ಸಂವಿಧಾನ ಸಂರಕ್ಷಕರ ಸಮಾವೇಶ ಕಾರ್ಯಕ್ರಮ ಜಿಗ್ನೇಶ್ ಮೇವಾನಿ ಕರೆ.!

ದಾವಣಗೆರೆ.26.ಏಪ್ರಿಲ್.25:- ಬಾಬಾಸಾಹೇಬರ ಡಾ.ಭೀಮರಾವ ಅಂಬೇಡ್ಕರ ಅವರು ಸಮಾನತೆಯ, ಸಾಮಾಜಿಕ ನ್ಯಾಯದ ಆಶಯದ ಸಂವಿಧಾನದ ಮೇಲೆ ದಾಳಿ ಮಾಡಿ ಮುಗಿಸಲು ಕೆಲವರು ಸಂವಿಧಾನ  ವಿರೋಧಿಗಳು ತೀರ್ಮಾನ ಮಾಡಿದ್ದಾರೆ, ಅದರ ವಿರುದ್ಧ ಸಂವಿಧಾನವನ್ನು ಉಳಿಸಲು ಪಣ ತೊಡೋಣ ಎಂದು ಗುಜರಾತ್‌ನ ಯುವ ಹೋರಾಟಗಾರ, ಶಾಸಕ ಜಿಗ್ನೇಶ್ ಮೇವಾನಿ ಕರೆ ನೀಡಿದ್ದಾರೆ.

ಶನಿವಾರ ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಎದ್ದೇಳು ಕರ್ನಾಟಕ ಸಂಘಟನೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಸಂರಕ್ಷಕರ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಭಾರತ ಭೂಮಿ ಮೋದಿ, ಆರೆಸ್ಸೆಸ್, ಮೋಹನ್ ಭಾಗವತ್ ಅವರ ದೇಶವಲ್ಲ. ಇದು ಬಸವಣ್ಣ , ಬಾಬಾಸಾಹೇಬರ, ರವಿದಾಸ್, ಪೆರಿಯಾರ್ ಅವರ ದೇಶ. ಇದು ಭಗತ್ ಸಿಂಗ್, ಸುಖದೇವ್, ರಾಜಗುರು, ನಾರಾಯಣಗುರು ಅವರ ನೆಲ. ಈ ದೇಶ ಉಳಿಸಲು ಯಾರೆಲ್ಲ ತ್ಯಾಗ, ತಪಸ್ಸು ಮಾಡಿದ್ದರೋ ಯಾವ ದೇಶದಲ್ಲಿ 23 ವರ್ಷದಲ್ಲಿ ಭಗತ್ ಸಿಂಗ್ ಪ್ರಾಣ ನೀಡಿದ್ದರೋ ಅಂತಹ ದೇಶವನ್ನು ಈಗ ಕೆಲವು ವರ್ಷಗಳಿಂದ ಆಳುತ್ತಿರುವವರ ವಶಕ್ಕೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಜಿಗ್ನೇಶ್ ಮೇವಾನಿ ಹೇಳಿದರು.

ಇಲ್ಲಿ 50 ವರ್ಷಗಳಿಂದ ರೈತರು, ಕಾರ್ಮಿಕರಿಗಾಗಿ ಹೋರಾಟ ನಡೆಸುತ್ತಿರುವ ಜನರಿದ್ದಾರೆ. ಈಗ ಅದನ್ನು ಮುಂದಕ್ಕೆ ಒಯ್ಯುವ ಹೊಣೆ ನಮ್ಮ ಯುವತಲೆಮಾರಿನ ಹೆಗಲ ಮೇಲಿದೆ ಎಂದ ಅವರು, ಇಡೀ ದೇಶದ ಬಂಡವಾಳಿಗರಿಂದು ಅದಾನಿ-ಅಂಬಾನಿಗಳಂತೆ ಮೋದಿ ಪಡೆಯ ಜೊತೆಗೆ ನಿಂತಿದ್ದಾರೆ. ಶ್ರಮಜೀವಿಗಳು, ಬಡವರು, ದಲಿತರು ಇವರ ದಾಳಿಗೆ ಗುರಿಯಾಗುತ್ತಿದ್ದಾರೆ. ಮುಂದಿರುವ ದಾರಿ ಒಂದೇ, ನಾವೆಲ್ಲ ನಮ್ಮ ನಮ್ಮ ಊರುಗಳಲ್ಲಿ, ಕೇರಿಗಳಲ್ಲಿ, ಜಿಲ್ಲೆಗಳಲ್ಲಿ ಆರೆಸ್ಸೆಸ್ ಶಾಖೆಗಳ ವಿರುದ್ಧ ಸಂವಿಧಾನದ ಪಡೆಗಳನ್ನು ಕಟ್ಟೋಣ, ಸಂವಿಧಾನದ ಆಶಯಗಳನ್ನು ನಿಜವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡೋಣ ಎಂದು ಜಿಗ್ನೇಶ್ ಮೇವಾನಿ ಕರೆ ನೀಡಿದರು.

ನಾವು ಚುನಾವಣೆಯಲ್ಲಿ ಆರೆಸ್ಸೆಸ್ ಬಿಜೆಪಿಯನ್ನು ಸೋಲಿಸಬೇಕು, ಜತೆಗೆ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ನಾನು ಮತ್ತೆ ಮತ್ತೆ ಕರ್ನಾಟಕಕ್ಕೆ ಬರುವೆ. ಎಂದಿಗೂ ನಿಮ್ಮ ಜತೆಗಿರುವೆ ಎಂದರು.

ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ದೇಶ ಪ್ರೇಮ, ದೇಶದ್ರೋಹ, ಸ್ವಾತಂತ್ರ್ಯ, ಸಮಾನತೆ ಎಲ್ಲವನ್ನೂ ಅಪವ್ಯಾಖ್ಯಾನ ಮಾಡುತ್ತಿರುವ ಸಮಯದಲ್ಲಿದ್ದೇವೆ. ಯಾರು ಜನಸಾಮಾನ್ಯರನ್ನು, ಸಂವಿಧಾನವನ್ನು ಗೌರವಿಸುತ್ತಾರೋ, ಯಾರು ಸಮಾನತೆ, ಸಂವಿಧಾನದ ಪರವಾಗಿರುತ್ತಾರೋ, ಅವರೇ ನಿಜವಾದ ದೇಶಪ್ರೇಮಿಗಳು ಎಂದು ಅಭಿಪ್ರಾಯಪಟ್ಟರು.

ಪಕ್ಷದಲ್ಲಿ ಇದ್ದು ಪಕ್ಷವನ್ನು ಮೀರಿ ನೋಡುವ ರಾಜಕೀಯ ನಾಯಕತ್ವ ಬೇಕು. ಧರ್ಮದಲ್ಲಿ ಇದ್ದು ಧಾರ್ಮಿಕತೆ ಮೀರಿದ ಧಾರ್ಮಿಕ ನಾಯಕತ್ವ ಈ ದೇಶಕ್ಕೆ ಬರಬೇಕು. ಸಮಾಜವಾದ ಎನ್ನುವ ಪದ ಸಂವಿಧಾನ ಪೀಠಿಕೆಯಲ್ಲಿ ಮೊದಲು ಇರಲಿಲ್ಲ. ಆದರೆ, ಅಂಬೇಡ್ಕರ್ ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಾ, ಸಂವಿಧಾನದ ಒಳಗೆ ಸಮಾಜವಾದ ಇದೆ ಎಂದು ಹೇಳಿದ್ದರು ಎಂದರು.

ದಲಿತ ಸಂರಕ್ಷಣಾ ಸಮಿತಿ ನಾಯಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಎಲ್ಲ ಸಂಘಟನೆಗಳು ಇಲ್ಲಿ ಒಟ್ಟು ಗೂಡಿವೆ. ಆದರೆ ಎಲ್ಲರೂ ಬಿಡಿ ಬಿಡಿಯಾಗಿ ಹೋರಾಟ ಮಾಡುತ್ತಿದ್ದೇವೆ. ಇದು ಒಂಟಿ ಕಾಲಿನ ನಡಿಗೆಯಾಗುತ್ತಿದೆ. ಇಂತಹ ಬಿಡಿ ಬಿಡಿಯಾದ ಹೋರಾಟದಿಂದ ಬದಲಾವಣೆ ಸಾಧ್ಯವಿಲ್ಲ. ಆದ್ದರಿಂದ ಇಂತಹ ಎಲ್ಲ ಹೋರಾಟವನ್ನು ಒಂದುಗೂಡಿಸುವ ವೇದಿಕೆ ಇದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ದಸಂಸ ಹಿರಿಯ ನಾಯಕ ಎನ್.ವೆಂಕಟೇಶ್, ಅರ್ಥ ಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಹಿರಿಯ ಸಾಹಿತಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕರ್ನಾಟಕ ಜನಶಕ್ತಿಯ ಅಧ್ಯಕ್ಷ ನೂರ್ ಶ್ರೀಧರ್, ಎದ್ದೇಳು ಕರ್ನಾಟಕ ಸೆಂಟ್ರಲ್‌ಕಿಂಗ್ ಕಮಿಟಿ ಸದಸ್ಯೆ ತಾರಾ ರಾವ್, ಜಮಾಅತ್-ಎ-ಇಸ್ಲಾಮಿ-ಹಿಂದ್ ನ ಮುಹಮ್ಮದ್ ಯೂಸೂಫ್ ಖನ್ನಿ, ಸೆಂಟ್ ಜೋಸೆಫ್ ಕಾನೂನು ವಿಶ್ವವಿದ್ಯಾನಿಲಯ ನಿರ್ದೇಶಕ ಫಾದರ್ ಜೆರಾಲ್ಡ್ ಡಿಸೋಜಾ, ವಕೀಲ ಅನೀಸ್ ಪಾಷಾ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಕರಿಬಸಪ್ಪ, ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಸತೀಶ್ ಅರವಿಂದ್, ಎಪಿಸಿಆರ್ ಜಿಲ್ಲಾ ಕಾರ್ಯದರ್ಶಿ ನಿಝಾಮುದ್ದೀನ್ ಭಾಗವಹಿಸಿದ್ದರು.

prajaprabhat

Recent Posts

ರಾಜ್ಯಾದ್ಯಂತ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ದಾರರು ಪತ್ತೆ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು.11.ಆಗಸ್ಟ್.25:-ರಾಜ್ಯದಲ್ಲಿ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ. ಗುರುತಿಸಲಾಗಿರುವ ಅನರ್ಹ ಪಡಿತರದಾರರನ್ನು ಎಪಿಎಲ್‍ಗೆ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಲಾಗುವಾದು ಅಂದು…

59 minutes ago

ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತ: ನಂದಾದೀಪ ಬೋರಾಳೆ

ಔರಾದ.11.ಆಗಸ್ಟ್.25:- ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತಯುವಕರು…

2 hours ago

ಡಾ.ಬಿ.ಆರ್.ಅಂಬೇಡ್ಕರ್ & ವಿವಿಧ ಅಭಿವೃದ್ಧಿ ನಿಗಮಗಳಿಂದ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕೊಪ್ಪಳ.11.ಆಗಸ್ಟ್.25: 2025-26 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,…

3 hours ago

ಆಧಾರ್ ಸೀಡಿಂಗ್ ಮಾಡಿಸುವಂತೆ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸೂಚನೆ.

ರಾಯಚೂರು.11.ಆಗಸ್ಟ್.25: ಇಲ್ಲಿನ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಜಿಲ್ಲೆಯ ಎಸ್.ಎಸ್.ಎಲ್.ಸಿ ಪ್ರೋತ್ಸಾಹಧನಕ್ಕಾಗಿ 2020 ರಿಂದ 2025ರವರೆಗೆ ಆಧಾರ್…

4 hours ago

ಪರೀಕ್ಷೆಯ ಫಲಿತಾಂಶ ಕಡಿಮೆ ಬಂದಿದ್ರೆ ‘ಶಾಲೆ’ಗಳ ವಿರುದ್ಧ ಕ್ರಮ ರಾಜ್ಯ ಸರ್ಕಾರ ಆದೇಶ

ಬೆಂಗಳೂರು.11.ಆಗಸ್ಟ್.25:- ರಾಜ್ಯದ ಸರ್ಕಾರಿ ಹಾಗೂ ಅನುದಾನಿತ್ ಶಾಲೆಗಳ SSLC ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಾಜ್ಯ…

4 hours ago

ಯೂರಿಯಾ, ಡಿಎಪಿ ರಸಗೊಬ್ಬರ ಲಭ್ಯ: ಪ್ರಕಾಶ್ ಚೌಹಾಣ್

ರಾಯಚೂರು.11.ಆಗಸ್ಟ್.25:- ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ 2025-26 ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಗೆ ನಿಗದಿಪಡಿಸಿದ ಗುರಿಯಂತೆ ಯೂರಿಯಾ, ಡಿ.ಎ.ಪಿ ರಸಗೊಬ್ಬರ…

4 hours ago