ಶರಣರಿಗೆ ಕಾಯಕವೇ ಜೀವಾಳವಾಗಿತ್ತು – ಸುರೇಖಾ ಕೆ.ಎ.ಎಸ್.


ಬೀದರ.10.ಫೆಬ್ರುವರಿ.25:-ಸಮಾಜದಲ್ಲಿ ಕಾಯಕನಿಷ್ಠೆಯ ಆದರ್ಶವನ್ನು ತಿಳಿಸಿಕೊಟ್ಟವರು ಶರಣರು. ತಮ್ಮ ಕಾಯ ಹಾಗೂ ಕಾಯಕದಲ್ಲಿಯೇ ಕೈಲಾಸವನ್ನು ಕಂಡು ಬಾಳಿದ ಮಹಾನುಭಾವರು ಬಸವಾದಿಶರಣರು ಎಂದು ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಅವರು ಹೇಳಿದರು.


ಅವರು ಇಂದು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿಯ ಕಾರ್ಯಕ್ರಮದಲ್ಲಿ ಪೂಜೆಸಲ್ಲಿಸಿ ಮಾತನಾಡಿದರು.


ವೃತ್ತಿ ಮನುಷ್ಯನಿಗೆ ಶೋಭೆ, ಗೌರವ ತರುತ್ತದೆ. ಸತ್ಕರ್ಮದ ಕಾಯಕದಿಂದ ವ್ಯಕ್ತಿ ಉದಾತ್ತನಾಗುತ್ತಾನೆ. ಜೀವನದಲ್ಲಿ ಸದಾ ಕಾಯಕನಿರತರಾಗಬೇಕೆಂಬುದು ಶರಣರ ಧ್ಯೇಯ ಹಾಗೂ ಆದರ್ಶವಾಗಿತ್ತು. ಯಾವ ಕಾಯಕವೂ ದೊಡ್ಡದಲ್ಲ, ಚಿಕ್ಕದಲ್ಲ.

ಮನಸ್ಸಿನಿಂದ ಮಾಡುವ ಕಾಯಕವೇ ದೊಡ್ಡದೆಂದು ನಂಬಿದವರು ಶರಣರು. ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ, ಮಾದಾರ ಧೂಳಯ್ಯರವರಂತಹ ಮುಂತಾದ ಮಹಾನ್ ಶರಣರು ತಮ್ಮ ಕಾಯಕದ ಆದರ್ಶದಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿದವರು. ಯಾರೂ ದುಡಿಯದೇ ಪ್ರಸಾದ ಸೇವಿಸಬಾರದೆಂಬ ಮೌಲ್ಯವನ್ನು 12ನೆಯ ಶತಮಾನದಲ್ಲಿಯೇ ಹೇಳಿದಂತಹ ಮಹನೀಯರಾಗಿದ್ದರೆಂದು ಕುಲಸಚಿವರು ಹೇಳಿದರು.


     ಸಮಾರಂಭದಲ್ಲಿ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರ ನಾಯ್ಕ.ಟಿರ ಅವರು ಮಾತನಾಡಿ, ಶರಣರು ತಾವು ಮಾಡುವ ಕಾಯಕನಿಷ್ಠೆ ಹಾಗೂ ತಮ್ಮ ವಚನಗಳಿಂದಲೇ ಇಂದಿಗೂ ಜೀವಂತವಾಗಿದ್ದಾರೆ, ಮಾದರಿಯಾಗಿದ್ದಾರೆ. ಶರಣರ ಸಮಾನತೆಯ ಸಿದ್ಧಾಂತ ಸಾರ್ವಕಾಲಿಕ  ಮೌಲ್ಯವಾಗಿದೆ. ಶರಣರು ಎಲ್ಲರನ್ನೂ ಸಮಾನವಾಗಿ ಕಂಡರು. ಇವನಾರವನೆನ್ನದೆ, ಇವನಮ್ಮವನೆಂದರು. ಶರಣರು ಆರೋಗ್ಯಕರ ಸಮಾಜಕ್ಕಾಗಿ ಹಂಬಲಿಸಿದರು ಎಂದರು.


      ಕನ್ನಡ ಉಪನ್ಯಾಸಕರಾದ ರಾಮಚಂದ್ರ ಗಣಾಪೂರ ಅವರು ಮಾತನಾಡಿ, ಶರಣರು ಕಾಯಕ ಪರಂಪರೆಗೆ ಮೌಲ್ಯವನ್ನು, ಅರ್ಥವನ್ನು ತಂದುಕೊಟ್ಟವರು. ಆ ಮೂಲಕ ತಮ್ಮ ನಡೆ-ನುಡಿಯಿಂದ, ಕಾಯಕನಿಷ್ಠೆಯಿಂದ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಮಹತ್ವದ ಕೊಡುಗೆಯನ್ನು ನೀಡಿದರು. ಶರಣರು ಮೊದಲು ನಡೆದರು, ನಂತರ ನುಡಿದರು. ಹೀಗಾಗಿ ನಮಗೆ ನಡೆನುಡಿಯ ಆದರ್ಶಗಳ ಅವಶ್ಯಕತೆಯಿದೆ ಎಂದರು.


ಈ ಸಮಾರಂಭದಲ್ಲಿ ಬೀದರ ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

prajaprabhat

Recent Posts

ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತರಬೇತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ.

ಬೀದರ.02.ಆಗಸ್ಟ.25:- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿಗೆ ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಯು.ಪಿ.ಎಸ್.ಸಿ ನಾಗರೀಕ ಸೇವೆ. ಕೆ.ಎ.ಎಸ್ ಗೆಜೆಟೆಡ್…

3 hours ago

ಪ್ರಜ್ವಲ್ ರೇವಣ್ಣ  ಅವರಿಗೆ ಜೀವಾವಧಿ ಶಿಕ್ಷೆ.

ಬೆಂಗಳೂರಿನ ವಿಶೇಷ ನ್ಯಾಯಾಲಯ ಬೆಂಗಳೂರು.02.ಆಗಸ್ಟ್.25:- ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಮತ್ತು ಅಮಾನತುಗೊಂಡ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅವರಿಗೆ…

8 hours ago

ಅರಿವು ಶೈಕ್ಷಣಿಕ ಸಾಲ ಯೋಜನೆಯುಡಿ ಅರ್ಜಿ ಆಹ್ವಾನ

ಬೀದರ.02.ಆಗಸ್ಟ್.25- ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ…

9 hours ago

ಆಗಸ್ಟ್.8 ರಿಂದ 25 ರವರೆಗೆ ಅಗ್ನಿವೀರ ನೇಮಕಾತಿ ರ‍್ಯಾಲಿ

ಬೀದರ.02. ಆಗಸ್ಟ್.25:- ಅಗ್ನಿವೀರ ನೇಮಕಾತಿ ರ‍್ಯಾಲಿಯು ರಾಯಚೂರಿನ ಕರ್ನಾಟಕ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಗಸ್ಟ್.8 ರಿಂದ 25 ರವರೆಗೆ…

9 hours ago

ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ‘ವಿದ್ಯಾಸಿರಿ’ ವಿದ್ಯಾರ್ಥಿವೇತನ ಸೇರಿ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು.02.ಆಗಸ್ಟ್.25:- 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ…

9 hours ago

ಅತಿಥಿ ಉಪನ್ಯಾಸಕರ  ಸಮಸ್ಯೆಗಳನ್ನು (ಕಾನೂನು ತಿದ್ದುಪಡಿ) ಸರಿಪಡಿಸಲು. ಡಾ. ಹನಮಂತ್ ಗೌಡ ಕಲ್ಮನಿ ಮನವಿ.

ಗದಗ.02.ಆಗಸ್ಟ್.25:- ಇಂದು..ಬೆಳಗ್ಗೆ ಹುಲಕೋಟಿ ಯಲ್ಲಿ. ಕಾನೂನು .ಶಾಸನ ರಚನೆ.ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಡಾ.ಎಚ್.ಕೆ.ಪಾಟೀಲ ಸರ್ ಅವರನ್ನು…

9 hours ago