ಪ್ರವಾಸೋದ್ಯಮ ಮತ್ತು ಸಂರಕ್ಷಣ್ಮಾತಕ ಕಾಮಗಾರಿ ಸ್ಥಳ ವೀಕ್ಷಣೆ:ಸಚಿವ ಈಶ್ವರ್ ಬಿ.ಖಂಡ್ರೆ

ಬೀದರ .28.ಏಪ್ರಿಲ್.27:- ಇಂದು ಮಧ್ಯಾಹ್ನ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಬಿ. ಖಂಡ್ರೆ ಅವರು ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಕೆ.ಆರ್.ಡಿ.ಬಿ.) ಯೋಜನೆಯಡಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣ್ಮಾತಕ ಕಾಮಗಾರಿಗಳ ಸ್ಥಳ ವೀಕ್ಷಣೆ ಮಾಡಿದರು.


ಸ್ಥಳ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಸಚಿವರು ಹೊನ್ನಿಕೆರಿ ಪರಿಸರ ಪ್ರವಾಸೋದ್ಯಮ ಯೋಜನೆಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮವಾಗಿದೆ. ಈ ಪ್ರವಾಸೋದ್ಯಮ ಸಾರ್ವಜನಿಕರಿಗೆ ಕೈ ಬಿಸಿ ಕರೆಯುವಂತಾಗಬೇಕು ಎಂದು ಹೇಳಿದರು.


ಈ ಭಾಗದಲ್ಲಿ ಅರಣ್ಯ ಪ್ರದೇಶದ ಜೊತೆಗೆ ಪ್ರವಾಸೋದ್ಯಮ ಬೆಳೆಯುವ ನಿಟ್ಟಿನಲ್ಲಿ ಒಂದು ಕ್ರಿಯೆ ಯೋಜನೆ ತಯಾರು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ, ಅದರಂತೆ ಅವರು ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ಹೊನ್ನಿಕೆರಿ ಪರಿಸರ ಪ್ರವಾಸೋದ್ಯಮ ಯೋಜನೆಯ ಕ್ರಿಯೆ ಯೋಜನೆಯನ್ನು ತಯಾರು ಮಾಡಿದ್ದಾರೆ. ಅದರಂತೆ ಇವಾಗ ಕೆ.ಕೆ.ಆರ್.ಡಿ.ಬಿ. ಯೋಜನೆಯಡಿಯಲ್ಲಿ ಸುಮಾರು 13 ಕೋಟಿ 50 ಲಕ್ಷ ರೂ. ಈಗಾಗಲೇ ಮಂಜೂರಾಗಿದೆ ಎಂದು ತಿಳಿಸಿದರು.


ಈ ಕಾಮಗಾರಿಯಿಂದ ಸ್ಥಳೀಯರಿಗೆ ಅನೇಕ ಲಾಭ ಆಗಲಿದೆ. ಹಾಗೆಯೇ ವಿದ್ಯಾರ್ಥಿ, ಕೂಲಿ ಕಾರ್ಮಿಕ, ಕೈಗಾರಿಕಾ ಉದ್ಯಮಿ ಹೀಗೆ ಅನೇಕ ವರ್ಗದವರಿಗೆ ಟ್ರಕ್ಕಿಂಗ್ ಪಾತ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.


ಈ ಯೋಜನೆ ಅಡಿಯಲ್ಲಿ ಪ್ರವಾಸಿಗರಿಗಾಗಿ ಕಲ್ಯಾಣಿಗಳ ಪುನರ್ ಚೇತನ, ದೋಣಿಯಲಿ ತರಗತಿ, ನಕ್ಷತ್ರ ವೀಕ್ಷಣೆ, ಕಾವಲು ಗೋಪುರ, ಮಾಹಿತಿ ಕೇಂದ್ರ, ಝರಿಗಳ ಪುನಶ್ಚೇತನ, ಶಿಬಿರದ ವಸತಿಗಳು ಸೇರಿದಂತೆ 5 ಕೀ. ಮೀ ಸೈಕ್ಲಿಂಗ್ ವ್ಯವಸ್ಥೆ ಕೂಡ ಮಾಡಲಾಗುವುದು ಎಂದು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ವಿಭಾಗೀಯ ಅರಣ್ಯ ಅಧಿಕಾರಿಗಳಾದ ವಾನತಿ ಎಂ.ಎA, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಕನಕಟ್ಟಾ, ವಲಯ ಅರಣ್ಯಧಿಕಾರಿ ಮಹೇಂದ್ರಕುಮಾರ್ ಮೋರೆ, ವಿನಯಕುಮಾರ್ ಮಾಳಗೆ, ಮಳಚಾಪುರ್ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಕುಮಾರ್ ಪಾಟೀಲ್, ಕಪಲಾಪುರ್ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶಕುಮಾರ್, ವಿಜಯಕುಮಾರ್ ಜಾಧವ್, ಶ್ರೀಕಾಂತ್ ರಾಠೋಡ್ ಹಾಗೂ ಸಂತೋಷ್ ಸುತಾರ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

prajaprabhat

Recent Posts

ಯುವತಿಗೆ ಚುಡಾಯಿಸಿದ ಆರೋಪ, ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ ದುಷ್ಕರ್ಮಿಗಳು!

ಬೆಳಗಾವಿ.12.ಆಗಸ್ಟ್.25:- ಬೆಳಗಾವಿ ಜಿಲ್ಲೆ ರಾಮದುರ್ಗ  ತಾಲ್ಲೂಕಿನಲ್ಲಿ ಗೊಡಚಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಈ ಇಬ್ಬರು ಯುವಕರನ್ನು  ಪರಿಶಿಷ್ಟ ಪಂಗಡಕ್ಕೆ…

23 minutes ago

ಸಾರಿಗೆ ಇಲಾಖೆಯಲ್ಲಿ 1,000 ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ.ಸಚಿವ ರಾಮಲಿಂಗ ರೆಡ್ಡಿ

ಬೆಂಗಳೂರು.12.ಆಗಸ್ಟ್.25:- ರಾಜ್ಯ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ 1,000 ಚಾಲಕ ಕಂ-ನಿರ್ವಾಹಕ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ಸಚಿವ ರಾಮಲಿಂಗ…

51 minutes ago

ರಾಜ್ಯ ಸರ್ಕಾರಿ ಕಾಲೇಜು’ಗಳಲ್ಲಿ  ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ.!

ರಾಜ್ಯದ ಸರ್ಕಾರಿ ಕಾಲೇಜು'ಗಳಲ್ಲಿ ಅರ್ಹ ಅತಿಥಿ ಉಪನ್ಯಾಸಕರನ್ನು ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.…

3 hours ago

ಅತಿಥಿ ಉಪನ್ಯಾಸಕರ ನೇಮಕ : ಅರ್ಜಿ ಆಹ್ವಾನ.

ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಕರ್ನಾಟಕ ಸರ್ಕಾರದ ವಸತಿ ಶಾಲೆಯನ್ನು ಪದವಿಪೂರ್ವ…

13 hours ago

ವೃತ್ತಿಪರ ಕುಶಲಕರ್ಮಿಗಳಿಗೆ ಉಪಕರಣಗಳಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ.11.ಆಗಸ್ಟ್.25: ಕೊಪ್ಪಳ ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಪಕರಣಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ…

13 hours ago

ಇಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಪ್ರವಾಸ

ಕೊಪ್ಪಳ.11.ಆಗಸ್ಟ್.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಮಾಲಿಪಾಟೀಲ ಅವರು ಆಗಸ್ಟ್ 12ರಂದು ಕೊಪ್ಪಳ ಜಿಲ್ಲೆಯ…

13 hours ago