Categories: ದೇಶ

ಸಂವಿಧಾನದ ಸರ್ವಶ್ರೇಷ್ಠ ಮೌಲ್ಯಗಳನ್ನು ಸಾರುವ ಕೃತಿ ‘ ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ’ — ಡಾ. ಗಿರೀಶ ಬದೋಲೆ



          ಭಾರತದ ಸಂವಿಧಾನವು ವಿಶ್ವದ ಸರ್ವಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದ್ದು ಸಂವಿಧಾನ ಶಿಲ್ಪಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ ಅವರ ಮುತ್ಸದ್ದಿ ನಾಯಕತ್ವ,ದಾರ್ಶನಿಕನ ದೂರದೃಷ್ಟಿಯನ್ನು ಒಳಗೊಂಡ ನಮ್ಮ ಸಂವಿಧಾನವು ಸರ್ವರನ್ನು ಒಳಗೊಳ್ಳುವ ಸರ್ವರ ಒಳಿತನ್ನು ಸಾಧಿಸುವ ಸಂವಿಧಾನವಾಗಿದೆ.ಇಂತಹ ಅತ್ಯುತ್ತಮ ಸಂವಿಧಾನವನ್ನು ಕೊಡುಗೆಯಾಗಿ ನೀಡುವ ಮೂಲಕ ಡಾ.ಬಿ ಆರ್ ಅಂಬೇಡ್ಕರ್ ಅವರು ಭಾರತಾಂಬೆಯ ಹೆಮ್ಮೆಯ ಪುತ್ರರು ಎನ್ನಿಸಿಕೊಂಡಿದ್ದಾರೆ,ವಿಶ್ವದ ಮಹಾನ್ ನಾಯಕರುಗಳಲ್ಲಿ ಒಬ್ಬರಾಗಿದ್ದಾರೆ.ಭಾರತದ ಸಂವಿಧಾನ ರಚನಾ ಸಭೆಯು 1949 ರ ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿದ್ದರಿಂದ  ಆ ನೆನಪಿಗಾಗಿ ಪ್ರತಿವರ್ಷ ನವೆಂಬರ್ 26 ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ನಮ್ಮ ಸಂವಿಧಾನವು ಜಾರಿಗೆ ಬಂದು ಇಂದಿಗೆ 75 ವರ್ಷಗಳಾಗುತ್ತಿದ್ದು ಈದಿನವು ದೇಶದ ರಾಷ್ಟ್ರೀಯ ಮಹತ್ವದ ದಿನವಾಗಿದೆ.ಇಂತಹ ಮಹತ್ವದ ದಿನಾಚರಣೆಯಂದು ನಾವು ನಮ್ಮ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಯವರಾದ ಮುಕ್ಕಣ್ಣ ಕರಿಗಾರ ಅವರು ಬರೆದ ” ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ” ಕೃತಿಯನ್ನು ಲೋಕಾರ್ಪಣೆಗೊಳಿಸುತ್ತಿರುವುದು ವಿಶೇಷವಾಗಿದೆ’ ಎಂದರು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆಯವರು.

      ಡಾ. ಗಿರೀಶ ಬದೋಲೆಯವರು ತಮ್ಮ ಮಾತುಗಳನ್ನು ಮುಂದುವರೆಸುತ್ತ ಮುಕ್ಕಣ್ಣ ಕರಿಗಾರ ಅವರು ” ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ” ಎನ್ನುವ ೪೮ ಪುಟಗಳ ಈ ಪುಸ್ತಕದಲ್ಲಿ ನಮ್ಮ ಹೆಮ್ಮೆಯ ಸಂವಿಧಾನದ ಸರ್ವಶ್ರೇಷ್ಠ ಮೌಲ್ಯಗಳನ್ನು ಪರಿಚಯಿಸಿದ್ದಾರೆ.ಭಾರತದ ಎಲ್ಲ  ಪ್ರಜೆಗಳಿಗೂ ಸಮಾನವಾಗಿ ಅನ್ವಯವಾಗುವ ನಮ್ಮ ಸಂವಿಧಾನವು ಭಾರತದ ಪ್ರಜೆಗಳಲ್ಲಿ ಜಾತಿ,ಧರ್ಮ,ಭಾಷೆ ಇತ್ಯಾದಿಗಳಲ್ಲಿ ಯಾವುದೆ ಭೇದಭಾವವನ್ನು ಎಣಿಸದೆ ಅವರೆಲ್ಲರನ್ನೂ ಭಾರತದ ಪ್ರಜೆಗಳು ಎನ್ನುವ ಸಮಾನದೃಷ್ಟಿಯಿಂದ ನೋಡುತ್ತದೆ.ದೇಶವಾಸಿಗಳೆಲ್ಲರಲ್ಲಿ ಸಮಾನತೆ,ಭ್ರಾತೃತ್ವ,ರಾಷ್ಟ್ರಪ್ರೇಮಗಳನ್ನು ಬೆಳೆಸಲು ಸ್ಫೂರ್ತಿಯಾಗಿರುವ ನಮ್ಮ ಸಂವಿಧಾನದಲ್ಲಿ ಪ್ರಜೆಗಳ ಉದ್ಧಾರ,ಉನ್ನತಿಗೆ ಅವಶ್ಯಕವಾದ ಎಲ್ಲವೂ ಇದೆ.ಜಾತ್ಯಾತೀತ ತತ್ತ್ವದ ಮೇಲೆ ನಿಂತ ನಮ್ಮ ಸಂವಿಧಾನವು ರಾಷ್ಟ್ರಧರ್ಮವನ್ನು ಎತ್ತಿಹಿಡಿಯುವ ರಾಷ್ಟ್ರೀಯಗ್ರಂಥವಾಗಿರುವಂತೆಯೇ ಮನುಷ್ಯಧರ್ಮವನ್ನು ಎತ್ತಿಹಿಡಿಯುವ ಮನುಷ್ಯಧರ್ಮದ ಕೃತಿಯೂ ಆಗಿದೆ’ ಎನ್ನುವುದನ್ನು ಮುಕ್ಕಣ್ಣ ಕರಿಗಾರ ಅವರು ಈ ಕೃತಿಯಲ್ಲಿ ಸಮರ್ಥವಾಗಿ ನಿರೂಪಿಸಿದ್ದಾರೆ.ಈ ಪುಸ್ತಕವನ್ನು‌ ಓದುವದರಿಂದ ಸಂವಿಧಾನ ಪ್ರಜ್ಞೆಯು ಜಾಗೃತಗೊಳ್ಳುತ್ತದೆಯಾದ್ದರಿಂದ ಎಲ್ಲರೂ ಈ ಪುಸ್ತಕವನ್ನು ಓದಬೇಕು’

      ಮುಂದುವರೆದು ಮಾತನಾಡುತ್ತ ಡಾ.ಗಿರೀಶ ಬದೋಲೆಯವರು ‘ಸದಾ ಬ್ಯುಸಿಯಾಗಿರುವ ನಮ್ಮ ಉಪಕಾರ್ಯದರ್ಶಿಯವರು ಅವರ ಬ್ಯುಸಿ ಶೆಡ್ಯೂಲ್ ನ ನಡುವೆಯೇ ತಮ್ಮನ್ನು ತಾವು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ.ಮೊನ್ನೆಯ ಎರಡನೆಯ ಶನಿವಾರ ಮತ್ತು ರವಿವಾರದ ಸರಕಾರಿ ರಜಾದಿನಗಳಂದು ಸಹ ಅವರು ಆಫೀಸಿನಲ್ಲಿದ್ದು ಕರ್ತವ್ಯನಿರ್ವಹಿಸಿದ್ದಾರೆ.ಹೀಗಿದ್ದೂ ಅವರು ಪುಸ್ತಕಗಳನ್ನು ಬರೆಯಲು ಹೇಗೆ ಸಮಯ ಹೊಂದಿಸಿಕೊಳ್ಳುತ್ತಾರೆ ಎನ್ನುವುದು ನನಗೂ ಆಶ್ಚರ್ಯವೆನ್ನಿಸಿದೆ.ಅವರು ತುಂಬ ಸುಂದರವಾಗಿ ಬರೆಯುತ್ತಾರೆ.ಇದು ಮುಕ್ಕಣ್ಣ ಕರಿಗಾರ ಅವರ 50 ನೆಯ ಪುಸ್ತಕವಾಗಿದ್ದು ಅವರಿಂದ ನೂರಾರು ಪುಸ್ತಕಗಳು ಹೊರಬರಲಿ’ ಎಂದು ಹಾರೈಸಿದರು.

      ‘ ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ’ ಕೃತಿ ಪರಿಚಯ ಮಾಡಿಕೊಡುತ್ತ ಸ್ವಚ್ಛ ಭಾರತ ಮಿಶನ್ ಯೋಜನೆಯ ವಿಶೇಷ ಕರ್ತವ್ಯಾಧಿಕಾರಿ ಡಾಕ್ಟರ್ ಗೌತಮ ಅರಳಿಯವರು   ಗಬ್ಬೂರಿನ ‘ಮಹಾಶೈವ ಪ್ರಕಾಶನ’ ವು ಪ್ರಕಟಿಸಿರುವ  ಈ ಕೃತಿಯು ವಿಶೇಷ ಸಂದರ್ಭದಲ್ಲಿ ಹೊರಬರುತ್ತಿರುವ ವಿಶೇಷ ಕೃತಿಯಾಗಿದೆ.ಭಾರತದ ಸಂವಿಧಾನದ 75 ನೆಯ ವರ್ಷಾಚರಣೆಯ ಸಂದರ್ಭದಲ್ಲಿ ಸಂವಿಧಾನದ ಕುರಿತ ಈ ಕೃತಿಯು ಹೊರಬರುತ್ತಿರುವುದು ಒಂದು ವಿಶೇಷವಾದರೆ ಇದು ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ 50 ನೆಯ ಕೃತಿ ಎನ್ನುವುದು ಮತ್ತೊಂದು ವಿಶೇಷ.ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ ಎನ್ನುವ  ಈ ಕೃತಿಯಲ್ಲಿ ಒಟ್ಟು ಎಂಟು ಲೇಖನಗಳಿದ್ದು ಆ ಎಂಟೂ ಲೇಖನಗಳಲ್ಲಿ ಭಾರತದ ಸಂವಿಧಾನದ ಮಹತ್ವ,ವಿಶೇಷತೆಯನ್ನು ವಿವಿಧ ಬಗೆಯಲ್ಲಿ ಸುಂದರವಾಗಿ ಕಟ್ಟಿಕೊಡಲಾಗಿದೆ.ಎಲ್ಲ ಲೇಖನಗಳಲ್ಲಿಯೂ ಸಂವಿಧಾನದ ಬಗೆಗಿನ ಲೇಖಕರ ಪ್ರೀತಿ, ಗೌರವ,ಬದ್ಧತೆಗಳು ಎದ್ದುಕಾಣಿಸುತ್ತವೆ.ಸಂವಿಧಾನದ ಮಹತ್ವವನ್ನು ತಿಳಿದುಕೊಳ್ಳಬಯಸುವವರ ಕೈದೀವಿಗೆಯಂತಿರುವ ಈ ಪುಸ್ತಕವು ಎಲ್ಲರ ಕೈಯ್ಗಳಲ್ಲಿ ಇರಬೇಕಾದ ಪುಸ್ತಕ.ಸಂವಿಧಾನ ಪ್ರಜ್ಞೆಯನ್ನು ಪ್ರಸರಿಸುವ ಸಾರ್ಥಕ ಕಾರ್ಯವನ್ನು ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಈ ಕೃತಿಯಲ್ಲಿ ಸಮರ್ಥವಾಗಿ ನಿರ್ವಹಿಸಿದ್ದಾರೆ’ ಎಂದರು.

       ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ ಮಾತನಾಡುತ್ತ ‘ನಮ್ಮೆಲ್ಲರಲ್ಲಿ ಸಂವಿಧಾನ ಪ್ರಜ್ಞೆಯನ್ನು ಬಿತ್ತರಿಸುತ್ತಿರುವ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರ ಸಂವಿಧಾನಬದ್ಧತೆಯನ್ನು ಪ್ರೋತ್ಸಾಹಿಸುವ ಮೂಲಕ ನಾವು ಅವರ ಬರವಣಿಗೆಯನ್ನು ಗೌರವಿಸಬೇಕಿದೆ’ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ  ಜಿಪಂ ಅಭಿವೃದ್ಧಿ ವಿಭಾಗದ ಅಧೀಕ್ಷಕ ಮಹ್ಮದ್ ಬಶೀರ್ ಅವರು’ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ” ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ ” ಎನ್ನುವ ಕೃತಿಯಲ್ಲಿ ಭಾರತವು ಈ ದೇಶದ ಸಮಸ್ತಪ್ರಜೆಗಳ ನಾಡು ಆಗಿದ್ದು ಸಹೋದರತೆ,ಬಂಧುತ್ವದಿಂದ ಭಾರತೀಯರೆಲ್ಲರೂ ಒಂದಾಗಿ ನಡೆಯಬೇಕು ಎನ್ನುವ ಸಂದೇಶ ಸಾರುತ್ತಿದೆ.ಭಾರತವು ಸಂವಿಧಾನದ ಮಾರ್ಗದಲ್ಲಿ ಕ್ರಮಿಸುವ ಮೂಲಕ ವಿಶ್ವಗುರುವಾಗಬಲ್ಲದು’ ಎಂದರು.ಸ್ವರೂಪಾರಾಣಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕೃತಿಲೋಕಾರ್ಪಣೆಯ ಕಾರ್ಯಕ್ರಮ ನಿರ್ವಹಿಸಿದ ಪ್ರವೀಣಸ್ವಾಮಿ” ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ” ಎನ್ನುವ ಕೃತಿಯು ಸಂವಿಧಾನದ ಬೆಳಕಿನ ಪಥದಲ್ಲಿ ನಡೆಯುವಂತೆ ನಮ್ಮೆಲ್ಲರನ್ನು ಪ್ರೇರೇಪಿಸಿದೆ’ ಎಂದರು.

      ಸಂವಿಧಾನದ 75 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಜಿಲ್ಲಾ ಪಂಚಾಯತಿಯ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಕೃತಿ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾಕ್ಟರ್ ಗಿರೀಶ ಬದೋಲೆಯವರೊಂದಿಗೆ ಉಪಕಾರ್ಯದರ್ಶಿ ಮತ್ತು ಕೃತಿಯ ಲೇಖಕ ಮುಕ್ಕಣ್ಣ ಕರಿಗಾರ,ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ,ಯೋಜನಾನಿರ್ದೇಶಕ ಜಗನ್ನಾಥಮೂರ್ತಿ,ಎಸ್ ಬಿ ಎಂ ಸ್ಪೆಶಲ್ ಆಫೀಸರ್ ಡಾ‌ಗೌತಮ ಅರಳಿ,ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಶಿವಾಜಿ ಡೋಣಿ,ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ರಮೇಶ ನಾಥೆ,ಬೀರೇಂದ್ರ ಸಿಂಗ್,ಜಯಪ್ರಕಾಶ ಚಹ್ವಾಣ ಸೇರಿದಂತೆ ಜಿಪಂಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.

prajaprabhat

Share
Published by
prajaprabhat

Recent Posts

ಔರಾದ (ಬಿ) ತಾಲೂಕಿನಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಸತತ 3 ವರ್ಷಗಳಿಂದ ಭಾವಚಿತ್ರಗಳನ್ನು ಲಗತ್ತಿಸಿ ಹಣ ಲೂಟಿ.!

ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…

39 minutes ago

ಆ.6 ರಂದು ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಮಾಧ್ಯಮ ತರಬೇತಿ ಕಾರ್ಯಕ್ರಮ

ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…

1 hour ago

ಅಪರ ಜಿಲ್ಲಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅಧಿಕಾರ ಸ್ವೀಕಾರ

ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…

1 hour ago

ಸಾರಿಗೆ ನೌಕರರ ರಜೆ ರದ್ದು : ಸಾರಿಗೆ ಇಲಾಖೆ ಆದೇಶ

ಬೆಂಗಳೂರು.04.ಆಗಸ್ಟ್.25:- KSRTC ನೌಕರರ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಾಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ…

2 hours ago

5 ಆಗಸ್ಟ್’ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್’ಗೆ ಅರ್ಜಿ.

ಬೆಂಗಳೂರು.04.ಆಗಸ್ಟ್.25:- ರಾಜ್ಯದ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ. ಬೆಂಗಳೂರಿನ ನಿವಾಸಿ ಜೆ ಸುನೀಲ್ ಮತ್ತಿತರರು…

2 hours ago

ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಪೋಷಕರಿಗೆ ಭತ್ಯೆ : ಸರ್ಕಾರದ ಆದೇಶ

ಬೆಂಗಳೂರು.04.ಆಗಸ್ಟ್.25:- 2025-26ನೇ ಸಾಲಿಗೆ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಭಾರತ ಸರ್ಕಾರದ ವಾರ್ಷಿಕ MGNREGA ಮಾರ್ಗಸೂಚಿಯನ್ವಯ ಜಿಲ್ಲಾ ಮತ್ತು ತಾಲ್ಲೂಕು…

2 hours ago