ಬೀದರ.05.ಫೆಬ್ರುವರಿ.25:-ಮುಂಬರುವ ಮಹಾತ್ಮರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫೆಬ್ರುವರಿ ಮಾಹೆಯಲ್ಲಿ ಜರುಗಲಿರುವ ವಿವಿಧ ಜಯಂತಿಗಳ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೆಬ್ರುವರಿ.10 ರಂದು ಮುಂಬರುವ ಕಾಯಕ ಶರಣರ ಜಯಂತಿಗಳನ್ನು ಕಚೇರಿ ಶಾಲಾ, ಕಾಲೇಜುಗಳಲ್ಲಿ ಸರಳವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಫೆಬ್ರುವರಿ.15 ರಂದು ಬರುವ ಸಂತ ಸೇವಾಲಾಲ್ ಜಯಂತಿ, ಫೆಬ್ರುವರಿ.20 ರಂದು ಕವಿ ಸರ್ವಜ್ಞ ಜಯಂತಿಗಳನ್ನು ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಸಂಘ-ಸoಸ್ಥೆಗಳಲ್ಲಿ ಅಂದು ಬೆಳಿಗ್ಗೆ 8.45 ಗಂಟೆಗೆ ಆಚರಿಸುವುದು ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ 9 ಗಂಟೆಗೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾತ್ಮರ ಭಾವಚಿತ್ರ ಮೆರವಣಿಗೆಯನ್ನು ನಗರದ ಶಿವಾಜಿ ವೃತ್ತ, ಭಗತಸಿಂಗ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಜನರಲ್ ಕರಿಯಪ್ಪ ವೃತ್ತದ ಮೂಲಕ ಡಾ.ಪೂಜ್ಯ ಚನ್ನಬಸವ ಪಟ್ಟದೇವರು ರಂಗಮoದಿರದಲ್ಲಿ ಬೆಳಿಗ್ಗೆ 11.30 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿವೆ.
ಸದರಿ ದಿನಾಂಕಗಳoದು ಎಲ್ಲಾ ವೃತ್ತಗಳ ಮೇಲೆ ದೀಪಾಲಂಕಾರ ಮತ್ತು ಮೆರವಣಿಗೆ ಹೋಗುವ ರಸ್ತೆ ಸುತ್ತ-ಮುತ್ತ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾ ತಂಡಗಳ ವ್ಯವಸ್ಥೆ, ಪೊಲೀಸ್ ಇಲಾಖೆ ವತಿಯಿಂದ ಟ್ರಾಫೀಕ ವ್ಯವಸ್ಥೆ ಮತ್ತು ಸೂಕ್ತ ಬಂದೋಬಸ್ತ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಪರವಾಗಿ ರಾಜಶೇಖರ ವಟಗೆ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಸಂತೋಷ ಜೋಳದಬಕಾ, ಗೋವರ್ಧನ ರಾಠೋಡ, ರಮೇಶ ಜಾಧವ, ಲಕ್ಷö್ಮಣ ರಾಠೋಡ, ಬಸವರಾಜ ಪವಾರ, ಸವಿತಾ ರಾಠೋಡ ಸೇರಿದಂತೆ ಸಮಾಜದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಉತ್ತರ ಪ್ರದೇಶದಲ್ಲಿ, ನಿರಂತರ ಮಳೆಯಿಂದಾಗಿ, ಅನೇಕ ನದಿಗಳು ಅಪಾಯದ ಮಟ್ಟ ದಾಟಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.ಉತ್ತರ ಪ್ರದೇಶದಲ್ಲಿ,…
ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಭಾವನಗರ ರೈಲು ನಿಲ್ದಾಣದಿಂದ ಭಾವನಗರ-ಅಯೋಧ್ಯಾ ಕ್ಯಾಂಟ್ ಸಾಪ್ತಾಹಿಕ ರೈಲಿಗೆ ಹಸಿರು ನಿಶಾನೆ ತೋರಿದರು.…
ರಷ್ಯಾದ ಕುರಿಲ್ ದ್ವೀಪಗಳಲ್ಲಿ ಇಂದು ಬೆಳಿಗ್ಗೆ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ರಷ್ಯಾದ ಕಮ್ಚಟ್ಕಾ ಪರ್ಯಾಯ…
ಬಾಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಇಂದಿನಿಂದ ಶ್ರೀ ಅಮರನಾಥ ಜಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚಿನ ಭಾರಿ ಮಳೆಯಿಂದಾಗಿ ಬಾಲ್ಟಾಲ್ ಮತ್ತು…
ಡುರಾಂಡ್ ಕಪ್: ಭಾರತೀಯ ವಾಯುಪಡೆಯನ್ನು 4-2 ಅಂತರದಿಂದ ಸೋಲಿಸಿದ ನಾಮಧಾರಿ ಎಫ್‌ಸಿ, ಎರಡು ಜಯಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾದ…
ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿರುವ ಕ್ರಾಶೆನ್ನಿನಿಕೋವ್ ಜ್ವಾಲಾಮುಖಿ ಇಂದು ದಾಖಲಾದ ಇತಿಹಾಸದಲ್ಲಿ ಮೊದಲ ಬಾರಿಗೆ ಸ್ಫೋಟಗೊಂಡಿದೆ, ಇದು 600 ವರ್ಷಗಳಲ್ಲಿ…