ವಿಶ್ವವಿದ್ಯಾಲಯ ಶುಲ್ಕ ದ್ವಿಗುಣ:ಕುವೆಂಪು ವಿಶ್ವವಿದ್ಯಾಲಯ ಮುಚ್ಚುವ ಹುನ್ನಾರ!

ಇದೇ ಬರುವ ಜುಲೈ 2ಕ್ಕೆ 38ನೇ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿರುವ ಮಲೆನಾಡು ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹಲವು ದಶಕಗಳಿಂದ ಹೆಸರುವಾಸಿಯಾಗಿರುವ ಕುವೆಂಪು ವಿಶ್ವವಿದ್ಯಾಲಯವು ಯುಜಿಸಿ ನ್ಯಾಕ್ ತಂಡದ ಭೇಟಿಯ ನಂತರದ ಕೆಲವೇ ದಿನಗಳಲ್ಲಿ ಪಿ.ಎಚ್‌ಡಿ ಮಾತ್ರವಲ್ಲದೆ ಸ್ನಾತಕೋತ್ತರ ಪದವಿಯ ಪ್ರವೇಶಾತಿ ಹಾಗೂ ಬೋಧನಾ ಶುಲ್ಕವನ್ನು ಶೇ.100ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿರುವುದು ಸರ್ಕಾರಿ ವಿಶ್ವವಿದ್ಯಾಲಯವೊಂದನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರವೆಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

-ಅನಿಕೇತನ, ಜ್ಞಾನ ಸಹ್ಯಾದ್ರಿ

ಇದೇ ಬರುವ ಜುಲೈ 2ಕ್ಕೆ 38ನೇ ಸಂಸ್ಥಾಪನಾ ದಿನಾಚರಣೆ ಆಚರಿಸುತ್ತಿರುವ ಮಲೆನಾಡು ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹಲವು ದಶಕಗಳಿಂದ ಹೆಸರುವಾಸಿಯಾಗಿರುವ ಕುವೆಂಪು ವಿಶ್ವವಿದ್ಯಾಲಯವು ಯುಜಿಸಿ ನ್ಯಾಕ್ ತಂಡದ ಭೇಟಿಯ ನಂತರದ ಕೆಲವೇ ದಿನಗಳಲ್ಲಿ ಪಿ.ಎಚ್‌ಡಿ  ಮಾತ್ರವಲ್ಲದೆ ಸ್ನಾತಕೋತ್ತರ ಪದವಿಯ ಪ್ರವೇಶಾತಿ ಹಾಗೂ ಬೋಧನಾ ಶುಲ್ಕವನ್ನು ಶೇ.100ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿರುವುದು ಸರ್ಕಾರಿ ವಿಶ್ವವಿದ್ಯಾಲಯವೊಂದನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರವೆಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದ ಕುವೆಂಪುರವರ ತತ್ವಗಳನ್ನೇ ತನ್ನ ಮೂಲಧ್ಯೇಯವನ್ನಾಗಿಸಿಕೊಂಡಿರುವ ವಿಶ್ವವಿದ್ಯಾಲಯವು ಈಗ ಏಕಾಏಕಿ ಶುಲ್ಕ ಹೆಚ್ಚಳ ಮಾಡಿರುವುದು ಪಿ.ಎಚ್‌ಡಿ. ಸಂಶೋಧನಾ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳು ಅದರಲ್ಲೂ ಅನ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ಪ್ರವೇಶಾತಿ ಶುಲ್ಕಗಳೂ ಬರೋಬ್ಬರಿ ಏರಿಕೆ ಕಂಡಿವೆ.2022-2023ನೇ ಸಾಲಿನಲ್ಲಿ ಶುಲ್ಕ ಪರಿಷ್ಕರಿಸಿ ಸ್ವಲ್ಪ ಪ್ರಮಾಣದ ಶುಲ್ಕ ಹೆಚ್ಚಳ ಮಾಡಲಾಗಿತ್ತು ಹಾಗೂ ಅದನ್ನು ಯಥಾವತ್ತಾಗಿ
2023-24 ನೇ ಶೈಕ್ಷಣಿಕ ಸಾಲಿನಲ್ಲೂ ಮುಂದುವರಿಸಿ ಆದೇಶ ಹೊರಡಿಸಲಾಗಿತ್ತು.


ಆದರೆ 2024-25ನೇ ಸಾಲಿನಲ್ಲಿ ಶುಲ್ಕವನ್ನು ಅವೈಜ್ಞಾನಿಕವಾಗಿ ಬರೋಬ್ಬರಿ ಪ್ರತಿಶತ 100ರಂತೆ ಹೆಚ್ಚು ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಸ್ನೇಹಮಯ ವ್ಯಕ್ತಿತ್ವ ಹೊಂದಿರುವ ಮಾನ್ಯ ಉಪಕುಲಪತಿಗಳಾದ ಡಾ.ಶರತ್ ಅನಂತಮೂರ್ತಿಯವರಿಗೆ ಈ ನಡೆ ಕಪ್ಪುಚುಕ್ಕೆ ತರುವುದಲ್ಲದೆ ವಿದ್ಯಾರ್ಥಿಗಳು, ಸಂಶೋಧಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.
ಶೈಕ್ಷಣಿಕ ವರ್ಷ 2023-24ರಲ್ಲಿ ಪರೀಕ್ಷಾ ವಿಭಾಗಕ್ಕೆ ಪಿ.ಎಚ್.ಡಿ ಬೋಧನಾ ಶುಲ್ಕವಾಗಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಂದ ವಾರ್ಷಿಕ  6,000/- ರೂ.ಶುಲ್ಕವನ್ನು ಹಾಗೂ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1ರ, ವಿದ್ಯಾರ್ಥಿಗಳಿಂದ 4,200/- ರೂ. ಹಾಗೂ ವಿದೇಶಿ ವಿದ್ಯಾರ್ಥಿಗಳಿಂದ 7,200/-ಶುಲ್ಕವನ್ನು ಪಡೆಯಲಾಗುತ್ತಿತ್ತು. ಅದನ್ನು ಕ್ರಮವಾಗಿ 12,000/-ರೂ., 8400/- ರೂ. ಹಾಗೂ 15,000/-ರೂ.ಗಳಿಗೆ ಹೆಚ್ಚಿಸಿ ಅವೈಜ್ಞಾನಿಕ ಹಾಗೂ ಅತಾರ್ಕಿಕವಾಗಿ ಶುಲ್ಕವನ್ನು ದುಪ್ಪಟ್ಟು ಹೆಚ್ಚಳ ಮಾಡಲಾಗಿದೆ.ಅಲ್ಲದೆ, ಕೋರ್ಸ್ ವರ್ಕ್ ಶುಲ್ಕ ಜೊತೆಗಿನ ಬೋಧನಾ ಶುಲ್ಕವನ್ನು ಮೊದಲ ವರ್ಷ ಅನುಕ್ರಮವಾಗಿ 14,400/-ರೂ. ,10,080/-ರೂ., 22,200/-ರೂ.ಗೆ ಹೆಚ್ಚಿಸಲಾಗಿದೆ.
ಸಂಶೋಧನಾ ಶೀರ್ಷಿಕೆ ಬದಲಾವಣೆಗೆ ಸಾಮಾನ್ಯ ವರ್ಗದವರಿಗೆ ನಿಗದಿಪಡಿಸಿದ್ದ 4000/-ರೂ.ಗಳನ್ನು ಮನಸ್ಸಿಗೆ ತೋರಿದಂತೆ ಗಣನೀಯವಾಗಿ 10,000/-ರೂ.ಗಳಿಗೆ ಹೆಚ್ಚಿಸಲಾಗಿದೆ.ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ರ ಸಂಶೋಧನಾ ವಿದ್ಯಾರ್ಥಿಗಳಿಗೆ ಇದನ್ನು 2500/-ರೂ.ಗಳಿಂದ  6250/-ರೂ.ಗಳಿಗೆ ಹೆಚ್ಚಿಸಿದ್ದರೆ ವಿದೇಶಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ್ದ 5000/-ರೂ.ಗಳನ್ನು 15000/-ರೂ.ಗಳಿಗೆ ಹೆಚ್ಚಿಸಲಾಗಿದೆ.


ಇನ್ನು 6000/-ರೂ.ಇದ್ದ ಸಂಶೋಧನಾ ಮಾರ್ಗದರ್ಶಕರ ಬದಲಾವಣೆಯ ಶುಲ್ಕವನ್ನು 10,200/- ರೂ.ಗಳಿಗೆ, ವ್ಯಾಕರಣ ತಿದ್ದುಪಡಿಯ ಶುಲ್ಕವನ್ನು 500/-ರೂ.ಯಿಂದ 1,500/-ರೂ.ಗೆ , ಸಂಶೋಧನಾ ಪ್ರಬಂಧ ಪ್ರಕಟಣೆಯ ಶುಲ್ಕವನ್ನು 500/-ರೂ.ಯಿಂದ 2,000/- ರೂ.ವರೆಗೆ ಹೆಚ್ಚಿಸಲಾಗಿದೆ. ಸಂಶೋಧನಾ ಅವಧಿ ವಿಸ್ತರಣೆ ಶುಲ್ಕಗಳಲ್ಲೂ ಶೇ.100ರಷ್ಟು ಶುಲ್ಕವನ್ನು ಹೆಚ್ಚಿಸಲಾಗಿದೆ.ಮೊದಲ ವಿಸ್ತರಣೆಯ ಶುಲ್ಕವನ್ನು 10,000/-ರೂ.ಯಿಂದ 20,000/-ರೂ.ಗೆ, ಎರಡನೆಯ ಅವಧಿಯ ವಿಸ್ತರಣೆಯ ಶುಲ್ಕವನ್ನು 15000/-ದಿಂದ 30,000/-ರೂ.ಗೆ, ಮೂರನೆಯ ಅವಧಿ ವಿಸ್ತರಣಾ ಶುಲ್ಕವನ್ನು 20,000/-ರೂ.ಯಿಂದ 40,000/-ರೂ.ಗೆ ಹೆಚ್ಚಿಸಲಾಗಿದೆ.

ಅಡ್ಜಡಿಕೇಶನ್ ಶುಲ್ಕವನ್ನು 20,000/-ರೂ.ಗಳಿಂದ 25,000/-ರೂ.ಗಳಿಗೆ ಹೆಚ್ಚಿಸಿರುವುದಲ್ಲದೆ ಪ್ರಯೋಗಾಲಯ ಶುಲ್ಕವನ್ನು 4,500/-ರೂ.ಯಿಂದ 7,650/-ರೂ.ಗೆ ಹಾಗೂ 2,250/-ರಿಂದ 4,050/-ರೂ.ಗೆ ಹೆಚ್ಚಿಸಲಾಗಿದೆ.ಸ್ನಾತಕೋತ್ತರ ವಿದ್ಯಾರ್ಥಿಗಳ ಶುಲ್ಕವೂ ಸೇರಿದಂತೆ ಬಹುತೇಕ ಶುಲ್ಕವನ್ನು ಅವೈಜ್ಞಾನಿಕವಾಗಿ ಹೆಚ್ಚಳಗೊಳಿಸಿರುವ ವಿಶ್ವವಿದ್ಯಾಲಯದ ಕೆಲಸ ಅಸಹನೀಯವಾದುದು.


ಕುವೆಂಪು ವಿಶ್ವವಿದ್ಯಾಲಯ ಮೊದಲಿನಿಂದಲೂ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಕಾಶಿ.ಇತ್ತೀಚೆಗಂತೂ ಬೇರೆ ಜಿಲ್ಲೆಗಳಿಂದ,ಹೊರ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನೆಗೆ ಹಲವು ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದಾರೆ.ಕುವೆಂಪು ವಿ.ವಿ. ತನ್ನ  ಹಸಿರು ಕ್ಯಾಂಪಸ್ ನಿಂದಲೇ ಹೆಸರುವಾಸಿ.ವಿಶ್ವವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ,ಹೆಚ್ಚಿನ ಶುಲ್ಕ ಪಡೆದು ಅವ್ಯವಸ್ಥೆಯಿಂದ ಕೂಡಿರುವ ವಸತಿನಿಲಯಗಳು, ನಾಮಕಾವಸ್ಥೆಗೆ ಮಾತ್ರ ಇರುವ ಹಸಿರು ಗ್ರಂಥಾಲಯ,ಸಂಶೋಧಕರಿಗೆ ಪ್ರತ್ಯೇಕ ಹಾಸ್ಟೆಲ್ ಇಲ್ಲದಿರುವುದು, ಅತಿಥಿ ಶಿಕ್ಷಕರಿಗೆ ಯುಜಿಸಿ ಮಾನದಂಡದಂತೆ ವೇತನ ನೀಡದಿರುವುದು ಹಾಗೂ ಇನ್ನೂ ಅನೇಕ ತೊಂದರೆಯಿಂದ ಕುಗ್ಗಿದೆ.ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯಲ್ಲಿ ಊಟ,ಉಪಾಹಾರ ಒದಗಿಸುವ ಕಾಲೇಜ್ ಕ್ಯಾಂಟೀನ್ ನಲ್ಲೂ ದರ ಹೆಚ್ಚಿಸಿ ಕಾಫಿ,ಚಹಾ ಹಾಗೂ ಚಾಟ್ಸ್ ಗೆ ಪರ್ಯಾಯವಾಗಿ ಕ್ಯಾಂಪಸ್ನಲ್ಲಿರುವ ಕ್ಯಾಂಟೀನ್ ನಲ್ಲಿ ಚಹಾ-ಕಾಫಿ ಮಾರದಂತೆ ಆದೇಶ ತಂದು ಎಲ್ಲ ವಿದ್ಯಾರ್ಥಿಗಳಿಂದ ಹೆಚ್ಚಿನ ದರದ ಚಹಾ-ಕಾಫಿಯನ್ನು ಕೊಳ್ಳುವಂತೆ ಮಾಡಲಾಗಿದೆ.


ಖಾಸಗಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದ್ದ ಕುವೆಂಪು ವಿಶ್ವವಿದ್ಯಾಲಯವನ್ನು ಮುಚ್ಚುವ ಹುನ್ನಾರವೇ ವಿಶ್ವವಿದ್ಯಾಲಯದ ಈ ಶುಲ್ಕ ಹೆಚ್ಚಳಕ್ಕೆ ಕಾರಣ ಹಾಗೂ ಕಾಲಕಾಲಕ್ಕೆ ಅನುದಾನ ನೀಡದ ಹಾಗೂ ಪ್ರಾಧ್ಯಾಪಕರ ನೇಮಕಾತಿ ಕೈಗೊಳ್ಳದ ಉನ್ನತ ಶಿಕ್ಷಣ ಇಲಾಖೆ ಹಾಗೂ ಸರ್ಕಾರವೇ ಕುವೆಂಪು ವಿ.ವಿ. ಮಾತ್ರವಲ್ಲದೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ದುಃಸ್ಥಿತಿಗೆ ಕಾರಣವೆಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

-ಅನಿಕೇತನ,ಜ್ಞಾನ ಸಹ್ಯಾದ್ರಿ.

Ph.D fee Revised

prajaprabhat

Recent Posts

ಅಭಿ ಪಿಕ್ಚರ್ ಬಾಕಿ ಹೈ; ರಾಹುಲ್ ಗಾಂಧಿ ಹೇಳಿಕೆ ಕುತೂಹಲಕೆ ಕಾರಣ.

ಅಭಿ ಪಿಕ್ಚರ್ ಬಾಕಿ ಹೈ; ಅಣು ಬಾಂಬ್ ಬೆನ್ನಲ್ಲೇ ಕುತೂಹಲ ಮೂಡಿಸಿದ ರಾಹುಲ್ ಹೇಳಿಕೆ ಚುನಾವಣಾ ಆಯೋಗವು 'ಒಬ್ಬ ವ್ಯಕ್ತಿ,…

1 hour ago

ನವದೆಹಲಿ: ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ NHRC ಎರಡು ವಾರಗಳ ಆನ್‌ಲೈನ್ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಹೊಸ ದೆಹಲಿ.12.ಆಗಸ್ಟ್.25:- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಇಂದು ನವದೆಹಲಿಯಲ್ಲಿ ತನ್ನ ಎರಡು ವಾರಗಳ ಆನ್‌ಲೈನ್ ಅಲ್ಪಾವಧಿಯ ಇಂಟರ್ನ್‌ಶಿಪ್…

1 hour ago

ಕರಾವಳಿ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತೀಯ ಬಂದರು ಮಸೂದೆ, 2025 ಅನ್ನು ಲೋಕಸಭೆ ಅಂಗೀಕರಿಸಿದೆ.

ಹೊಸ ದೆಹಲಿ.12.ಆಗಸ್ಟ್.25:- ಲೋಕಸಭೆಯು ಭಾರತೀಯ ಬಂದರುಗಳ ಮಸೂದೆ, 2025 ಅನ್ನು ಅಂಗೀಕರಿಸಿದೆ. ಈ ಮಸೂದೆಯು ಬಂದರುಗಳಿಗೆ ಸಂಬಂಧಿಸಿದ ಕಾನೂನನ್ನು ಕ್ರೋಢೀಕರಿಸಲು,…

1 hour ago

ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ನಾಲ್ಕು ಹೊಸ ಸೆಮಿಕಂಡಕ್ಟರ್ ಯೋಜನೆಗಳಿಗೆ ₹4,594 ಕೋಟಿಗೆ ಸರ್ಕಾರ ಅನುಮೋದನೆ ನೀಡಿದೆ.

ಹೊಸ ದೆಹಲಿ.12.ಆಗಸ್ಟ್.25:- ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಅಂದಾಜು ನಾಲ್ಕು ಸಾವಿರದ 594 ಕೋಟಿ ರೂಪಾಯಿಗಳ ನಾಲ್ಕು ಹೊಸ ಸೆಮಿಕಂಡಕ್ಟರ್…

1 hour ago

ಕಚ್ಚಾ ತೈಲ ಬೆಲೆ ಇಳಿಕೆ; ಬ್ರೆಂಟ್ ಮತ್ತು $66.31, WTI ಪ್ರತಿ ಬ್ಯಾರೆಲ್‌ಗೆ $63.53

ಹೊಸ ದೆಹಲಿ.12.ಆಗಸ್ಟ್.25:- ಕಚ್ಚಾ ತೈಲ ಬೆಲೆ ಇಂದು ಕುಸಿದಿದೆ. ಕೊನೆಯದಾಗಿ ವರದಿಗಳು ಬಂದಾಗ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 66…

2 hours ago

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಸಂಸತ್ತು ಹಲವು ಬಾರಿ ಮುಂದೂಡಿಕೆ, 18 ರಂದು ಪುನರಾರಂಭ

ಹೊಸ ದೆಹಲಿ.12.ಆಗಸ್ಟ್.25:- ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಲೋಕಸಭೆ ಮತ್ತು ರಾಜ್ಯಸಭೆ ಹಲವು…

2 hours ago