Categories: ಕರ್ನಾಟಕ

ಸಂವಿಧಾನ V/S ಸನಾತನವಾದ’: ಹಿಂದೂ ಧರ್ಮ.

ಗದಗ:03.ಫೆ.25:- ಇವತ ಭಾರತ ದೇಶದಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಹಿಂದೂ ಧರ್ಮದ ವಿರೋಧಿ ಎಂದು ಬಹಳಷ್ಟು ಜನರು ಚಿತ್ರಣ ಮಾಡುತ್ತಾರೆ. ಆದರೆ, ಅವರು ಹಿಂದೂ ಧರ್ಮದ ವಿರೋಧಿ ಆಗಿರಲಿಲ್ಲ.

ಹಿಂದೂ ಕೋಡ್‌ ಬಿಲ್‌ ರಚನೆವರೆಗೂ ಅವರು ಹಿಂದೂ ಧರ್ಮದ ಸುಧಾರಣೆ ಶ್ರಮಿಸಿದರು ಎಂಬುದು ಅವರ ಬದುಕನ್ನು ಸರಿಯಾಗಿ ಅಧ್ಯಯನ ಮಾಡಿದರೆ ತಿಳಿಯುತ್ತದೆ’ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ಮಟ್ಟು ಹೇಳಿದರು.

ಶಿವಸುಂದರ್‌- ಆರ್‌ಎಸ್‌ಎಸ್‌’, ‘ನರೇಂದ್ರ ಮೋದಿ- ಸತ್ಯ’ ಎಲ್ಲರಿಗೂ ಗೊತ್ತಿರುವಂತೆ ಪರಸ್ಪರ ವಿರುದ್ಧ ಶಬ್ದಗಳು. ಅದೇರೀತಿ, ಸಂವಿಧಾನ- ಸನಾತನವಾದ’ ಕೂಡ. ಇದನ್ನು ಒಟ್ಟಿಗೆ ಕೇಳಲಿಕ್ಕೆ ಹಿಂಸೆ ಅನಿಸುತ್ತದೆ.

ಸಂವಿಧಾನ ಜಾರಿಗೆ ಬಂದು 75 ವರ್ಷಗಳ ನಂತರ ಸಂವಿಧಾನ ಉಳಿಸಿ ಎಂಬ ಪರಿಸ್ಥಿತಿಯಲ್ಲಿ ಇದ್ದೇವೆ. ಸಂವಿಧಾನ ರಕ್ಷಣೆ ಅಭಿಯಾನವೇ ನಾವಿರುವ ಪರಿಸ್ಥಿತಿಯನ್ನು ಸೂಚಿಸುತ್ತದೆ’ ಎಂದರು.

‘ಯಾವುದಾದರೂ ವಿಷಯದ ಬಗ್ಗೆ ಎಚ್ಚರದಿಂದ ಇರುವುದು ಬೇರೆ. ಅದಕ್ಕಿಂತ ಮುಖ್ಯವಾಗಿ ನಾವು ಸ್ಪಷ್ಟತೆ ಹೊಂದಬೇಕು. ಹಾಗಿದ್ದಾಗ ಮಾತ್ರ ನಾವು ಸೈದ್ಧಾಂತಿಕವಾಗಿ ದಿಟ್ಟ ಹೆಜ್ಜೆಗಳನ್ನು ಇಡಲು ಸಾಧ್ಯ’ ಎಂದು ಹೇಳಿದರು.

‘1927ರಲ್ಲಿ ಅಂಬೇಡ್ಕರ್‌ ಅವರು ಮನುಸ್ಮೃತಿಯನ್ನು ಸುಟ್ಟುಹಾಕಿದರು. ಆದಾದ 22 ವರ್ಷಗಳ ಬಳಿಕ ಸಂವಿಧಾನ ರಚಿಸಿದರು. ಅಂಬೇಡ್ಕರ್‌ ಅವರು 97 ವರ್ಷಗಳ ಹಿಂದೆಯೇ ಈ ಸನಾತನಧರ್ಮವನ್ನು ಸಾರ್ವಜನಿಕವಾಗಿ ಸುಟ್ಟುಹಾಕಿದ್ದರು. ಆದರೆ, ಈಗ ಅದು ಬೂದಿಯಿಂದ ಮೇಲೇಳುತ್ತಿದೆ. ಅದರ ಭಾಗವಾಗಿಯೇ ಹಲವಾರು ಘಟನೆಗಳು, ಸುಳ್ಳು ಸೃಷ್ಟಿಗಳು ನಮ್ಮ ಸುತ್ತಮುತ್ತ ನಡೆಯುತ್ತಿವೆ. ಜನರಿಗೆ ಅದನ್ನೇ ನಿಜ ಎಂದು ನಂಬಿಸುವ ಪ್ರಯತ್ನಗಳು ನಡೆದಿವೆ’ ಎಂದು ಹೇಳಿದರು.

ನಾವು ಬುದ್ಧ, ಬಸವ, ಅಂಬೇಡ್ಕರ್‌ ಅವರನ್ನು ಪೂರ್ಣವಾಗಿ ಸ್ವೀಕರಿಸಿದ್ದೇವೆ. ಅವರ ತತ್ವ, ಸಿದ್ಧಾಂತಗಳಿಗೆ ನಾವು ಬದ್ಧರಾಗಿದ್ದೇವೆ. ಆರ್‌ಎಸ್‌ಎಸ್‌ ಅನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ. ನಮ್ಮಲ್ಲಿ ಆತ್ಮವಂಚನೆ ಇಲ್ಲ. ಆದರೆ, ವಿ.ಡಿ.ಸಾವರ್ಕರ್‌, ಕೆ.ಬಿ.ಹೆಡ್ಗೆವಾರ್, ಮೋಹನ್‌ ಭಾಗವತ್‌ವರೆಗೆ ಆತ್ಮವಂಚನೆ ಮಾಡಿಕೊಂಡು ಬರುತ್ತಿದ್ದಾರೆ. ಕಾಲಕಾಲಕ್ಕೆ ವರಸೆ ಬದಲಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಆರ್‌ಎಸ್‌ಎಸ್‌ ಪ್ರೇರಣೆ ಪಡೆದಿದ್ದು ಹಿಟ್ಲರ್‌ ಮತ್ತು ಮುಸಲೋನಿಯಿಂದ. ಹಿಂದೂ ರಾಷ್ಟ್ರ ಮಾಡಲು ಸರ್ವಾಧಿಕಾರಿ ಬೇಕು, ಅವನು ಯಾವಾಗ ಬರತ್ತಾನೋ ಗೊತ್ತಿಲ್ಲ. ಆದರೆ, ಪ್ರಯತ್ನ ಮುಂದುವರಿಯಬೇಕು ಎಂದು ಹೇಳಿ 85 ವರ್ಷ ನಿರಂತರ ಪ್ರಯತ್ನ ಮಾಡಿದರು. ಕೊನೆಗೆ ಮೋದಿ ಸಿಕ್ಕರು’ ಎಂದು ಹೇಳಿದರು.

‘ಆರ್‌ಎಸ್‌ಎಸ್‌ನಿಂದ ಸೈದ್ದಾಂತಿಕ ಬದ್ಧತೆ ಕಲಿಯಬೇಕು ಅಂತ ವೈಯಕ್ತಿವಾಗಿ ನನಗೆ ಅನಿಸುತ್ತದೆ. ಅವರು ಹೊರನೋಟಕ್ಕೆ ಹೇಗೆ ಕಾಣಿಸಿಕೊಂಡರೂ, ಒಳಗೆ ಸಿದ್ಧಾಂತಕ್ಕೆ ಬದ್ಧರಿರುತ್ತಾರೆ. ನಾವು ಕಾಲಕಾಲಕ್ಕೆ ಹೊಂದಾಣಿಕೆ ಮಾಡಿಕೊಂಡ ಕಾರಣ ವೈಚಾರಿಕ ಸ್ಪಷ್ಟತೆ ಇಲ್ಲ.

ಹೊಂದಾಣಿಕೆ ಮಾಡಿಕೊಂಡರೆ ಬದಲಾವಣೆ, ಪರಿವರ್ತನೆ ಸಾಧ್ಯವಿಲ್ಲ’ ಎಂದು ಹೇಳಿದರು.

ಇತಿಹಾಸ ಸತ್ಯವನ್ನೇ ದಾಖಲಿಸುತ್ತದೆ. ನರೇಂದ್ರ ಮೋದಿ ಅವರು ಇತಿಹಾಸದಲ್ಲಿ ಉಳಿಯುವುದು ಮಹಾನ್‌ ಸುಳ್ಳು ಕೋರ ಪ್ರಧಾನಿ ಅಂತ ಮಾತ್ರ’ ಎಂದು ಟೀಕಿಸಿದರು.

ಐವರು ಪೌರಕಾರ್ಮಿಕರು ‘ಸಂವಿಧಾನ ವರ್ಸಸ್‌ ಸನಾತನವಾದ’ ‍ಪುಸ್ತಕ ಲೋಕಾರ್ಪಣೆ ಮಾಡಿದರು. ದಲಿತ ಕಲಾಮಂಡಳಿಯ ಯುವಕರು ಕ್ರಾಂತಿಗೀತೆ ಹಾಡಿದರು. ಅಲ್ಲಮಪ್ರಭು ಬೆಟ್ಟದೂರ, ಮುತ್ತು ಬಿಳೆಯಲಿ, ಡಾ. ರಾಮಚಂದ್ರ ಹಂಸನೂರ, ಬಸವರಾಜ ಸೂಳಿಭಾವಿ, ವಿರತೇಶಾನಂದ ಸ್ವಾಮೀಜಿ ಸೇರಿದಂತೆ ಹಲವರು ಇದ್ದರು.

-ಎಚ್‌.ಕೆ.ಪಾಟೀಲ, ಸಚಿವಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇಮಕಾತಿಯನ್ನೇ ಬಂದ್‌ ಮಾಡಿವೆ. ಹೊರಗುತ್ತಿಗೆ ಮೂಲಕ ಅಂಬೇಡ್ಕರ್‌ ರಚಿಸಿದ ಸಂವಿಧಾನದ ಕುತ್ತಿಗೆ ಹಿಚುಕಿ; ಅರ್ಹರಿಗೆ ದೊರಕಬೇಕಾಗಿರುವ ಅವಕಾಶಗಳನ್ನು ದೂರ ಮಾಡಿದ್ದೇವೆ. ಇದರ ಬಗ್ಗೆಯೂ ಚರ್ಚೆ ಆಗಬೇಕು.

‘ಎಚ್ಚರಿಕೆಯಿಂದ ಇರುವುದು ಅಗತ್ಯ’

‘ಆಧ್ಯಾತ್ಮಿಕ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಸಾಮಾಜಿಕ ರಾಜಕೀಯ ವೈಚಾರಿಕ ವಿಚಾರದೊಳಗೆ ನನಗಿಂತ ಗಟ್ಟಿಯಾಗಿ ನಿಂತವರು ಬೇರೆ ಯಾರೂ ಇಲ್ಲ’ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಮತ್ತೊಂದು ಸಂವಿಧಾನ ಬರಲಿದೆ ಶ್ರೇಷ್ಠ ಸಂವಿಧಾನ ಆಗಲಿದೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಅದರ ಬಗ್ಗೆ ಈಗ ಗಂಭೀರವಾಗಿ ಮಾತನಾಡುವುದು ಅಗತ್ಯ. ಈ ದೇಶಕ್ಕೆ ಇನ್ನೊಂದು ಸಂವಿಧಾನ ಮಾಡಬೇಕು ಎಂಬ ಆಲೋಚನೆ ಪ್ರಕ್ರಿಯೆ ಹೊಂದಿದವರು ದೇಶದ್ರೋಹಿಗಳು’ ಎಂದರು.

‘ಆ ರೀತಿ ವೈಚಾರಿಕ ಗ್ರಂಥ ಹಿಡಿದುಕೊಂಡು ಸಮಾಜವನ್ನು ಒಡೆಯುವ ಆಲೋಚನೆ ವಿಷ ಬೀಜ ಬಿತ್ತುವ ಆಲೋಚನೆ ಹೊಂದಿರುವವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.

‘ನಮ್ಮಲ್ಲಿರುವುದು ಎರಡೇ ಭಾರತ. ಅಣ್ಣ ತಮ್ಮಂದಿರಂತೆ ಬದುಕುವ ಗಾಂಧೀ ಭಾರತ. ಜಾತಿ ಭೇದ ಮಾಡುವ ಗೋಡ್ಸೆ ಭಾರತ. ಯಾವ ಭಾರತ ಅಪ್ಪಿಕೊಳ್ಳಬೇಕು ಎಂಬ ನಿರ್ಣಯ ಮಾಡಬೇಕು’ ಎಂದರು.

Source : ‘ಸಂವಿಧಾನ V/S ಸನಾತನವಾದ’: ಹಿಂದೂ ಧರ್ಮ ಸುಧಾರಣೆಗೆ ಶ್ರಮಿಸಿದ ಅಂಬೇಡ್ಕರ್‌
https://dhunt.in/

prajaprabhat

Share
Published by
prajaprabhat

Recent Posts

2025–26ನೇ ಶೈಕ್ಷಣಿಕ ವರ್ಷಕ್ಕೆ ಕರ್ನಾಟಕದಾದ್ಯಂತ ಅತಿಥಿ ಉಪನ್ಯಾಸಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು.04.ಆಗಸ್ಟ್.25:- 2025–26ನೇ ಶೈಕ್ಷಣಿಕ ವರ್ಷಕ್ಕೆ ಹೊಸ ಅರ್ಜಿಗಳನ್ನು ಆಹ್ವಾನಿಸುವ ಕಾಲೇಜು ಶಿಕ್ಷಣ ಇಲಾಖೆ ಇತ್ತೀಚಿನ ಅಧಿಸೂಚನೆಯ ಬಗ್ಗೆ ಕರ್ನಾಟಕದಾದ್ಯಂತ ಅತಿಥಿ…

7 hours ago

ಉತ್ತರ ಪ್ರದೇಶದಲ್ಲಿ ಪ್ರವಾಹದ ಅಬ್ಬರ: ಹಲವು ಜಿಲ್ಲೆಗಳಲ್ಲಿ ಗಂಗಾ, ಯಮುನಾ ನದಿಗಳು ಅಪಾಯದ ಮಟ್ಟ ದಾಟಿವೆ.

ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…

10 hours ago

ಭಾವನಗರ-ಅಯೋಧ್ಯಾ ಸಾಪ್ತಾಹಿಕ ರೈಲಿಗೆ ರೈಲ್ವೆ ಸಚಿವರು ಹಸಿರು ನಿಶಾನೆ ತೋರಿಸಿದರು.

ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…

10 hours ago

ರಷ್ಯಾದ ಕುರಿಲ್ ದ್ವೀಪಗಳಲ್ಲಿ 6.8 ತೀವ್ರತೆಯ ಭೂಕಂಪನ

ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…

10 hours ago

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಿಂದ ಶ್ರೀ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…

10 hours ago

ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ,

ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…

10 hours ago