23 ನವೆಂಬರ24:- ಔರಾದ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀದರ ವಿಶ್ವವಿದ್ಯಾಲಯ ಬೀದರ ಸಹಯೋಗದಲ್ಲಿ ನಡೆದ 2024-25ನೇ ಸಾಲಿನ ಯೋಗಾಸನ ಪುರುಷ ಹಾಗೂ ಮಹಿಳೆಯರ ಸ್ಪರ್ಧೆ ಮತ್ತು ವಿಶ್ವವಿದ್ಯಾಲಯ ತಂಡಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು, ಔರಾದನ ಕಾಲೇಜು ಅಭಿವೃದ್ಧಿ ಮಂಡಳಿಯ ಸದಸ್ಯರಾದ ಶ್ರೀ ಶಿವರಾಜ ಅಲಮಾಜೆ ಮಾತನಾಡಿ ಸಧೃಡವಾದ ದೇಹದಲ್ಲಿ ಸಧೃಡವಾದ ಮನಸ್ಸನ್ನು ಯೋಗ ಕೊಡುತ್ತದೆ. ಯೋಗ ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯ ಉಂಟುಮಾಡುತ್ತದೆ ಎಂದು ಹೇಳಿದರು. ಅತಿಥಿಯಾಗಿ ಮಾತನಾಡಿದ ಯೋಗಾಚಾರ್ಯ ರಾಜಕುಮಾರ ನಾಯಕ ಮಾತನಾಡಿ ಯೋಗ ಜಗತ್ತಿಗೆ ಭಾರತ ಕೊಟ್ಟ ಬಹು ದೊಡ್ಡ ಕೊಡುಗೆಯಾಗುದ್ದು ಭಾರತವನ್ನು ವಿಶ್ವಗುರುವಾಗಿಸಿದೆ ಎಂದರು. ಇನ್ನೊರ್ವ ಅತಿಥಿಗಳಾದ ಕರ್ನಾಟಕ ಪದವಿ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕರಾದ ಡಾ. ಮಾದಯ್ಯ ಸ್ವಾಮಿ ಮಾತನಾಡಿ ಯೋಗವು ನೈಸರ್ಗಿಕ ಔಷಧೀಯ ಕಣಜವಾಗಿದೆ ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸ ಮಾಡಬೆಕಂದು ಸಲಹೆ ನೀಡಿದರು. ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಾಯಕ ಕೊತಮೀರ್ ಮಾತನಾಡಿ ಯೋಗ ಪ್ರತಿಯೊಬ್ಬರ ಮನಸ್ಸಿಗೆ ನೆಮ್ಮದಿ ,ಉತ್ತಮ ಆರೋಗ್ಯ, ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ನೆಮ್ಮದಿ ನೀಡುವ ದಿವ್ಯ ಔಷದಿಯಾಗಿದೆ ಎಂದರು. ಕಾರ್ಯಕ್ರಮದ ಅಧಕ್ಷತೆವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅಂಬಿಕಾದೇವಿ ಕೊತಮೀರ್ ಮಾತನಾಡಿ ಯೋಗ ಪ್ರಾಚೀನ ಭಾರತೀಯ ಚಿಂತನೆಯಾಗಿದ್ದು, ಇದು ಆರೋಗ್ಯದ ವಿಜ್ಞಾನ ಮತ್ತು ಆಧ್ಯಾತ್ಮಿಕ ಮಾರ್ಗದ ಸಾಧನವಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ 40 ಯೋಗ ಸ್ಪರ್ಧಾರ್ಥಿಗಳು ಭಾಗವಹಿಸಿದರು. ಪ್ರಾಸ್ತಾವಿಕ ನುಡಿ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕರಾದ ಶ್ರೀಮತಿ ಡಾ. ಉರ್ವಸಿ ಕೊಡಲಿ ನುಡಿದರು, ಸುಬ್ಬಣ್ಣ ಮುಲಗೆ ಸ್ವಾಗತಿಸಿದರು, ಡಾ.ಪ್ರಿಯಾಂಕಾ ವಂದಿಸಿದರು ಪ್ರೊ.ಮಹೇಶ್ ಕುಮಾರ ನಿರೂಪಿಸಿದರು . ಕಾಲೇಜಿನ ಬೋದಕ ಹಾಗೂ ಬೋದಕೇತರ ಸಿಬ್ಬಂದಿಗಳು, ಡಾ.ಸಂಜುಕುಮಾರ ಅಪ್ಪೆ, ಶ್ರೀ ಜಾಧವ, ಶ್ರೀರಾಮ ಜಾಧವ್, ಮಲ್ಲಣ್ಣ ಗೌಡ, ಬಾಬುಸಿಂಗ್, ಅಶೋಕ ಶೆಂಬಳ್ಳಿ, ಅಂಬದಾಸ ನೇಳಗೆ, ರವಿ ಡೋಳೆ ಮುಂತಾದವರು ಭಾಗವಹಿಸಿದರು.
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…
ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…
ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…
ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…