಡಿದ ಅವರು, ನನಗೆ ಹೀಗೆ ಅನ್ನಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಶ್ವತವಾದ ಪರಿಹಾರವನ್ನು ಕೊಡಬೇಕು ಎಂಬುದು ನನ್ನ ಆಸೆಯಾಗಿದೆ. ಸರ್ಕಾರ ಏನು ತೀರ್ಮಾನ ಮಾಡುತ್ತದೆ ಅದರ ಆಧಾರದಲ್ಲಿ ಅಂತಿಮ ವರದಿ ಸಲ್ಲಿಸುತ್ತೇನೆ. ಮಧ್ಯಂತರ ವರದಿ ನೀಡಿದ್ದೇನೆ, ಇದಕ್ಕೆ ಸರ್ಕಾರ ಉತ್ತರ ಕೊಟ್ಟಿಲ್ಲ. ಉತ್ತರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು‌.

ಮಧ್ಯಂತರ ವರದಿ ಮೀಸಲಾತಿ ಕೊಡಲು ವಿಳಂಬ ಧೋರಣೆ ಮಾಡೋಕೆ ಅಲ್ಲ. ಶಾಶ್ವತ ಪರಿಹಾರ ಕೊಡೋದು ನಮ್ಮ ಇಚ್ಚೆ. ಈ ನಿಟ್ಟಿನಲ್ಲಿ ವರದಿ ಕೊಡಲಾಗಿದೆ. ಮಧ್ಯಂತರ ವರದಿ ಕೊಟ್ಟಿದ್ದೇನೆ‌. ಸರ್ಕಾರ ಏನ್ ಕ್ರಮ ತೆಗೆದುಕೊಳ್ಳುತ್ತೋ ನೋಡೋಣ. ಮಧ್ಯಂತರ ವರದಿಯಲ್ಲಿ ಏನಿದೆ ಅಂತ ನಾನು ಹೇಳೋಕೆ ಆಗೊಲ್ಲ. ಸರ್ಕಾರ ಏನ್ ಮಾಡುತ್ತೆ ಅಂತ ಸರ್ಕಾರವನ್ನ ಕೇಳಿ ಎಂದರು.

prajaprabhat

Recent Posts

ಯೂರಿಯಾ, ಡಿಎಪಿ ರಸಗೊಬ್ಬರ ಲಭ್ಯ: ಪ್ರಕಾಶ್ ಚೌಹಾಣ್

ರಾಯಚೂರು.11.ಆಗಸ್ಟ್.25:- ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ, ಡಿ.ಎ.ಪಿ ರಸಗೊಬ್ಬರ…

4 minutes ago

ಅಗ್ನಿವೀರ್ ಸೇನಾ ಭರ್ತಿ: ನಾಲ್ಕನೇ ದಿನ 764 ಅಭ್ಯರ್ಥಿಗಳು ಭಾಗಿ

ರಾಯಚೂರು.11.ಆಗಸ್ಟ್.25:- ಅಗ್ನಿವೀರ್ ಸೇನಾ ಭರ್ತಿಗೆ ಆಗಸ್ಟ್ 11 ರಂದು ಒಟ್ಟು 764 ಅಭ್ಯರ್ಥಿಗಳು ವರದಿ ಮಾಡಿಕೊಂಡರು. ಆಗಸ್ಟ್ 11 ರಂದು…

10 minutes ago

ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೇರಿಗೆ ಮಾಡಿ ಜನ ಸಾಮಾನ್ಯರಿಂದ ಹಣ ವಸೂಲಿ

ಬೀದರ.11.ಆಗಸ್ಟ್.25:- ಬೀದರ್ ಜಿಲ್ಲೆಯ ಔರಾದ ಬಾ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೇರಿಗೆ ಮಾಡಿ ಜನ ಸಾಮಾನ್ಯರಿಂದ ಹಣ ವಸೂಲಿ…

25 minutes ago

ಒಳಮೀಸಲಾತಿ ತೀರ್ಮಾನ ನಂತರ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ  ಮಾಡಲಾಗುವುದು.

ಬೆಂಗಳೂರು.11.ಆಗಸ್ಟ್.25:- ರಾಜ್ಯದಲ್ಲಿ ಒಳಮೀಸಲಾತಿ ಸಂಬಂಧ ರಾಜ್ಯಸರ್ಕಾರ ಸ್ಪಷ್ಟವಾದ ತೀರ್ಮಾನ ತೆಗೆದುಕೊಂಡ ಮೇಲೆ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಖಾಲಿಯಿರುವ ಗುಡ್ಡೆಗಳು ಭರ್ತಿ ಮಾಡಲಾಗುವುದು…

57 minutes ago

ರಾಜ್ಯ ಸರ್ಕಾರದಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ’ಕ್ಕೆ ಅರ್ಜಿ ಆಹ್ವಾನ

ಬೆಂಗಳೂರು.11.ಆಗಸ್ಟ್.25:- ರಾಜ್ಯ ಕಾರ್ಮಿಕ ಇಲಾಖೆ ಮಂಡಳಿಯು ವತಿಯಿಂದ ಕಾರ್ಮಿಕರ ಮಕ್ಕಳಿಗೆ 2025-26 ನೇ ಸಾಲಿನ  ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನ…

2 hours ago

ಭಾರತೀಯ ರೈಲ್ವೆಯಲ್ಲಿ 3,115 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು.11.ಆಗಸ್ಟ್.25:- ಪೂರ್ವ ರೈಲ್ವೆಯಲ್ಲಿ 3,115 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 14 ರಿಂದ ಸೆಪ್ಟೆಂಬರ್ 13,…

2 hours ago