ವಿಶ್ವವಿದ್ಯಾಲಯಮಟ್ಟದಲ್ಲಿ’ಸಂವಿಧಾನ’ ಪಠ್ಯ ಕಡ್ಡಾಯವಾಗಿ ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾದವರು ಮಾತ್ರ ಬೋಧಿಸುವದು. ಕುಲಪತಿ

ಮಂಗಳೂರು.26.ಮಾರ್ಚ್.25:-ಸಂವಿಧಾನ” ಪಠ್ಯವನ್ನು ಕಡ್ಡಾಯವಾಗಿ ರಾಜ್ಯಶಾಸ್ತ್ರ ಅಥವಾ ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರಾದವರು ಮಾತ್ರ ಬೋಧಿಸುವುದನ್ನು. ವಿಶ್ವವಿದ್ಯಾಲಯ ವ್ಯಾಪ್ತಿಯ ಶೈಕ್ಷಣಿಕ ಮಂಡಳಿ ಸಭೆ ಮಂಗಳವಾರ ನಿರ್ಧರಿಸಿದೆ.

ಕೊಣಾಜೆಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ|ಪಿ.ಎಲ್‌. ಧರ್ಮ ಅಧ್ಯಕ್ಷತೆಯಲ್ಲಿ ಆನ್‌ಲೈನ್‌ ಮೂಲಕ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

ಮಾಜಿ (ಪ್ರಭಾರ) ಕುಲಪತಿ ಪ್ರೊ| ಜಯರಾಜ್‌ ಅಮೀನ್‌ ಅವರು ಪ್ರಸ್ತಾವಿಸಿ ರಾಜ್ಯಶಾಸ್ತ್ರ ಉಪನ್ಯಾಸ ಕರು ಇಲ್ಲದ ಕಾಲೇಜುಗಳಲ್ಲಿ ಇತರೆ ಉಪನ್ಯಾಸಕರು ಸಂವಿಧಾನ ಪಠ್ಯವನ್ನು ಬೋಧಿಸುತ್ತಿದ್ದಾರೆ. ಇದು ನಿಯಮ ಉಲ್ಲಂಘನೆ ಎಂದರು.

ಕುಲಪತಿಯವರು ಉತ್ತರಿಸಿ, ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 150 ಪದವಿ ಕಾಲೇಜು ಗಳಿವೆ. 8 ಮಂದಿ ರಾಜ್ಯಶಾಸ್ತ್ರ ಉಪನ್ಯಾ ಸಕರ ಪೈಕಿ ಇಬ್ಬರು ಡೀಮ್ಡ್ ವಿಶ್ವವಿದ್ಯಾಲಯ ತೆರಳಿದ್ದಾರೆ.

ಉಳಿದದ್ದು ಆರು ಮಂದಿ ಮಾತ್ರ. ಹೀಗಿರುವಾಗ ಇತರೆ ಉಪನ್ಯಾಸಕರು ಸಂವಿಧಾನ ಬಗ್ಗೆ ತರಗತಿಯಲ್ಲಿ ಪಾಠ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಸಂವಿಧಾನ ವಿಷಯ ತಿಳಿದವರೇ ಅದನ್ನು ಬೋಧಿಸಬೇಕು. ಶೀಘ್ರವೇ ಕಾಲೇಜುಗಳಿಗೆ ನೋಟಿಸ್‌ ಕಳುಹಿಸುವುದಾಗಿ ತಿಳಿಸಿದರು.

ವಿದೇಶಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಲ್ಲಿ ಪಿಎಚ್‌.ಡಿ ಅನಂತರದ ಕಲಿಕೆಗೆ ಅನುಮತಿ ಕೋರಲಾಗಿದೆ. ಆದರೆ ವಿಶ್ವವಿದ್ಯಾಲಯ ಆರ್ಥಿಕ ಹೊರೆಯಾಗದಂತೆ ವಿದ್ಯಾರ್ಥಿಗಳ ಸ್ವಂತ ಖರ್ಚಿನಲ್ಲಿ ಕಲಿಕೆಗೆ ಅನುಮತಿ ಸಲು ನಿರ್ಧರಿಸಲಾಯಿತು.

ಇತರ ವಿದೇಶಿ ವಿದ್ಯಾರ್ಥಿಗಳಿಗೂ ಇದೇ ರೀತಿ ಅವರದೇ ಖರ್ಚಿನಲ್ಲಿ ಅಧ್ಯಯನ ನಡೆಸಲು ಅವಕಾಶ ನೀಡಲು ತಾಂತ್ರಿಕ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು. ಕುಂದಾಪುರ ಕನ್ನಡ ಅಧ್ಯಯನ ಪೀಠ ಸ್ಥಾಪನೆಗೆ
ಬೇಡಿಕೆ ಬಂದಿದೆ.

ಅದಕ್ಕಾಗಿ ಅನುದಾನ ಮೀಸಲಿಡಲು ಪ್ರಸ್ತಾಪಿಸಲಾಯಿತು. ಆಡಳಿತ ವಿಭಾಗದ ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ, ಹಣಕಾಸು ವಿಭಾಗ ಕುಲಸಚಿವ ಪ್ರೊ|ಸಂಗಪ್ಪ ಉಪಸ್ಥಿತರಿದ್ದರು.

ಎನ್‌ಇಪಿ ಪೂರ್ಣಗೊಳಿಸಿದ ಮಕ್ಕಳಿಗೂ ರ್‍ಯಾಂಕ್‌
2021-22ನೇ ಸಾಲಿನಲ್ಲಿ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ)ಯಲ್ಲಿ ಪದವಿ ಕಾರ್ಯಕ್ರಮ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಗ್ರೇಡ್‌ ನೀಡುವ ಕ್ರಮ ಎಂದು ಹೇಳಲಾಗಿತ್ತು.

ಈಗ ಎಸ್‌ಇಪಿ ಬಂದಿದೆ. ಹೀಗಾಗಿ ರ್‍ಯಾಂಕ್‌ ಘೋಷಣೆ ಮಾಡಬೇಕಿದೆ. ಇದಕ್ಕೆ ಮಾರ್ಗಸೂಚಿ ತಯಾರಿಸಲು ಸಮಿತಿ ರಚಿಸಲಾಗಿತ್ತು. ಅದರಂತೆ ಎನ್‌ಇಪಿಯಲ್ಲಿ “ಎ’ ಗ್ರೇಡ್‌ ಹಾಗೂ ಅದಕ್ಕಿಂತ ಅಧಿಕ ಸ್ಥಾನ ಪಡೆದವರಿಗೆ ರ್‍ಯಾಂಕ್‌ ನೀಡಲು ತೀರ್ಮಾನಿಸಲಾಯಿತು.

ವಿಶ್ವವಿದ್ಯಾಲಯಲ್ಲಿ “ಹಾರ್ಟ್‌ಫುಲ್‌ನೆಸ್‌ ಪೀಠ’
ಮೈಸೂರಿನ ಸಹಜ್‌ ಮಾರ್ಗ್‌ ಸ್ಪಿರಿಚುವಾಲಿಟಿ ಫೌಂಡೇಷನ್‌ ವತಿಯಿಂದ ಧ್ಯಾನ ಮತ್ತು ಎಲ್ಲರೊಡನೆ ಪ್ರೀತಿಯನ್ನು ಉತ್ತೇಜಿಸಲು ವಿಶ್ವವಿದ್ಯಾಲಯಲ್ಲಿ “ಹಾರ್ಟ್‌ಫುಲ್‌ನೆಸ್‌ ಪೀಠ’ ಸ್ಥಾಪಿಸಲು ಕೋರಿದೆ. ಈ ಪೀಠ ಸ್ಥಾಪನೆಗೆ 25 ಲಕ್ಷ ರೂ. ಠೇವಣಿ ಇರಿಸುವುದಾಗಿ ತಿಳಿಸಿದೆ.

ಇದು ಈಗಾಗಲೇ ರಾಜ್ಯದ ಇತರೆ ಆರು ವಿಶ್ವವಿದ್ಯಾಲಯಗಳಲ್ಲಿ ಇಂತಹ ಪೀಠ ಸ್ಥಾಪಿಸಿದ ಬಗ್ಗೆ ಮಾಹಿತಿ ನೀಡಿದೆ. ವಿಶ್ವವಿದ್ಯಾಲಯಲ್ಲಿ ಯಾವುದೇ ಆರ್ಥಿಕ ಹೊರೆ ಇಲ್ಲದ ಕಾರಣ ಇದಕ್ಕೆ ಸಮ್ಮತಿಸಬಹುದು ಎಂದು ಕುಲಪತಿ ಪ್ರೊ|ಪಿ.ಎಲ್‌.ಧರ್ಮ ತಿಳಿಸಿದರು.

prajaprabhat

Recent Posts

ಅತಿಥಿ ಉಪನ್ಯಾಸಕರ ನೇಮಕ : ಅರ್ಜಿ ಆಹ್ವಾನ.

ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಕರ್ನಾಟಕ ಸರ್ಕಾರದ ವಸತಿ ಶಾಲೆಯನ್ನು ಪದವಿಪೂರ್ವ…

5 hours ago

ವೃತ್ತಿಪರ ಕುಶಲಕರ್ಮಿಗಳಿಗೆ ಉಪಕರಣಗಳಿಗಾಗಿ ಅರ್ಜಿ ಆಹ್ವಾನ

ಕೊಪ್ಪಳ.11.ಆಗಸ್ಟ್.25: ಕೊಪ್ಪಳ ಜಿಲ್ಲಾ ಪಂಚಾಯತ್ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವೃತ್ತಿಪರ ಕುಶಲಕರ್ಮಿಗಳಿಗೆ ಉಪಕರಣಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೊಪ್ಪಳ…

6 hours ago

ಇಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಪ್ರವಾಸ

ಕೊಪ್ಪಳ.11.ಆಗಸ್ಟ್.25:- ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಮಾಲಿಪಾಟೀಲ ಅವರು ಆಗಸ್ಟ್ 12ರಂದು ಕೊಪ್ಪಳ ಜಿಲ್ಲೆಯ…

6 hours ago

ರಾಜ್ಯಾದ್ಯಂತ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್‌ದಾರರು ಪತ್ತೆ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು.11.ಆಗಸ್ಟ್.25:-ರಾಜ್ಯದಲ್ಲಿ 15 ಲಕ್ಷ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದಾರೆ. ಗುರುತಿಸಲಾಗಿರುವ ಅನರ್ಹ ಪಡಿತರದಾರರನ್ನು ಎಪಿಎಲ್‍ಗೆ ಸೇರ್ಪಡೆ ಮಾಡಲು ಕಾರ್ಯ ಆರಂಭಿಸಲಾಗುವಾದು ಅಂದು…

7 hours ago

ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತ: ನಂದಾದೀಪ ಬೋರಾಳೆ

ಔರಾದ.11.ಆಗಸ್ಟ್.25:- ಸರಿಯಾದ ಯೋಜನೆ, ಅಧ್ಯಯನ ವಿಧಾನ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿದ್ಯಾರ್ಥಿಗಳು ಸ್ಪಧಾ೯ತ್ಮಕ ಪರಿಕ್ಷೆಗಳ ತಯಾರಿ ನಡೆಸಿದರೆ ಯಶಸ್ಸು ಖಚಿತಯುವಕರು…

8 hours ago

ಡಾ.ಬಿ.ಆರ್.ಅಂಬೇಡ್ಕರ್ & ವಿವಿಧ ಅಭಿವೃದ್ಧಿ ನಿಗಮಗಳಿಂದ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಕೊಪ್ಪಳ.11.ಆಗಸ್ಟ್.25: 2025-26 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,…

9 hours ago