ಬೀದರ.08.ಏಪ್ರಿಲ್.25:- ಔರಾದ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜನಪದ ಉತ್ಸವ 2025 ಜರುಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲ್ಲೂಕು ಖಜಾನೆ ಅಧಿಕಾರಿಗಳ ಹಾಗೂ ಸಾಹಿತಿಗಳಾದ ಶ್ರೀ ಮಾಣಿಕ ರಾವ್ ನೆಲಗೆ ಮಾತನಾಡಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಸಾಹಿತ್ಯ ಅದು ಜನಪದ ಅಳಿವಿನ ಅಂಚಿನಲ್ಲಿರುವ ಈ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗೆ ಪೋಷಿಸುವ ಜವಾಬ್ದಾರಿ ಇಂದಿನ ಪೀಳಿಗೆಯದಾಗಿದೆ ಎಂದರು.
ಇನೋರ್ವ ಅತಿಥಿಗಳಾದ ಶ್ರೀಮತಿ ಮಹಾನಂದ ಎಂಡೆ ಮಾತನಾಡಿ ಮಹಿಳೆ ಸಹನೆ, ತ್ಯಾಗದ ಪ್ರತಿಕ ಹೆಣ್ಣು ಅಬಲೆ ಅಲ್ಲ ಸಬಲೆ ಆಕೆ ಯಾವ ಕ್ಷೇತ್ರದಲ್ಲಿಯು ಹಿಂದೆ ಇಲ್ಲ.
ಸುನೀತಾ ವಿಲಿಯಮ್ಸ ಇಂತಹ ಸಾಧಕಿಯರು ನಮ್ಮ ಹೆಮ್ಮೆ ಮತ್ತು ಸ್ಪೂರ್ತಿ ಎಂದರು. ಕಾರ್ಯಕ್ರಮದ ಅಧ್ಯಕ್ಷೀಯ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಅಂಬಿಕಾದೇವಿ ಕೊತಮೀರ್ ಜನಪದ ನಮ್ಮ ಹೆಮ್ಮೆ, ನಮ್ಮ ಸಂಸ್ಕೃತಿ ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ಕಟ್ಟಿಕೊಡುವ ಕೆಲಸ ಜನಪದರು ಮಾಡುತ್ತಾ ಬಂದಿದ್ದಾರೆ.
ಜನಪದರ ಬದುಕಿನ ಪ್ರತಿ ಹಂತದಲ್ಲಿ ನೈತಿಕತೆಯ ಅಸ್ತಿತ್ವ ನೋಡಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ವಿನಾಯಕ ಕೊತಮೀರ್, ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊ. ಸಂಜೀವ ಕುಮಾರ ತಾಂದಳೆ,ದೈಹಿಕ ಶಿಕ್ಷಣದ ನಿರ್ದೇಶಕರಾದ ಡಾ. ಊರ್ವಶಿ ಕೊಡ್ಲಿ, ಡಾ.ದಯಾನಂದ ಬಾವುಗೆ, ಶ್ರೀ ಬಾಲಾಜಿ ಎಂಡೆ, ಶ್ರೀ ಅಡವೆಪ್ಪ ಪಟ್ನೆ ವೇದಿಕೆ ಹಂಚಿಕೊಂಡರು.ಶ್ರೀ ಸುಬ್ಬಣ್ಣ ಮುಲಗೆ ಸ್ವಾಗತಿಸಿದರು, ಡಾ.ದಯಾನಂದ ಬಾವುಗೆ ವಂದಿಸಿದರು, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ರಾಮಣ್ಣ ನಿರುಪಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಈ ಸಂದರ್ಭದಲ್ಲಿ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳಿಂದ ಕಂಗೊಳಿಸಿದರು, ಕೋಲಾಟ,ಲಂಬಾಣಿ ನೃತ್ಯ, ಜನಪದ ಹಾಡುಗಳು ಇತರ ಕಾರ್ಯಕ್ರಮಗಳು ಜರುಗಿದವು.
ಬೆಳಗಾವಿ.17.ಏಪ್ರಿಲ್.25:- ಕಳೆದ 14.ಜನವರಿ.2025 ರಂದು ಕಿತ್ತೂರು ಬಳಿ ಅಂಬಡಗಟ್ಟಿ ಕ್ರಾಸ್‌ನಲ್ಲಿ ಸಂಭವಿಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ…
ಬೆಂಗಳೂರು.17.ಏಪ್ರಿಲ್.25:- ರಾಜ್ಯ ಸರಕಾರ ಇಂದು ನಡೆಯಲಿರುವ ಸಚಿವ ಸಂಪುಟದ ವಿಶೇಷ ಸಭೆಯ ಮುಂದೆ ಒಬಿಸಿ ಪ್ರಸ್ತುತ ಇರುವ ಮೀಸಲಾತಿ ಪ್ರಮಾಣವನ್ನು…
ಬೀದರ.17.ಏಪ್ರಿಲ್.25:-ಸನ್ಮಾನ್ಯ ಶ್ರೀ ಶಂಕರ ಬಿದರಿ ಅವರು ಅಭಾವಿಲಿ ಮಹಾಸಭಾ ಆದೇಶ ಹೊರಡಿಸಿ ತಮ್ಮ ಸಂಘಟನೆಯ ತಾಲೂಕಾ ಜಿಲ್ಲಾ ಘಟಕಗಳಿಗೆ ಬಸವ…
ಬೀದರ.17.ಏಪ್ರಿಲ್.25:- ಕಳೆದ ಬಿಜೆಪಿ ಸರ್ಕಾರದಲ್ಲಿ 2019-20ನೇ ಸಾಲಿನ ನಂತರದ ಎಲ್ಲ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್ ಕೂಟದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನು…
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 5,980 ಸಿಬ್ಬಂದಿಗೆ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ ವಿದ್ಯಾರ್ಹತೆ ಇಲ್ಲದ ಸಿಬ್ಬಂದಿಗೆ 'ಸೇವಾ ಭದ್ರತೆ' ನೀಡಲು…
ಬೀದರ.16.ಏಪ್ರಿಲ್.25. ಬೀದರ್ ನಗರಸಭೆಯೊಂದಿಗೆ 6 ಗ್ರಾಮ ಪಂಚಾಯ್ತಿಗಳ 16 ಗ್ರಾಮಗಳನ್ನು ಸೇರಿಸಿ ದೊಡ್ಡ ನಗರ ಪ್ರದೇಶ ಎಂದು ಘೋಷಿಸಲು ಮತ್ತು…