ಬೀದರ.21.ಮೇ.25:- ಜೇನಿನಲ್ಲಿ ಅನೇಕ ಔಷಧೀಯ ಗುಣಗಳು ಹೊಂದಿದ್ದು, ರೋಗಗಳನ್ನು ಗುಣಪಡಿಸುವಂತಹ ಶಕ್ತಿಯನ್ನು ಹೊಂದಿದ್ದು, ಮಾನವರಿಗೆ ಇದು ಒಂದು ದೇವರು ನೀಡಿರುವಂತಹ ಅಮೂಲ್ಯ ವರದಾನವಾಗಿದೆ ಎಂದು ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹೇಳಿದರು.
ಅವರು ಮಂಗಳವಾರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ಮತ್ತು ತೋಟಗಾರಿಕೆ ಮಹಾವಿದ್ಯಾಲಯ, ಬೀದರ ಇವರುಗಳ ಸಹಯೋಗದೊಂದಿಗೆ ತೋಟಗಾರಿಕೆ ಮಹಾವಿದ್ಯಾಲಯ, ಬೀದರನಲ್ಲಿ ಹಮ್ಮಿಕೊಂಡಿದ್ದ “ವಿಶ್ವ ಜೇನು ದಿನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಜೇನುನೊಣ ದಿನವು ಜೇನುನೊಣ ಉತ್ಸಾಹಿಗಳು, ಜೇನುಸಾಕಣೆ ಸಂಘಗಳು ಮತ್ತು ಕ್ಲಬ್‌ಗಳು ಮತ್ತು ಜೇನುಸಾಕಣೆದಾರರು ಜೇನುನೊಣವನ್ನು ಆಚರಿಸುವ ಜಾಗೃತಿ ದಿನವಾಗಿದೆ.
ನಮ್ಮ ದೈನಂದಿನ ಜೀವನಕ್ಕೆ ಜೇನುನೊಣಗಳು ನೀಡುವ ಕೊಡುಗೆಯನ್ನು ಗುರುತಿಸುವ ದಿನವಾಗಿದೆ, ಜೊತೆಗೆ ಈ ಪ್ರಮುಖ ಪ್ರಭೇದವನ್ನು ರಕ್ಷಿಸಲು ನಾವು ತೆಗೆದುಕೊಳ್ಳಬಹುದಾದ ವಿವಿಧ ಹಂತಗಳ ಬಗ್ಗೆ ಕಲಿಯಲು ಇದು ಒಂದು ದಿನವಾಗಿದೆ ಹಾಗೂ ಹೆಚ್ಚು ಹೆಚ್ಚು ರೈತರನ್ನು ಜೇನು ಕೃಷಿ ಕೈಗೊಳ್ಳಲು ಉತ್ತೇಜಿಸಬೇಕೆಂದು ಕರೆ ನೀಡಿದರು.
ಬಾಗಲಕೋಟ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು (ತೋಟಪಟ್ಟಿ ವಿಭಾಗ)ದ ಡಾ.ಮೊಹ್ಮದ ಫಾರೂಕ್ ಅವರು ಮಾತನಾಡಿ, ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸ್ವಲ್ಪ ಜೇನುತುಪ್ಪವನ್ನು ಸೇರಿಸುವುದರೊಂದಿಗೆ ಸಾಕಷ್ಟು ಪೌಷ್ಟಿಕಾಂಶದ ಪ್ರಯೋಜನಗಳಿವೆ. ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ಕಾರಣ ಉತ್ತಮ ಗುಣಮಟ್ಟದ ಜೇನುತುಪ್ಪವು ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವ ಜೇನು ದಿನ ಆಚರಣೆ ಅಂಗವಾಗಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಡಿಯಲ್ಲಿ ಕೀಟಶಾಸ್ತç ವಿಭಾಗದಿಂದ ಜೇನು ಕೃಷಿಗೆ ಬಳಸುವ ಉಪಕರಣಗಳು ಹಾಗೂ ಸಮಗ್ರ ತಾಂತ್ರಿಕ ಮಾಹಿತಿಯನ್ನೊಳಗೊಂಡoತಹ ಭಿತಿಚಿತ್ರಗಳ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರು (ಹಣ್ಣು ವಿಜ್ಞಾನ) ಡಾ. ಪ್ರವೀಣ ಜೋಳಗೀಕರ, ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತç) ಡಾ. ಪ್ರಶಾಂತ, ಡಾ. ಅಬ್ದುಲ್ ಕರೀಮ್ ಎಂ., ಬೀದರ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ. ವಿ.ಪಿ. ಸಿಂಗ್, ಬೀದರ ಜಿಲ್ಲೆಯ ರೈತರು, ತೋಟಗಾರಿಕೆ ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಭ್ರಷ್ಟ ಅಧಿಕಾರಿಗಳು ಪ್ರತಿ ವರ್ಷ ದುರಸ್ಥಿ ಪಿಠೋಪಕರಣ ಸರಬರಾಜು ಹೆಸರಿನಲ್ಲಿ ಸತತ 3 ವರ್ಷಗಳಿಂದ ಇದೇ ಮಾಡಿ ಭಾವಚಿತ್ರಗಳನ್ನು ಲಗತ್ತಿಸಿ…
ಬೀದರ.04.ಆಗಸ್ಟ್.25:- ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಸಹಯೋಗದಲ್ಲಿ ಆಗಸ್ಟ್.6 ರಂದು ಬೆಳಿಗ್ಗೆ 10…
ಬೀದರ.04.ಆಗಸ್ಟ್.25:- ಬೀದರ ಜಿಲ್ಲೆಯ ನೂತನ ಅಪರ ಜಿಲ್ಲಾಧಿಕಾರಿಯಾಗಿ ಹಾಗೂ ಅಪರ ಜಿಲ್ಲಾದಂಡಾಧಿಕಾರಿಯಾಗಿ ಶಿವಾನಂದ ಬಿ.ಕರಾಳೆ ಅವರು ಇಂದು ಅಧಿಕಾರ ಸ್ವೀಕಾರ…
ಬೆಂಗಳೂರು.04.ಆಗಸ್ಟ್.25:- KSRTC ನೌಕರರ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆಯಿಂದ ರಾಜ್ಯಾದ್ಯಾಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ…
ಬೆಂಗಳೂರು.04.ಆಗಸ್ಟ್.25:- ರಾಜ್ಯದ ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ. ಬೆಂಗಳೂರಿನ ನಿವಾಸಿ ಜೆ ಸುನೀಲ್ ಮತ್ತಿತರರು…
ಬೆಂಗಳೂರು.04.ಆಗಸ್ಟ್.25:- 2025-26ನೇ ಸಾಲಿಗೆ ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಭಾರತ ಸರ್ಕಾರದ ವಾರ್ಷಿಕ MGNREGA ಮಾರ್ಗಸೂಚಿಯನ್ವಯ ಜಿಲ್ಲಾ ಮತ್ತು ತಾಲ್ಲೂಕು…