ಔರಾದ :-ತಾಲೂಕಿನ ಪ್ರಗತಿಪರ ಹೊರಾಟಗಾರರು, ಯುವ ನಾಯಕರಾದ ಸುಧಾಕರ ಕೊಳ್ಳುರ್ ಅವರ ನೆತೃತ್ವದಲ್ಲಿ ಔರಾದ ಪಟ್ಟಣದ ವಿವಿಧ ಇಲಾಖೆಗಳಾದ ತಾಲೂಕಾ ವೈದ್ಯಾಧಿಕಾರಿಗಳ ಕಛೆರಿ, ತಾಲೂಕಾ ಪಂಚಾಯತ್, ತಾಲೂಕಾ ವಕಿಲರ ಸಂಘ, ಸಮಾಜ ಕಲ್ಯಾಣ ಇಲಾಖೆ ಅಗ್ನೀಶಾಮಕ ಕಛೆರಿ, ಪೋಲಿಸ್ ಠಾಣೆ, ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಪ್ರೌಢ ಶಾಲೆ ಹಾಗೂ ಅಮರೇಶ್ವರ ಗುರುಕುಲ ಗಳಿಗೆ ಭೇಟಿ ನೀಡಿ ಸಂವಿಧಾನ ಪಿಠಿಕೆಯ ಡಿಜಿಟಲ್ ಪ್ರತಿಗಳನ್ನು ಹಂಚಿ ಸಂವಿಧಾನ ಜಾಗೃತಿಯನ್ನು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುಧಾಕರ ಕೊಳ್ಳುರ್ ಅವರು ಭಾರತಿಯ ಸಂವಿಧಾನ ವಿಶ್ವದಲ್ಲಿಯೆ ಶ್ರೇಷ್ಠವಾದ ಸಂವಿಧಾನವಾಗಿದೆ. ಇದು ದೇಶದ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶ ಹಾಗೂ ಅಧಿಕಾರಗಳನ್ನು ನಿಡಿ ಸಮಾನತೆಯ ತತ್ವದ ಆಧಾರದ ಮೆಲೆ ವಿಶ್ವಕ್ಕೆ ಏಕತೆಯ ಸಂದೇಶವನ್ನು ನಿಡಿದೆ ಎಂದು ಹೇಳಿದರು. ಪ್ರಗತಿಪರ ಚಿಂತಕ ನಂದಾದೀಪ ಬೋರಳೆ ಅವರು ಮಾತನಾಡಿ. ಸಾವಿರಾರು ವಷ೯ದ ದಾಸ್ಯದಿಂದ ಮುಕ್ತಗೊಳಿಸಿ ದೇಶದ ಎಲ್ಲಾ ಜಾತಿ,ಧಮ೯ದ ಜನರಿಗೆ ಗೌರವಯುತ ಜೀವನ ನಡೆಸಲು ಮತ್ತು ಸ್ವಾಭಿಮಾನದಿಂದ ಬದುಕಲು ಅವಕಾಶ ನಿಡಿದ ಈ ಸಂವಿಧಾಕ್ಕೆ ಗೌರವಿಸುವುದು ನಮ್ಮೆಲ್ಲ ಭಾರತೀಯರ ಕತ೯ವ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ್ ಕಾಯ೯ನಿವಾ೯ಹಕ ಅಧಿಕಾರಿಗಳಾದ ಶಿವಕುಮಾರ್ ಘಾಟೆ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳಾದ ಅನಿಲಕುಮಾರ್ ಮೆಲ್ದೋಡ್ಡಿ, ತಾಲೂಕಾ ವೈದ್ಯಾಧಿಕಾರಿಗಳ ಗಾಯತ್ರೀ ಮೆಡಮ್, ಪ್ರಕಾಶ ದೂಧಮಾಂಡೆ, ರತ್ನದೀಪ ಕಸ್ತೂರೆ, ಬಸವರಾಜ್ ಶೆಟಕಾರ್, ಸುನಿಲ್ ಮಿತ್ರಾ, ವೈಜಿನಾಥ ಒಡೆಯರ್ ಹಾಗೂ ಇನ್ನಿತರರು ಇದ್ದರು.
ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…
ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…
ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…
ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…
ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…