ಸಂಘ ಸಾಂಸ್ಥೆ’ಗಳಿಗೆ ಪ್ರಾಥಮಿಕ, ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೋಂದಣಿ ಅವಧಿ ವಿಸ್ತರಣೆ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು.16.ಜೂನ್.25:- ರಾಜ್ಯದಲ್ಲಿ 2025-26ನೇ ಸಾಲಿಗೆ ಸಂಘ ಸಂಸ್ಥೆ’ಗಳಿಗೆ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪ್ರಾರಂಭಿಸಲು ನೊಂದಣಿ (Registration) ಹಾಗೂ ಶಾಲಾ ಡೈಸ್ ಕೋಡ್ ಪಡೆಯುವ ಕುರಿತು ಅವಧಿಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್, 30, 31 ಮತ್ತು 32ರಂತೆ ಹಾಗೂ The Karnataka Educational Institutions(Classification and Registration) Rules 1997 2 ಅಧಿಸೂಚನೆ ಪತ್ರ ಸಂಖ್ಯೆ:ED 709 PGC 2017, ದಿನಾಂಕ:07-03-2018ರ ಅಧಿಸೂಚನೆಯಂತೆ ಹೊಸ ಶಾಲಾ ನೊಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಕೋರಿದ ಶೈಕ್ಷಣಿಕ ವರ್ಷದ ಹಿಂದಿನ ಸಾಲಿನ ನವೆಂಬರ್ 30 ಅಥವಾ ಅದಕ್ಕೂ ಮೊದಲು ಇಲಾಖಾ ವೆಬ್ ಸೈಟ್ ನಲ್ಲಿ ಹೊಸ ಶಾಲಾ ನೊಂದಣಿ ಕುರಿತು ಅರ್ಜಿ ಸಲ್ಲಿಸಿ ನಿಯಮಾನುಸಾರ ನೊಂದಣಿ ಪಡೆಯಬೇಕಾಗಿರುತ್ತದೆ. ಅದರಂತೆ ಉಲ್ಲೇಖ-13 ರನ್ವಯ 2025-26ನೇ ಸಾಲಿಗೆ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ/ಪ್ರೌಢಶಾಲೆ ನೊಂದಣಿ ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್ಲೈನ್ ಮುಖಾಂತರ ಇಲಾಖಾ ដ https://schooleducation.karnataka.gov.in/ಸಲ್ಲಿಸಲು ದಿನಾಂಕ:28-02-2025 ರವರೆಗೆ ಕಾಲಾವಕಾಶ ಕಲ್ಪಿಸಲಾಗಿತ್ತು.

ಮುಂದುವರೆದು, 2025-26ನೇ ಸಾಲಿನ ಹೊಸ ಶಾಲಾ ನೊಂದಣಿಗೆ ಅವಧಿಯನ್ನು ವಿಸ್ತರಿಸುವಂತೆ ಸಲ್ಲಿಕೆಯಾದ ಮನವಿಗಳು ಹಾಗೂ ಉಲ್ಲೇಖಿತ (14)ರಲ್ಲಿ ಸರ್ಕಾರದಿಂದ ಏಕಕಡತದಲ್ಲಿ ಅನುಮೋದನೆಯಂತೆ 2025-26ನೇ ಸಾಲಿಗೆ ಹೊಸದಾಗಿ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ / ಪ್ರಾಥಮಿಕ/ ಪ್ರೌ ಶಾಲೆ ನೊಂದಣಿಗೆ ಹಾಗೂ ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ದಿನಾಂಕ:17-06-2025 ರಿಂದ ದಿನಾಂಕ:30-06-2025ರವರೆಗೆ 15 ದಿನಗಳ ಕಾಲ ಅಂತಿಮವಾಗಿ ಅವಕಾಶ ನೀಡಲಾಗಿದೆ. ಈಗಾಗಲೇ 2025-26ನೇ ಸಾಲಿಗೆ ಹೊಸ ಶಾಲಾ ನೊಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಆಡಳಿತ ಮಂಡಳಿಗಳಿಗೆ ಹಾಗೂ ಹೊಸದಾಗಿ ಅರ್ಜಿಗಳನ್ನು ಸಲ್ಲಿಸುವ ಆಡಳಿತ ಮಂಡಳಿಗಳಿಗೂ ಈ ಅವಕಾಶ ಅನ್ವಯವಾಗುತ್ತದೆ.

ಉಚಿತ ಮತ್ತು ಕಡ್ಡಾಯ ಮಕ್ಕಳ ಹಕ್ಕು ಶಿಕ್ಷಣ ಕಾಯ್ದೆ-2009ರ ಸೆಕ್ಷನ್-19 ಮತ್ತು 25ರಂತೆ ನೀಡಿರುವ ಷೆಡ್ಯೂಲ್ ನಂತೆ ಶಾಲೆಗಳು ಪ್ರತಿ ಶೈಕ್ಷಣಿಕ ವರ್ಷದಲ್ಲಿ 1 ರಿಂದ 5ನೇ ತರಗತಿಗಳಿಗೆ ಕನಿಷ್ಟ 200 ಕಾರ್ಯನಿರ್ವಹಣಾ ದಿನಗಳು/ 800 ಗಂಟೆಗಳ ಬೋಧನಾ ಅವಧಿ ಹಾಗೂ 6 ರಿಂದ 8ನೇ ತರಗತಿಗಳಿಗೆ ಕನಿಷ್ಟ ಕನಿಷ್ಟ 220 ಕಾರ್ಯನಿರ್ವಹಣಾ ದಿನಗಳು/1000 ಗಂಟೆಗಳ ಬೋಧನಾ ಅವಧಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಲ್ಲಿಸಲು ಆಡಳಿತ ಮಂಡಳಿಗಳಿಗೆ ಅಂತಿಮ ಅವಕಾಶ ನೀಡಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ಪುನ: ವಿಸ್ತರಿಸಲಾಗುವುದಿಲ್ಲ ಎಂಬ ಅಂಶವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ಈಗಾಗಲೇ 2025-26ನೇ ಶೈಕ್ಷಣಿಕ ಸಾಲು ಪ್ರಾರಂಭವಾಗಿರುವುದರಿಂದ ಹೊಸ ಶಾಲಾ ನೊಂದಣಿಗೆ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಯನ್ನು ವೇಳಾಪಟ್ಟಿಯಲ್ಲಿ ನೀಡಿದಂತೆ ನಿಗದಿತ ಕಾಲಾವಧಿಯನ್ನು ಅರ್ಜಿಗಳನ್ನು ಇತ್ಯರ್ಥಪಡಿಸಲು ಅಗತ್ಯ ಕ್ರಮ ವಹಿಸುವುದು. ಈ ಹಿನ್ನೆಲೆಯಲ್ಲಿ ಉಪನಿರ್ದೇಶಕರ ಕಚೇರಿಯ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳು ತಮ್ಮ ಲಾಗಿನ್ಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ವಿಳಂಬಕ್ಕೆ ಅವಕಾಶ ನೀಡದೇ ಆಯಾ ದಿನವೇ ನಿಯಮಾನುಸಾರ ಪರಿಶೀಲಿಸಿ ಮುಂದಿನ ಹಂತಕ್ಕೆ ಸಲ್ಲಿಸುವುದು. ಉಪನಿರ್ದೇಶಕರು ತಮ್ಮ ಲಾಗಿನ್ ಗೆ ಸಲ್ಲಿಕೆಯಾದ ಅರ್ಜಿಗಳನ್ನು ಸಹ ಆಯಾ ದಿನವೇ ಪರಿಶೀಲಿಸಿ ಅಗತ್ಯವಿದ್ದಲ್ಲಿ ರೋಲ್ ಬ್ಯಾಕ್ ಮಾಡಲು, ಅರ್ಜಿಯನ್ನು ಅನುಮೋದನೆ ಅಥವಾ ತಿರಸ್ಕರಿಸಿ ಇತ್ಯರ್ಥಪಡಿಸಿದಲ್ಲಿ ಆಯಾ ದಿನವೇ ಡಿ.ಎಸ್.ಸಿ. ಮೂಲಕ ಅನುಮೋದಿಸಿ ಆದೇಶವನ್ನು ನೀಡಲು ಕ್ರಮವಹಿಸಲು ಸೂಚಿಸಿದೆ. ನಿಯಮಾನುಸಾರ ಪರಿಶೀಲಿಸಿ ಅನುಮೋದಿಸಿ ನೊಂದಣಿ ಪ್ರಮಾಣ ಪತ್ರ ನೀಡುವಾಗ ಉಚಿತ ಮತ್ತು ಕಡ್ಡಾಯ ಮಕ್ಕಳ ಹಕ್ಕು ಶಿಕ್ಷಣ ಕಾಯ್ದೆ-2009ರ ಸೆಕ್ಷನ್-19 ಮತ್ತು 25ರಂತೆ ನೀಡಿರುವ ಷೆಡ್ಯೂಲ್ ನಂತೆ ಶಾಲೆಗಳು ಪ್ರತಿ ಶೈಕ್ಷಣಿಕ ವರ್ಷದಲ್ಲಿ 1 ರಿಂದ 5ನೇ ತರಗತಿಗಳಿಗೆ ಕನಿಷ್ಟ 200 ಕಾರ್ಯನಿರ್ವಹಣಾ ದಿನಗಳು/ 800 ಗಂಟೆಗಳ ಬೋಧನಾ ಅವಧಿ ಹಾಗೂ 6 ರಿಂದ 8ನೇ ತರಗತಿಗಳಿಗೆ ಕನಿಷ್ಟ ಕನಿಷ್ಟ 220 ಕಾರ್ಯನಿರ್ವಹಣಾ ದಿನಗಳು/1000 ಗಂಟೆಗಳ ಬೋಧನಾ ಅವಧಿ ಕಾರ್ಯನಿರ್ವಹಿಸುವಂತೆ ಷರತ್ತು ವಿಧಿಸುವುದು. ಯಾವುದೇ ಕಾರಣಕ್ಕೂ ಅರ್ಜಿಯನ್ನು ಪರಿಶೀಲಿಸಲು ವಿಳಂಬ ಮಾಡಿದಲ್ಲಿ ಅಥವಾ Overdue ಆಗಲು ಅವಕಾಶ ನೀಡಿದಲ್ಲಿ ಸಂಬಂಧಿಸಿದ ಉಪನಿರ್ದೇಶಕರು(ಆಡಳಿತ) ಇವರನ್ನೇ ಹೊಣೆಗಾರರನ್ನಾಗಿಸಲಾಗುವುದು.

ಈಗಾಗಲೇ 2025-26ನೇ ಸಾಲಿಗೆ ನೊಂದಣಿ ಕೋರಿ ಅರ್ಜಿ ಸಲ್ಲಿಸಲು ನೀಡಿದ ಕಾಲಾವಕಾಶದಲ್ಲಿ ಯಾವುದೇ ಶಾಲಾ ಆಡಳಿತ ಮಂಡಳಿಯ ಅರ್ಜಿಯು ತಿರಸ್ಕೃತಗೊಂಡಿದ್ದಲ್ಲಿ ಅಥವಾ ದಾಖಲೆಗಳ ಕೊರತೆಯಿಂದ ಅರ್ಜಿ ಸಲ್ಲಿಸಲು ಅವಕಾಶವಾಗಿರದಿದ್ದಲ್ಲಿ ಅಂತಹ ಆಡಳಿತ ಮಂಡಳಿಗಳು ದಿನಾಂಕ:-17-06-2025 ರಿಂದ 2025-26ನೇ ಸಾಲಿಗೆ ಹೊಸಶಾಲಾ ನೊಂದಣಿಗೆ ಅರ್ಜಿ ಆಹ್ವಾನಿಸಿ ಬಿಡುಗಡೆ ಮಾಡುವ ಆನ್ ಲೈನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಉಳಿದಂತೆ ಉಲ್ಲೇಖ(1) ರಿಂದ (13)ರವರೆಗಿನ ಸುತ್ತೋಲೆಗಳಲ್ಲಿನ ಎಲ್ಲಾ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತವೆ.

prajaprabhat

Recent Posts

ವಿಶ್ವ ಸ್ತನ್ಯಪಾನ ಸಪ್ತಾಹ ಆಚರಣೆಯ ಮಹತ್ವ ತಿಳಿಯಿರಿ-ಡಾ.ಶಿವಶಂಕರ ಬಿ.

ಬೀದರ.05.ಆಗಸ್ಟ್.25:- ದೇಶಾದ್ಯಂತ ಸ್ತನ್ಯಪಾನದ ಮಹತ್ವವನ್ನು ತಿಳಿಸಲು ಹಾಗೂ ಶಿಶುಗಳ ಮತ್ತು ತಾಯಂದಿರ ಆರೋಗ್ಯ ಸುಧಾರಣೆಗಾಗಿ ಸ್ತನ್ಯಪಾನವನ್ನು ಮುಂದುವರೆಸಲು, ಉತ್ತೇಜಿಸಲು ಮತ್ತು…

2 hours ago

ಅರೆಕಾಲಿಕ ಶಿಕ್ಷಕ ಹುದ್ದೆ’ಗೆ ಅರ್ಜಿ ಆಹ್ವಾನ

ಹುಬ್ಬಳಿ.05.ಆಗಸ್ಟ್.25:- ಅರೆಕಾಲಿಕ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಸರಕಾರಿ ಬಾಲಮಂದಿರ ಹುಬ್ಬಳ್ಳಿ ಸಂಸ್ಥೆಯಲ್ಲಿ ಭೋಧನೆಗೆ ಅರೆಕಾಲಿಕ ಶಿಕ್ಷಕರಾಗಿ ಗೌರವ ಧನ…

7 hours ago

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

13 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

13 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

13 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

13 hours ago