ಸಚಿವ ಡಾ.ಎಂ.ಸಿ.ಸುಧಾಕರ್ ಅವರ ತವರು ಕ್ಷೇತ್ರದಲ್ಲಿಯೇ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ 50 ಲಕ್ಷ ಪರಿಹಾರ್.!

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ನಿಯಮಾವಳಿಯ ತಿದ್ದುಪಡಿ ತಿಥ್ದುಪಡಿ ತಂದು ಎಲ್ಲಾ ಅತಿಥಿ ಉಪನ್ಯಾಸಕರಿಗೆ ನ್ಯಾಯ ಕೊಡಿಸಬೇಕು.

ಚಿಂತಾಮಣಿ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ ದಲ್ಲಿ ಕಳೆದ 12ವರ್ಷಕ್ಕೂ ಹೆಚ್ಚುಕಾಲದಿಂದ ವಾಣಿಜ್ಯಶಾಸ್ತ್ರ ಉಪನ್ಯಾಸಕನಾಗಿ ಸೇವೆ ಸಲ್ಲಿಸು ತ್ತಿದ್ದ ಸಹೋದರ ಎಂ.ನರಸಿಂಹಪ್ಪ ಅವರ ಅಕಾಲಿಕ ಮರಣಕ್ಕೆ ತುತ್ತಾಗಿರುವುದಕ್ಕೆ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ನರಸಿಂಹಪ್ಪ ಮಂಗಳವಾರ ಮೃತರಾಗಿದ್ದು ಮಡದಿ ಮಕ್ಕಳು ಮತ್ತು ಎರಡು ಮಕ್ಕಳನ್ನು ಅಗಲಿದ್ದಾರೆ.


ಸರಕಾರ ಕೂಡಲೇ ಮೃತರ ಕುಟುಂಬಕ್ಕೆ 50 ಲಕ್ಷ ಹಣವನ್ನು ಪರಿಹಾರದ ರೂಪದಲ್ಲಿ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಎಂ ಅರಿಕೆರೆ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಮೃತ ಎನ್.ನರಸಿಂಹಪ್ಪ ಸರಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯಶಾಸ್ತç ವಿಭಾಗದಲ್ಲಿ ಅತಿಥಿ ಉಪನ್ಯಾಸಕವಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಅಧ್ಯಾಪಕರಾಗಿದ್ದರು.

ಇವರ ಅಕಾಲಿಕ ಮರಣ ಅತಿಥಿ ಉಪನ್ಯಾಸಕ ಬಳಗವನ್ನು ದು:ಖದಲ್ಲಿ ಮುಳುಗುವಂತೆ ಮಾಡಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ತವರು ಕ್ಷೇತ್ರದಲ್ಲಿಯೇ ಅತಿಥಿ ಉಪನ್ಯಾಸಕರೊಬ್ಬರು ಮೃತಪಟ್ಟಿರುವುದು ತೀವ್ರ ಬೇಸರ ತರಿಸಿದೆ.

ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಕೂಡಲೇ ಮೃತ ಕುಟುಂಬಕ್ಕೆ ಸಾಂತ್ವಾನ ಹೇಳುವ ಜತೆಗೆ ಸರಕಾರದಿಂದ 50 ಲಕ್ಷ ರೂಪಾಯಿ ನೆರವನ್ನು ಘೋಷಣೆ ಮಾಡಬೇಕು.

ಮೃತರ ಪತ್ನಿಗೆ ಇಲಾಖೆ ಯಲ್ಲಿ ಉದ್ಯೋಗ ಒದಗಿಸುವ ಮೂಲಕ ನೊಂದ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯದಂತೆ ಮಾಡಬೇಕೆಂದು ಜಿಲ್ಲಾ ಅತಿಥಿ ಉಪನ್ಶಾಸಕರ ಸಂಘವು ಒತ್ತಾಯಿಸಿದೆ.

ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ನಿಯಮಾವಳಿಯ ತಿದ್ದುಪಡಿ ತಿಥ್ದುಪಡಿ ತಂದು ಎಲ್ಲಾ ಅತಿಥಿ ಉಪನ್ಯಾಸಕರಿಗೆ ನ್ಯಾಯ ಕೊಡಿಸಬೇಕು.

prajaprabhat

Recent Posts

ಜನಸಂಖ್ಯಾ ಸ್ಪೋಟದಿಂದ ದೇಶಕ್ಕೆ ಆಘಾತಕಾರಿ ಸಮಸ್ಯೆ: ಡಾ.ದಂಡಪ್ಪ ಬಿರಾದಾರ ಕಳವಳ

ರಾಯಚೂರು.03.ಆಗಸ್ಟ್.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಉಡಮಗಲ್ ಖಾನಾಪುರ…

1 hour ago

ಜಿಲ್ಲೆಯ ಬೆಳೆಗಳ ಬೆಳವಣಿಗೆ ಮತ್ತು ರಸಗೊಬ್ಬರದ ದಾಸ್ತಾನು ವಿವರವನ್ನು

ರಾಯಚೂರು.03.ಆಗಸ್ಟ್.25:- ಯೂರಿಯಾ ಗೊಬ್ಬರ ವಿತರಿಸಿದ ವಿವರ (ಮೆಟ್ರೀಕ್ ಟನ್ ಗಳಲ್ಲಿ) ಅನ್ನಪೂರ್ಣೇಶ್ವರಿ ಅಗ್ರೋ ಟ್ರೇಡಿಂಗ್ ಕ್ಯಾಂಪ್ ಬ್ಯಾಗ್ವಾಟ್ -9, ಬಂದೇನವಾಜ್…

1 hour ago

ಸಾರ್ವಜನಿಕರ ಪ್ರಾಯಾಣಕ್ಕೆ ತೊಂದರೆಯಾಗದಿರಲಿ- ಜಿಲ್ಲಾಧಿಕಾರಿ ಸುರೇಶ ಇಟ್ನಾಳ

ಕೊಪ್ಪಳ.03.ಆಗಸ್ಟ್.25: ಆಗಸ್ಟ್ 5 ರಿಂದ ಕೆ.ಎಸ್.ಆರ್.ಟಿ ನೌಕರರು ಮುಷ್ಕರವನ್ನು ಕೈಗೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸಾರ್ವಜನಿಕರ ಪ್ರಾಯಾಣಕ್ಕೆ ಯವುದೇ…

1 hour ago

ಜವಾಹರ ನವೋದಯ ವಿದ್ಯಾಲಯದಲ್ಲಿ ಪಿಯುಸಿಗೆ ಪ್ರವೇಶ ಆರಂಭ

ರಾಯಚೂರು.03.ಆಗಸ್ಟ್.25: ಪ್ರಸ್ತುತ ಶೈಕ್ಷಣಿಕ ವರ್ಷ 2025-26 ನೇ ಸಾಲಿಗೆ ಪಿಯುಸಿ ಪ್ರಥಮ ವರ್ಷದ ವಿಜ್ಞಾನ ವಿಷಯದ ತರಗತಿಗೆ ಪ್ರವೇಶ ಪ್ರಕ್ರಿಯೆ…

1 hour ago

ಒಪೆಕ್ ಆಸ್ಪತ್ರೆಯಲ್ಲಿನ ಹೊರಗುತ್ತಿಗೆ ನೇಮಕಾತಿ ಪ್ರಕ್ರಿಯೆ ನ್ಯಾಯಾಲಯ ಆದೇಶದಂತೆ ಮುಂದೂಡಿಕೆ

ರಾಯಚೂರು.03.ಆಗಸ್ಟ್.25: ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಧೀನದ ರಾಜೀವ್ ಗಾಂಧಿ ಸೂಪರ್‌ಸ್ಪೆಷಾಲಿಟಿ (ಓಪೆಕ್) ಆಸ್ಪತ್ರೆಯಲ್ಲಿ ಬೋಧಕೇತರ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ…

1 hour ago

ಆಗಸ್ಟ್ 7ರಂದು ಗೌರಿ ಗಣೇಶ ಹಬ್ಬದ ಪೂರ್ವಭಾವಿ ಸಭೆ

ರಾಯಚೂರು.03.ಆಗಸ್ಟ.25: ಆಗಸ್ಟ್ 27ರಂದು ಆಚರಿಸುವ ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಪೂರ್ವಭಾವಿ ಸಭೆಯು ಆಗಸ್ಟ್ 7ರ…

1 hour ago