ವೆಂಕಟೇಶ ಮೊರಖಂಡಿಕರ್ ಅವರ ಮುಡಿಗೇರಿದ ಅಂತಾರಾಷ್ಟ್ರೀಯ ಪುರಸ್ಕಾರ

ಸಾಮಾಜಿಕ, ಪತ್ರಿಕಾರಂಗದ ಸೇವೆಗಾಗಿ ಹಿರಿಯ ಪರ್ತಕರ್ತರಾದ ಬೀದರ ಜಿಲ್ಲೆಯ ವೆಂಕಟೇಶ ಮೊರಖಂಡಿಕರ್ ಅವರ ಮುಡಿಗೇರಿದ ಅಂತಾರಾಷ್ಟ್ರೀಯ ಪುರಸ್ಕಾರ*
—-
ಬೀದರ್ ಮೇ 25 : ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿವಿಧ ಪತ್ರಿಕೆಗಳಲ್ಲಿದ್ದು, ಸದ್ಯ ಬೀದರ ಜಿಲ್ಲೆಯಲ್ಲಿ ಹೊಸದಿಗಂತ ಕನ್ನಡ ದಿನಪತ್ರಿಕೆಯ ಜಿಲ್ಲಾ ವರದಿಗಾರರಾಗಿರುವ ವೆಂಕಟೇಶ ಮೊರಖಂಡಿಕರ್ ಅವರಿಗೆ ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರವು ಮುಡಿಗೇರಿದೆ.


ಹಿರಿಯ ಪತ್ರಕರ್ತರಾಗಿ ಕನ್ನಡ ಪತ್ರಿಕಾರಂಗದಲ್ಲಿ ಹೆಸರಾಗಿರುವ ವೆಂಕಟೇಶ ಮೊರಖಂಡಿಕರ್ ಅವರಿಗೆ ಪತ್ರಿಕಾರಂಗದಲ್ಲಿನ ಸೇವೆ ಹಾಗೂ ಸಾಮಾಜಿಕ ಸೇವೆ ಗುರುತಿಸಿ ಹೈದರಾಬಾದ್ ನಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಎಂವಿಎಲ್ ಎ  ವತಿಯಿಂದ
ಸನ್ಮಾನಿಸಲಾಯಿತು.


ಎಂವಿಎಲ್ ಎ ಸಂಸ್ಥೆಯ ಸಂಚಾಲಕರಾದ ಕೃಷ್ಣ ಅವರು ಮಾತನಾಡಿ, ನಮ್ಮ ಎಂವಿಎಲ್ ಎ ಸಂಸ್ಥೆಗೆ ಮೆ.25ಕ್ಕೆ 25 ವರ್ಷಗಳು ತುಂಬಲಿದೆ. ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಒಟ್ಟು 36 ಜನರಿಗೆ “ಭಾರತ ಪ್ರತಿಭಾ ಸನ್ಮಾನ್ ಪುರಸ್ಕಾರ” ನೀಡಿ ಸನ್ಮಾನಿಸಲಾಯಿತು ಎಂದು ತಿಳಿಸಿದರು. ಇದರಲ್ಲಿ ವಿಶೇಷ ಎಂದರೆ ಪತ್ರಿಕಾರಂಗದ ಹಿನ್ನೆಲೆಯುಳ್ಳ ಶ್ರೀ ವೆಂಕಟೇಶ ಮೊರಖಂಡಿಕರ್ ಅವರು ಒಬ್ಬಂಟಿಯಾಗಿ ೧೯೮೨-೮೪ರಲ್ಲಿ ನಡೆಸಿದ ಭಾರತ ಸೈಕಲ್ ಯಾತ್ರೆಯು ಭಾರತದ ಏಕೈಕ ಪತ್ರಕರ್ತರೊಬ್ಬರು ನಡೆಸಿದ ವಿಶಿಷ್ಟ ಸಾಧನೆಯಾಗಿದೆ. ಇವರು ಕನ್ನಡ ಸೇರಿದಂತೆ ಬಹು ಭಾಷೆಗಳ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದು ವಿಶೇಷವಾಗಿದೆ. ಇದನ್ನು ಪರಿಗಣಿಸಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ವೆಂಕಟೇಶ್ ಮೊರಖಂಡಿಕರ್ ಅವರನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ, ಮೊರಖಂಡಿಕರ್ ಅವರ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.

prajaprabhat

Recent Posts

ಆಗಸ್ಟ್ 11 ರಿಂದ ಕೆ.ಓ.ಎಸ್ ಪೂರಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಕೊಪ್ಪಳ.08.ಆಗಸ್ಟ್.25: ಕರ್ನಾಟಕ ಮುಕ್ತ ಶಾಲೆ–ಕೆ.ಓ.ಎಸ್ ಪೂರಕ ಪರೀಕ್ಷೆಗಳು ಆಗಸ್ಟ್ 11ರಿಂದ ಕೊಪ್ಪಳದ ಮುನಿರಾಬಾದ್‌ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ…

48 minutes ago

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಅವರ ಕೊಪ್ಪಳ ಜಿಲ್ಲಾ ಪ್ರವಾಸ<br>

ಕೊಪ್ಪಳ.08.ಆಗಸ್ಟ್.25: ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅವರು ಆಗಸ್ಟ್ 9 ರಂದು ಶನಿವಾರ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ…

52 minutes ago

ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿಗೆ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ್ ಸಮ್ಮತಿ

ಬೆಂಗಳೂರು.08.ಆಗಸ್ಟ್.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ಕಾನೂನು ನಿಯಮಾವಳಿ ರೂಪಿಸಿ ಯುಜಿಸಿ ಮತ್ತು…

2 hours ago

ದೇಶದ ರಸ್ತೆ ಮತ್ತು ಸಾರಿಗೆ ಮೂಲಸೌಕರ್ಯವು ವಿಶ್ವ ದರ್ಜೆಯ ಗುಣಮಟ್ಟವನ್ನು ತಲುಪುತ್ತಿದೆ ಎಂದು ಕೇಂದ್ರ ಸಚಿವ ಗಡ್ಕರಿ.

ಹೊಸ ದೆಹಲಿ.08.ಆಗಸ್ಟ್.25:- ದೇಶದಲ್ಲಿ ರಸ್ತೆ ಮತ್ತು ಸಾರಿಗೆ ಮೂಲಸೌಕರ್ಯಗಳು ವಿಶ್ವ ದರ್ಜೆಯ ಮಟ್ಟಕ್ಕೆ ಏರುತ್ತಿವೆ, ಇದರಿಂದಾಗಿ ಪ್ರಯಾಣದ ಸಮಯ ಕಡಿಮೆಯಾಗುತ್ತದೆ…

7 hours ago

ಚುನಾವಣಾ ಆಯೋಗದ ಸಮಗ್ರತೆಯನ್ನು ಪ್ರಶ್ನಿಸಿದ್ದಕ್ಕಾಗಿ ರಾಹುಲ್ ಗಾಂಧಿಯನ್ನು ಬಿಜೆಪಿ ಟೀಕಿಸಿದೆ.

ಹೊಸ ದೆಹಲಿ.08.ಆಗಸ್ಟ್.25:- ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗದ ಸಮಗ್ರತೆಯನ್ನು ಪ್ರಶ್ನಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್…

7 hours ago

ಅರುಣಾಚಲ ಪ್ರದೇಶಕ್ಕೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದ್ದು, ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಹೊಸ ದೆಹಲಿ.08.ಆಗಸ್ಟ್.25:- ಅರುಣಾಚಲ ಪ್ರದೇಶದಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್…

7 hours ago